ಮಾನವ ಮುಖ ಹೊಂದಿರುವ ವಿಶ್ವದ ಏಕೈಕ ಗಣೇಶ ದೇವಸ್ಥಾನ!
TV9 Web | Updated By: ಆಯೇಷಾ ಬಾನು
Updated on:
Aug 30, 2022 | 8:33 PM
ಪ್ರಥಮ ಪೂಜಿತ ಗಣೇಶನಿಗೆ ಸಮರ್ಪಿತವಾದ ಅನೇಕ ದೇವಾಲಯಗಳಿವೆ. ಪ್ರತಿ ದೇವಾಲಯವೂ ಅದರದೇ ಆದ ವಿಶೇಷತೆಗಳನ್ನು ಹೊಂದಿರುತ್ತವೆ. ಆದ್ರೆ ತಮಿಳುನಾಡಿನ ತಿರುವರೂರ್ ಜಿಲ್ಲೆಯಲ್ಲಿರುವ ಗಣೇಶನ ದೇವಸ್ಥಾನ ಇತರೆ ದೇವಸ್ಥಾನಗಳಿಗಿಂತ ವಿಭಿನ್ನವಾಗಿದೆ. ಈ ದೇವಾಲಯದಲ್ಲಿ ಗಣೇಶನ ವಿಗ್ರಹವು ಮಾನವನ ರೂಪವನ್ನು ಹೊಂದಿದೆ.
1 / 5

2 / 5
ತಮಿಳುನಾಡಿನ ಕೊತ್ತನೂರಿನಿಂದ ಸುಮಾರು 3 ಕಿಮೀ ದೂರದಲ್ಲಿರುವ ತಿಲತರ್ಪಣಪುರಿಯಲ್ಲಿ ಈ ದೇವಸ್ಥಾನವಿದೆ. ಇದು ಮುಕ್ತೇಶ್ವರರ್ ದೇವಾಲಯಕ್ಕೆ ಹೆಸರುವಾಸಿಯಾಗಿದೆ. ಈ ಪ್ರಸಿದ್ಧ ದೇಗುಲದ ಹೊರಗೆ ಮಾನವ ಮುಖದ ಗಣೇಶನಿಗೆ ಸಮರ್ಪಿತವಾದ ವಿಶಿಷ್ಟವಾದ ದೇವಾಲಯವಿದೆ. ಈ ದೇವಾಲಯವನ್ನು ಆದಿ ವಿನಾಯಕ ದೇವಸ್ಥಾನ ಅಥವಾ ನರಮುಗ ವಿನಾಯಕ ದೇವಸ್ಥಾನ ಎಂದು ಕರೆಯಲಾಗುತ್ತದೆ.
3 / 5
ವಿಶ್ವದ ಏಕೈಕ ಮಾನವ ರೂಪ ಹೊಂದಿರುವ ಗಣೇಶನನ್ನು ನೋಡಲು ದೂರ ದೂರದಿಂದ ಭಕ್ತರು ಆಗಮಿಸುತ್ತಾರೆ. ಪೂರ್ವಜರ ಶಾಂತಿಗಾಗಿ ಜನರು ಈ ದೇವಾಲಯಕ್ಕೆ ಬರುತ್ತಾರೆ.
4 / 5
ಭಗವಾನ್ ಗಣೇಶ ಗಜ ಮುಖವನ್ನು ಹೊಂದುವ ಮೊದಲು, ಗಣೇಶನ ಮುಖವು ಮಾನವನ ಮುಖವಾಗಿತ್ತು. ಆದ್ದರಿಂದ ಅವನನ್ನು ಇಲ್ಲಿ ಇದೇ ರೂಪದಲ್ಲಿ ಪೂಜಿಸಲಾಗುತ್ತದೆ. ರಾಮನು ಒಮ್ಮೆ ತಮ್ಮ ಪೂರ್ವಜರ ಆತ್ಮಗಳನ್ನು ಆದಿ ವಿನಾಯಕ ದೇವಾಲಯದಲ್ಲಿ ಪೂಜಿಸಿರುತ್ತಾನೆ. ಅಂದಿನಿಂದ ಜನರು ತಮ್ಮ ಪೂರ್ವಜರ ಶಾಂತಿಗಾಗಿ ಈ ದೇವಾಲಯದಲ್ಲಿ ಪೂಜಿಸುತ್ತಾರೆ ಎನ್ನಲಾಗಿದೆ.
5 / 5
ಈ ದೇವಸ್ಥಾನದಲ್ಲಿ ಗಣೇಶನಿಗೆ ಮಾತ್ರ ಪೂಜಿಸಲಾಗುವುದಿಲ್ಲ, ಇಲ್ಲಿ ಶಿವ ಮತ್ತು ಸರಸ್ವತಿಯನ್ನೂ ಸಹ ಪೂಜಿಸಲಾಗುತ್ತದೆ. ಅಲ್ಲದೆ ವಿಶೇಷ ಅಂದ್ರೆ ಈ ಸ್ಥಳವನ್ನು ಕಾಶಿ ಅಥವಾ ರಾಮೇಶ್ವರಂಗೆ ಸಮಾನವೆಂದು ಪರಿಗಣಿಸಲಾಗಿದೆ. ಅಮವಾಸ್ಯೆಯಂದು ಇಲ್ಲಿ ತರ್ಪಣ ಮಾಡುವುದು ವಿಶೇಷ. ಇದೊಂದು ಮುಕ್ತಿಕ್ಷೇತ್ರವಾಗಿದೆ.
Published On - 6:00 am, Tue, 23 August 22