
ಎಲ್ಲೆಡೆ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗಿದೆ. ನಟಿ ರಾಧಿಕಾ ಮತ್ತು ನಟ ಯಶ್ ಅವರ ಮನೆಯಲ್ಲಿಯೂ ಸಡಗರ ತುಂಬಿದೆ. ಆ ಫೋಟೋಗಳನ್ನು ರಾಧಿಕಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ರಾಧಿಕಾ ಪಂಡಿತ್ ಅವರು ಖುಷಿಖುಷಿಯಾಗಿ ಹಬ್ಬ ಮಾಡಿದ್ದಾರೆ. ಯುಗಾದಿ ಸಲುವಾಗಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ತಮ್ಮ ಎಲ್ಲ ಅಭಿಮಾನಿಗಳಿಗೂ ಅವರು ಹಬ್ಬದ ಶುಭಾಶಯ ತಿಳಿಸಿದ್ದಾರೆ.

ಯಶ್-ರಾಧಿಕಾ ದಂಪತಿಯ ಮಕ್ಕಳು ಕೂಡ ಹಬ್ಬದ ಸಂಭ್ರಮದಲ್ಲಿ ಭಾಗಿ ಆಗಿದ್ದಾರೆ. ಒಟ್ಟಾರೆ ಅವರ ಮನೆಯಲ್ಲಿ ಸಡಗರದಿಂದ ಯುಗಾದಿ ಆಚರಿಸಲಾಗಿದೆ. ಅಭಿಮಾನಿಗಳು ಕಮೆಂಟ್ ಮೂಲಕ ಯಶ್-ರಾಧಿಕಾ ಫ್ಯಾಮಿಲಿಗೆ ವಿಶ್ ಮಾಡಿದ್ದಾರೆ.

ಪ್ರತಿ ಹಬ್ಬವನ್ನೂ ಯಶ್-ರಾಧಿಕಾ ಪಂಡಿತ್ ಅವರು ಬಹಳ ಉತ್ಸಾಹದಿಂದ ಆಚರಿಸುತ್ತಾರೆ. ಈ ವರ್ಷ ಸಂಕ್ರಾಂತಿ ಹಬ್ಬದ ಸಂಭ್ರಮ ಕೂಡ ಅವರ ಮನೆಯಲ್ಲಿ ಜೋರಾಗಿತ್ತು. ಆ ಸಂದರ್ಭದ ಫೋಟೋಗಳೂ ವೈರಲ್ ಆಗಿದ್ದವು.

ಯಶ್ ಅವರು ‘ಕೆಜಿಎಫ್: ಚಾಪ್ಟರ್ 2’ ಬಳಿಕ ಹೊಸ ಸಿನಿಮಾ ಅನೌನ್ಸ್ ಮಾಡಿಲ್ಲ. ಮುಂದಿನ ಪ್ರಾಜೆಕ್ಟ್ಗಾಗಿ ಅವರು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಆ ಬಿಡುವಿನಲ್ಲಿ ಫ್ಯಾಮಿಲಿ ಜೊತೆ ಕಾಲ ಕಳೆಯುತ್ತಿದ್ದಾರೆ.
Published On - 9:05 pm, Wed, 22 March 23