ಕೆಲವರಿಗೆ ಮಾತನಾಡುವ ಚಟ; ಕೆಎಸ್ ಈಶ್ವರಪ್ಪ ವಿರುದ್ಧ ಶಾಸಕ ಶಿವರಾಮ್ ಹೆಬ್ಬಾರ್​ ಆಕ್ರೋಶ

ಈಶ್ವರಪ್ಪ ಅವರಂಥ ಕೆಲಸ ಮಾಡಿಲ್ಲ, ಮಾಡುವುದೂ ಇಲ್ಲ. ಆರೋಗ್ಯದ ದೃಷ್ಟಿಯಿಂದ ಒಳ್ಳೆ ಶಬ್ದ ಬಳಸಿ ಮಾತನಾಡಲಿ ಎಂದು ಹೆಬ್ಬಾರ್ ಎಚ್ಚರಿಕೆ ನೀಡಿದ್ದಾರೆ.

ಕೆಲವರಿಗೆ ಮಾತನಾಡುವ ಚಟ; ಕೆಎಸ್ ಈಶ್ವರಪ್ಪ ವಿರುದ್ಧ ಶಾಸಕ ಶಿವರಾಮ್ ಹೆಬ್ಬಾರ್​ ಆಕ್ರೋಶ
ಶಿವರಾಮ್ ಹೆಬ್ಬಾರ್
Updated By: Ganapathi Sharma

Updated on: Jun 30, 2023 | 7:19 PM

ಕಾರವಾರ: ಕೆಲವರಿಗೆ ಮಾತನಾಡುವ ಚಟ. ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಮತ್ತೊಬ್ಬರ ಮೇಲೆ ಆರೋಪ ಮಾಡುತ್ತಾರೆ ಎಂದು ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ (Arbail Shivaram Hebbar) ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ (KS Eshwarappa) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಲಸಿಗರಿಂದ ಬಿಜೆಪಿಗೆ ಹಿನ್ನಡೆಯಾಗಿದೆ ಎಂಬ ಈಶ್ವರಪ್ಪ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈಶ್ವರಪ್ಪ ಅವರಿಗೆ ಟಿಕೆಟ್​ ನೀಡದಿರುವುದಕ್ಕೆ ನಾವು ಕಾರಣವಲ್ಲ. ಅವರು ಯಾರಿಂದ ಸಚಿವರಾಗಿದ್ದರು ಎಂಬುದು ಗೊತ್ತಿದೆ. ಯಾರ ಕಾರಣಕ್ಕೆ ಮಂತ್ರಿಗಿರಿ ಕಳೆದುಕೊಂಡರು ಎಂಬುದೂ ಗೊತ್ತಿದೆ ಎಂದು ಹೇಳಿದ್ದಾರೆ.

ಈಶ್ವರಪ್ಪ ಮಾತನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲ್ಲ. ನಾವು ನಡೆದುಬಂದ ದಾರಿ, ಮುಂದೆ ಹೋಗುವ ದಾರಿ ಸ್ಪಷ್ಟವಾಗಿದೆ. ಈಶ್ವರಪ್ಪ ಅವರಂಥ ಕೆಲಸ ಮಾಡಿಲ್ಲ, ಮಾಡುವುದೂ ಇಲ್ಲ. ಆರೋಗ್ಯದ ದೃಷ್ಟಿಯಿಂದ ಒಳ್ಳೆ ಶಬ್ದ ಬಳಸಿ ಮಾತನಾಡಲಿ ಎಂದು ಹೆಬ್ಬಾರ್ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಆಪರೇಶನ್ ಕಮಲವೇ ಬಿಜೆಪಿ ಸೋಲಿಗೆ ಕಾರಣ ಎಂದ ಈಶ್ವರಪ್ಪ; ಸಿಟಿ ರವಿ, ರವಿ ಕುಮಾರ್ ಹೇಳಿದ್ದೇನು ಗೊತ್ತಾ?

ಬಿಜೆಪಿಯಲ್ಲಿ ಶಿಸ್ತು ಇಲ್ಲವಾಗಿದೆ. ಕಾಂಗ್ರೆಸ್​ನವರ ಗಾಳಿ ಬಿಜೆಪಿ ನಾಯಕರ ಮೇಲೂ ಬಡಿದಿದೆ. ಆಪರೇಷನ್ ಕಮಲವೇ ಬಿಜೆಪಿ ಚುನಾವಣೆಯಲ್ಲಿ ಸೋಲಲು ಕಾರಣವಾಯಿತು. ಬೇರೆ ಪಕ್ಷಗಳಿಂದ ಬಂದವರಿಂದಲೇ ಪಕ್ಷಕ್ಕೆ ಹಿನ್ನಡೆಯಾಗಿದೆ ಎಂದು ಈಶ್ವರಪ್ಪ ಹೇಳಿದ್ದರು. ಇದು ಈಗಾಗಲೇ ಆಂತರಿಕ ಬೇಗುದಿಯಲ್ಲಿ ಬಳಲುತ್ತಿರುವ ಬಿಜೆಪಿಯ ಸಂಕಷ್ಟದ ಬೆಂಕಿಗೆ ತುಪ್ಪ ಸುರಿದಿತ್ತು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ