ರಾಜ್ಯ ಸರ್ಕಾರದಿಂದ 3542 ಕೋಟಿ ರೂ ಪೂರಕ ಅಂದಾಜು ಮಂಡನೆ

ವಿಧಾನಸಭೆಯಲ್ಲಿ ಇಂದು ರಾಜ್ಯ ಸರ್ಕಾರದಿಂದ 3542 ಕೋಟಿ ರೂ.ಗಳ ಪೂರಕ ಅಂದಾಜುಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡನೆ ಮಾಡಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಸ್ಥಗಿತಗೊಂಡಿದ್ದ ಯೋಜನೆಗಳ ಮರು‌ ಜಾರಿಗೆ ಹೆಚ್ಚಿನ ಅನುದಾನ ಸಹ ನೀಡಲಾಗಿದೆ. 38 ವಾಹನಗಳ ಖರೀದಿಗೆ 7 ಕೋಟಿ 44 ಲಕ್ಷ ರೂ. ನೀಡಲಾಗಿದೆ.

ರಾಜ್ಯ ಸರ್ಕಾರದಿಂದ 3542 ಕೋಟಿ ರೂ ಪೂರಕ ಅಂದಾಜು ಮಂಡನೆ
ಸಿಎಂ ಸಿದ್ದರಾಮಯ್ಯ
Edited By:

Updated on: Dec 11, 2023 | 10:35 PM

ಬೆಂಗಳೂರು, ಡಿಸೆಂಬರ್​​ 11: ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ರಿಂದ ಇಂದು ರಾಜ್ಯ ಸರ್ಕಾರದಿಂದ 3542 ಕೋಟಿ ರೂ.ಗಳ ಪೂರಕ ಅಂದಾಜು ಮಂಡನೆ ಮಾಡಲಾಗಿದೆ. ಬಿಜೆಪಿ ಸರ್ಕಾರದಲ್ಲಿ ಸ್ಥಗಿತಗೊಂಡಿದ್ದ ಯೋಜನೆಗಳ ಮರು‌ ಜಾರಿಗೆ ಹೆಚ್ಚಿನ ಅನುದಾನ ನೀಡಲಾಗಿದೆ. ಕೃಷಿ ಭಾಗ್ಯ ಯೋಜನಗೆ 32 ಕೋಟಿ ರೂ. ಹಾಗೂ ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಗೆ 14 ಕೋಟಿ ರೂ. ಸಚಿವರು, ಶಾಸಕರು, ಸಭಾಧ್ಯಕ್ಷರು, ಉಪಸಭಾಪತಿ ವಾಹನ ಖರೀದಿಗೆ ಹೆಚ್ಚಿನ ಹಣ ಸೇರಿದಂತೆ ಒಟ್ಟು 38 ವಾಹನಗಳ ಖರೀದಿಗೆ 7 ಕೋಟಿ 44 ಲಕ್ಷ ರೂ.

ರಾಜ್ಯ ಸರ್ಕಾರದ 33 ಸಚಿವರಿಗೆ ವಾಹನಗಳ ಖರೀದಿ, ದೆಹಲಿ ಪ್ರತಿನಿಧಿ, ಸಿಎಂ ರಾಜಕೀಯ ಕಾರ್ಯದರ್ಶಿ, ಸಲಹೆಗಾರರಿಗೂ ಹೊಸ ವಾಹನ ಭಾಗ್ಯ ನೀಡಲಾಗಿದೆ. ಶಾಸಕರ ಕಾರು ಖರೀದಿಗೆ 4 ಕೋಟಿ ರೂ, ಸ್ಪೀಕರ್ ಕಾರು ಖರೀದಿಗೆ 39 ಲಕ್ಷ ರೂ.‌ ಉಪಸಭಾಪತಿ ಕಾರು ಖರೀದಿಗೆ 8 ಲಕ್ಷ ರೂ. ನೀಡಲಾಗಿದೆ.

ಇದನ್ನೂ ಓದಿ: ಕೊನೆಗೂ ಕರ್ನಾಟಕ ವಕೀಲರ ಸಂರಕ್ಷಣಾ ವಿಧೇಯಕ ಮಂಡನೆ: ನುಡಿದಂತೆ ನಡೆದ ಸಿದ್ದರಾಮಯ್ಯ

ಹಿಮಾಚಲ ಪ್ರದೇಶ ಪ್ರವಾಹಕ್ಕೆ ಸಿಎಂ ಪರಿಹಾರ ನಿಧಿಗೆ 15 ಕೋಟಿ ರೂ. ಆರ್ಬಿಟ್ರೇಷನ್ ಪ್ರಕರಣಕ್ಕೆ 28 ಕೋಟಿ ರೂ. ಠೇವಣಿ ಇಡಲಾಗಿದೆ. ದಸರಾ ಸಿಎಂ ಕಪ್​ಗೆ 4 ಕೋಟಿ ರೂ, ಡಾ.ವಿಷ್ಣುವರ್ಧನ್ ಸ್ಮಾರಕಕ್ಕೆ 74 ಲಕ್ಷ ರೂ. ರೈತರ ಆತ್ಮಹತ್ಯೆ ಪ್ರಕರಣಗಳ ಪರಿಹಾರ ನೀಡಲು 7 ಕೋಟಿ 30 ಲಕ್ಷ ರೂ. ದಾವೋಸ್​ಗೆ ಸಿಎಂ ನೇತೃತ್ವದ ನಿಯೋಗದ ಪ್ರವಾಸಕ್ಕೆ 12 ಕೋಟಿ ರೂ.

ಇದನ್ನೂ ಓದಿ: 2023ನೇ ಸಾಲಿನ ಕರ್ನಾಟಕ ಸ್ಟಾಂಪ್ ತಿದ್ದುಪಡಿ ವಿಧೇಯಕ ಅಂಗೀಕಾರ, ಮುದ್ರಾಂಕ, ನೋಂದಣಿ ಶುಲ್ಕ ಹೆಚ್ಚಳ

ಕೈಗಾರಿಕಾ ಸಚಿವರ ನೇತೃತ್ವದ ಅಮೆರಿಕ ಪ್ರವಾಸಕ್ಕೆ 2 ಕೋಟಿ 25 ಲಕ್ಷ ರೂ. ಇನ್ವೆಸ್ಟ್ ಕರ್ನಾಟಕ ಫೋರಂ ಸಿಎಂಡಿಗೆ ಹೊಸ ಕಾರು ಖರೀದಿಗೆ 20 ಲಕ್ಷ ರೂ. ಮೈಸೂರು ದಸರಾಗೆ 8.50 ಕೋಟಿ ರೂ, ಕರ್ನಾಟಕ ಸಂಭ್ರಮ-50ಕ್ಕೆ 5 ಕೋಟಿ ರೂ. ಮತ್ತು 86ನೇ ಸಾಹಿತ್ಯ ಸಮ್ಮೇಳನದ ಬಾಕಿ ಬಿಲ್ ಪಾವತಿಗೆ 4.66 ಲಕ್ಷ ರೂ. ಪೂರಕ ಅಂದಾಜು ಮಂಡನೆ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:34 pm, Mon, 11 December 23

ಕಿರಣ್​ ಹನಿಯಡ್ಕ

TV9 ಕನ್ನಡದಲ್ಲಿ ಹಿರಿಯ ರಾಜಕೀಯ ವರದಿಗಾರ. ಮಂಗಳೂರು ವಿಶ್ವವಿದ್ಯಾನಿಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. 17 ವರ್ಷಗಳಿಂದ ಮಾಧ್ಯಮ ವೃತ್ತಿ. ಮುದ್ರಣ ಮಾಧ್ಯಮದಲ್ಲಿ ಸಬ್ ಎಡಿಟರ್, ವಿದ್ಯುನ್ಮಾನ ಮಾಧ್ಯಮದಲ್ಲಿ ನ್ಯೂಸ್ ಡೆಸ್ಕ್ ಮತ್ತು ರಾಜಕೀಯ ವರದಿಗಾರಿಕೆಯಲ್ಲಿ ಅನುಭವ.

Read More
Loading...
Unable to load recommendations.
Follow Us