ಪ್ರಸಿದ್ಧ ಬ್ರೆಜಿಲಿಯನ್ ಕುಸ್ತಿಪಟು ಮತ್ತು ವಿಶ್ವ ಚಾಂಪಿಯನ್ ಜಿಯು-ಜಿಟ್ಸು ಲಿಯಾಂಡ್ರೊ ಲೊ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಲಿಯಾಂಡ್ರೊಗೆ ಕೇವಲ 33 ವರ್ಷ ವಯಸ್ಸಾಗಿದ್ದು, ವರದಿಗಳ ಪ್ರಕಾರ ಅವರನ್ನು ಕ್ಲಬ್‌ನಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ.
ಈ ಬ್ರೆಜಿಲ್ ಆಟಗಾರನ ಮೇಲೆ ಪಾರ್ಟಿಯ ವೇಳೆ ದಾಳಿ ನಡೆದಿದ್ದು, ವರದಿಗಳ ಪ್ರಕಾರ, ಜಿಯು-ಜಿಟ್ಸು ಪಟು ಲಿಯಾಂಡ್ರೊ ಲೊ, ಮಿಲಿಟರಿ ಪೊಲೀಸ್ ಅಧಿಕಾರಿಯೊಂದಿಗೆ ವಾಗ್ವಾದಕ್ಕಿಳಿದಿದ್ದೆ ಈ ಘಟನೆಗೆ ಕಾರಣವಾಗಿದೆ. ಆರೋಪಿ ಪೊಲೀಸ್ ಅಧಿಕಾರಿ, ಲಿಯಾಂಡ್ರೊ ಅವರ ಟೇಬಲ್‌ನಿಂದ ಬಾಟಲಿಯನ್ನು ಎತ್ತಿಕೊಂಡಿದ್ದಾರೆ. ಬಳಿಕ ಲಿಯಾಂಡ್ರೊ ಆ ಬಾಟಲಿಯನ್ನು ನೆಲದ ಮೇಲೆ ಹಾಕಿ ಒಡೆದು ಹಾಕಿದ್ದಾನೆ. ಇದರ ನಂತರ ಆರೋಪಿ ಅಧಿಕಾರಿ ತನ್ನ ಬಂದೂಕನ್ನು ಹೊರ ತೆಗೆದು ಲಿಯಾಂಡ್ರೊನ ತಲೆಗೆ ಗುಂಡು ಹಾರಿಸಿದ್ದಾನೆ
ಈ ಅವಘಡದ ಬಳಿಕ ಲಿಯಾಂಡ್ರೊ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಜಿಯು-ಜಿಟ್ಸುನಲ್ಲಿ ಶ್ರೇಷ್ಠ ಆಟಗಾರರಲ್ಲಿ ಲಿಯಾಂಡ್ರೊ ಒಬ್ಬರಾಗಿದ್ದು, ಅವರು 8 ವಿಶ್ವ ಚಾಂಪಿಯನ್‌ಶಿಪ್‌ಗಳನ್ನು ಗೆದ್ದಿದ್ದಾರೆ.
ಬ್ರೆಜಿಲಿಯನ್ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನ ಪ್ರತಿಯೊಂದು ವಿಭಾಗದಲ್ಲೂ ಲಿಯಾಂಡ್ರೊ ಚಿನ್ನ ಗೆದ್ದಿದ್ದಾರೆ. ಇದಲ್ಲದೇ ಯೂರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ಎರಡು ಬಾರಿ ಆಡಿ ಗೆದ್ದಿದ್ದಾರೆ. ಅಬುಧಾಬಿ ವರ್ಲ್ಡ್ ಪ್ರೊನಲ್ಲಿ ಲಿಯಾಂಡ್ರೊ ಐದು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.
ಲಿಯಾಂಡ್ರೊ 1989 ರಲ್ಲಿ ಸಾವೊ ಪೊಲೊದಲ್ಲಿ ಜನಿಸಿದರು. ಲಿಯಾಂಡ್ರೊ 14 ನೇ ವಯಸ್ಸಿನಲ್ಲಿ ಜಿಯು-ಜಿಟ್ಸು ಆಡಲು ಪ್ರಾರಂಭಿಸಿದರು. ಬಡತನದಲ್ಲಿ ಹುಟ್ಟಿದ ಲಿಯಾಂಡ್ರೊ, ಬಡವರಿಗೆ ಸಹಾಯ ಮಾಡುವ ಸಂಸ್ಥೆಯಿಂದ ಈ ಆಟದ ಸೂಕ್ಷ್ಮ ವ್ಯತ್ಯಾಸಗಳನ್ನು ಕಲಿತಿದ್ದರು.
Published On - 7:28 pm, Tue, 9 August 22