ಸಮಾಜವನ್ನು ಹಾಳುಮಾಡುವುದೇ ಬಿಜೆಪಿಯ ಅಜೆಂಡಾ; ಬಿಜೆಪಿ ವಿರುದ್ಧ ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ ಆಕ್ರೋಶ

ಭಗವದ್ಗೀತೆ ತಲೆ ತುಂಬುತ್ತೆಂದು ಪ್ರತಾಪ್ ಸಿಂಹ ಅವರ ಹೇಳಿಕೆಗೆ ತಿರುಗೇಟು ನೀಡಿದ ಕುಮಾರಸ್ವಾಮಿ, ನಾನು ರಾಮಾಯಣ, ಮಹಾಭಾರತವನ್ನು ಓದಿದ್ದೇನೆ. ನಾನು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡಿದ್ದೇನೆ.

ಸಮಾಜವನ್ನು ಹಾಳುಮಾಡುವುದೇ ಬಿಜೆಪಿಯ ಅಜೆಂಡಾ; ಬಿಜೆಪಿ ವಿರುದ್ಧ ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ ಆಕ್ರೋಶ
ಹೆಚ್​ಡಿ ಕುಮಾರಸ್ವಾಮಿ
Follow us
TV9 Web
| Updated By: sandhya thejappa

Updated on:Mar 21, 2022 | 11:50 AM

ಮಂಡ್ಯ: ಸಮಾಜವನ್ನು ಹಾಳುಮಾಡುವುದೇ ಬಿಜೆಪಿಯ (BJP) ಅಜೆಂಡಾ ಅಂತ ಬಿಜೆಪಿ ವಿರುದ್ಧ ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ (HD Kumaraswamy) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಗವದ್ಗೀತೆ ತಲೆ ತುಂಬುತ್ತೆಂದು ಪ್ರತಾಪ್ ಸಿಂಹ ಅವರ ಹೇಳಿಕೆಗೆ ತಿರುಗೇಟು ನೀಡಿದ ಕುಮಾರಸ್ವಾಮಿ, ನಾನು ರಾಮಾಯಣ, ಮಹಾಭಾರತವನ್ನು ಓದಿದ್ದೇನೆ. ನಾನು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡಿದ್ದೇನೆ. ಆದರೆ ಬಿಜೆಪಿ ದ್ವೇಷ ಬಿತ್ತುವ ಕೆಲಸವನ್ನು ಮಾಡುತ್ತಿದೆ. ಇಂತಹ ಗುಣ ತಲೆಗೆ ತುಂಬಿಸಿಕೊಳ್ಳುವ ಅವಶ್ಯಕತೆ ಇಲ್ಲ. ಬಿಜೆಪಿಯವರಿಂದ ನಾನು ತಿಳಿದುಕೊಳ್ಳಬೇಕಾದ ಅಗತ್ಯವಿಲ್ಲ. ಅಂತಹವರಿಂದ ಕಲಿತರೆ ಸಮಾಜ ಹಾಳಾಗುತ್ತದೆ ಎಂದಿದ್ದಾರೆ.

ಸಂಸದೆ ಸುಮಲತಾ ಹೇಳಿಕೆಗೆ ಶಾಸಕ ರವೀಂದ್ರ ತಿರುಗೇಟು: ಶಾಸಕರ ಕೆಲಸವನ್ನು ನಾನೇ ಮಾಡುತ್ತಿದ್ದೇನೆ ಎಂಬ ಸಂಸದೆ ಸುಮಲತಾ ಹೇಳಿಕೆಗೆ ಶಾಸಕ ರವೀಂದ್ರ ತಿರುಗೇಟು ಕೊಟ್ಟಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿಕೆ ನೀಡಿದ್ದಾರೆ. ಸಂಸದರಾಗಿ ಏನು ಮಾಡಬೇಕೆಂಬ ಜವಾಬ್ದಾರಿಯ ಅರಿವಿಲ್ಲ ಎಂದರು.

ಮಂಡ್ಯಕ್ಕೆ ಹೊಸದಾಗಿ ಯಾವ ಅನುದಾನ ತಂದಿದ್ದೀರಾ ಹೇಳಿ. ನಾನು ಅನುದಾನ ತಂದಿದ್ದೇನೆ‌, ಬೇಕಿದ್ದರೆ ಲೆಕ್ಕ ಕೊಡುತ್ತೇನೆ. ರೈಲ್ವೆ ಯೋಜನೆಗೆ ದಕ್ಷಿಣ ಭಾರತಕ್ಕೆ 55 ಕೋಟಿ, ಉತ್ತರ ಭಾರತಕ್ಕೆ 13 ಸಾವಿರ ಕೋಟಿ ಬಿಡುಗಡೆಯಾಗಿದೆ‌. ಸಂಸದರಾಗಿ ಸುಮಲತಾ ಅಂಬರೀಶ್ ಏನು ಮಾಡುತ್ತಿದ್ದಾರೆ. ಸಂಸದೆ ಸುಮಲತಾ ಭ್ರಮಾಲೋಕದಲ್ಲಿರುವಂತೆ ಕಾಣುತ್ತಿದೆ ಎಂದು ರವೀಂದ್ರ ಹೇಳಿದರು.

ಇದನ್ನೂ ಓದಿ

ಜ್ಞಾನಭಾರತಿಯಲ್ಲಿ ಕೆಟ್ಟು ನಿಂತ ಚಾಮುಂಡಿ ಎಕ್ಸ್​​ಪ್ರೆಸ್​ ರೈಲು! ಪ್ರಯಾಣಿಕರ ಪರದಾಟ

Toofan Lyrical Video: ಬಂದೇ ಬಿಡ್ತು ತೂಫಾನ್​; ‘ಕೆಜಿಎಫ್​ ಚಾಪ್ಟರ್​ 2’ ಚಿತ್ರದ ಮೊದಲ ಲಿರಿಕಲ್​ ವಿಡಿಯೋ ರಿಲೀಸ್​

Published On - 11:36 am, Mon, 21 March 22