
ಪ್ರಸ್ತುತ ತಾರೆಯರು ಪ್ರವಾಸ ಕೈಗೊಳ್ಳಲು ಸಾಕಷ್ಟು ಕೊವಿಡ್ ಮುನ್ನೆಚ್ಚರಿಕೆ ಇರುವ ಸ್ಥಳಗಳನ್ನು ಆಯ್ದುಕೊಳ್ಳುತ್ತಾರೆ. ಆ ಪೈಕಿ ಮಾಲ್ಡೀವ್ಸ್ ಹಾಗೂ ದುಬೈ ಸದ್ಯ ಮುಂಚೂಣಿಯಲ್ಲಿವೆ.

ಸ್ಯಾಂಡಲ್ವುಡ್ ತಾರಾ ಜೋಡಿ ಯಶ್ ಹಾಗೂ ರಾಧಿಕಾ ಪಂಡಿತ್ ಕೆಲ ಸಮಯದ ಹಿಂದೆ ಮಾಲ್ಡೀವ್ಸ್ಗೆ ತೆರಳಿದ್ದರು. ಪ್ರಸ್ತುತ ಈ ಜೋಡಿ ದುಬೈಗೆ ತೆರಳಿದೆ. ಈ ಚಿತ್ರದಲ್ಲಿ ಯಶ್ ಹಾಗೂ ರಾಧಿಕಾ ದುಬೈನಲ್ಲಿ ಚಿತ್ರ ತೆಗೆಸಿಕೊಂಡಿರುವುದನ್ನು ಕಾಣಬಹುದು.

ದುಬೈನಲ್ಲಿ ಈ ತಾರಾ ಜೋಡಿ ಅಭಿಮಾನಿಗಳೊಂದಿಗೆ ಫೋಟೋಗಳಿಗೆ ಪೋಸ್ ನೀಡಿದ್ದು, ಫ್ಯಾನ್ಸ್ ಮನಗೆದ್ದಿದೆ.

ನಟಿ ರಾಧಿಕಾ ಪಂಡಿತ್ ಕೂಡ ಸಾಮಾಜಿಕ ಜಾಲತಾಣಗಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ನಟ ಯಶ್ ಕೂಡ ದುಬೈನಲ್ಲಿರುವ ಪುಟಾಣಿ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ಕಳೆದ ಕೆಲ ಸಮಯದ ಹಿಂದೆ ನಟ ಸುದೀಪ್ ದಂಪತಿ ಕೂಡ ದುಬೈಗೆ ತೆರಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಇತ್ತೀಚೆಗಷ್ಟೇ ನಟ ಯಶ್ ತಮ್ಮ ಹೊಸ ಹೇರ್ ಸ್ಟೈಲ್ನಲ್ಲಿ ಗಮನ ಸೆಳೆದಿದ್ದರು. ಅಭಿಮಾನಿಗಳು ಯಶ್ ಅವರ ‘ಕೆಜಿಎಫ್ 2’ ಚಿತ್ರದ ಬಿಡುಗಡೆಗೆ ಕಾದುಕುಳಿತಿದ್ದಾರೆ. ಚಿತ್ರವು ಮುಂದಿನ ವರ್ಷ ಏಪ್ರಿಲ್ 14ರಂದು ಬಿಡುಗಡೆಯಾಗಲಿದೆ.