ಮುಂಬೈ, ಸೆ.22: ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್ಸಿಪಿ) ಎರಡು ಬಣಗಳಾಗಿ ವಿಭಜನೆಯಾದ ಬಳಿಕ ಒಬ್ಬರ ಮೇಲೆ ಒಬ್ಬರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಹೇಳಲಾಗುತ್ತಿದೆ. ಅವರ ಚಟುವಟಿಕೆಗಳು ಕೂಡ ಅದೇ ರೀತಿಯಲ್ಲಿದೆ. ಹೌದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಎರಡು ಬಣಗಳ ನಡುವೆ ಮತ್ತೊಂದು ವಿವಾದ ಸೃಷ್ಟಿಯಾಗಿದೆ. ಶರದ್ ಪವಾರ್ ( Sharad Pawar) ಬಣದ ಎನ್ಸಿಪಿ ಶಾಸಕರನ್ನು ಅನರ್ಹ ಮಾಡಲು ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್ಗೆ ಅಜಿತ್ ಪವಾರ್ (Ajit Pawar) ಬಣವು ಅರ್ಜಿಯನ್ನು ಸಲ್ಲಿಸಿದೆ. ಈ ಹಿಂದೆ ಶರದ್ ಪವಾರ್ ಬಣ, ಅಜಿತ್ ಪವಾರ್ ಬಣದ ಶಾಸಕರನ್ನು ಅನರ್ಹ ಮಾಡಬೇಕು ಎಂದು ಸ್ಪೀಕರ್ಗೆ ಮನವಿ ಸಲ್ಲಿಸಿದ್ದರು. ಇದೀಗ ಅಜಿತ್ ಪವಾರ್ ಬಣವು ಕೂಡ ಅದೇ ಕ್ರಮವನ್ನು ಕೈಗೊಂಡಿದೆ.
ಶರದ್ ಪವಾರ್ ಪಾಳಯವನ್ನು ಬೆಂಬಲಿಸುತ್ತಿರುವ ಶಾಸಕರನ್ನು ಅನರ್ಹಗೊಳಿಸುವಂತೆ ಈ ಮನವಿಯಲ್ಲಿ ತಿಳಿಸಲಾಗಿದೆ. ಈ ಹಿಂದೆ ಅಜಿತ್ ಪವಾರ್ ಬಣವನ್ನು ಬೆಂಬಲಿಸುತ್ತಿರುವ ಸುಮಾರು 41 ಶಾಸಕರ ವಿರುದ್ಧ ಶರದ್ ಪವಾರ್ ಬಣ ಅನರ್ಹತೆ ಅರ್ಜಿ ಸಲ್ಲಿಸಿತ್ತು. ಈ ಮನವಿಯಲ್ಲಿ ಜಯಂತ್ ಪಾಟೀಲ್, ಜಿತೇಂದ್ರ ಅವ್ಹಾದ್, ರೋಹಿತ್ ಪವಾರ್, ರಾಜೇಶ್ ಟೋಪೆ, ಅನಿಲ್ ದೇಶಮುಖ್, ಸಂದೀಪ್ ಕ್ಷೀರಸಾಗರ, ಮಾನಸಿಂಗ್ ನಾಯ್ಕ್, ಪ್ರಜಕ್ತ ತನ್‌ಪುರೆ, ರವೀಂದ್ರ ಭೂಸಾರ, ಬಾಳಾಸಾಹೇಬ್ ಪಾಟೀಲ್ ಅವರ ಹೆಸರನ್ನು ತಿಳಿಸಲಾಗಿತ್ತು.
ಈ ರಾಜಕೀಯ ಕಲಹ ಸೃಷ್ಟಿಯಾಗುವ ಎರಡು ದಿನದ ಹಿಂದೆ ಎರಡು ಬಣಗಳು ಹಿರಿಯರ ನಾಯಕ ಪಕ್ಷದಲ್ಲಿ ಯಾವುದೇ ಒಡಕು ಇಲ್ಲ ಎಂದು ಹೇಳಿದ್ದಾರೆ. ಇನ್ನು ಅಜಿತ್ ಪವಾರ್ ಬಣವು ಎರಡು ಪಕ್ಷಗಳ ನಡುವೆ ಭಿನ್ನಾಭಿಪ್ರಾಯ ಇರುವ ಹೊತ್ತಿಲ್ಲೇ ಶರದ್ ಪವಾರ್ ಬಣವು ಎನ್ಸಿಪಿಯ ರಾಷ್ಟ್ರೀಯ ಅಧ್ಯಕ್ಷರ ನೇಮಕಾ ಮಾಡಲಾಗಿದೆ ಎಂದು ಚುನಾವಣಾ ಆಯೋಗಕ್ಕೆ ಶರದ್ ಪವಾರ್ ಬಣದ ವಿರುದ್ಧ ದೂರು ನೀಡಿದ್ದರು. ಈ ಬಗ್ಗೆ ಶರದ್ ಪವಾರ್ ಬಣದ ನಾಯಕರನ್ನು ಅಕ್ಟೋಬರ್ 6 ರಂದು ವೈಯಕ್ತಿಕ ವಿಚಾರಣೆ ಬರುವಂತೆ ಚುನಾವಣಾ ಆಯೋಗವು ತಿಳಿಸಿದೆ.
ಇದನ್ನೂ :ಚಿಕ್ಕಮ್ಮನ್ನು ನೋಡಲು ಶರದ್ ಪವಾರ್ ಮನೆಗೆ ಬಂದ ಬಂಡಾಯ ನಾಯಕ ಅಜಿತ್ ಪವಾರ್
ಅಜಿತ್ ಪವಾರ್ ತನ್ನ ಚಿಕ್ಕಪ್ಪ ಶರದ್ ಪವಾರ್ ವಿರುದ್ಧ ಬಂಡಾಯವೆದ್ದು, ಏಕಾನಾಥ್ ಶಿಂಧೆ ಬಣದ ಶಿವಸೇನೆ ಮತ್ತು ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದಾರೆ. ನಂತರ ಅದೇ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ನೇಮಕಗೊಂಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:58 pm, Fri, 22 September 23