AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೆಡಿಎಸ್-ಬಿಜೆಪಿ ಮೈತ್ರಿ ಮಧ್ಯೆ ಇಂದು ದೇವೇಗೌಡ ಸುದ್ದಿಗೋಷ್ಠಿ, ಕುತೂಹಲ ಕೆರಳಿಸಿದ ದಳಪತಿಗಳ ನಡೆ

ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ, ಸೀಟು ಹಂಚಿಕೆ ಸರ್ಕಸ್‌ ಮುಂದುವರೆದಿದೆ. ದಳಪತಿಗಳು ದೆಹಲಿಯಲ್ಲಿ ಮೈತ್ರಿ ಸೂತ್ರ ರಚಿಸ್ತಿದ್ದಾರೆ. ವಿಧಾನಸಭೆ ವೋಟ್‌ ಶೇರ್‌ ಆಧಾರದಲ್ಲಿ ಸೀಟ್‌ ಶೇರಿಂಗ್‌ ಸೂತ್ರಕ್ಕೆ ಕುಮಾರಸ್ವಾಮಿ ಪ್ಲ್ಯಾನ್ ಮಾಡಿದ್ದಾರೆ.. ಈ ನಡುವೆ ದೊಡ್ಡಗೌಡರು ಇಂದು (ಸೆಪ್ಟೆಂಬರ್ 22) ಸುದ್ದಿಗೋಷ್ಠಿ ಕರೆದಿರುವುದು ಕುತೂಹಲ ಕೆರಳಿಸಿದೆ.

ಜೆಡಿಎಸ್-ಬಿಜೆಪಿ ಮೈತ್ರಿ ಮಧ್ಯೆ ಇಂದು ದೇವೇಗೌಡ ಸುದ್ದಿಗೋಷ್ಠಿ, ಕುತೂಹಲ ಕೆರಳಿಸಿದ ದಳಪತಿಗಳ ನಡೆ
ಜೆಡಿಎಸ್ ವರಿಷ್ಠ ದೇವೇಗೌಡ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Sep 22, 2023 | 7:00 AM

ನವದೆಹಲಿ.ಬೆಂಗಳೂರು, (ಸೆಪ್ಟೆಂಬರ್ 22): ಲೋಕಸಭೆ ಚುನಾವಣೆಗೆ (Loksabha Elections 2023)ಬಿಜೆಪಿ (BJP) ಜೊತೆ ಜಂಟಿಯಾಗಿ ಸಮರಕ್ಕಿಳಿಯಲು ಜೆಡಿಎಸ್ (JDS) ನಿರ್ಧರಿಸಿದೆ. ಜೆಡಿಎಸ್ ವರಿಷ್ಠ ಹೆಚ್​ಡಿ ದೇವೇಗೌಡ(HD Devegowda), ಬಿಜೆಪಿ ಹೈಕಮಾಂಡ್ ಜೊತೆ ಚರ್ಚಿಸಿ ಮೈತ್ರಿಗೆ ಮುನ್ನುಡಿ ಬರೆದಿದ್ದಾರೆ. ಈಗಾಗಲೇ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಸಹೋದರ ರೇವಣ್ಣ, ಪ್ರಜ್ವಲ್ ರೇವಣ್ಣ, ನಿಖಿಲ್, ಸಾ.ರಾ.ಮಹೇಶ್ ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ಬಿಜೆಪಿ ಹೈಕಮಾಂಡ್ ಜೊತೆ ಚರ್ಚಿಸಿ ಮಾಜಿ ಸಿಎಂ ಕುಮಾರಸ್ವಾಮಿ ದೋಸ್ತಿಗೆ ಜೈ ಎನ್ನಲಿದ್ದಾರೆ.

ನಿನ್ನೆ(ಸೆ.21) ಮೈತ್ರಿ ಸಂಬಂಧ ದೆಹಲಿಯ ಸಫ್ದರ್​ಜಂಗ್ ಲೇನ್​ನಲ್ಲಿರುವ ದೇವೇಗೌಡರ ನಿವಾಸಲ್ಲಿ ಮಹತ್ವದ ಸಭೆ ನಡೀತು. ಬಿಜೆಪಿ ವತಿಯಿಂದ ಆಗಮಿಸಿದ್ದ ಗೋವಾ ಸಿಎಂ ಪ್ರಮೋದ್ ಸಾವಂತ್ ದಳಪತಿಗಳ ಜೊತೆ ಮೈತ್ರಿ ಬಗ್ಗೆ ಮಾತುಕತೆ ನಡೆಸಿದ್ರು. 6 ಲೋಕಸಭಾ ಕ್ಷೇತ್ರಗಳ ಮೇಲಿ ಕಣ್ಣಿಟ್ಟಿರುವ ಜೆಡಿಎಸ್ ನಾಲ್ಕು ಲೋಕಸಭಾ ಕ್ಷೇತ್ರಗಳನ್ನ ಬಿಟ್ಟುಕೊಡಲೇ ಬೇಕು ಎಂದು ಬೇಡಿಕೆ ಮುಂದಿಟ್ಟಿದೆ ಎನ್ನಲಾಗಿದೆ. ಮಂಡ್ಯ, ಹಾಸನ, ಕೋಲಾರ, ತುಮಕೂರು ಸೀಟ್​ಗಾಗಿ ಜೆಡಿಎಸ್ ಬೇಡಿಕೆ ಇಟ್ಟಿದ್ದು, ಈ ಪೈಕಿ ತುಮಕೂರು ಲೋಕಸಭಾ ಕ್ಷೇತ್ರದ ಬಗ್ಗೆ ಇನ್ನೂ ಅಂತಿಮವಾಗಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ಜೆಡಿಎಸ್​​-ಬಿಜೆಪಿ ಮೈತ್ರಿಗೆ ಪೆಟ್ಟು ಕೊಡಲು ಕಾಂಗ್ರೆಸ್​ ಸನ್ನದ್ಧ, ಅಸ್ತ್ರ ಪ್ರಯೋಗಕ್ಕೆ ಹೈಕಮಾಂಡ್ ಗ್ರೀನ್ ಸಿಗ್ನಲ್

ಬಿಜೆಪಿ ಜೊತೆ ಜೆಡಿಎಸ್ ಹೆಜ್ಜೆ ಹಾಕಲು ಹೈಕಮಾಂಡ್ ನಾಯಕರ ಜೊತೆ ಅಂತಿಮ ಹಂತದ ಮಾತುಕತೆ ನಡೆಯಬೇಕಿದೆ. ಅಮಿತ್ ಶಾ ಜೊತೆ ಚರ್ಚೆ ಬಳಿಕ ಮೈತ್ರಿಗೆ ಫೈನಲ್ ಮುದ್ರೆ ಬೀಳಲಿದೆ. ವಿಧಾನಸಭೆ ವೋಟ್‌ ಶೇರಿಂಗ್ ಆಧಾರದಲ್ಲಿ ಸೀಟ್‌ ಶೇರಿಂಗ್‌ ಸೂತ್ರ ಮುಂದಿಡಲು ಕುಮಾರಸ್ವಾಮಿ ಮುಂದಾಗಿದ್ದಾರೆ..

ಬಿಜೆಪಿಗಿಂತ ಹೆಚ್ಚು ಮತಗಳಿರುವ ಕ್ಷೇತ್ರಗಳ ಮೇಲೆ ತೆನೆ ಕಣ್ಣು

ಬಿಜೆಪಿ ಹೈಕಮಾಂಡ್ ಮುಂದೆ ದಳಪತಿಗಳು ವೋಟ್ ಶೇರಿಂಗ್ ಸೂತ್ರ ಮುಂದಿಡಲು ಸಿದ್ಧತೆ ಮಾಡಿಕೊಂಡಿದ್ದಾರೆ. 6 ಲೋಕಸಭಾ ವ್ಯಾಪ್ತಿಯಲ್ಲಿ ವಿಧಾನಸಭೆ ಕ್ಷೇತ್ರಗಳಿಂದ ಮತ ಪ್ರಮಾಣದ ವಿವರ ಸಂಗ್ರಹಿಸಿರುವ ಕುಮಾರಸ್ವಾಮಿ, ಬಿಜೆಪಿಗಿಂತ ಹೆಚ್ಚು ಮತಗಳಿರುವ ಕ್ಷೇತ್ರಗಳ ಮೇಲೆಯೇ ಕಣ್ಣಿಟ್ಟಿದ್ದಾರೆ. ತುಮಕೂರು, ಹಾಸನ, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳನ್ನ ತಮಗೆ ನೀಡುವಂತೆ ಜೆಡಿಎಸ್ ಬಿಗಿ ಪಟ್ಟು ಹಿಡಿದಿದೆ.

ಇನ್ನು ಈ ನಡುವೆ ಇಂದು(ಸೆ.22) ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡರು ಸುದ್ದಿಗೋಷ್ಠಿ ಕರೆದಿದ್ದಾರೆ. ಬೆಳಗ್ಗೆ 9.30ಕ್ಕೆ ಸುದ್ದಿಗೋಷ್ಠಿ ನಡೆಯಲಿದ್ದು, ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಅಧಿಕೃತ ಮಾಹಿತಿ ಹೊರ ಹಾಕುವ ಸಾಧ್ಯತೆ ಇದೆ.. ಅಂತೂ ಕಮಲ-ತೆನೆ ದೋಸ್ತಿ ಮಾತುಕತೆ ರಾಜ್ಯ ರಾಜಕೀಯದಲ್ಲಿ ಕುತೂಹಲ ಕೆರಳಿಸಿದೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ