ಆಸ್ತಿ ಬರೆಸಿಕೊಂಡ ಆರೋಪ ಕೇಸ್: ಇದರ ಹಿಂದೆ ರಾಜಕೀಯವಿದೆ: ಮಾಜಿ ಸಚಿವ ಹೆಚ್ಡಿ ರೇವಣ್ಣ
ಹಾಸನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಚಿವ ಹೆಚ್ಡಿ ರೇವಣ್ಣ, ಲೋಕಸಭಾ ಚುನಾವಣೆ ಹತ್ತಿರ ಇರುವುದರಿಂದ ಈ ರೀತಿ ಆರೋಪ ಮಾಡಲಾಗುತ್ತಿದೆ. ಇದರ ಹಿಂದೆ ರಾಜಕೀಯವಿದೆ ಎಂದಿದ್ದಾರೆ. ಘಟನೆ ನಡೆದು ಎಷ್ಟು ದಿನ ಆಗಿದೆ, ಈಗ ಏಕೆ ಆರೋಪ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಹಾಸನ, ಡಿಸೆಂಬರ್ 27: ಮಾಜಿ ಸಚಿವ ಹೆಚ್ಡಿ ರೇವಣ್ಣ ಕುಟುಂಬದ ವಿರುದ್ಧ ಆಸ್ತಿ ಬರೆಸಿಕೊಂಡ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ, ಲೋಕಸಭಾ ಚುನಾವಣೆ ಹತ್ತಿರ ಇರುವುದರಿಂದ ಈ ರೀತಿ ಆರೋಪ ಮಾಡಲಾಗುತ್ತಿದೆ. ಇದರ ಹಿಂದೆ ರಾಜಕೀಯ ಇದೆ ಎಂದು ಮಾಜಿ ಸಚಿವ ಹೆಚ್ಡಿ ರೇವಣ್ಣ (Bhavani Revanna) ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಘಟನೆ ನಡೆದು ಎಷ್ಟು ದಿನ ಆಗಿದೆ, ಈಗ ಏಕೆ ಆರೋಪ ಮಾಡುತ್ತಿದ್ದಾರೆ. ಲೋಕಸಭೆ ಚುನಾವಣೆಗೆ ಇನ್ನು ಮೂರು ತಿಂಗಳು ಮಾತ್ರ ಇದೆ. ಇಂತಹ ಸಮಯದಲ್ಲಿ ಯಾಕೆ ಆರೋಪ ಬರುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಭವಾನಿ ಹೊಡೆದಿದ್ದರಿಂದ ಗರ್ಭಪಾತ ಆಗಿದೆ ಎಂಬ ಆರೋಪ ವಿಚಾರವಾಗಿ ಮಾತನಾಡಿದ ಅವರು, ಭವಾನಿ ಹಲ್ಲೆ ಮಾಡುತ್ತಾರೆ ಎಂದರೆ ಏನು ಹೇಳೋದು. ಭವಾನಿ ಯಾರಿಗೆ ಸಹಾಯ ಮಾಡಿದ್ದಾರೆ ಅನ್ನೋದು ದೇವರಿಗೆ ಗೊತ್ತು. ಆ ಹುಡುಗಿಯನ್ನ ಮನೆಯಲ್ಲಿ ಇಟ್ಟುಕೊಂಡು ಡಿಗ್ರಿ ಮಾಡಿಸಿದ್ದು ನಾವು. ನಮ್ಮ ಮನೆಯಲ್ಲಿ ಆಕೆಯನ್ನು ಕೆಲಸಕ್ಕೆ ಇಟ್ಟುಕೊಂಡಿರಲಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಎಂಎಲ್‌ಸಿ ಸೂರಜ್ ರೇವಣ್ಣಗೆ ಬಿಗ್ ರಿಲೀಫ್ ನೀಡಿದ ಕರ್ನಾಟಕ ಹೈಕೋರ್ಟ್ : ಯಾವ ಪ್ರಕರಣ?
ಚುನಾವಣೆ ಸಂದರ್ಭದಲ್ಲಿ ಇನ್ನೂ ಕೆಲವು ಅರೋಪ ಮಾಡುತ್ತಾರೆ. ಪ್ರಜ್ವಲ್ ರೇವಣ್ಣ ವಿರುದ್ಧ ಯಾವ್ಯಾವ ಇಲಾಖೆಗೆ ಪತ್ರ ಬರೆದಿದ್ದಾರೆ. ಪ್ರಜ್ವಲ್ ಆಗಿರುವುದಕ್ಕೆ ಎಲ್ಲವನ್ನೂ ತಡೆದಿದ್ದಾನೆ ಎಂದು ತೀವ್ರ ವಾಗ್ದಾಳಿ ಮಾಡಿದ್ದಾರೆ.
ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಮಾಜಿ ಸಚಿವ HD ರೇವಣ್ಣ
ಕಾಂಗ್ರೆಸ್ಸಿಗರು ಬೇಕಾದಾಗ ಹೆಚ್ಡಿಡಿ ಮನೆ ಬಳಿ ಬರುತ್ತಾರೆ. ಅವರು ಅಧಿಕಾರಕ್ಕೆ ನಮ್ಮನ್ನ ಬಂದಾಗ ದೂರ ಇಡುತ್ತಾರೆ. ಅಂದೇ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದರು. ಕಾಂಗ್ರೆಸ್ ನಂಬಬೇಡಿ ಎಂದು. ಕಾಂಗ್ರೆಸ್ ಜೊತೆ ಮೈತ್ರಿ ಬಿಟ್ಟು ಬನ್ನಿ ನಾವು ಬೆಂಬಲಿಸ್ತೇವೆ ಎಂದು ಅಂದೇ ಕುಮಾರಸ್ವಾಮಿಗೆ ಮೋದಿಯವರು ಹೇಳಿದ್ದರು.
ಇದನ್ನೂ ಓದಿ: ಆಸ್ತಿ ಮಾರಾಟಕ್ಕೆ ಒತ್ತಾಯಿಸಿ ಕಿಡ್ನಾಪ್: ಪ್ರಜ್ವಲ್ ರೇವಣ್ಣ, ಭವಾನಿ ವಿರುದ್ಧ ಗಂಭೀರ ಆರೋಪ ಮಾಡಿದ ಮಾಜಿ ಕಾರು ಚಾಲಕ
ಕಾಂಗ್ರೆಸ್ ಜೊತೆಗೆ ಹೋದ ಎಲ್ಲರಿಗೂ ಇದೇ ಪರಿಸ್ಥಿತಿ. ಮೋದಿ ಮತ್ತೆ ಪ್ರಧಾನಿ ಆಗಬೇಕು ಅನ್ನೋದು ನಮ್ಮ ಗುರಿ. ದೇವೇಗೌಡರು, ಕುಮಾರಸ್ವಾಮಿ ಎಲ್ಲರದ್ದೂ ಇದೇ ಗುರಿ. ನಮಗೆ ಬೇರೆವುದರ ಬಗ್ಗೆಯೂ ಚಿಂತೆ ಇಲ್ಲ ಎಂದು ಹೇಳಿದ್ದಾರೆ.
ಸೂಕ್ತ ಬೆಡ್ ವ್ಯವಸ್ಥೆಗೆ ಮನವಿ
ಕೊರೊನಾ ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಬೆಡ್ ವ್ಯವಸ್ಥೆ ಮಾಡಬೇಕು. ಈ ಬಗ್ಗೆ ಜಿಲ್ಲಾ ಸರ್ಜನ್, ಅಧಿಕಾರಿಗಳಿಗೆ ಮನವಿ ಮಾಡಿದ್ದೇನೆ. ಕಾಮಗಾರಿ ಮುಗಿದ ಹೊಸ ಆಸ್ಪತ್ರೆ ಉದ್ಘಾಟನೆ ಮಾಡಬೇಕು. ಇಲ್ಲದಿದ್ದರೆ ಶಾಸಕರ ಜೊತೆ ತೆರಳಿ ನಾವೇ ಟೇಪ್ ಕಟ್ ಮಾಡುತ್ತೇವೆ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.