ಕಾಂಗ್ರೆಸ್ ಪ್ರಚಾರ ಸಮಿತಿ ಸಭೆಯಲ್ಲಿ ನಿಗಮ ಮಂಡಳಿ ನೇಮಕದ ಕೂಗು; ಕಾರ್ಯಕರ್ತರಿಗೆ ಅವಕಾಶ ನೀಡುವಂತೆ ಆಗ್ರಹ
ನಾಯಕರ ಹಿಂಬಾಲಕರು ಮಾತ್ರ ನಿಗಮ ಮಂಡಳಿಗೆ ನೇಮಕವಾಗುತ್ತಾರೆ. ಪಕ್ಷ ನಂಬಿಕೊಂಡು ಬಂದವರಿಗೆ ಅವಕಾಶವೇ ಸಿಗುವುದಿಲ್ಲ. ನಿಗಮ ಮಂಡಳಿ ಸ್ಥಾನ ಕಾರ್ಯಕರ್ತರಿಗೆ ನೀಡದೇ ಹೋದರೆ ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರುತ್ತದೆ. ನಿಗಮ ಮಂಡಳಿ ಸ್ಥಾನ ದಯವಿಟ್ಟು ಬೇಗನೆ ಹಂಚಿಕೆ ಮಾಡಿ ಎಂದು ಆಗ್ರಹಿಸಿದರು.
ಬೆಂಗಳೂರು: ರಾಜ್ಯ ಕಾಂಗ್ರೆಸ್ (Congress) ಪಕ್ಷದಲ್ಲಿ ನಿಗಮ ಮಂಡಳಿಗೆ ನೇಮಕಾತಿ ಕಂಗಂಟ್ಟಾಗಿ ಪರಿಣಮಿಸಿದೆ. ನಿಗಮ ಮಂಡಳಿಗೆ (Nigam Mandali) ಶಾಸಕರನ್ನು ನೇಮಿಸಬೇಕೆಂದು ಒಂದು ಬಣ ಇದ್ದರೇ, ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು ನೇಮಿಸಬೇಕು ಎಂದು ಮೊತ್ತೊಂದು ಬಣ. ಇದೀಗ ಈ ಕೂಗು ಕೆಪಿಸಿಸಿ (KPCC) ಪ್ರಚಾರ ಸಮಿತಿ ಸಭೆಯಲ್ಲೂ ಕೇಳಿಬಂದಿದೆ. ಹೌದು ಶಾಸಕರಿಗೆ ದಯವಿಟ್ಟು ನಿಗಮ ಮಂಡಳಿಗಳಿಗೆ ನೇಮಕ ಮಾಡಬೇಡಿ ಎಂದು ಕಿತ್ತೂರು ಕರ್ನಾಟಕ, ಹೈದರಾಬಾದ್ ಕರ್ನಾಟಕ ಭಾಗದ ಪ್ರಚಾರ ಸಮಿತಿ ಮುಖಂಡರು ಆಗ್ರಹಿಸಿದ್ದಾರೆ.
ನಾಯಕರ ಹಿಂಬಾಲಕರು ಮಾತ್ರ ನಿಗಮ ಮಂಡಳಿಗೆ ನೇಮಕವಾಗುತ್ತಾರೆ. ಪಕ್ಷ ನಂಬಿಕೊಂಡು ಬಂದವರಿಗೆ ಅವಕಾಶವೇ ಸಿಗುವುದಿಲ್ಲ. ನಿಗಮ ಮಂಡಳಿ ಸ್ಥಾನ ಕಾರ್ಯಕರ್ತರಿಗೆ ನೀಡದೇ ಹೋದರೆ ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರುತ್ತದೆ. ನಿಗಮ ಮಂಡಳಿ ಸ್ಥಾನ ದಯವಿಟ್ಟು ಬೇಗನೆ ಹಂಚಿಕೆ ಮಾಡಿ ಎಂದು ಆಗ್ರಹಿಸಿದರು.
ಪಕ್ಷ ನಿಷ್ಠರಿಗೆ ಹೆಚ್ಚು ಅವಕಾಶ ನೀಡಿ. ಹಣವಂತರು ಹೇಗಿದ್ದರೂ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೆ. ಆದರೆ ಪಕ್ಷ ನಿಷ್ಠರಿಗೆ ಹೆಚ್ಚಿನ ಅವಕಾಶ ನೀಡಬೇಕು. ಶಾಸಕರಿಗಿಂತ ಹೆಚ್ಚಾಗಿ ಪಕ್ಷದ ಕಾರ್ಯಕರ್ತರಿಗೆ ಅವಕಾಶ ನೀಡಿ. ಸ್ಥಳೀಯ ಮಟ್ಟದ ಕಮಿಟಿಗಳಿಗೆ ಕಾರ್ಯಕರ್ತರನ್ನು ನೇಮಕ ಮಾಡಿ. ಡಾ.ಯತೀಂದ್ರರನ್ನು ಆಶ್ರಯ ಸಮಿತಿ ಸದಸ್ಯರಾಗಿ ಮಾಡಲಾಗಿದೆ. ಅದೇ ಮಾದರಿ ಕಾರ್ಯಕರ್ತರನ್ನು ಸಮಿತಿಗಳಿಗೆ ನೇಮಕ ಮಾಡಿ. ಸೋತವರು ಬೋರ್ಡ್ ಕಾರ್ಪೊರೇಷನ್ ಸದಸ್ಯರಾಗುವುದು ಬೇಡ ಎಂದು ಬಿಎಲ್ ಶಂಕರ್ ಆಗ್ರಹಿಸಿದರು.
ಆಪರೇಷನ್ ಹಸ್ತದ ಪಾಲಿಟಿಕ್ಸ್ಗೆ ಅಸಮಾಧಾನ
ಇನ್ನ ಸಭೆಯಲ್ಲಿ ಆಪರೇಷನ್ ಹಸ್ತದ ಪಾಲಿಟಿಕ್ಸ್ಗೆ ಕಾರ್ಯಕರ್ತರಿಂದ ಅಸಮಾಧಾನ ವ್ಯಕ್ತವಾಗಿದೆ. ನಾವು ಮೊದಲಿಂದಲೂ ಪಕ್ಷದ ಕೆಲಸ ಮಾಡುತ್ತಾ ಬಂದಿದ್ದೇವೆ. ಯೂತ್ ಕಾಂಗ್ರೆಸ್ ಸೇರಿದಂತೆ ಅನೇಕ ವಿಭಾಗಳಲ್ಲಿ ಕೆಲಸ ಮಾಡಿದ್ದೇವೆ. ಆದರೆ ಬೇರೆ ಪಕ್ಷಗಳಿಂದ ನೇರವಾಗಿ ಕಾಂಗ್ರೆಸ್ ಸೇರ್ಪಡೆ ಆಗುತ್ತಾರೆ. ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತಾರೆ. ನಾವು ಏನು ಮಾಡಬೇಕು? ಎಂದು ಕಲ್ಯಾಣ ಕರ್ನಾಟಕ ವಿಭಾಗವನ್ನು ಪ್ರತಿನಿಧಿಸಿ ಮಾತನಾಡಿದ ಸಂಜಯ್ ಜಾಗಿರ್ದಾರ್ ಬೇಸರ ವ್ಯಕ್ತಪಡಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ