
ನಟಿ ಸಾರಾ ಅಲಿ ಖಾನ್ ಅವರು ಸಮಯ ಸಿಕ್ಕಾಗಲೆಲ್ಲ ಸುತ್ತಾಟಕ್ಕೆ ತೆರಳುತ್ತಾರೆ. ದೇಶ ವಿದೇಶ ಸುತ್ತುತ್ತಾರೆ. ಪ್ರಕೃತಿ ಮಧ್ಯೆ ಕಳೆದು ಹೋಗಲು ಸಾರಾ ಅಲಿ ಖಾನ್ ಇಷ್ಟಪಡುತ್ತಾರೆ.

ಈಗ ಸಾರಾ ಅಲಿ ಖಾನ್ ಅವರು ಕಾಶ್ಮೀರದ ಕಡೆಗಳಲ್ಲಿ ಸುತ್ತಾಟ ನಡೆಸಿದ್ದಾರೆ. ಇದರ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಕುರಿಮರಿಯ ಜೊತೆ ಕುಳಿತಿರುವ ಫೋಟೋನ ಸಾರಾ ಅಲಿ ಖಾನ್ ಪೋಸ್ಟ್ ಮಾಡಿದ್ದಾರೆ. ಈ ಫೋಟೋ ಫ್ಯಾನ್ಸ್ಗೆ ಇಷ್ಟವಾಗಿದೆ.

ಸಾರಾ ಅಲಿ ಖಾನ್ ಅವರು ಈ ಮೊದಲು ಕೂಡ ಈ ರೀತಿ ಅನೇಕ ಕಡೆಗಳಲ್ಲಿ ಸುತ್ತಾಟ ನಡೆಸಿದ್ದಿದೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ.

ಸೈಫ್ ಅಲಿ ಖಾನ್ ಮಗಳು ಎನ್ನುವ ಕಾರಣಕ್ಕೆ ಸಾರಾ ಅಲಿ ಖಾನ್ಗೆ ಬೇಡಿಕೆ ಸೃಷ್ಟಿ ಆಗಿದೆ. ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ.

ಇತ್ತೀಚೆಗೆ ಸಾರಾ ಅಲಿ ಖಾನ್ ನಟನೆಯ ‘ಜರಾ ಹಟ್ಕೆ ಜರಾ ಬಚ್ಕೆ’ ಸಿನಿಮಾ ಗೆಲುವು ಕಂಡಿತು. ಇದೇ ಖುಷಿಯಲ್ಲಿ ಅವರು ಗುಡ್ಡ-ಬೆಟ್ಟದಲ್ಲಿ ಸುತ್ತಾಟ ನಡೆಸಿದ್ದಾರೆ ಎನ್ನಲಾಗುತ್ತಿದೆ.