Updated on: Feb 06, 2024 | 11:19 PM
ಪ್ರಭಾಸ್ ನಟಿಸಿ, ಪ್ರಶಾಂತ್ ನೀಲ್ ನಿರ್ದೇಶನ ಮಾಡಿರುವ ‘ಸಲಾರ್’ ಸಿನಿಮಾ ಬಾಕ್ಸ್ ಆಫೀಸ್ನ ಯಶಸ್ವಿ ಪಯಣ ಮುಗಿಸಿದೆ.
‘ಸಲಾರ್’ ಸಿನಿಮಾ ನೆಟ್ಫ್ಲಿಕ್ಸ್ ಒಟಿಟಿಯಲ್ಲಿ ಬಿಡುಗಡೆ ಆಗಿದ್ದು, ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ವೀಕ್ಷಣೆಗೆ ಲಭ್ಯವಿದೆ.
ಇದೀಗ ಹೊಂಬಾಳೆ ಫಿಲಮ್ಸ್ನವರು ‘ಸಲಾರ್’ ಸಿನಿಮಾವನ್ನು ಇಂಗ್ಲೀಷ್ನಲ್ಲಿಯೂ ವೀಕ್ಷಣೆಗೆ ಲಭ್ಯವಾಗುವಂತೆ ಮಾಡಿದ್ದಾರೆ.
ನೆಟ್ಫ್ಲಿಕ್ಸ್ನಲ್ಲಿ ‘ಸಲಾರ್’ ಸಿನಿಮಾವನ್ನು ಇಂಗ್ಲೀಷ್ನಲ್ಲಿ ಸಹ ವೀಕ್ಷಿಸಬಹುದಾಗಿದೆ. ಭಾರತೀಯ ಭಾಷೆ ಬಾರದವರಿಗೆ ಇದು ಅನುಕೂಲವಾಗಲಿದೆ.
ಭಾರತೀಯ ಭಾಷೆಯ ಸಿನಿಮಾಗಳಿಗೆ ವಿದೇಶಗಳಲ್ಲಿ ಭಾರಿ ಡಿಮ್ಯಾಂಡ್ ಇರುವ ಕಾರಣ, ‘ಸಲಾರ್’ ಅನ್ನು ಇಂಗ್ಲೀಷ್ನಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ.
‘ಬಾಹುಬಲಿ’ ಸಿನಿಮಾದ ಬಳಿಕ ಪ್ರಭಾಸ್ಗೆ ವಿಶ್ವದ ಹಲವು ಮೂಲೆಗಳಲ್ಲಿ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಅವರಿಗೆ ಇಂಗ್ಲೀಷ್ನಲ್ಲಿ ಸಿನಿಮಾ ವೀಕ್ಷಿಸುವುದು ಹೆಚ್ಚು ಸುಲಭವಾಗಲಿದೆ.
‘ಸಲಾರ್’ ಸಿನಿಮಾ ಮುಂದಿನ ದಿನಗಳಲ್ಲಿ ಚೈನೀಸ್, ಜಪಾನೀಸ್ ಭಾಷೆಗಳಲ್ಲಿಯೂ ಲಭ್ಯವಾಗುವ ಸಾಧ್ಯತೆ ಇದೆ. ಭಾರತೀಯ ಸಿನಿಮಾಗಳಿಗೆ ಚೀನಾ-ಜಪಾನ್ನಲ್ಲಿ ಒಳ್ಳೆಯ ಬೇಡಿಕೆ ಇದೆ.