AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

18 ವರ್ಷಗಳಲ್ಲಿ 18 ನಾಯಕರನ್ನು ಕಣಕ್ಕಿಳಿಸಿದ ಪಂಜಾಬ್ ಕಿಂಗ್ಸ್

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಶುರುವಾಗಿ ಬರೋಬ್ಬರಿ 18 ವರ್ಷಗಳಾಗಿವೆ. ಈ 18 ವರ್ಷಗಳಲ್ಲಿ  ಪಂಜಾಬ್ ಕಿಂಗ್ಸ್​ ತಂಡವನ್ನು 18 ನಾಯಕರುಗಳು ಮುನ್ನಡೆಸಿದ್ದಾರೆ ಎಂದರೆ ನಂಬಲೇಬೇಕು. ಅದರಲ್ಲೂ 16 ನಾಯಕರುಗಳ ಮುಂದಾಳತ್ವದಲ್ಲಿ ಕಣಕ್ಕಿಳಿದರೂ ಪಂಜಾಬ್ ಪಡೆ ಒಮ್ಮೆಯೂ ಟ್ರೋಫಿ ಗೆದ್ದಿಲ್ಲ ಎಂಬುದೇ ಅಚ್ಚರಿ. ಇದೀಗ 18ನೇ ಸೀಸನ್​ನಲ್ಲಿ ಪ್ಲೇಆಫ್​ಗೆ ಪ್ರವೇಶಿಸಿರುವ ಪಂಜಾಬ್ ಕಿಂಗ್ಸ್ ಚೊಚ್ಚಲ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವ ವಿಶ್ವಾಸದಲ್ಲಿದೆ. ಇ

ಝಾಹಿರ್ ಯೂಸುಫ್
|

Updated on: May 19, 2025 | 11:55 AM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ನ 59ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸುವ ಮೂಲಕ ಶಶಾಂಕ್ ಸಿಂಗ್ ನಾಯಕರಾಗಿ ಪಾದಾರ್ಪಣೆ ಮಾಡಿದ್ದಾರೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಈ ಪಂದ್ಯದಲ್ಲಿ ಬೆರಳಿನ ಗಾಯದ ಕಾರಣ ಶ್ರೇಯಸ್​ ಅಯ್ಯರ್ ಫೀಲ್ಡಿಂಗ್​ ,ಮಾಡಿರಲಿಲ್ಲ. ಹೀಗಾಗಿ ಶಶಾಂಕ್ ಸಿಂಗ್​ ತಂಡವನ್ನು ಮುನ್ನಡೆಸಿದರು. ಇದರೊಂದಿಗೆ 18 ವರ್ಷಗಳ ಐಪಿಎಲ್​ ಇತಿಹಾಸದಲ್ಲಿ 18 ನಾಯಕರುಗಳನ್ನು ಪರಿಚಯಿಸಿದ ಏಕೈಕ ತಂಡವೆಂಬ ಕೀರ್ತಿ ಪಂಜಾಬ್ ಕಿಂಗ್ಸ್ ಪಾಲಾಗಿದೆ. ಹಾಗಿದ್ರೆ ಪಂಜಾಬ್ ಕಿಂಗ್ಸ್ ತಂಡವನ್ನು ಈವರೆಗೆ ಮುನ್ನಡೆಸಿದ ನಾಯಕರುಗಳು ಯಾರೆಲ್ಲಾ ಎಂದು ನೋಡುವುದಾದರೆ...

1 / 19
1- ಯುವರಾಜ್ ಸಿಂಗ್: ಕಿಂಗ್ಸ್​ ಇಲೆವೆನ್ ಪಂಜಾಬ್ (ಪಂಜಾಬ್ ಕಿಂಗ್ಸ್‌) ತಂಡದ ಮೊದಲ ನಾಯಕ ಯುವರಾಜ್ ಸಿಂಗ್. ಯುವಿ 2008 ಮತ್ತು 2009 ರ ಸೀಸನ್​ಗಳಲ್ಲಿ ತಂಡದ ನಾಯಕರಾಗಿದ್ದರು. ಯುವರಾಜ್ ಸಿಂಗ್ ನಾಯಕತ್ವದಲ್ಲಿ ಪಂಜಾಬ್ 29 ಪಂದ್ಯಗಳನ್ನು ಆಡಿದೆ. ಅದರಲ್ಲಿ 17 ಪಂದ್ಯ ಗೆದ್ದು, 12 ರಲ್ಲಿ ಸೋತಿದೆ.

2 / 19
2- ಕುಮಾರ ಸಂಗಕ್ಕಾರ: ಶ್ರೀಲಂಕಾ ತಂಡದ ಮಾಜಿ ನಾಯಕ ಕುಮಾರ ಸಂಗಕ್ಕಾರ ಪಂಜಾಬ್ ಕಿಂಗ್ಸ್ ತಂಡದ ಎರಡನೇ ನಾಯಕರಾಗಿದ್ದರು. ಐಪಿಎಲ್ 2010 ರಲ್ಲಿ ಪಂಜಾಬ್ ತಂಡವನ್ನು 13 ಪಂದ್ಯಗಳಲ್ಲಿ ಮುನ್ನಡೆಸಿದ್ದರು. ಈ ವೇಳೆ ಗೆದ್ದಿರೋದು ಕೇವಲ 3 ಪಂದ್ಯಗಳಲ್ಲಿ ಮಾತ್ರ.

3 / 19
3- ಮಹೇಲಾ ಜಯವರ್ಧನೆ: 2010 ರಲ್ಲಿ ಸಂಗಾಕ್ಕರ ನಾಯಕತ್ವದಲ್ಲಿ ಸತತ ಸೋಲಿನಿಂದ ಕಂಗೆಟ್ಟ ಪಂಜಾಬ್ ಫ್ರಾಂಚೈಸಿಯು ಶ್ರೀಲಂಕಾದ ಮತ್ತೋರ್ವ ಆಟಗಾರ ಮಹೇಲಾ ಜಯವರ್ಧನೆ ನಾಯಕತ್ವ ನೀಡಿತು. ಹೀಗೆ ಒಂದು ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ ಜಯವರ್ಧನೆ ಕೂಡ ಗೆಲುವಿನ ರುಚಿ ನೋಡಿಲ್ಲ.

4 / 19
4- ಆ್ಯಡಮ್ ಗಿಲ್​ಕ್ರಿಸ್ಟ್​: ಪಂಜಾಬ್‌ ತಂಡದ ನಾಲ್ಕನೇ ಕ್ಯಾಪ್ಟನ್​ ಆಗಿ ಆ್ಯಡಮ್ ಗಿಲ್‌ಕ್ರಿಸ್ಟ್‌ ಕಾಣಿಸಿಕೊಂಡಿದ್ದರು. ಐಪಿಎಲ್ 2011 ರಿಂದ 2013 ರವರೆಗೆ ತಂಡದ ನಾಯಕರಾಗಿದ್ದರು. ಈ ವೇಳೆ ಪಂಜಾಬ್ ತಂಡವನ್ನು 34 ಪಂದ್ಯಗಳಲ್ಲಿ ಮುನ್ನಡೆಸಿದ್ದ ಗಿಲ್​ಕ್ರಿಸ್ಟ್​ 17 ರಲ್ಲಿ ಜಯ ತಂದುಕೊಟ್ಟಿದ್ದರು.

5 / 19
5- ಡೇವಿಡ್ ಹಸ್ಸಿ: ಗಿಲ್​ಕ್ರಿಸ್ಟ್​ ಅಲಭ್ಯತೆಯ ನಡುವೆ 2012 ಹಾಗೂ 2013 ರಲ್ಲಿ ಆಸ್ಟ್ರೇಲಿಯಾ ಆಟಗಾರ ಡೇವಿಡ್ ಹಸ್ಸಿ ಪಂಜಾಬ್ ತಂಡವನ್ನು 12 ಪಂದ್ಯಗಳಲ್ಲಿ ಮುನ್ನಡೆಸಿದ್ದರು.

6 / 19
6- ಜಾರ್ಜ್​ ಬೈಲಿ: ಪಂಜಾಬ್ ಕಿಂಗ್ಸ್​ ತಂಡ 6ನೇ ನಾಯಕನಾಗಿ ಆಸ್ಟ್ರೇಲಿಯಾದ ಜಾರ್ಜ್​ ಬೈಲಿ ಕಾಣಿಸಿಕೊಂಡಿದ್ದರು. ಐಪಿಎಲ್ 2014 ಮತ್ತು 2015 ರಲ್ಲಿ ತಂಡವನ್ನು 35 ಪಂದ್ಯಗಳಲ್ಲಿ ಮುನ್ನಡೆಸಿದ ಬೈಲಿ 18 ಗೆಲುವು ತಂದುಕೊಟ್ಟಿದ್ದರು. ಅಷ್ಟೇ ಅಲ್ಲದೆ ಜಾರ್ಜ್​ ಬೈಲಿ ಅವರ ನಾಯಕತ್ವದಲ್ಲಿ ಪಂಜಾಬ್ IPL 2014 ರಲ್ಲಿ ಮೊದಲ ಬಾರಿಗೆ ಫೈನಲ್​ಗೇರಿತ್ತು.

7 / 19
7- ವೀರೇಂದ್ರ ಸೆಹ್ವಾಗ್: ಐಪಿಎಲ್ 2015 ರಲ್ಲಿ ಜಾರ್ಜ್​ ಬೈಲಿ ಅವರ ಅನುಪಸ್ಥಿತಿಯಲ್ಲಿ ವೀರೇಂದ್ರ ಸೆಹ್ವಾಗ್ ಕೂಡ ಒಂದು ಪಂದ್ಯದಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದರು.

8 / 19
8- ಡೇವಿಡ್ ಮಿಲ್ಲರ್: ಐಪಿಎಲ್ 2016 ರಲ್ಲಿ ಪಂಜಾಬ್ ತಂಡದ ನಾಯಕನಾಗಿ ಡೇವಿಡ್ ಮಿಲ್ಲರ್ ಕಾಣಿಸಿಕೊಂಡಿದ್ದರು. ಈ ವೇಳೆ ಪಂಜಾಬ್ ಪಡೆ 6 ಪಂದ್ಯಗಳಲ್ಲಿ ಕೇವಲ 1 ಗೆಲುವು ಮಾತ್ರ ಸಾಧಿಸಿದ್ದರಿಂದ ಅವರನ್ನು ಅರ್ಧದಲ್ಲೇ ನಾಯಕತ್ವದಿಂದ ಕೆಳಗಿಳಿಸಲಾಗಿತ್ತು.

9 / 19
9- ಮುರಳಿ ವಿಜಯ್: ಡೇವಿಡ್ ಮಿಲ್ಲರ್ ಅವರನ್ನು ನಾಯಕತ್ವದಿಂದ ಕೆಳಗಿಸಿ ಮುರಳಿ ವಿಜಯ್​ ಅವರಿಗೆ ಕ್ಯಾಪ್ಟನ್ ಪಟ್ಟ ನೀಡಲಾಗಿತ್ತು. ಎಂಟು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ ಮುರಳಿ ವಿಜಯ್ ತಂಡಕ್ಕೆ ಮೂರು ಗೆಲುವು ತಂದುಕೊಟ್ಟಿದ್ದರು.

10 / 19
10- ಗ್ಲೆನ್ ಮ್ಯಾಕ್ಸ್​ವೆಲ್: ಐಪಿಎಲ್ 2017 ರಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ತಂಡದ ನಾಯಕರಾಗಿ ಕಾಣಿಸಿಕೊಂಡಿದ್ದರು. 14 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದ ಮ್ಯಾಕ್ಸ್​ವೆಲ್ ಪಂಜಾಬ್ ಕಿಂಗ್ಸ್​ಗೆ 7 ಜಯ ತಂದುಕೊಟ್ಟಿದ್ದರು.

11 / 19
11- ಆರ್​. ಅಶ್ವಿನ್: ಐಪಿಎಲ್ 2018 ರಲ್ಲಿ ರವಿಚಂದ್ರನ್ ಅಶ್ವಿನ್ ತಂಡದ ನಾಯಕರಾಗಿದ್ದರು. ಅಶ್ವಿನ್ ನಾಯಕತ್ವದಲ್ಲಿ 2 ಸೀಸನ್ ಆಡಿದ್ದ ಪಂಜಾಬ್ ತಂಡವು 12 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, 16 ಮ್ಯಾಚ್​ಗಳಲ್ಲಿ ಸೋಲನುಭವಿಸಿದೆ.

12 / 19
12- ಕೆಎಲ್ ರಾಹುಲ್: ಐಪಿಎಲ್ 2020 ರಲ್ಲಿ ಪಂಜಾಬ್ ತಂಡವು ಕೆಎಲ್ ರಾಹುಲ್ ಅವರನ್ನು ನಾಯಕನಾಗಿ ನೇಮಿಸಿತು. ಪಂಜಾಬ್ ಕಿಂಗ್ಸ್​ ತಂಡವನ್ನು ರಾಹುಲ್ 2 ಸೀಸನ್​ನಲ್ಲಿ 27 ಪಂದ್ಯಗಳಲ್ಲಿ ಮುನ್ನಡೆಸಿದ್ದರು. ಇದರಲ್ಲಿ ಗೆದ್ದಿರೋದು 11 ಪಂದ್ಯಗಳನ್ನು. ಹಾಗೆಯೇ ರಾಹುಲ್ ಕ್ಯಾಪ್ಟನ್ಸಿಯಲ್ಲಿ ಪಂಜಾಬ್ ಕಿಂಗ್ಸ್​ 14 ಪಂದ್ಯಗಳಲ್ಲಿ ಸೋಲನುಭವಿಸಿದೆ.

13 / 19
13: ಮಯಾಂಕ್ ಅಗರ್ವಾಲ್: ಐಪಿಎಲ್ 2022 ರಲ್ಲಿ ಪಂಜಾಬ್ ಕಿಂಗ್ಸ್ ತಂಡದ ನೂತನ ನಾಯಕರಾಗಿ ಮಯಾಂಕ್ ಅಗರ್ವಾಲ್ ಆಯ್ಕೆಯಾಗಿದ್ದರು. ಅದರಂತೆ ಮಯಾಂಕ್ ನಾಯಕತ್ವದಲ್ಲಿ 14 ಪಂದ್ಯಗಳನ್ನಾಡಿದ್ದ ಪಂಜಾಬ್ ಪಡೆ 7 ಸೋಲು, 7 ಗೆಲುವು ಕಂಡಿದ್ದವು.

14 / 19
14- ಶಿಖರ್ ಧವನ್: ಪಂಜಾಬ್ ಕಿಂಗ್ಸ್ ತಂಡವು ಐಪಿಎಲ್ 2023 ರಲ್ಲಿ ಶಿಖರ್ ಧವನ್​ಗೆ ನಾಯಕನ ಪಟ್ಟ ನೀಡಿತ್ತು. ಅದರಂತೆ ಧವನ್ ಮುಂದಾಳತ್ವದಲ್ಲಿ ಪಂಜಾಬ್ ಪಡೆ 12 ಪಂದ್ಯಗಳನ್ನಾಡಿದೆ. ಈ ವೇಳೆ ಪಂಜಾಬ್ ಕಿಂಗ್ಸ್​ 4 ಪಂದ್ಯಗಳಲ್ಲಿ ಗೆದ್ದರೆ, 8 ಮ್ಯಾಚ್​ಗಳಲ್ಲಿ ಸೋಲನುಭವಿಸಿದೆ.

15 / 19
15- ಸ್ಯಾಮ್ ಕರನ್: ಶಿಖರ್ ಧವನ್ ಅನುಪಸ್ಥಿತಿಯಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 2024ರಲ್ಲಿ ಸ್ಯಾಮ್ ಕರನ್ ಮುನ್ನಡೆಸಿದ್ದರು. ಕರನ್ ಕ್ಯಾಪ್ಟನ್ಸಿಯಲ್ಲಿ ಪಂಜಾಬ್ 11 ಪಂದ್ಯಗಳನ್ನಾಡಿದ್ದು, ಈ ವೇಳೆ 5 ಪಂದ್ಯಗಳಲ್ಲಿ ಪಂಜಾಬ್ ಪಡೆ ಗೆಲುವು ದಾಖಲಿಸಿದೆ. ಇನ್ನು 6 ಮ್ಯಾಚ್​ಗಳಲ್ಲಿ ಸೋಲನುಭವಿಸಿದೆ.

16 / 19
16- ಜಿತೇಶ್ ಶರ್ಮಾ: ಸ್ಯಾಮ್ ಕರನ್ ಗಾಯಗೊಂಡ ಕಾರಣ ಐಪಿಎಲ್ 2024 ರಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿ ಜಿತೇಶ್ ಶರ್ಮಾ ಕೂಡ ಕಾಣಿಸಿಕೊಂಡಿದ್ದರು. ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಸೋಲನುಭವಿಸಿತ್ತು.

17 / 19
17- ಶ್ರೇಯಸ್ ಅಯ್ಯರ್: ಈ ಬಾರಿಯ ಐಪಿಎಲ್​ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಶ್ರೇಯಸ್ ಅಯ್ಯರ್ ಮುನ್ನಡೆಸುತ್ತಿದ್ದಾರೆ. ಅಯ್ಯರ್ ಮುಂದಾಳತ್ವದಲ್ಲಿ ಈವರೆಗೆ 11 ಪಂದ್ಯಗಳನ್ನಾಡಿರುವ ಪಂಜಾಬ್ ಕಿಂಗ್ಸ್ ತಂಡವು 7 ಗೆಲುವು ದಾಖಲಿಸಿದೆ. 

18 / 19
18- ಶಶಾಂಕ್ ಸಿಂಗ್: ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿ ಶಶಾಂಕ್ ಸಿಂಗ್ ಕಾಣಿಸಿಕೊಂಡಿದ್ದಾರೆ. ಅದರಂತೆ ರಾಜಸ್ಥಾನ್ ರಾಯಲ್ಸ್ ವಿರುದ್ಧ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಶಶಾಂಕ್ ನಾಯಕನಾಗಿ ಗೆಲುವಿನ ಖಾತೆ ತೆರೆದಿದ್ದಾರೆ.

19 / 19
Follow us
ತುಮಕೂರು: ಹಾಡಹಗಲೇ ಕಾರಿನ ಗಾಜು ಒಡೆದು 1 ಲಕ್ಷ ರೂ. ಕಳವು

ದರ್ಶನ್ ಮನೆ ಪಕ್ಕವೇ ನಾಗಶೇಖರ್ ಮನೆ; ಹೇಗಿದೆ ಇಬ್ಬರ ನಡುವಿನ ನಂಟು?

ಅವರೇ ದೊಡ್ಡವರು, ನಾನು ಕೆಟ್ಟವನು, ಕಾಲವೇ ನಿರ್ಧರಿಸಲಿ: ನಿರ್ದೇಶಕ ನಾಗಶೇಖರ್

17 ಕೋಟಿ ರೂ. ಮಾಹಿತಿ ಇಲ್ಲ: ಮತ್ತೊಂದು ಬಾಂಬ್ ಸಿಡಿಸಿದ ಬಿಆರ್ ಪಾಟೀಲ್

ಗಂಡು ಮಕ್ಕಳಿಗೆ ಬಸ್ ನಲ್ಲಿ ಹತ್ತಲು ಆಗುತ್ತಿಲ್ಲ, ಪರಿಸ್ಥಿತಿ ಕೆಟ್ಟದಾಗಿದೆ

ಹೌಸಿಂಗ್ ಬೋರ್ಡ್ ಕಲೆಕ್ಷನ್ ಬೋರ್ಡ್, ಮನಿ ಕೊಟ್ರೆ ಮನೆ: ಅಶೋಕ್ ವ್ಯಂಗ್ಯ

ಮಾದಪ್ಪನಾಣೆಗೂ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ:ಸಂಚಲನ ಮೂಡಿಸಿದ ಕೈ ಶಾಸಕ

ಮನೆಗೆ ನುಗ್ಗಿ ವ್ಯಕ್ತಿಗೆ ಗುಂಡು ಹಾರಿಸಿ, ಹೆಂಡತಿ, ಮಕ್ಕಳ ಅಪಹರಣ

ಭಾರಿ ಗಾತ್ರದ ಜಿಂಕೆಯನ್ನ ಬೇಟೆಯಾಡಿದ ಚಿರತೆ: ವಿಡಿಯೋ ನೋಡಿ

ಮೈಸೂರಿನಲ್ಲಿ ರಜನೀಕಾಂತ್ ನೋಡಲು ಜನಸಾಗರ: ವಿಡಿಯೋ ನೋಡಿ