ಯಶ್, ಸಂಜಯ್ ದತ್, ರವೀನಾ ಟಂಡನ್ ಸೇರಿದಂತೆ ವಿವಿಧ ಭಾಷೆಗಳ ಖ್ಯಾತ ಕಲಾವಿದರ ಸಮಾಗಮ ‘ಕೆಜಿಎಫ್ 2’ನಲ್ಲಿದೆ. ಇದಕ್ಕೆ ತಕ್ಕಂತೆ ವಿಶ್ವಾದ್ಯಂತ ಹಲವು ಭಾಷೆಗಳಲ್ಲಿ ಚಿತ್ರ ರಿಲೀಸ್ ಆಗುತ್ತಿದೆ. ಇದೀಗ ಚಿತ್ರತಂಡವು ದೊಡ್ಡ ಮಟ್ಟದಲ್ಲಿ ಪ್ರಚಾರ ಕಾರ್ಯವನ್ನು ನಡೆಸುತ್ತಿದೆ.
‘ಕೆಜಿಎಫ್ ಚಾಪ್ಟರ್ 2’ ಏಪ್ರಿಲ್ 14ರಂದು ತೆರೆಗೆ ಬರುತ್ತಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ನಾನಾ ರಾಜ್ಯಗಳಿಗೆ ತೆರೆಳಿ ‘ಕೆಜಿಎಫ್’ ಸಿನಿಮಾದ ಪ್ರಮೋಷನ್ ಮಾಡಲಾಗುತ್ತಿದೆ.
ಹಿಂದಿಯಲ್ಲಿ ‘ಕೆಜಿಎಫ್ 2’ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಹಿಂದಿ ಚಿತ್ರಗಳಿಗೆ ಮುಂಬೈ ನಂತರ ಅತ್ಯಂತ ದೊಡ್ಡ ಮಾರುಕಟ್ಟೆ ದೆಹಲಿ. ಇದೀಗ ಚಿತ್ರತಂಡ ದೆಹಲಿಯಲ್ಲಿ ಪ್ರಚಾರ ಕಾರ್ಯ ನಡೆಸಿದೆ.
ದೆಹಲಿಯಲ್ಲಿ ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದು, ಇದಕ್ಕೆ ಯಶ್, ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್, ಸಂಜಯ್ ದತ್ ಮೊದಲಾದವರು ಸಾಥ್ ನೀಡಿದ್ದಾರೆ.
ಮಾಧ್ಯಮದವರೊಂದಿಗಿನ ಸಂವಾದದಲ್ಲಿ ರವೀನಾ ಟಂಡನ್
ಪ್ರಚಾರ ಕಾರ್ಯದಲ್ಲಿ ಮಿಂಚಿದ ಶ್ರೀನಿಧಿ ಶೆಟ್ಟಿ
ಅಧೀರನಾಗಿ ಕಾಣಿಸಿಕೊಳ್ಳಲಿರುವ ಸಂಜಯ್ ದತ್ ಕೆಜಿಎಫ್ 2 ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದು ಹೀಗೆ.
ರಾಕಿ ಭಾಯ್ ಆಗಿ ಕಾಣಿಸಿಕೊಳ್ಳಲಿರುವ ಯಶ್ ದೆಹಲಿಯಲ್ಲಿ ನಡೆದ ಪ್ರಚಾರದಲ್ಲಿ ಮಿಂಚಿದ್ದು ಹೀಗೆ.