ಹುಬ್ಬಳ್ಳಿ, ಸೆ.09: ವಿಧಾನಪರಿಷತ್ನ ಬಿಜೆಪಿ ಸದಸ್ಯ ಪ್ರದೀಪ್ ಶೆಟ್ಟರ್ (Pradeep Shettar) ಅವರನ್ನು ಮತ್ತೆ ಪಕ್ಷದಲ್ಲಿ ಕಡೆಗಣಿಸಲಾಗಿದೆ. ಹೌದು, ಸೆ.11ರಂದು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಬಿಜೆಪಿ (BJP) ಶಾಸಕ ಮಹೇಶ್ ಟೆಂಗಿನಕಾಯಿ ಅವರ ಕಾರ್ಯಾಲಯ ಉದ್ಘಾಟನೆ ಪೋಸ್ಟರ್ನಲ್ಲಿ ಪ್ರದೀಪ್ ಶೆಟ್ಟರ್ ಅವರ ಫೋಟೋ ಮಿಸ್ ಆಗಿದೆ. ಇನ್ನು ಕೆಲ ದಿನಗಳ ಹಿಂದೆ ಎಂಎಲ್ಸಿ ಪ್ರದೀಪ್ ಶೆಟ್ಟರ್ ಸ್ವ ಪಕ್ಷದ ವಿರುದ್ಧ ಸನ್ಮಾನಕ್ಕೆ ಆಹ್ವಾನಿಸಿಲ್ಲ ಎಂದು ಬೇಸರ ಹೊರಹಾಕಿದ್ದರು. ಬಳಿಕ ಬಿಜೆಪಿ ಮುಖಂಡರು ಪ್ರದೀಪ್ರನ್ನು ಕಚೇರಿಗೆ ಕರೆಸಿ ಸಭೆ ಮಾಡಿದ್ದರು.
ಜಗದೀಶ್ ಶೆಟ್ಟರ್ ವಿರುದ್ದವೇ ಗೆದ್ದು ಶಾಸಕರಾಗಿರುವ ಮಹೇಶ್ ಟೆಂಗಿನಕಾಯಿ ಅವರ ಜನ ಸಂಪರ್ಕ ಕಾರ್ಯಾಲಯ ಉದ್ಘಾಟನೆ ಪೋಸ್ಟರ್ ಅಲ್ಲಿ ಜಗದೀಶ್ ಶೆಟ್ಟರ್ ಸಹೋದರ ಆಗಿರುವ ಪ್ರದೀಪ್ ಶೆಟ್ಟರ್ ಫೋಟೋ ಹಾಕದೇ ಕಡೆಗಣನೆ ಮಾಡಿದ್ದಾರೆ. ಫೋಸ್ಟರ್ನಲ್ಲಿ ಮೋದಿ, ಶಾ, ಜೋಶಿ, ಮೇಯರ್ ಫೋಟೋ ಇದ್ದರೂ ಎಂಎಲ್ಸಿ ಫೋಟೋ ಮಿಸ್ ಆಗಿದೆ.
ಇದನ್ನೂ ಓದಿ:ಪ್ರದೀಪ್ ಶೆಟ್ಟರ್ ಅವರಿಂದ ಇಂತಹ ಹೇಳಿಕೆ ನಿರೀಕ್ಷಿಸಿರಲಿಲ್ಲ: ಧಾರವಾಡ ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ
ಸೆ.3 ರಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದ ಅವರು ‘ಬಿಜೆಪಿಯಲ್ಲಿ ಲಿಂಗಾಯತ ನಾಯಕರನ್ನು ಮೂಲೆಗುಂಪು ಮಾಡುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಈ ಪ್ರವೃತ್ತಿಯಿಂದ ಬೇಸತ್ತು ಸಮುದಾಯದ ಅನೇಕ ನಾಯಕರು ಬಿಜೆಪಿ ಪಕ್ಷದಿಂದ ಒಂದು ಹೆಜ್ಜೆ ಹೊರ ಹಾಕಿದ್ದಾರೆ. ಅದು ಅಲ್ಲದೇ ಪಕ್ಷದಲ್ಲಿ ನಾಯಕತ್ವದ ಕೊರತೆ ಇದ್ದಂತಿದೆ. ಜೊತೆಗೆ ವಿರೋಧ ಪಕ್ಷದ ನಾಯಕನನ್ನು ಇನ್ನು ಆಯ್ಕೆ ಮಾಡಿಲ್ಲ. ಹೀಗಿದ್ದಾಗ ನಮ್ಮ ಸಮಸ್ಯೆಯನ್ನು ಯಾರ ಬಳಿ ಹೇಳಿಕೊಳ್ಳುವುದು ಎಂದು ಬೇಸರ ಹೊರ ಹಾಕಿದ್ದರು.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ