AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ನಗರವನ್ನು 5 ಜಿಲ್ಲೆಗಳಾಗಿ ವಿಂಗಡಿಸಿ ಅಧ್ಯಕ್ಷರನ್ನು ನೇಮಿಸಿದ ಕಾಂಗ್ರೆಸ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ತಯಾರಿ ಶುರುಮಾಡಿದ್ದು, ಪಕ್ಷ ಸಂಘಟನೆಗಾಗಿ ಬೆಂಗಳೂರು ನಗರವನ್ನು 5 ಜಿಲ್ಲೆಗಳಾಗಿ ವಿಂಗಡಣೆ ಮಾಡಿದೆ. ಅಲ್ಲದೇ ಈ 5 ಜಿಲ್ಲೆಗಳಿಗೆ ಅಧ್ಯಕ್ಷರನ್ನ ಸಹ ನೇಮಿಸಿಸಿ ಎಐಸಿಸಿ ಆದೇಶ ಹೊರಡಿಸಿದೆ. ಹಾಗಾದ್ರೆ, ವಿಂಗಡಣೆಗೊಂಡ ಈ 5 ಜಿಲ್ಲೆಗಳಿಗೆ ಯಾರ್ಯಾರು ಅಧ್ಯಕ್ಷರು? ಎನ್ನುವ ವಿವರ ಈ ಕೆಳಗಿನಂತಿದೆ ನೋಡಿ.

ಬೆಂಗಳೂರು ನಗರವನ್ನು 5 ಜಿಲ್ಲೆಗಳಾಗಿ ವಿಂಗಡಿಸಿ ಅಧ್ಯಕ್ಷರನ್ನು ನೇಮಿಸಿದ ಕಾಂಗ್ರೆಸ್
ಕಾಂಗ್ರೆಸ್
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Oct 02, 2023 | 11:18 AM

ನವದೆಹಲಿ, (ಅಕ್ಟೋಬರ್ 02):  ಮುಂಬರುವ ಲೋಕಸಭಾ ಚುನಾವಣೆಗೆ (Loksabha Elections 2024) ಕಾಂಗ್ರೆಸ್‌ ತಯಾರಿ ಶುರುಮಾಡಿದ್ದು, ಕರ್ನಾಟಕದ(Karnataka) 28 ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳ ಆಯ್ಕೆಗೆ ವೀಕ್ಷಕರನ್ನು ನೇಮಕ ಮಾಡಿದೆ. ಸಚಿವರನ್ನು ವೀಕ್ಷಕರನ್ನಾಗಿ ನೇಮಕ ಮಾಡಿದ್ದು, ಪ್ರತಿ ಕ್ಷೇತ್ರದಲ್ಲೂ 2 ಅಥವಾ 3 ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸುವ ಜವಾಬ್ದಾರಿ ನೀಡಲಾಗಿದೆ. ಇದರ ಬೆನ್ನಲ್ಲೇ ಇದೀಗ ಅಖಿಲ ಭಾರತ ಕಾಂಗ್ರೆಸ್ ಸಮಿತಿ(AICC), ಪಕ್ಷ ಸಂಘಟನೆಗಾಗಿ ಬೆಂಗಳೂರು (Bengaluru) ನಗರವನ್ನು 5 ಜಿಲ್ಲೆಗಳಾಗಿ ವಿಂಗಡಣೆ ಮಾಡಿದ್ದು,  ಈ 5 ಜಿಲ್ಲೆಗಳಿಗೆ ಹೊಸ ಅಧ್ಯಕ್ಷರನ್ನ ನೇಮಿಸಿದೆ.

ಬೆಂಗಳೂರು ನಗರವನ್ನು 5 ಜಿಲ್ಲೆಗಳಾಗಿ ವಿಂಗಡಣೆ

1. ಬೆಂಗಳೂರು ನಗರ, 2. ಬೆಂಗಳೂರು ಪೂರ್ವ, 3. ಬೆಂಗಳೂರು ಪಶ್ಚಿಮ, 4. ಬೆಂಗಳೂರು ಉತ್ತರ ಮತ್ತು 5. ಬೆಂಗಳೂರು ದಕ್ಷಿಣ ಎಂದು ಹೀಗೆ ಬೆಂಗಳೂರು ನಗರವನ್ನು ಐದು ಜಿಲ್ಲೆಗಳನ್ನಾಗಿ ಮಾಡಿಕೊಂಡಿದೆ. ಮುಂಬರುವ ಲೋಕಸಭಾ ಚುನಾವನೆ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗಾಗಿ ಎಐಸಿಸಿ ಈ ರೀತಿ ವಿಂಗಡಿಸಿದೆ. ಅಲ್ಲದೇ ಒಂದೊಂದು ಜಿಲ್ಲೆಗೆ ಒಬ್ಬರನ್ನು ಅಧ್ಯಕ್ಷರನ್ನ ಸಹ ನೇಮಿಸಿದೆ.

ಇದನ್ನೂ ಓದಿ: ಲೋಕಸಭೆ ಅಭ್ಯರ್ಥಿಗಳ ಆಯ್ಕೆಗೆ ಕಾಂಗ್ರೆಸ್ ಮುನ್ನುಡಿ; 28 ಕ್ಷೇತ್ರಗಳಿಗೆ ವೀಕ್ಷಕರ ನೇಮಕ

5 ಜಿಲ್ಲೆಗಳಿಗೆ ಅಧ್ಯಕ್ಷರನ್ನು ನೇಮಿಸಿದ ಎಐಸಿಸಿ

  • ಬೆಂಗಳೂರು ನಗರ – ಕೆವಿ ಗೌತಮ್
  • ಬೆಂಗಳೂರು ಪೂರ್ವ – ಉದಯ್ ಕುಮಾರ್
  • ಬೆಂಗಳೂರು ಪಶ್ಚಿಮ- ಹನುಮಂತ ರಾಯಪ್ಪ
  • ಬೆಂಗಳೂರು ಉತ್ತರ- ಅಬ್ದುಲ್ ವಾಜಿದ್
  • ಬೆಂಗಳೂರು ದಕ್ಷಿಣ – ಓ ಮಂಜುನಾಥ್

ಮತ್ತಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ
ಪಹಲ್ಗಾಮ್ ಉಗ್ರರಿಗೆ ನೆರವಾದ ಇಬ್ಬರು ಸ್ಥಳೀಯ ಕಾಶ್ಮೀರಿಗಳ ಮನೆ ಧ್ವಂಸ!
ಪಹಲ್ಗಾಮ್ ಉಗ್ರರಿಗೆ ನೆರವಾದ ಇಬ್ಬರು ಸ್ಥಳೀಯ ಕಾಶ್ಮೀರಿಗಳ ಮನೆ ಧ್ವಂಸ!
ನನ್ನ ಹೆಗಲ ಮೇಲೆ ಕೂರಿಸಿಕೊಂಡು ಬೆಟ್ಟ ಇಳಿದವರು ಸ್ಥಳೀಯ ಕಾಶ್ಮೀರಿ: ಅಭಿಜಯ್
ನನ್ನ ಹೆಗಲ ಮೇಲೆ ಕೂರಿಸಿಕೊಂಡು ಬೆಟ್ಟ ಇಳಿದವರು ಸ್ಥಳೀಯ ಕಾಶ್ಮೀರಿ: ಅಭಿಜಯ್
Dewald Brevis: ಚೊಚ್ಚಲ ಪಂದ್ಯದಲ್ಲೇ ಡೆವಾಲ್ಡ್ ಬ್ರೆವಿಸ್ ಆರ್ಭಟ
Dewald Brevis: ಚೊಚ್ಚಲ ಪಂದ್ಯದಲ್ಲೇ ಡೆವಾಲ್ಡ್ ಬ್ರೆವಿಸ್ ಆರ್ಭಟ
ಸುಳಿವು ನೀಡಿದ ಕಳ್ಳರ ಕಾರು,  ಚೇಸ್ ಮಾಡಿದಾಗ ಪೊಲೀಸರ ಮೇಲೆ ಹಲ್ಲೆ
ಸುಳಿವು ನೀಡಿದ ಕಳ್ಳರ ಕಾರು,  ಚೇಸ್ ಮಾಡಿದಾಗ ಪೊಲೀಸರ ಮೇಲೆ ಹಲ್ಲೆ
VIDEO: ಕಮಿಂದು ಕಮಾಲ್... ವಾಟ್ ಎ ಕ್ಯಾಚ್
VIDEO: ಕಮಿಂದು ಕಮಾಲ್... ವಾಟ್ ಎ ಕ್ಯಾಚ್
ಹೀಗೂ ಉಂಟೆ... ಅಳತೆ ಮೀರಿದ ಬ್ಯಾಟ್ ಬಳಸಲು ರವೀಂದ್ರ ಜಡೇಜಾ ಸರ್ಕಸ್
ಹೀಗೂ ಉಂಟೆ... ಅಳತೆ ಮೀರಿದ ಬ್ಯಾಟ್ ಬಳಸಲು ರವೀಂದ್ರ ಜಡೇಜಾ ಸರ್ಕಸ್
Daily Devotional: ಮಂಗಳವಾರ ಹಾಗೂ ಶುಕ್ರವಾರ ಹಣವನ್ನು ಕೊಡಬಹುದಾ?
Daily Devotional: ಮಂಗಳವಾರ ಹಾಗೂ ಶುಕ್ರವಾರ ಹಣವನ್ನು ಕೊಡಬಹುದಾ?