ಕನ್ನಡದ ಕಿರುತೆರೆ ಹಾಗೂ ಹಿರಿತೆರೆಯ ಸಾಕಷ್ಟು ಮಂದಿ ಈ ವರ್ಷ ಹಸೆಮಣೆ ಏರಿದ್ದಾರೆ. ಹಾಗಾದರೆ 2021ರಲ್ಲಿ ಹೊಸ ಬಾಳು ಆರಂಭಿಸಿದವರು ಯಾರು? ಆ ಬಗ್ಗೆ ಇಲ್ಲಿದೆ ಮಾಹಿತಿ.
ಸ್ಯಾಂಡಲ್ವುಡ್ ಜೋಡಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಫೆಬ್ರವರಿ 14ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಪ್ರೇಮಿಗಳ ದಿನದಂದೇ ಈ ಜೋಡಿ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ವಿವಾಹವಾಗಿತ್ತು.
ಕನ್ನಡ ಚಿತ್ರರಂಗದ ಜನಪ್ರಿಯ ನಟಿ ಪ್ರಣಿತಾ ಸುಭಾಷ್ ಅವರು ಹಸೆಮಣೆ ಏರಿದ್ದಾರೆ. ಲಾಕ್ಡೌನ್ನಲ್ಲಿ ಅವರು ಸದ್ದಿಲ್ಲದೆ ಮದುವೆ ಆಗಿದ್ದಾರೆ ಎಂಬ ಸುದ್ದಿ ಕೆಲವು ದಿನಗಳಿಂದಲೇ ಹರಿದಾಡುತ್ತಿತ್ತು.
ಕಾಮಿಡಿಯನ್ ಹಾಗೂ ನಟ ದಾನಿಶ್ ಸೇಠ್ ಅವರು ಅನ್ಯಾ ರಂಗಸ್ವಾಮಿ ಜತೆ ಸಿಂಪಲ್ ಆಗಿ ಮದುವೆ ಆಗಿದ್ದಾರೆ. ಜೂನ್ 9ರಂದು ಮದುವೆ ನೋಂದಣಿ ಮಾಡಿಸಿಕೊಂಡರೆ, ಜೂನ್ 10ರಂದು ಆಪ್ತರ ಸಮ್ಮುಖದಲ್ಲಿ ಉಂಗುರ ಬದಲಾಯಿಸಿಕೊಂಡಿದ್ದರು.
ಆಶಿಕಾ ಪಡುಕೋಣೆ ಹಾಗೂ ಚೇತನ್ ಶೆಟ್ಟಿ ಅಕ್ಟೋಬರ್ ತಿಂಗಳಲ್ಲಿ ಹಸೆಮಣೆ ಏರಿದರು. ಇವರ ವಿವಾಹದ ಸುದ್ದಿ ಕೇಳಿದ ಅಭಿಮಾನಿಗಳು ಶುಭ ಹಾರೈಸಿದ್ದರು.
ಕಿರುತೆರೆ ನಟಿ ಆಶಿತಾ ಚಂದ್ರಪ್ಪ ಈ ವರ್ಷ ಮದುವೆ ಆಗಿದ್ದಾರೆ. ಮಾರ್ಚ್ ತಿಂಗಳಲ್ಲಿ ಇವರ ವಿವಾಹ ನೆರವೇರಿತ್ತು. ರೋಹನ್ ರಾಘವೇಂದ್ರ ಅವರನ್ನು ಆಶಿತಾ ವರಿಸಿದ್ದಾರೆ.
ಕಿರುತೆರೆ ನಟ ದೀಪಕ್ ಮಹಾದೇವ್ ಹಾಗೂ ಚಂದನಾ ಮಹಾಲಿಂಗಯ್ಯ 2021ರಲ್ಲಿ ಮದುವೆ ಆದ ಸೆಲೆಬ್ರಿಟಿಗಳ ಜೋಡಿಗಳಲ್ಲಿ ಒಂದು.
ನಿರ್ದೇಶಕ ಆದರ್ಶ್ ಈಶ್ವರಪ್ಪ ಅವರು ಈ ವರ್ಷ ವಿವಾಹವಾದರು. ಹಿಮಶ್ರೀ ಅವರನ್ನು ಆದರ್ಶ್ ಮದುವೆ ಆಗಿದ್ದಾರೆ.
ನಟ ಚಂದನ್ ಕುಮಾರ್ ಹಾಗೂ ನಟಿ ಕವಿತಾ ಗೌಡ ಏಪ್ರಿಲ್ 1ರಂದು ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಆದರೆ, ಮದುವೆ ದಿನಾಂಕದ ಬಗ್ಗೆ ಅವರು ಅಧಿಕೃತವಾಗಿ ಘೋಷಣೆ ಮಾಡಿರಲಿಲ್ಲ. ಲಾಕ್ಡೌನ್ ಮಧ್ಯೆಯೇ ಕೊವಿಡ್ ನಿಯಮ ಪಾಲಿಸಿ ಹಸೆಮಣೆ ಏರಿದ್ದರು. ಮೇ 14ರಂದು ಇವರು ಮದುವೆ ಆಗಿದ್ದರು.
‘ರಾಧಾ ರಮಣ’ ಧಾರಾವಾಹಿ ಮೂಲಕ ಚಿರಪರಿಚಿತರಾದ ನಟಿ ಕಾವ್ಯಾ ಗೌಡ ಅವರು ಸೋಮಶೇಖರ್ ಜತೆ ವಿವಾಹವಾಗಿದ್ದಾರೆ. ಡಿಸೆಂಬರ್ 2ರಂದು ಮದುವೆ ಶಾಸ್ತ್ರ ನೆರವೇರಿದೆ.
ಕಿರುತೆರೆ ನಟಿ ಪ್ರಿಯಾಂಕಾ ಚಿಂಚೋಳಿ ಕೂಡ ಈ ವರ್ಷ ವಿವಾಹವಾದರು. ಉದ್ಯಮಿ ರಾಕೇಶ್ ಅವರನ್ನು ಪ್ರಿಯಾಂಕಾ ಡಿಸೆಂಬರ್ ತಿಂಗಳಲ್ಲಿ ವರಿಸಿದ್ದಾರೆ.