AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುರಿದ ರಥ ನಿರ್ಮಾಣ ಮಾಡಿ ಕೊಡುವುದಾಗಿ ಹೇಳಿ ಮಾತು ತಪ್ಪಿದ ಸೋಮಣ್ಣ; ಸಚಿವರ ವಿರುದ್ಧ ಗೋ ಬ್ಯಾಕ್​ ಅಭಿಯಾನ

ಜಿಲ್ಲೆಯ ಚನ್ನಪ್ಪನಪುರ ವೀರಭದ್ರೇಶ್ವರ ಜಾತ್ರೆ ವೇಳೆ ರಥ ಮುರಿದುಬಿದ್ದಿದ್ದು, ಈ ವೇಳೆ ರಥವನ್ನ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದ್ದ ಸಚಿವ ವಿ. ಸೋಮಣ್ಣ. ಇದೀಗ ಕೊಟ್ಟ ಮಾತಿಗೆ ತಪ್ಪಿದ್ದಾರೆ ಎಂದು ಗ್ರಾಮಸ್ಥರು ಸೇರಿ ಸಭೆ ನಡೆಸಿ ಸಚಿವ ವಿ.ಸೋಮಣ್ಣ ವಿರುದ್ದ ‘ಗೋ ಬ್ಯಾಕ್ ಸೋಮಣ್ಣ ಅಭಿಯಾನ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುರಿದ ರಥ ನಿರ್ಮಾಣ ಮಾಡಿ ಕೊಡುವುದಾಗಿ ಹೇಳಿ ಮಾತು ತಪ್ಪಿದ ಸೋಮಣ್ಣ; ಸಚಿವರ ವಿರುದ್ಧ ಗೋ ಬ್ಯಾಕ್​ ಅಭಿಯಾನ
ಸಚಿವ ವಿ.ಸೋಮಣ್ಣ ವಿರುದ್ದ ಗ್ರಾಮಸ್ಥರ ಅಭಿಯಾನ
ಕಿರಣ್ ಹನುಮಂತ್​ ಮಾದಾರ್
|

Updated on: Mar 24, 2023 | 1:09 PM

Share

ಚಾಮರಾಜನಗರ: ಇತ್ತೀಚೆಗೆ ಜಿಲ್ಲೆಯ ಚನ್ನಪ್ಪನಪುರ ವೀರಭದ್ರೇಶ್ವರ ಜಾತ್ರೆ ವೇಳೆ ರಥ ಮುರಿದುಬಿದ್ದಿತ್ತು. ಈ ವೇಳೆ ಸಚಿವ ವಿ.ಸೋಮಣ್ಣ(V. Somanna) ದೇವಸ್ಥಾನದ ಜೀರ್ಣೋದ್ಧಾರ ಹಾಗೂ ರಥವನ್ನ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದ್ದರು. ಇದೀಗ ಕೊಟ್ಟ ಮಾತಿಗೆ ತಪ್ಪಿದ್ದಾರೆ ಎಂದು ದೇವಾಲಯದ ಆವರಣದಲ್ಲಿ ಗ್ರಾಮಸ್ಥರು ಸೇರಿ ಸಭೆ ನಡೆಸಿ ಸಚಿವ ವಿ.ಸೋಮಣ್ಣ ವಿರುದ್ದ ‘ಗೋ ಬ್ಯಾಕ್ ಸೋಮಣ್ಣ ಅಭಿಯಾನ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಗ್ರಾಮಸ್ಥರೆಲ್ಲರೂ ಒಂದು ಬಾರಿ ಬೆಂಗಳೂರಿಗೆ ತೆರಳಿ ಮನವಿ ಸಲ್ಲಿಸಿದ್ದರು. ಆದರೆ ಈ ವೇಳೆ ವಿ.ಸೋಮಣ್ಣ ಅವರು ಸರಿಯಾಗಿ ಸ್ಪಂದಿಸಿರಲಿಲ್ಲ ಎಂದು ಆರೋಪಿಸಿದ್ದಾರೆ.

ಇನ್ನು ಇದೇ ವೇಳೆ ಮಧ್ಯಪ್ರವೇಶಿಸಿದ ವಿ.ಸೋಮಣ್ಣ ವಿಶೇಷಾಧಿಕಾರಿ ಸ್ವಾಮಿ ಹಾಗೂ ಅಭಿಮಾನಿಗಳು ವೀರಭದ್ರೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಸೋಮಣ್ಣ ಬದ್ಧರಾಗಿದ್ದಾರೆ. ಮೂರೂವರೆ ಕೋಟಿ ಅನುದಾನ ಬಿಡುಗಡೆ ಕೋರಿ ಪತ್ರ ಬರೆದಿದ್ದಾರೆ. ಎಲ್ಲರೂ ಸಹಕರಿಸಬೇಕೆಂದು ವಿಶೇಷಾಧಿಕಾರಿ ಸ್ವಾಮಿ ಹಾಗೂ ಸೋಮಣ್ಣನವರ ಅಭಿಮಾನಿಗಳು ಮನವೊಲಿಕೆ ಮಾಡಲು ಪ್ರಯತ್ನಿಸಿದರು. ಈ ವೇಳೆ ಗ್ರಾಮಸ್ಥರು ಸಚಿವ ಸೋಮಣ್ಣ ಅವರೇ ದೇವಸ್ಥಾನಕ್ಕೆ ಬಂದು ಎಲ್ಲರ ಸಮ್ಮುಖದಲ್ಲಿ ಈ ಮಾತು ಹೇಳಲಿ ಎಂದರು.

ಇದನ್ನೂ ಓದಿ:ರಾಜಕೀಯದ ಕಾರಣಕ್ಕಾಗಿ ಅಮಿತ್ ಶಾ ಬಸವಣ್ಣನ ಪ್ರತಿಮೆ ಅನಾವರಣಕ್ಕೆ ಆಗಮಿಸುತ್ತಿದ್ದಾರೆ: ಸಿದ್ದರಾಮಯ್ಯ

ಕೆಲ ದಿನಗಳ ಹಿಂದೆ ಕಾಂಗ್ರೆಸ್​ ಸೇರುವ ಊಹಾಪೋಹಗಳಿಗೆ ತೆರೆಎಳೆದಿದ್ದ ಸಚಿವ ವಿ.ಸೋಮಣ್ಣ

ಕೆಲ ಕಾರಣಗಳಿಂದ ಪಕ್ಷದ ನಾಯಕರ ಮೇಲೆ ಮುನಿಸಿಕೊಂಡಿದ್ದ ಸಚಿವ ವಿ, ಸೋಮಣ್ಣ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಎರಡು ವಾರಗಳಿಂದ ಸೊಮಣ್ಣ ಕಾಂಗ್ರೆಸ್ ಸೇರ್ಪಡೆ ಸುದ್ದಿ ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿತ್ತು. ಬಳಿಕ ಬಿಜೆಪಿ ಪ್ರಮುಖ ನಾಯಕರು ಸೋಮಣ್ಣ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ಇಷ್ಟು ದಿನಗಳಿಂದ ನಿಗೂಢ ನಡೆ ಇಟ್ಟುಕೊಂಡು ಬಂದಿದ್ದ ಸೋಮಣ್ಣ, ಮೌನ ಮುರಿದು ಇನ್ಮುಂದೆ ತೇಜೋವಧೆ ಮಾಡಬೇಡಿ ಎಂದು ಹೇಳುವ ಮೂಲಕ ತಮ್ಮ ರಾಜಕೀಯ ನಿಲುವು ಪ್ರಕಟಿಸಿದ್ದರು. ಅಲ್ಲದೇ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದರು.

ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ