Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವಾರದಲ್ಲೇ ನಿಗಮ ಮಂಡಳಿಗೆ ನೇಮಕಾತಿ ಸಾಧ್ಯತೆ: ಮೊದಲ ಪಟ್ಟಿಯಲ್ಲಿ 20 ರಿಂದ 30 ಶಾಸಕರಿಗೆ ಅವಕಾಶ

ರಾಜ್ಯ ಕಾಂಗ್ರೆಸ್​ ಪಕ್ಷದಲ್ಲಿ ನಿಗಮ ಮಂಡಳಿಗೆ ನೇಮಕಾತಿ ಸದ್ಯ ಕಂಗಂಟ್ಟಾಗಿ ಪರಿಣಮಿಸಿದೆ. ಹಾಗಾಗಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್​​ ಅವರೊಂದಿಗೆ ಪಟ್ಟಿ ವಿಚಾರವಾಗಿ ಚರ್ಚಿಸಲು ನಾಳೆ ಸಂಜೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸಚಿವ ರಣದೀಪ್ ಸಿಂಗ್ ಸುರ್ಜೇವಾಲ ಬೆಂಗಳೂರಿಗೆ ಆಗಮಿಸುತ್ತಿದ್ದು, ನಾಡಿದ್ದು ನಿಗಮ ಮಂಡಳಿಗೆ ಶಾಸಕರ ನೇಮಕಾತಿ ಪಟ್ಟಿ ಫೈನಲ್​ ಆಗುವ ಸಾಧ್ಯತೆ ಇದೆ. 

ಈ ವಾರದಲ್ಲೇ ನಿಗಮ ಮಂಡಳಿಗೆ ನೇಮಕಾತಿ ಸಾಧ್ಯತೆ: ಮೊದಲ ಪಟ್ಟಿಯಲ್ಲಿ 20 ರಿಂದ 30 ಶಾಸಕರಿಗೆ ಅವಕಾಶ
ಪ್ರಾತಿನಿಧಿಕ ಚಿತ್ರ
Follow us
Pramod Shastri G
| Updated By: ಗಂಗಾಧರ​ ಬ. ಸಾಬೋಜಿ

Updated on:Oct 15, 2023 | 11:10 PM

ಬೆಂಗಳೂರು, ಅಕ್ಟೋಬರ್​​ 15: ರಾಜ್ಯ ಕಾಂಗ್ರೆಸ್​ (Congress) ಪಕ್ಷದಲ್ಲಿ ನಿಗಮ ಮಂಡಳಿಗೆ ನೇಮಕಾತಿ ಸದ್ಯ ಕಂಗಂಟ್ಟಾಗಿ ಪರಿಣಮಿಸಿದೆ. ಹಾಗಾಗಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್​​ ಅವರೊಂದಿಗೆ ಪಟ್ಟಿ ವಿಚಾರವಾಗಿ ಚರ್ಚಿಸಲು ನಾಳೆ ಸಂಜೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸಚಿವ ರಣದೀಪ್ ಸಿಂಗ್ ಸುರ್ಜೇವಾಲ (Randeep Surjewala) ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ನಾಡಿದ್ದು ನಿಗಮ ಮಂಡಳಿಗೆ ಶಾಸಕರ ನೇಮಕಾತಿ ಪಟ್ಟಿ ಫೈನಲ್​ ಆಗುವ ಸಾಧ್ಯತೆ ಇದೆ.

ನಿಗಮ ಮಂಡಳಿಗೆ ನೇಮಕಾತಿ ವೇಳೆ ಶಾಸಕರಿಗೆ ಮೊದಲ ಪ್ರಾಶಸ್ತ್ಯ ನೀಡಲಾಗುತ್ತಿದ್ದು, ಬಳಿಕ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಪ್ರಾಶಸ್ತ್ಯ ಎನ್ನಲಾಗುತ್ತಿದೆ. ಮೊದಲ ಪಟ್ಟಿಯಲ್ಲಿ 20ರಿಂದ 30 ಶಾಸಕರಿಗೆ ಅವಕಾಶವಿದೆ. ನಾಡಿದ್ದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್​ ಜತೆ ಸುರ್ಜೇವಾಲ ಸಭೆ ಬಳಿಕ ನಿಗಮ ಮಂಡಳಿಗೆ ನೇಮಕಾತಿ ಬಗ್ಗೆ ಸರ್ಕಾರದಿಂದ ಆದೇಶ ಸಾಧ್ಯತೆ ಇದೆ.

ಇದನ್ನೂ ಓದಿ: ಹಿಂದೂ ಧರ್ಮದ ಮೇಲೆ ನಡೆದಷ್ಟು ದಾಳಿ ಬೇರೆ ಧರ್ಮದ ಮೇಲೆ ನಡೆದಿಲ್ಲ: ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ

ನಿಗಮ ಮಂಡಳಿಗೆ ನೇಮಕಾತಿಗೆ ಶಾಸಕರನ್ನು ನೇಮಿಸಬೇಕೆಂದು ಒಂದು ಬಣ ಹೇಳಿದ್ದರೇ, ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು ನೇಮಿಸಬೇಕು ಎಂದು ಮೊತ್ತೊಂದು ಬಣ ಪಟ್ಟಹಿಡಿದಿತ್ತು. ಇತ್ತೀಚೆಗೆ ಕೆಪಿಸಿಸಿ (KPCC) ಪ್ರಚಾರ ಸಮಿತಿ ಸಭೆಯಲ್ಲೂ ಈ ನಿಗಮ ಮಂಡಳಿಗೆ ನೇಮಕಾತಿ ಕೂಗು ಕೇಳಿಬಂದಿತ್ತು.

ಶಾಸಕರಿಗೆ ದಯವಿಟ್ಟು ನಿಗಮ ಮಂಡಳಿಗಳಿಗೆ ನೇಮಕ ಮಾಡಬೇಡಿ ಎಂದು ಕಿತ್ತೂರು ಕರ್ನಾಟಕ, ಹೈದರಾಬಾದ್​ ಕರ್ನಾಟಕ ಭಾಗದ ಪ್ರಚಾರ ಸಮಿತಿ ಮುಖಂಡರು ಆಗ್ರಹಿಸಿದ್ದರು.

ಇದನ್ನೂ ಓದಿ: ಕಾಂಗ್ರೆಸ್​ ಪ್ರಚಾರ ಸಮಿತಿ ಸಭೆಯಲ್ಲಿ ನಿಗಮ ಮಂಡಳಿ ನೇಮಕದ ಕೂಗು; ಕಾರ್ಯಕರ್ತರಿಗೆ ಅವಕಾಶ ನೀಡುವಂತೆ ಆಗ್ರಹ

ನಾಯಕರ ಹಿಂಬಾಲಕರು ಮಾತ್ರ ನಿಗಮ ಮಂಡಳಿಗೆ ನೇಮಕವಾಗುತ್ತಾರೆ. ಪಕ್ಷ ನಂಬಿಕೊಂಡು ಬಂದವರಿಗೆ ಅವಕಾಶವೇ ಸಿಗುವುದಿಲ್ಲ. ನಿಗಮ ಮಂಡಳಿ ಸ್ಥಾನ ಕಾರ್ಯಕರ್ತರಿಗೆ ನೀಡದೇ ಹೋದರೆ ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರುತ್ತದೆ. ನಿಗಮ ಮಂಡಳಿ ಸ್ಥಾನ ದಯವಿಟ್ಟು ಬೇಗನೆ ಹಂಚಿಕೆ ಮಾಡಿ ಎಂದು ಆಗ್ರಹಿಸಿದ್ದರು.

ಈ ಮಧ್ಯೆ ಸಿಎಂ ಸಿದ್ದರಾಮಯ್ಯ ದೆಹಲಿ ಭೇಟಿ ಬಳಿಕವೂ ಶಾಸಕರಿಗೆ ಸಿಹಿ ಸುದ್ದಿ ಸಿಕ್ಕಿರಲಿಲ್ಲ. ನಿಗಮ ಮಂಡಳಿಗಳ ಹಂಚಿಕೆಗೆ ಹೈಕಮಾಂಡ್ ಒಪ್ಪಿರಲಿಲ್ಲ. ನಿಗಮ ಮಂಡಳಿ ಹಂಚಿಕೆ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್​ ಭಿನ್ನ ಭಿನ್ನ ನಿಲುವು ಹೊಂದಿದ್ದು, 30 ಕ್ಕೂ ಹೆಚ್ಚು ಶಾಸಕರಿಗೆ ನಿಗಮ ಮಂಡಳಿ ಹಂಚಿಕೆಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:02 pm, Sun, 15 October 23

ಹರಿಯಾಣದ ಸೋನಿಪತ್ ಕಾರ್ಖಾನೆಯಲ್ಲಿ ಭಾರಿ ಬೆಂಕಿ ಅವಘಡ
ಹರಿಯಾಣದ ಸೋನಿಪತ್ ಕಾರ್ಖಾನೆಯಲ್ಲಿ ಭಾರಿ ಬೆಂಕಿ ಅವಘಡ
ರಜತ್ ಕಿಶನ್ ರೀಲ್ಸ್ ಕೇಸ್: ಪೊಲೀಸ್ ಠಾಣೆಗೆ ಅಲೆದಾಡಿದ ಪತ್ನಿ ಅಕ್ಷಿತಾ
ರಜತ್ ಕಿಶನ್ ರೀಲ್ಸ್ ಕೇಸ್: ಪೊಲೀಸ್ ಠಾಣೆಗೆ ಅಲೆದಾಡಿದ ಪತ್ನಿ ಅಕ್ಷಿತಾ
ಹೇಳಿದ ಸತ್ಯವನ್ನು ಬಿಜೆಪಿಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ: ಶಿವಕುಮಾರ್
ಹೇಳಿದ ಸತ್ಯವನ್ನು ಬಿಜೆಪಿಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ: ಶಿವಕುಮಾರ್
ರಾಜಣ್ಣ ನನಗೆ ದೂರು ನೀಡಲು ಬರಲ್ಲ, ಪೊಲೀಸ್ ಠಾಣೆಗೆ ನೀಡಬೇಕು: ಪರಮೇಶ್ವರ್
ರಾಜಣ್ಣ ನನಗೆ ದೂರು ನೀಡಲು ಬರಲ್ಲ, ಪೊಲೀಸ್ ಠಾಣೆಗೆ ನೀಡಬೇಕು: ಪರಮೇಶ್ವರ್
ಶಿವಕುಮಾರ್ ತಮಿಳುನಾಡುನಿಂದ ಒಪ್ಪಿಗೆ ತಂದರೆಂದು ಭಾವಿಸಿದ್ದೆ: ಸಿಟಿ ರವಿ
ಶಿವಕುಮಾರ್ ತಮಿಳುನಾಡುನಿಂದ ಒಪ್ಪಿಗೆ ತಂದರೆಂದು ಭಾವಿಸಿದ್ದೆ: ಸಿಟಿ ರವಿ
ಮೀಸಲಾತಿ ಕುರಿತು ನಿತೀಶ್ ಕುಮಾರ್, ರಾಬ್ರಿ ದೇವಿ ನಡುವೆ ತೀವ್ರ ವಾಗ್ವಾದ
ಮೀಸಲಾತಿ ಕುರಿತು ನಿತೀಶ್ ಕುಮಾರ್, ರಾಬ್ರಿ ದೇವಿ ನಡುವೆ ತೀವ್ರ ವಾಗ್ವಾದ
ವಿನಯ್-ರಜತ್ ಅವರ ಮಹಜರಿಗೆ ಕರೆತಂದ ಪೊಲೀಸರು: ವಿಡಿಯೋ
ವಿನಯ್-ರಜತ್ ಅವರ ಮಹಜರಿಗೆ ಕರೆತಂದ ಪೊಲೀಸರು: ವಿಡಿಯೋ
ಕೇವಲ ಒಬ್ಬ ಕಾರ್ಯಕರ್ತನ ಹಿಂದೆ ಹತ್ತಾರು ಪೊಲೀಸರು!
ಕೇವಲ ಒಬ್ಬ ಕಾರ್ಯಕರ್ತನ ಹಿಂದೆ ಹತ್ತಾರು ಪೊಲೀಸರು!
ರಾಜಣ್ಣ ದೂರು ನೀಡಿದರೆ ಸರ್ಕಾರ ತನಿಖೆ ಮಾಡಿಸಲು ಸಿದ್ಧವಿದೆ: ಚಲುವರಾಯಸ್ವಾಮಿ
ರಾಜಣ್ಣ ದೂರು ನೀಡಿದರೆ ಸರ್ಕಾರ ತನಿಖೆ ಮಾಡಿಸಲು ಸಿದ್ಧವಿದೆ: ಚಲುವರಾಯಸ್ವಾಮಿ
ಲಾಂಗ್ ಹಿಡಿದ ಪ್ರಕರಣ: ಮತ್ತೆ ಪೊಲೀಸ್ ಠಾಣೆಗೆ ರಜತ್, ವಿನಯ್ ಗೌಡ ಅಲೆದಾಟ
ಲಾಂಗ್ ಹಿಡಿದ ಪ್ರಕರಣ: ಮತ್ತೆ ಪೊಲೀಸ್ ಠಾಣೆಗೆ ರಜತ್, ವಿನಯ್ ಗೌಡ ಅಲೆದಾಟ