AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಐಪಿಎಲ್​ಗೆ ಆಯ್ಕೆಯಾದ ಝಿಂಬಾಬ್ವೆಯ 5 ಆಟಗಾರರು ಇವರೇ

Blessing Muzarabani: ಇಂಡಿಯನ್ ಪ್ರೀಮಿಯರ್ ಲೀಗ್​ಗೆ ಝಿಂಬಾಬ್ವೆ ಮತ್ತೊರ್ವ ಆಟಗಾರ ಕೂಡ ಎಂಟ್ರಿ ಕೊಟ್ಟಿದ್ದಾರೆ. ಇದಕ್ಕೂ ಮುನ್ನ ಝಿಂಬಾಬ್ವೆಯ ಕೇವಲ ನಾಲ್ವರು ಆಟಗಾರರು ಮಾತ್ರ ಐಪಿಎಲ್​ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಆರ್​ಸಿಬಿ ಫ್ರಾಂಚೈಸಿ ಝಿಂಬಾಬ್ವೆ ಯುವ ವೇಗಿ ಬ್ಲೆಸಿಂಗ್ ಮುಝರಬಾನಿಯನ್ನು ಆಯ್ಕೆ ಮಾಡಿಕೊಂಡಿದೆ.

ಝಾಹಿರ್ ಯೂಸುಫ್
|

Updated on: May 19, 2025 | 1:59 PM

ವಿಶ್ವದ ಶ್ರೀಮಂತ ಕ್ರಿಕೆಟ್​ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್​​ಗೆ (IPL) ಈವರೆಗೆ ಕೇವಲ ಐವರು ಝಿಂಬಾಬ್ವೆ ಆಟಗಾರರು ಮಾತ್ರ ಆಯ್ಕೆಯಾಗಿದ್ದಾರೆ. ಇವರಲ್ಲಿ ತಾತೆಂಡ ತೈಬು ಮೊದಲಿಗರಾದರೆ, ಬ್ಲೆಸಿಂಗ್ ಮುಝರಬಾನಿ ಕೊನೆಯವರು. ಅಂದರೆ ಈ ಬಾರಿಯ ಐಪಿಎಲ್​ನ ಪ್ಲೇಆಫ್ ಪಂದ್ಯಗಳಿಗೆ ಆರ್​ಸಿಬಿ ಮುಝರಬಾನಿ ಅವರನ್ನು ಬದಲಿ ಆಟಗಾರನಾಗಿ ಆಯ್ಕೆ ಮಾಡಿಕೊಂಡಿದೆ. ಇದಕ್ಕೂ ಮುನ್ನ ಐಪಿಎಲ್​ನಲ್ಲಿ ಕಾಣಿಸಿಕೊಂಡ ಝಿಂಬಾಬ್ವೆಯ ಆಟಗಾರರ ಪಟ್ಟಿ ಇಲ್ಲಿದೆ...

1 / 6
ತಾತೆಂಡ ತೈಬು: ಇಂಡಿಯನ್ ಪ್ರೀಮಿಯರ್ ಲೀಗ್​ಗೆ ಆಯ್ಕೆಯಾದ ಮೊದಲ ಝಿಂಬಾಬ್ವೆ ಆಟಗಾರ ತಾತೆಂಡ ತೈಬು. 2008 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದ ತೈಬು ಮೂರು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ಈ ವೇಳೆ ಕೇವಲ 31 ರನ್​ಗಳಿಸಲಷ್ಟೇ ಶಕ್ತರಾಗಿದ್ದರು.

2 / 6
ರೇ ಪ್ರಿನ್ಸ್: ಐಪಿಎಲ್​ನಲ್ಲಿ ಕಾಣಿಸಿಕೊಂಡ ಝಿಂಬಾಬ್ವೆಯ ಎರಡನೇ ಆಟಗಾರ ರೇ ಪ್ರಿನ್ಸ್. 2011ರ ಹರಾಜಿನ ಮೂಲಕ ಪ್ರಿನ್ಸ್ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಖರೀದಿಸಿತ್ತು. ಅಲ್ಲದೆ ಒಂದು ಪಂದ್ಯದಲ್ಲಿ ಕಣಕ್ಕಿಳಿದಿದ್ದ ಅವರು ಮೂರು ಓವರ್​ಗಳನ್ನು ಎಸೆದಿದ್ದರು. ಇದಾಗ್ಯೂ ವಿಕೆಟ್ ಪಡೆಯಲು ಸಾಧ್ಯವಾಗಿರಲಿಲ್ಲ.

3 / 6
ಬ್ರೆಂಡನ್ ಟೇಲರ್: ಝಿಂಬಾಬ್ವೆ ತಂಡದ ಸ್ಟಾರ್ ಆಟಗಾರನಾಗಿದ್ದ ಬ್ರೆಂಡನ್ ಟೇಲರ್ 2014 ರಲ್ಲಿ ಐಪಿಎಲ್​ಗೆ ಎಂಟ್ರಿ ಕೊಟ್ಟಿದ್ದರು. ಸನ್​ರೈಸರ್ಸ್ ಹೈದರಾಬಾದ್ ತಂಡದಲ್ಲಿ ಕಾಣಿಸಿಕೊಂಡಿದ್ದ ಟೇಲರ್ ಅವರಿಗೆ ಒಂದೇ ಒಂದು ಪಂದ್ಯದಲ್ಲಿ ಕಣಕ್ಕಿಳಿಯಲು ಅವಕಾಶ ಸಿಕ್ಕಿರಲಿಲ್ಲ.

4 / 6
ಸಿಕಂದರ್ ರಾಝ: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಅತೀ ಹೆಚ್ಚು ಪಂದ್ಯಗಳನ್ನಾಡಿದ ಝಿಂಬಾಬ್ವೆ ಆಟಗಾರನ ದಾಖಲೆ ಸಿಕಂದರ್ ರಾಝ ಹೆಸರಿನಲ್ಲಿದೆ. ಐಪಿಎಲ್ 2023 ಮತ್ತು 2024 ರಲ್ಲಿ ಪಂಜಾಬ್ ಕಿಂಗ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದ ರಾಝ ಒಟ್ಟು 9 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 182 ರನ್ ಕಲೆಹಾಕಿದ್ದಲ್ಲದೆ, 3 ವಿಕೆಟ್ ಪಡೆದು ಮಿಂಚಿದ್ದರು.

5 / 6
ಬ್ಲೆಸಿಂಗ್ ಮುಝರಬಾನಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಝಿಂಬಾಬ್ವೆ ವೇಗಿ  ಬ್ಲೆಸಿಂಗ್ ಮುಝರಬಾನಿ ಅವರನ್ನು ಬದಲಿ ಆಟಗಾರನಾಗಿ ಆಯ್ಕೆ ಮಾಡಿಕೊಂಡಿದೆ. ಆರ್​ಸಿಬಿ ತಂಡದಲ್ಲಿದ್ದ ಪ್ರಮುಖ ವೇಗಿ ಲುಂಗಿ ಎನ್​ಗಿಡಿ ಮೇ 26ರ ಬಳಿಕ ಸೌತ್ ಆಫ್ರಿಕಾ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಹೀಗಾಗಿ ಪ್ಲೇಆಫ್ ಪಂದ್ಯಗಳಿಗೆ ಮುಝರಬಾನಿಯನ್ನು ಆರ್​ಸಿಬಿ ಬದಲಿ ಆಟಗಾರನಾಗಿ ಆಯ್ಕೆ ಮಾಡಿದೆ. ಈ ಮೂಲಕ ಬ್ಲೆಸಿಂಗ್ ಮುಝರಬಾನಿ ಕೂಡ ಐಪಿಎಲ್​ಗೆ ಆಯ್ಕೆಯಾದ ಝಿಂಬಾಬ್ವೆ ಆಟಗಾರರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

6 / 6
Follow us