
ಯುವ ರಾಜ್ಕುಮಾರ್, ಸಂಪದಾ, ಸಂಜನಾ ನಟಿಸಿರುವ ‘ಎಕ್ಕ’ ಸಿನಿಮಾ ಇದೇ ವಾರ ಬಿಡುಗಡೆ ಆಗಲಿದೆ. ಸಿನಿಮಾ ಈಗಾಗಲೇ ಬಹಳ ನಿರೀಕ್ಷೆ ಹುಟ್ಟಿಸಿದೆ.

ಸಿನಿಮಾದ ಪ್ರಚಾರದಲ್ಲಿ ‘ಎಕ್ಕ’ ಚಿತ್ರತಂಡ ತೊಡಗಿಕೊಂಡಿದ್ದು, ರಾಜ್ಯದ ಹಲವು ಪ್ರಮುಖ ಜಿಲ್ಲೆಗಳಿಗೆ ಹೋಗಿ ಬಲು ಅದ್ಧೂರಿಯಾಗಿ ಸಿನಿಮಾ ಪ್ರಚಾರ ಮಾಡುತ್ತಿದೆ.

ರಾಮನಗರದ ಕರಗ ಉತ್ಸವದಲ್ಲಿ ‘ಎಕ್ಕ’ ಚಿತ್ರತಂಡ ಭಾಗಿ ಆಗಿತ್ತು. ಸಿನಿಮಾದ ನಾಯಕ ಯುವ ರಾಜ್ಕುಮಾರ್, ನಾಯಕಿಯರಲ್ಲಿ ಒಬ್ಬರಾದ ಸಂಪದ ಇಬ್ಬರೂ ವೇದಿಕೆಯಲ್ಲಿದ್ದರು.

ಯುವ ರಾಜ್ಕುಮಾರ್ ಹಾಗೂ ಸಂಪದಾ ಇಬ್ಬರೂ ಸಹ ರಾಮನಗರದ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದರು. ತಮ್ಮ ‘ಎಕ್ಕ’ ಸಿನಿಮಾ ನೋಡುವಂತೆ ಮನವಿ ಮಾಡಿದರು.

ಯುವ ರಾಜ್ಕುಮಾರ್ ಹಾಗೂ ಸಂಪದಾ ಇಬ್ಬರೂ ಸಹ ಕರಗ ಉತ್ಸವದ ವೇದಿಕೆ ಮೇಲೆ ‘ಎಕ್ಕ’ ಸಿನಿಮಾದ ಬ್ಯಾಂಗಲ್ ಬಂಗಾರಿ ಹಾಡಿಗೆ ಸ್ಟೆಪ್ ಹಾಕಿದರು.

ರಾಮನಗರ ಕರಗಕ್ಕೆ ಅತಿಥಿಗಳಾಗಿ ಬಂದಿದ್ದ ಯುವ ರಾಜ್ಕುಮಾರ್ ಹಾಗೂ ಸಂಪದಾ ಅವರನ್ನು ಮಾಜಿ ಸಂಸದ ಡಿಕೆ ಸುರೇಶ್ ಅವರು ಸನ್ಮಾನಿಸಿದರು.

ಯುವ ರಾಜ್ಕುಮಾರ್, ಸಂಪದ, ಸಂಜನಾ ಇನ್ನಿತರರು ನಟಿಸಿ ರೋಹಿತ್ ಪದಕಿ ನಿರ್ದೇಶನ ಮಾಡಿರುವ ‘ಎಕ್ಕ’ ಸಿನಿಮಾ ನಾಳೆ (ಶುಕ್ರವಾರ) ರಾಜ್ಯದಾದ್ಯಂತ ಬಿಡುಗಡೆ ಆಗಲಿದೆ.