ಮಾಡಾಳ್ ಹಗರಣ ದಿಕ್ಕುತಪ್ಪಿಸಲು ನನ್ನ ಮೇಲೆ 200 ಕೋಟಿ ರೂ. ಲೂಟಿ ಆರೋಪ: ಸಿದ್ಧರಾಮಯ್ಯ

| Updated By: Ganapathi Sharma

Updated on: Mar 06, 2023 | 9:15 PM

ಸಿಎಂ ಆಗಿದ್ದಾಗ ಆತಿಥ್ಯದ ವೆಚ್ಚಕ್ಕೆ 200 ಕೋಟಿ ಖರ್ಚು ಮಾಡಿಲ್ಲ. 5 ವರ್ಷದಲ್ಲಿ 3 ಕೋಟಿ 26 ಲಕ್ಷ ರೂಪಾಯಿ ಮಾತ್ರ ಖರ್ಚು ಮಾಡಲಾಗಿದೆ ಎಂದು ಬಿಜೆಪಿ ನಾಯಕರ ಆರೋಪಕ್ಕೆ ಮಾಜಿ ಸಿಎಂ ಸಿದ್ಧರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಮಾಡಾಳ್ ಹಗರಣ ದಿಕ್ಕುತಪ್ಪಿಸಲು ನನ್ನ ಮೇಲೆ 200 ಕೋಟಿ ರೂ. ಲೂಟಿ ಆರೋಪ: ಸಿದ್ಧರಾಮಯ್ಯ
ಸಿದ್ದರಾಮಯ್ಯ
Image Credit source: deccanherald.com
Follow us on

ಬೆಂಗಳೂರು: ಕಾಂಗ್ರೆಸ್​ ನಾಯಕ ಸಿದ್ಧರಾಮಯ್ಯ (Siddaramaiah) ಸಿಎಂ ಆಗಿದ್ದಾಗ ಕೇಲವ ಕಾಫಿ, ತಿಂಡಿ, ಊಟದ ವಿಚಾರಕ್ಕೆ 200 ಕೋಟಿ ರೂ. ಹಣ ಲೂಟಿ ಮಾಡಿದ್ದಾರೆ ಬಿಜೆಪಿ ನಾಯಕರು ಆರೋಪಿಸಿದ್ದರು. ಈ ಸಂಬಂಧ ಪತ್ರಿಕಾ ಬಿಡುಗಡೆ ಮಾಡಿರುವ ಸಿದ್ಧರಾಯ್ಯ, ಸಿಎಂ ಆಗಿದ್ದಾಗ ಆತಿಥ್ಯದ ವೆಚ್ಚಕ್ಕೆ 200 ಕೋಟಿ ಖರ್ಚು ಮಾಡಿಲ್ಲ. 5 ವರ್ಷದಲ್ಲಿ 3 ಕೋಟಿ 26 ಲಕ್ಷ ರೂಪಾಯಿ ಮಾತ್ರ ಖರ್ಚು ಮಾಡಲಾಗಿದೆ ಎಂದು ಬಿಜೆಪಿ ನಾಯಕರ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ. 2013-18ರವರೆಗೆ ಮುಖ್ಯಮಂತ್ರಿಗಳ ಕಚೇರಿಯ ಸಭೆಗಳು ಹಾಗೂ ಜನತಾದರ್ಶನ ಸೇರಿ ಇತರೆ ಕಾರ್ಯಕ್ರಮಕ್ಕೆ 3.26 ಕೋಟಿ ಖರ್ಚು ಎಂದು ಸರ್ಕಾರದ ದಾಖಲೆಗಳೇ ಹೇಳುತ್ತವೆ. ನನ್ನ ವಿರುದ್ಧ ರಾಜ್ಯ ಬಿಜೆಪಿ ನಾಯಕರು ಸುಳ್ಳು ಆರೋಪ ಮಾಡಿದ್ದಾರೆ. ಸುಳ್ಳನ್ನು ಉತ್ಪಾದಿಸಿ ಕರ್ನಾಟಕದ ಜನತೆಗೆ ದ್ರೋಹ ಬಗೆದಿದ್ದಾರೆ. ಬಿಜೆಪಿಯೇ ಸುಳ್ಳಿನ ಕಾರ್ಖಾನೆ ಎಂಬುದು ಪದೇಪದೆ ನಿಜವಾಗುತ್ತಿದೆ. ಅವರಿಗೆ ಆತ್ಮಸಾಕ್ಷಿ ಇದೆಯಾ ಎಂಬುದು ಯಕ್ಷ ಪ್ರಶ್ನೆ ಆಗಿದೆ ಎಂದು ಕಿಡಿಕಾರಿದ್ದಾರೆ.

40 ಪರ್ಸೆಂಟ್ ಹಗರಣ, ಮಾಡಾಳ್ ವಿರೂಪಾಕ್ಷಪ್ಪನವರ ಹಗರಣದಿಂದ ಕಂಗಾಲಾಗಿರುವ ಬಿಜೆಪಿಯು ಇಂಥ ಸುಳ್ಳುಗಳನ್ನು ಉತ್ಪಾದಿಸಿಕೊಂಡು ಓಡಾಡುತ್ತಿದೆ. ವಾಸ್ತವ ಏನೆಂದರೆ 2013-14 ರಿಂದ 2017-18 ರವರೆಗೆ ಕಾಫಿ, ತಿಂಡಿ ಸೇರಿದಂತೆ ಮುಖ್ಯಮಂತ್ರಿಗಳ ಕಛೇರಿಯು ಆತಿಥ್ಯಕ್ಕೋಸ್ಕರ ಖರ್ಚು ಮಾಡಿದ ದಾಖಲೆಗಳನ್ನು ಸರ್ಕಾರ ನನಗೆ ನೀಡಿದೆ. ಅದು ಈ ಕೇಳಗಿನಂತ್ತಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ಕಾಫಿ -ತಿಂಡಿ, ಬಿಸ್ಕತ್​ನಲ್ಲಿ 200 ಕೋಟಿ ರೂ. ಲೂಟಿ ಆರೋಪ: ದಾಖಲೆ ಬಿಡುಗಡೆ ಮಾಡಿದ ಎನ್ ಆರ್ ರಮೇಶ್

  • 13-5-2013 ರಿಂದ 30-01-2014 ರವರೆಗೆ 85,13 ಲಕ್ಷ ರೂಪಾಯಿಗಳು,
  • 2014-15 ರಲ್ಲಿ 58.45 ಲಕ್ಷ ರೂ.
  • 2015-16 ರಲ್ಲಿ 39.20 ಲಕ್ಷ ರೂ.
  • 2016-17 ರಲ್ಲಿ 66,03 ಲಕ್ಷ ರೂ.
  • 2017- 18 ರಲ್ಲಿ 77.26 ಲಕ್ಷ ರೂ ವೆಚ್ಚ ಮಾಡಲಾಗಿದೆ.

ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಮುಖಂಡ ಎನ್​ಆರ್ ರಮೇಶ್ ಗಂಭೀರ ಆರೋಪ

ಇನ್ನು ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಮುಖಂಡ ಎನ್​ಆರ್ ರಮೇಶ್ ಗಂಭೀರ ಆರೋಪ ಮಾಡುವ ಮೂಲಕ ದಾಖಲೆ ಬಿಡುಗಡೆ ಮಾಡಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂನ ರಾಜ್ಯ BJP ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ, ಸಿದ್ದರಾಮಯ್ಯ ವಿರುದ್ಧ 200 ಕೋಟಿ ಹಗರಣ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಸಚಿವ ನಾರಾಯಣ ಗೌಡ ಕಾಂಗ್ರೆಸ್​ ಸೇರ್ಪಡೆಯಾಗುವ ಸಾಧ್ಯತೆ ಇದೆ: ಸಚಿವ ಬಿಸಿ ಪಾಟೀಲ್

ಸಿದ್ದರಾಮಯ್ಯ ಅವಧಿಯಲ್ಲಿ ಕಾಫಿ, ತಿಂಡಿ, ಬಿಸ್ಕತ್​​ ಹೆಸರಲ್ಲಿ ಹಗರಣ ನಡೆದಿದೆ. 5 ವರ್ಷದಲ್ಲಿ​​ ಸುಮಾರು 200 ಕೋಟಿ ರೂಪಾಯಿ ಲೂಟಿ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ದೂರು ನೀಡಿದ್ದೇನೆ ಎಂದು ಎನ್.ಆರ್.ರಮೇಶ್ ತಿಳಿಸಿದ್ದಾರೆ. ಅಲ್ಲದೆ ಸಿದ್ದರಾಮಯ್ಯ ವಿರುದ್ಧ ಕಾಫಿ ತಿಂಡಿ ಹಗರಣದ ತನಿಖೆಗೆ ಸಿಎಂಗೆ ಮನವಿ ಮಾಡಿದ್ದೇನೆ. ಮುಖ್ಯಮಂತ್ರಿಗಳು ಕೂಡ ನನ್ನ ಮನವಿಗೆ ಸ್ಪಂದಿಸಿದ್ದಾರೆ. ಕಾನೂನು ತಜ್ಞರ ಜೊತೆ ಚರ್ಚಿಸಿ ಸಿಐಡಿಗೆ ಕೊಡುವ ಬಗ್ಗೆ ಬುಧವಾರದೊಳಗೆ ತಿಳಿಸೋದಾಗಿ ಭರವಸೆ ನೀಡಿದ್ದಾರೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:34 pm, Mon, 6 March 23