2019ರ ಲೋಕಸಭೆ ಚುನಾವಣೆಯಲ್ಲಿ ಹೆಚ್​ಡಿ ರೇವಣ್ಣ ಕಳ್ಳ ಮತ ಹಾಕಿಸಿದ್ದಾರೆ: ಬಿಜೆಪಿ ಮುಖಂಡ ದೇವರಾಜೇಗೌಡ ಆರೋಪ

| Updated By: ವಿವೇಕ ಬಿರಾದಾರ

Updated on: Jan 16, 2024 | 1:10 PM

ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಶಾಸಕ ಹೆಚ್​ಡಿ ರೇವಣ್ಣ ಅವರು ಮತಗಟ್ಟೆ ಸಂಖ್ಯೆ 244ರಲ್ಲಿ 40 ರಿಂದ 50 ನಿಮಿಷಗಳ ಕಾಲ ನಿಂತು, ಕಳ್ಳ ಮತ ಹಾಕಿಸಿದ್ದಾರೆ. ಕಳ್ಳ ಮತ ಹಾಕಿಸಿರುವ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಆರೋಪ ಮಾಡಿದರು.

2019ರ ಲೋಕಸಭೆ ಚುನಾವಣೆಯಲ್ಲಿ ಹೆಚ್​ಡಿ ರೇವಣ್ಣ ಕಳ್ಳ ಮತ ಹಾಕಿಸಿದ್ದಾರೆ: ಬಿಜೆಪಿ ಮುಖಂಡ ದೇವರಾಜೇಗೌಡ ಆರೋಪ
ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ
Follow us on

ಹಾಸನ, ಜನವರಿ 16: ಕಳೆದ 2019ರಲ್ಲಿ ಹಾಸನ ಲೋಕಸಭೆ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ, ಶಾಸಕ ಹೆಚ್​ಡಿ ರೇವಣ್ಣ (HD Revanna) ಅವರು ಮತಗಟ್ಟೆ ಸಂಖ್ಯೆ 244ರಲ್ಲಿ 40 ರಿಂದ 50 ನಿಮಿಷಗಳ ಕಾಲ ನಿಂತು ಕಳ್ಳ ಮತ ಹಾಕಿಸಿದ್ದಾರೆ. ಕಳ್ಳ ಮತ (Vote) ಹಾಕಿಸಿರುವ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಆರೋಪ ಮಾಡಿದರು. ಹಾಸನದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮತದಾರರ ಗುರುತಿನ ಚೀಟಿಗಳನ್ನು ಇಟ್ಟುಕೊಂಡು ಹೆಚ್​ಡಿ ರೇವಣ್ಣ ಮತಗಟ್ಟೆಯ ಒಳಗೆ ನಿಂತಿದ್ದರು. ಮತದಾರರಿಗೆ ಗುರುತಿನಿ ಚೀಟಿ ಕೊಟ್ಟು ಅವರಿಂದ ಕಳ್ಳ ಮತವನ್ನು ಹಾಕಿಸಿದ್ದರು. ಸಿಸಿಕ್ಯಾಮರಾದಲ್ಲಿ ಕಳ್ಳ ಮತ ಹಾಕಿಸಿರುವ ವಿಡಿಯೋ ರೆಕಾರ್ಡ್ ಆಗಿದೆ ಎಂದು ಹೇಳಿದರು.

ಈ ಬಗ್ಗೆ ಜಿಲ್ಲಾಧಿಕಾರಿಗಳು ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದರು. ಹೈಕೋರ್ಟ್​ನಲ್ಲಿ ಪ್ರಕರಣದ ವಿಚಾರಣೆ ನಡೆದು, ಹೆಚ್​ಡಿ ರೇವಣ್ಣ ಅಪರಾಧ ಮಾಡಿದ್ದಾರೆ ಎಂದು ಆದೇಶ ಬಂದಿತ್ತು. ತಾವು ಜೈಲಿಗೆ ಹೋಗುವುದನ್ನು ತಪ್ಪಿಸಲು ಹೆಚ್​ಡಿ ರೇವಣ್ಣ ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದರು. ಸದ್ಯ ಈ ಪ್ರಕರಣ ಸುಪ್ರೀಂಕೋರ್ಟ್​ನಲ್ಲಿದೆ ಎಂದು ತಿಳಿಸಿದರು.

ರೇವಣ್ಣ ಅವರು ನನ್ನ ವಿರುದ್ಧ ಅಸಂಬದ್ಧವಾದ ಪದಗಳನ್ನು ಬಳಸಿದ್ದಾರೆ. ನಾನು 70 ಕೋಟಿ ರೂ. ಸಂಪಾದನೆ ಮಾಡಿದ್ದೇನೆ ಎಂದು ಹೆಚ್​ಡಿ ರೇವಣ್ಣ ಅವರ ವಕೀಲರು ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ಅವರ ಆರೋಪಕ್ಕೆ ಸಂಬಂಧಿಸಿದ ದಾಖಲೆ ಬಿಡುಗಡೆ ಮಾಡಿದ್ದೇನೆ‌. ನನ್ನ ಚರ ಮತ್ತು ಸ್ಥಿರ ಅಸ್ಥಿ ದಾಖಲೆ ಘೋಷಣೆ ಮಾಡಿದ್ದೇನೆ. ಮನೆ, ಅಸ್ಥಿ ಸೇರಿ ನನ್ನ ಬಳಿ 80 ಕೋಟಿ ಇದೆ ಎಂದು ತಿಳಿಸಿದರು.

ಇದನ್ನೂ ಓದಿ: ಆಸ್ತಿ ಬರೆಸಿಕೊಂಡ ಆರೋಪ ಕೇಸ್​: ಇದರ ಹಿಂದೆ ರಾಜಕೀಯವಿದೆ: ಮಾಜಿ ಸಚಿವ ಹೆಚ್​ಡಿ ರೇವಣ್ಣ

ಹೆಚ್​ಡಿ ರೇವಣ್ಣ ಅವರೇ ನಾನು ಯಾವುದೇ ಬೇನಾಮಿ ಆಸ್ತಿ ಮಾಡಿಲ್ಲ. ನನ್ನ ಆಸ್ತಿ ಪತ್ರಗಳನ್ನು ನಿಮ್ಮ ಮನೆಗೆ ಕೊರಿಯರ್ ಮಾಡುತ್ತೇನೆ. ರೇವಣ್ಣ ಅವರೇ ನನ್ನ ಬಳಿ ಬೇನಾಮಿ ಹೆಂಡ್ತಿ, ಆಸ್ತಿ, ಮನೆ ಇಲ್ಲ. ನಿಮ್ಮ ಮನೆ ವಿಳಾಸ ಸರಿಯಾಗಿ ಕೊಡಿ ಸೇಲ್ ಡಿಡ್ ಪತ್ರಗಳನ್ನು ಕೊರಿಯರ್ ಮಾಡುತ್ತೇನೆ. ಹೆಚ್​ಡಿ ರೇವಣ್ಣ ಅವರು ಜನಗಳಿಗೆ ಮಂಕುಬೂದಿ ಎರಚುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು.

ವಿಡಿಯೋ ಪ್ರಸಾರ ಮಾಡದಂತೆ ಹೈಕೋರ್ಟ್​ನಿಂದ ತಡೆಯಾಜ್ಞೆ

ಹೆಚ್​ಡಿ ರೇವಣ್ಣ ಮತಗಟ್ಟೆಯಲ್ಲಿ ನಿಂತಿರುವ ವಿಡಿಯೋವನ್ನು ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಅವರು ಬಿಡುಗಡೆ ಮಾಡಿದ್ದಾರೆ. ಆದರೆ ತಮ್ಮ ಬಗ್ಗೆ ಯಾವುದೆ ವಿಡಿಯೋಗಳನ್ನು ಎಲ್ಲ ಮುದ್ರಣ ಹಾಗು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಪ್ರಸಾರ ಮಾಡದಂತೆ ಸಂಸದ ಪ್ರಜ್ವಲ್ ರೇವಣ್ಣ 2023ರ ಜೂನ್ ತಿಂಗಳಲ್ಲಿ ಹೈಕೋರ್ಟ್​​ನಿಂದ ತಡೆಯಾಜ್ಞೆ ತಂದಿದ್ದಾರೆ. ತಡೆಯಾಜ್ಞೆ ಬಗ್ಗೆ ಮಾಹಿತಿ ಇದ್ದರೂ ವಕೀಲ ದೇವರಾಜೇಗೌಡ ಅವರು ವೀಡಿಯೋ ಬಿಡುಗಡೆ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ