‘ಟಾಕ್ಸಿಕ್’ ಟೀಸರ್​​​ನಲ್ಲಿ ಮಾಸ್ ಹಾಗೂ ಹಸಿಬಿಸಿ ದೃಶ್ಯ; ಇಲ್ಲಿವೆ ಫೋಟೋಸ್

Updated on: Jan 08, 2026 | 11:18 AM

‘ಟಾಕ್ಸಿಕ್’ ಸಿನಿಮಾ ಯಶ್ ಅವರ ಪೋಸ್ಟರ್ ರಿಲೀಸ್ ಮಾಡಿತ್ತು.ಈ ಪೋಸ್ಟರ್​ ಅಲ್ಲಿ ಯಶ್ ಅವರ ಲುಕ್ ರಿವೀಲ್ ಆಗಿರಲಿಲ್ಲ. ಅವರನ್ನು ಹಿಂದಿನಿಂದ ತೋರಿಸಲಾಗಿತ್ತು. ನಯನತಾರಾ, ರುಕ್ಮಿಣಿ ವಸಂತ್ ಸೇರಿದಂತೆ ಇತರ ಹೀರೋಯಿನ್​​ಗಳ ಪೋಸ್ಟರ್ ಬಿಡುಗಡೆ ಮಾಡಿತ್ತು. ಈಗ ತಂಡ ಟೀಸರ್ ರಿಲೀಸ್ ಮಾಡಿ ಸಿನಿಮಾದ ಪ್ರಚಾರಕ್ಕೆ ಮುನ್ನುಡಿ ಬರೆದಿದೆ.

1 / 5
ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಮಾರ್ಚ್​ 19ರಂದು ತೆರೆಗೆ ಬರಲಿದೆ. ಇದಕ್ಕಾಗಿ ಅವರ ಫ್ಯಾನ್ಸ್ ಕಾಯುತ್ತಿದ್ದಾರೆ. ಯಶ್ ಜನ್ಮದಿನದ ಪ್ರಯುಕ್ತ ಇಂದು (ಏಪ್ರಿಲ್ 8) ಟೀಸರ್ ರಿಲೀಸ್ ಆಗಿದ್ದು, ಗಮನ ಸೆಳೆಯೋ ರೀತಿಯಲ್ಲಿ ಇದೆ.

2 / 5
‘ಟಾಕ್ಸಿಕ್’ ಸಿನಿಮಾದಲ್ಲಿ ವಿವಿಧ ರೀತಿಯ ಗನ್ ಬಳಕೆ ಆಗಿದೆ. ಇಲ್ಲಿ ಬಾಂಬ್ ಸಿಡಿಯುತ್ತೆ. ಯಶ್ ಅವರು ತಮ್ಮ ರಗಡ್ ಲುಕ್ ಮೂಲಕ ಮಿಂಚುತ್ತಾರೆ. ಈ ಟೀಸರ್ ನೋಡಿದ ಎಲ್ಲರೂ ವಿವಿಧ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

3 / 5
ಯಶ್ ಅವರು ಶರ್ಟ್​​ಲೆಸ್ ಆಗಿ ಎಂಟ್ರಿ ಕೊಡುತ್ತಾರೆ. ಈ ಸಿನಿಮಾದಲ್ಲಿ ಅವರ ಪಾತ್ರದ ಹೆಸರು ರಾಯ. ಇದು ಪಕ್ಕಾ ಸ್ಥಳೀಯ ಹೆಸರು. ಸಿನಿಮಾ ಮೇಕಿಂಗ್ ಹಾಲಿವುಡ್ ಸ್ಟೈಲ್​​​​ನಲ್ಲಿ ಇದೆ ಎಂಬುದು ವಿಶೇಷ.

4 / 5
ಹಸಿಬಿಸಿ ದೃಶ್ಯಗಳು ಕೂಡ ಟೀಸರ್​​​ನಲ್ಲಿ ಇವೆ. ಹೀಗಾಗಿ, ಈ ಸಿನಿಮಾ ಎ ಸರ್ಟಿಫಿಕೆಟ್ ಪಡೆಯೋದು ಪಕ್ಕಾ ಎಂದು ಹೇಳಲಾಗುತ್ತಾ ಇದೆ. ಯಶ್ ಫ್ಯಾನ್ಸ್​​ಗೆ ಟೀಸರ್ ಇಷ್ಟ ಆಗಿದೆ.

5 / 5
ಯಶ್ ಅವರು ಸಖತ್ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಅವರು ಸಿಗಾರ್ ಸೇದುತ್ತಾ ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾ ಮಾರ್ಚ್ 19ರಂದು ರಿಲೀಸ್ ಆಗುತ್ತಿದೆ. ‘ಧುರಂಧರ್ 2’ ಎದುರು ‘ಟಾಕ್ಸಿಕ್’ ತೆರೆಗೆ ಬರುತ್ತಿದೆ.

Published On - 11:12 am, Thu, 8 January 26