
ಸಾಮಾನ್ಯವಾಗಿ ಚೇಳನ್ನು ಎಲ್ಲರೂ ನೋಡಿರುತ್ತೀರಿ. ಕಪ್ಪು ಬಣ್ಣದ ಈ ಚೇಳನ್ನು ಕಂಡೊಡನೆ ಒಂದು ಮೈಲಿ ದೂರ ಓಡುವವವರೇ ಹೆಚ್ಚು. ವಿಪರೀತ ವಿಷಕಾರಿ ಈ ಜೀವಿಗಳಲ್ಲಿ ಒಂದಾಗಿರುವ ಈ ಜೀವಿಯೂ ಕಣ್ಣಿಗೆ ಕಾಣಿಸಿದೊಡನೆ ಅದನ್ನು ಸಾಯಿಸಿ ಬಿಡುತ್ತಾರೆ.

ಇಷ್ಟೇ ಇಷ್ಟೇ ಉದ್ದವಿರುವ ಚೇಳು ಏನು ಮಹಾ ಎಂದುಕೊಳ್ಳಬೇಡಿ. ಈ ಚೇಳು ತನ್ನ ಬಾಲದಿಂದ ಕುಟುಕಿದರೆ ಸಾಕು, ಉರಿಯುವುದು ಮಾತ್ರವಲ್ಲ ವಿಷವು ದೇಹವನ್ನು ಸೇರಿದರೆ ಬದುಕುಳಿಯುವುದು ತುಂಬಾನೇ ಕಷ್ಟ.

ಚೇಳಿನ ವಿಷಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದ್ದು, ಹೀಗಾಗಿ ವಿಶ್ವದಲ್ಲೇ ಅತ್ಯಂತ ದುಬಾರಿ ವಿಷ ಎನ್ನಲಾಗುತ್ತದೆ. ಸಾಮಾನ್ಯವಾಗಿ ಒಂದು ಚೇಳಿನಿಂದ ಕೇವಲ 2 ಮಿಲಿಲೀಟರ್ ವಿಷವನ್ನಷ್ಟೇ ಪಡೆಯಲು ಸಾಧ್ಯ.

ಇದರಿಂದ ವಿಷ ತೆಗೆಯುವುದು ಅಷ್ಟು ಸುಲಭವಲ್ಲ. ಹೀಗಾಗಿಯೇ ಒಂದು ಲೀಟರ್ ವಿಷಕ್ಕೆ ಸರಿಸುಮಾರು 10 ಮಿಲಿಯನ್ ಡಾಲರ್ ಅಂದರೆ 87 ಕೋಟಿ ರೂ ಬೆಲೆಯಿದೆ ಎನ್ನಲಾಗಿದೆ.

ಒಂದು ಲೀಟರ್ ವಿಷವನ್ನು ಸಂಗ್ರಹಿಸಲು ಸಾವಿರಾರು ಚೇಳುಗಳು ಬೇಕಾಗುವ ಕಾರಣದಿಂದಾಗಿ ಇದರ ವಿಷವು ಕೋಟಿಗಟ್ಟಲೇ ಬೆಲೆ ಬಾಳಲು ಕಾರಣ ಎನ್ನಲಾಗಿದೆ. ಅದಲ್ಲದೇ ಚೇಳಿನ ವಿಷವು ಎಷ್ಟು ದುಬಾರಿಯೋ ಅಷ್ಟೇ ಪ್ರಯೋಜನಕಾರಿಯಾಗಿದೆ.

ಚೇಳಿನ ವಿಷವನ್ನು ಹೃದಯ ಶಸ್ತ್ರಚಿಕಿತ್ಸೆ ಹಾಗೂ ಮೂಳೆಗಳ ಚಿಕಿತ್ಸೆಗೆ ಬಳಕೆ ಮಾಡಲಾಗುತ್ತದೆ. ಅದಲ್ಲದೇ, ಔಷಧಗಳ ತಯಾರಿಕೆ, ಸೌಂದರ್ಯ ಉತ್ಪನ್ನಗಳ ತಯಾರಿಕೆಯಲ್ಲಿ ಇದನ್ನು ಹೆಚ್ಚು ಬಳಸಲಾಗುತ್ತದೆಯಂತೆ.