ಯಡಿಯೂರಪ್ಪ ರಾಜಾಹುಲಿ, ವಿಜಯೇಂದ್ರ ಹೆಬ್ಬುಲಿ ಎಂದ ಶಾಸಕ ರಾಜುಗೌಡ

ಯಡಿಯೂರಪ್ಪ ನಮ್ಮ ರಾಜಾಹುಲಿ. ವಿಜಯೇಂದ್ರ ನಮ್ಮ ಸೂಪರ್ ಸ್ಟಾರ್. ಅವರು ಸಣ್ಣ ಹುಲಿ ಅಲ್ಲ, ಹೆಬ್ಬುಲಿಯಾಗಿ ಬೆಳೆದಿದ್ದಾರೆ ಎಂದು ಶಾಸಕ ರಾಜುಗೌಡ ಹೇಳಿದರು.

ಯಡಿಯೂರಪ್ಪ ರಾಜಾಹುಲಿ, ವಿಜಯೇಂದ್ರ ಹೆಬ್ಬುಲಿ ಎಂದ ಶಾಸಕ ರಾಜುಗೌಡ
ಬ.ಎಸ್​​. ಯಡಿಯೂರಪ್ಪ, ರಾಜುಗೌಡ, ಬಿ.ವೈ.ವಿಜಯೇಂದ್ರ
Follow us
ಗಂಗಾಧರ​ ಬ. ಸಾಬೋಜಿ
|

Updated on: Mar 24, 2023 | 3:34 PM

ಚಾಮರಾಜನಗರ: ಯಡಿಯೂರಪ್ಪ (Yediyurappa) ನಮ್ಮ ರಾಜಾಹುಲಿ. ವಿಜಯೇಂದ್ರ ನಮ್ಮ ಸೂಪರ್ ಸ್ಟಾರ್. ಅವರು ಸಣ್ಣ ಹುಲಿ ಅಲ್ಲ, ಹೆಬ್ಬುಲಿಯಾಗಿ ಬೆಳೆದಿದ್ದಾರೆ ಎಂದು ಶಾಸಕ ರಾಜುಗೌಡ (MLA Raju Gowda) ಹೇಳಿದರು. ಯುವ ಸಮಾವೇಶದಲ್ಲಿ ಮಾತನಾಡಿದ ಅವರು, ಪಕ್ಷವನ್ನು ಅಧಿಕಾರಕ್ಕೆ ತರಲು ವಿಜಯೇಂದ್ರ ಸಂಘಟನೆ ಮಾಡುತ್ತಿದ್ದಾರೆ. ಕಾಂಗ್ರೆಸ್ 70 ವರ್ಷ ಆಳ್ವಿಕೆ ಮಾಡಿದರು ಮೀಸಲಾತಿ ಹೆಚ್ಚಿಸಲಿಲ್ಲ. ಆದರೆ ಬಿಜೆಪಿ ಸರ್ಕಾರ ಎಸ್​ಸಿ, ಎಸ್​ಟಿ ಮೀಸಲಾತಿ ಹೆಚ್ಚಳ ಮಾಡಿದೆ. ಪರಿವಾರ ಸಮುದಾಯಕ್ಕೆ ಮೀಸಲಾತಿ ಜಾಸ್ತಿ ಮಾಡಿದ್ದಾರೆ. ಶಾಸಕ ನಿರಂಜನ್ ಕುಮಾರ್​ರನ್ನು ಅತಿ ಹೆಚ್ಚು ಮತದಿಂದ ಗೆಲ್ಲಿಸಿ. ವಿಜಯೇಂದ್ರರನ್ನು ಪವರ್ ಪುಲ್ ಲೀಡರ್ ಆಗಲೂ ಬೆಂಬಲಿಸಿ. ಎಲ್ಲರನ್ನೂ ಒಂದಾಗಿ ತೆಗೆದುಕೊಂಡು ಹೋಗುವ ಪಕ್ಷ ಬಿಜೆಪಿ. ನಮ್ಮ ಉಸಿರುವವರೆಗೂ ನಮ್ಮ ಸಮಾಜದ ಬಂಧುಗಳು ಮರೆಯಬಾರದು. ಯಡಿಯೂರಪ್ಪ ಕಮಲ ಗೆಲ್ಲಿಸಿದ್ದಾರೆ, ಅದನ್ನು ಹೆಮ್ಮರ ಮಾಡಿ ಎಂದು ಹೇಳಿದರು.

ಗುಂಡ್ಲುಪೇಟೆ ನಗರಕ್ಕೆ ಪ್ರತಿ ಮನೆಗೂ ಕುಡಿಯುವ ನೀರು ಕೊಡಲು 127 ಕೋಟಿ ಕಾಮಗಾರಿ ತಂದಿದ್ದಾರೆ. ನಾಳೆ ಈ ಕಾಮಗಾರಿಯ ಗುದ್ದಲಿ ಪೂಜೆ ನಡೆಯುತ್ತೆ. ಬಿಜೆಪಿ ಪಕ್ಷ ಅಂದ್ರೆ ಲಿಂಗಾಯತರ ಪಕ್ಷ ಅಂತಾ ಹೇಳಿತ್ತಿದ್ದರು ಎಂದು ಕಿಡಿಕಾರಿದರು.

ಇದನ್ನೂ ಓದಿ: ಕೊನೆಗೂ ವರುಣಾದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಮತ್ತೊಂದು ಕ್ಷೇತ್ರದ ಮೇಲೂ ಆಸೆ

ನನಗೂ ಒಂದೊಂದು ಸಲ ಹೊಟ್ಟೆ ಉರಿಯುತ್ತೆ: ವಿಜಯೇಂದ್ರ

ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಮಾತನಾಡಿ, ಇವತ್ತು ಬಹಳ ವಿಶೇಷ ದಿನ. ನನ್ನ ಜೀವನದಲ್ಲಿ ಮರೆಲಾಗದ ದಿನ. ದೇಶದ ಗೃಹ ಸಚಿವರು ಇಂದು ಯಡಿಯೂರಪ್ಪ ಅವರ ಮನೆಗೆ ಬಂದು ಚರ್ಚೆ ಮಾಡಿದರು. ಮತ ಎಣಿಕೆ ವೇಳೆ ಮೊದಲ ಬಿಜೆಪಿ ಕ್ಷೇತ್ರ ಬರುವುದು ಗುಂಡ್ಲುಪೇಟೆ. ನನಗೂ ಒಂದೊಂದು ಸಲ ಹೊಟ್ಟೆ ಉರಿಯುತ್ತೆ. ನಾನ್ಯಾಕೆ ಅಲ್ಲಿ ಇಲ್ಲಿ ಅಂತಾ ಒದ್ದಾಡುತ್ತಿದ್ದೇನೆ. ಇಲ್ಲೇ ಬಂದು‌ ನಿಲ್ಲಬಹುದಲ್ಲಾ‌ ಅಂತಾ ಎಂದು ಹೇಳುವ ಮೂಲಕ ಬಿ.ವೈ. ವಿಜಯೇಂದ್ರ ಮಾರ್ಮಿಕವಾಗಿ ನುಡಿದಿದ್ದಾರೆ. ಹಾಗಾದರೆ ವಿಜಯೇಂದ್ರ ಶಿಕಾರಿಪುರ, ವರುಣಾ ಮತ್ತು ಇನ್ಯಾವ ಕ್ಷೇತ್ರದಲ್ಲಿ ನಿಲ್ಲೋದಕ್ಕೆ ಪ್ಲಾನ್ ಮಾಡುತ್ತಿದ್ದಾರೆ ಎಂಬ ಅನುಮಾನಗಳು ಹುಟ್ಟಿಕೊಳ್ಳುತ್ತಿವೆ.

ನಾನು ಇವತ್ತು ಗುಂಡ್ಲುಪೇಟೆ ಕ್ಷೇತ್ರಕ್ಕೆ ಹೋಗುತ್ತಿದ್ದೇನೆ ಅಂದಾಗ ಯಡಿಯೂರಪ್ಪ ಬಹಳ ಖುಷಿಪಟ್ಟರು. ಯಡಿಯೂರಪ್ಪರವರು ಶಿಕಾರಿ ಪುರದಲ್ಲಿ ಎಷ್ಟು‌ ಮನೆಗಳಿಗೆ ಭೇಟಿ ಕೊಟ್ಟಿದ್ದಾರೆ ಅನ್ನೋದು ಗೊತ್ತಿಲ್ಲ. ಉಪಚುನಾವಣೆಯಲ್ಲಿ ಕ್ಷೇತ್ರದ ಪ್ರತಿಯೊಂದು ಮನೆಗೂ ಯಡಿಯೂರಪ್ಪ ಭೇಟಿ ನೀಡಿದರು. ಒಂದು‌ ಜಿಪಂ ಚುನಾವಣೆ ಸೋತರೆ ಮನೆಮಠ ಮಾರ್ಕೊಂಡು ಚುನಾವಣೆ ಬೇಡ ಎಂಬ ಪರಿಸ್ಥಿತಿ ಆಗುತ್ತೆ. ಆದರೆ ನಿರಂಜನಕುಮಾರ್ ಮೂರು ಸೋಲು ಕಂಡರು. ನಾನು‌ ಚುನಾವಣೆಗೆ ನಿಲ್ಲಲ್ಲ‌ ಎಂದು ಹೇಳಿದ್ದರು. ಆಗ ಯಡಿಯೂರಪ್ಪ ಕ್ಷೇತ್ರದ ಕಾರ್ಯಕರ್ತರ ಮೇಲೆ ವಿಶ್ವಾಸ ಇಡು. ಈ ಬಾರಿಯೂ ನೀನೆ ಸ್ಪರ್ಧೆ ಮಾಡು‌ ಎಂದು ಹೇಳಿದ್ದರು ಎಂದರು.

ಇದನ್ನೂ ಓದಿ: ಮುರಿದ ರಥ ನಿರ್ಮಾಣ ಮಾಡಿ ಕೊಡುವುದಾಗಿ ಹೇಳಿ ಮಾತು ತಪ್ಪಿದ ಸೋಮಣ್ಣ; ಸಚಿವರ ವಿರುದ್ಧ ಗೋ ಬ್ಯಾಕ್​ ಅಭಿಯಾನ

ರಾಜ್ಯದಲ್ಲಿ ಕಾಂಗ್ರೆಸ್​ಗೆ ಒಂದು ಕಡೆ ನಾವು ಬಿಜೆಪಿಯವರು ಖೆಡ್ಡಾ ತೋಡುತ್ತಿದ್ದೇವೆ. ಯಾವ ಕಾರಣಕ್ಕೂ ಸಿದ್ದರಾಮಯ್ಯ ಸಿಎಂ ಆಗಬಾರದು ಅಂತ ಕಾಂಗ್ರೆಸ್ ಪಕ್ಷದವರೇ ಖೆಡ್ಡಾ ತೋಡುತ್ತಿದ್ದಾರೆ. ಕಾಂಗ್ರೆಸ್ ನಿರ್ಣಾಮ ಮಾಡಲು ಆ ಪಕ್ಷದ ಕಾರ್ಯಕರ್ತರು ಮುಖಂಡರೇ ಸಾಕು. ಇನ್ನು ಅತಂತ್ರ ವಿಧಾನಸಭೆ ಮೂಲಕ ಅಧಿಕಾರಕ್ಕೆ ಬರಬಹುದು ಅಂತ ಜೆಡಿಎಸ್ ಕನಸು ಕಾಣುತ್ತಿದೆ. ಯಾವುದೇ ಕಾರಣಕ್ಕೂ ಇವರ ಕನಸು ನನಸಾಗುವುದಿಲ್ಲ. ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ