ಕರ್ನಾಟಕದ ಶೇ.95ರಷ್ಟು ಶಾಸಕರು ಕೋಟ್ಯಾಧಿಪತಿಗಳು, 35ರಷ್ಟು ಎಂಎಲ್​ಗಳ ವಿರುದ್ಧ ಕ್ರಿಮಿನಲ್ ಪ್ರಕರಣ: ಎಡಿಆರ್ ವರದಿಯಿಂದ ಬಹಿರಂಗ

ಕರ್ನಾಟಕದ ಎಲ್ಲಾ ಹಾಲಿ ಶಾಸಕರ ಶಿಕ್ಷಣ, ಆಸ್ತಿಪಾಸ್ತಿ ಹಾಗೂ ಅಪರಾಧ ಪ್ರಕಣಗಳ ವರದಿಯನ್ನು ಅಸೋಸಿಯೇಷನ್​ ಫಾರ್​ ಡೆಮಾಕ್ರಟಿಕೆ ರಿಫಾರ್ಮ್ಸ್​ (ಎಡಿಆರ್​) ಬಹಿರಂಗಪಡಿಸಿದೆ. ಹಾಗಾದ್ರೆ, ಹಾಲಿ ಶಾಸಕರ ಆಸ್ತಿ ಎಷ್ಟು? ಎಷ್ಟು ಜನ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದಾರೆ ಎನ್ನುವ ಮಾಹಿತಿ ಈ ಕೆಳಗಿನಂತಿದೆ ನೋಡಿ.

ಕರ್ನಾಟಕದ ಶೇ.95ರಷ್ಟು ಶಾಸಕರು ಕೋಟ್ಯಾಧಿಪತಿಗಳು, 35ರಷ್ಟು ಎಂಎಲ್​ಗಳ ವಿರುದ್ಧ ಕ್ರಿಮಿನಲ್ ಪ್ರಕರಣ: ಎಡಿಆರ್ ವರದಿಯಿಂದ ಬಹಿರಂಗ
ವಿಧಾನಸೌಧ
Follow us
ರಮೇಶ್ ಬಿ. ಜವಳಗೇರಾ
|

Updated on: Mar 24, 2023 | 4:02 PM

ಬೆಂಗಳೂರು: ಶಾಸನಸಭೆಗಳು ಇತ್ತೀಚಿನ ವರ್ಷಗಳಲ್ಲಿ ಶ್ರೀಮಂತರ ಕೇಂದ್ರಗಳಾಗುತ್ತಿವೆ. ಬಹುತೇಕ ರಾಜಕೀಯ ಪಕ್ಷಗಳು ಕೋಟ್ಯಧೀಶರಿಗೆ ಮಣೆ ಹಾಕುತ್ತಿವೆ. ತಮ್ಮ ಬಳಿ ಕೋಟಿಗಟ್ಟಲೇ ರೂಪಾಯಿ ಮೌಲ್ಯದ ಆಸ್ತಿಪಾಸ್ತಿಯಿದೆ ಎಂದಯ ಘೋಷಿಸಿಕೊಂಡ ಶಾಸಕರ ಸಂಖ್ಯೆ ಏರುತ್ತಲೇ ಇದೆ. ಅದರಂತೆ ಕರ್ನಾಟಕದಲ್ಲಿ(Karnataka) ಶೇ 95ರಷ್ಟು ಶಾಸಕರು ಕೋಟ್ಯಾಧಿಪತಿಗಳಾಗಿದ್ದಾರೆ(crorepatis). ಇನ್ನು ಶೇ. 35ರಷ್ಟು ಶಾಸಕರು ಕ್ರಿಮಿನಲ್ ಆರೋಪಗಳನ್ನು (criminal charges) ಹೊಂದಿದ್ದಾರೆ ಎಂದು ಅಸೋಸಿಯೇಷನ್​ ಫಾರ್​ ಡೆಮಾಕ್ರಟಿಕೆ ರಿಫಾರ್ಮ್ಸ್​ (ಎಡಿಆರ್​)(Association for Democratic Reforms (ADR)) ವರದಿಯಿಂದ ತಿಳಿದುಬಂದಿದೆ.

ಕರ್ನಾಟಕದ ವಿಧಾನಸಭೆಯ (ಎಂಎಲ್‌ಎ) 95% ಕ್ಕೂ ಹೆಚ್ಚು ಸದಸ್ಯರು ಕೋಟ್ಯಾಧಿಪತಿಗಳಾಗಿದ್ದರೆ, 35% ಶಾಸಕರು ಕ್ರಿಮಿನಲ್ ಅಪರಾಧಗಳನ್ನು ಎದುರಿಸುತ್ತುದ್ದಾರೆ  ಎನ್ನುವ ವರದಿಯನ್ನು ಎಡಿಆರ್ ಗುರುವಾರ ಬಹಿರಂಗಪಡಿಸಿದೆ. ಎಡಿಆರ್ ಇತ್ತೀಚೆಗೆ ಕರ್ನಾಟಕದ 224 ಹಾಲಿ ಶಾಸಕರ ಪೈಕಿ 219 ಶಾಸಕರ ಅಪರಾಧ, ಹಣಕಾಸು ಮತ್ತು ಇತರ ಹಿನ್ನೆಲೆ ವಿವರಗಳನ್ನು ವಿಶ್ಲೇಷಿಸಿದ್ದು, ವರದಿಯ ಪ್ರಕಾರ ಸುಮಾರು 26% ಶಾಸಕರು ತಮ್ಮ ಅಫಿಡವಿಟ್‌ಗಳಲ್ಲಿ ತಮ್ಮ ವಿರುದ್ಧ ಇರುವ ಗಂಭೀರ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿಕೊಂಡಿದ್ದಾರೆ. ಇದರಲ್ಲಿ ಬಿಜೆಪಿ ಶಾಸಕ ಸಂಖ್ಯೆ ಶೇ.30ರಷ್ಟು ಹೆಚ್ಚಿದೆ. ಬಿಜೆಪಿಯ 118 ಶಾಸಕರಲ್ಲಿ 112 ಮಂದಿ ಕೋಟ್ಯಾಧಿಪತಿಗಳು ಆಗಿದ್ದು, ಪ್ರತಿ ಹಾಲಿ ಶಾಸಕರ ಸರಾಸರಿ ಆಸ್ತಿ ಮೌಲ್ಯ 29.85 ಕೋಟಿಯಾಗಿದೆ ಎಂದು ವರದಿ ಹೇಳಿದೆ.

118 ಬಿಜೆಪಿ ಶಾಸಕರ ಪ್ರತಿ ಅಭ್ಯರ್ಥಿಯ ಸರಾಸರಿ ಆಸ್ತಿ 19.6 ಕೋಟಿಯಷ್ಟಿದ್ದರೆ, ಜನತಾದಳ (ಜಾತ್ಯತೀತ) (ಜೆಡಿಎಸ್) ಶಾಸಕರ ಸರಾಸರಿ ಆಸ್ತಿ 4.34 ಕೋಟಿ ರೂ. ಇದೆ. ಹಾಗೂ ನಾಲ್ವರು ಪಕ್ಷೇತರ ಶಾಸಕರು 40.92 ಕೋಟಿ ಸರಾಸರಿ ಆಸ್ತಿ ಹೊಂದಿದ್ದಾರೆ. ಬಿಜೆಪಿಯ 112 ಶಾಸಕರಲ್ಲಿ 49, ಕಾಂಗ್ರೆಸ್​ನ 67 ಶಾಸಕರಲ್ಲಿ 16, ಜೆಡಿಎಸ್‌ನ 30 ಶಾಸಕರಲ್ಲಿ 9 ಮತ್ತು 4 ಸ್ವತಂತ್ರ ಶಾಸಕರಲ್ಲಿ ಇಬ್ಬರು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ಇರುವುದಾಗಿ ತಿಳಿಸಿದ್ದಾರೆ. ಇನ್ನು ಬಿಜೆಪಿಯ 35, ಕಾಂಗ್ರೆಸ್​ನ 13 ಮತ್ತು ಜೆಡಿಎಸ್‌ನ 8 ಶಾಸಕರ ವಿರುದ್ಧ ಗಂಭೀರ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದಾರೆ.

ಕನಕಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕಾಂಗ್ರೆಸ್​ನ ಡಿ.ಕೆ.ಶಿವಕುಮಾರ್ ಅವರು 840 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿ ಹೊಂದಿದ್ದು, ಸುರೇಶ್ ಬಿ.ಎಸ್ ಮತ್ತು ಎಂ.ಕೃಷ್ಣಪ್ಪ ಕ್ರಮವಾಗಿ 416 ಕೋಟಿ ಮತ್ತು 236 ಕೋಟಿ ರೂ, ಆಸ್ತಿ ಹೊಂದಿದ್ದಾರೆ. ಇನ್ನು ಕೇವಲ ಇಬ್ಬರು ಶಾಸಕರು ಡಾಕ್ಟರೇಟ್ ಪದವಿ ಪಡೆದಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್