AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಶ್ವಾಸನೆ ಸಾಂವಿಧಾನಿಕ ನಿಬಂಧನೆ ಅಲ್ಲ, ಅದು ಕೇವಲ ಭರವಸೆ ಎಂದ ಸಚಿವ ಹೆಚ್​ಸಿ ಮಹದೇವಪ್ಪ

ಮೈಸೂರಿನಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಹೆಚ್​ಸಿ ಮಹದೇವಪ್ಪ, ಚುನಾವಣೆ ಸಂದರ್ಭದಲ್ಲಿ ಆಶ್ವಾಸನೆ ಕೊಡುವುದು ಸಾಮಾನ್ಯ. ಆದರೆ ಆ ಆಶ್ವಾಸನೆ ಸಾಂವಿಧಾನಿಕ ನಿಬಂಧನೆ ಅಲ್ಲ, ಅದು ಕೇವಲ ಭರವಸೆ ಎಂದಿದ್ದಾರೆ.

ಆಶ್ವಾಸನೆ ಸಾಂವಿಧಾನಿಕ ನಿಬಂಧನೆ ಅಲ್ಲ, ಅದು ಕೇವಲ ಭರವಸೆ ಎಂದ ಸಚಿವ ಹೆಚ್​ಸಿ ಮಹದೇವಪ್ಪ
ಸಚಿವ ಹೆಚ್​.ಸಿ.ಮಹದೇವಪ್ಪ
Follow us
ಗಂಗಾಧರ​ ಬ. ಸಾಬೋಜಿ
|

Updated on:Jun 17, 2023 | 4:06 PM

Share

ಮೈಸೂರು: ಚುನಾವಣೆ ಸಂದರ್ಭದಲ್ಲಿ ಆಶ್ವಾಸನೆ ಕೊಡುವುದು ಸಾಮಾನ್ಯ. ಆಶ್ವಾಸನೆ ಸಾಂವಿಧಾನಿಕ ನಿಬಂಧನೆ ಅಲ್ಲ, ಅದು ಕೇವಲ ಭರವಸೆ ಎಂದು ಸಚಿವ ಹೆಚ್​.ಸಿ.ಮಹದೇವಪ್ಪ (H C Mahadevappa) ಹೇಳಿದರು. ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮಗೆ ಮತ ಹಾಕಿದರೆ ಇದನ್ನು ಪೂರೈಸುತ್ತೇವೆ ಅಂತಾ ಹೇಳುತ್ತೇವೆ. ಆದರೆ ಕೊಟ್ಟ ಮಾತನ್ನು ಈಡೇರಿಸಬೇಕಲ್ಲವಾ ಎಂದರು. ನಮ್ಮದು ಬದುಕಿಗೆ ಪ್ರೇರಣೆ, ಪ್ರೋತ್ಸಾಹದಾಯಕ ಯೋಜನೆಗಳು. ಅದಕ್ಕೆ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದೆವು. ಗ್ಯಾರಂಟಿ ಜಾರಿಗೆ ಮೊದಲ ಸಂಪುಟದಲ್ಲಿ ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು.

ಸಂವಿಧಾನ ತಿದ್ದುಪಡಿಗೆ ಅವಕಾಶವಿದೆ, ತಿರುಚಲು ಅಲ್ಲ

ಶಾಲಾ ಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆ ಓದುವುದು ಕಡ್ಡಾಯ. ಒಂದು ನಿಮಿಷದ ಪೀಠಿಕೆಯು ಸಮಾನತೆಯ ಬದುಕು ಕಲಿಸುತ್ತದೆ. ಸಂವಿಧಾನದ ಪೀಠಿಕೆ ಮೂಲಕ ಮಕ್ಕಳಲ್ಲಿ ಸಮಾನತೆ ಮೂಡಿಸಬಹುದು. ಇದು ದೇಶದ 140 ಕೋಟಿ ಜನರಿಗೂ ಅನ್ವಯವಾಗುತ್ತಿದೆ. ಸಂವಿಧಾನದ ತಿದ್ದುಪಡಿಗೆ ಅವಕಾಶವಿದೆ, ಆದರೆ ತಿರುಚಲು ಅವಕಾಶವಿಲ್ಲ ಎಂದರು.

ಇದನ್ನೂ ಓದಿ: ಯಾರ್ಯಾರ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆಂದು ಅವರೇ ಹೇಳಲಿ: ಪ್ರತಾಪ್​ ಸಿಂಹ ವಿರುದ್ಧ ಸಚಿವ ಹೆಚ್​ಸಿ ಮಹದೇವಪ್ಪ ಕಿಡಿ

ಅಧಿಕಾರ ಹಂಚಿಕೆ ಬಗ್ಗೆ ಗುಟ್ಟು ಬಿಟ್ಟು ಕೊಡದ ಹೆಚ್​​.ಸಿ.ಮಹದೇವಪ್ಪ

ಸಿಎಂ ಅಧಿಕಾರ ಹಂಚಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಸಿದ್ದರಾಮಯ್ಯ ಪರ ಹೆಚ್​ಸಿ ಮಹದೇವಪ್ಪ ವಕಾಲತ್ತು ವಹಿಸಿದರು. ಸಿದ್ದರಾಮಯ್ಯ ಸಿಎಂ ಆಗಿ ಆಯ್ಕೆ ಆಗಿದ್ದಾರೆ. ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ಮೂರು ಬಾರಿ ಉಚ್ಚರಿಸಿದರು. ಅಧಿಕಾರ ಹಸ್ತಾಂತರದ ಬಗ್ಗೆ ಹೆಚ್​ಸಿ ಮಹದೇವಪ್ಪ ಯಾವುದೇ ವಿಚಾರ ಬಿಟ್ಟು ಕೊಡಲಿಲ್ಲ. ಈ ಹಿಂದೆ ಮೈಸೂರಿನಲ್ಲಿ ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿರುತ್ತಾರೆ ಎಂದು ಸಚಿವ ಎಂ.ಬಿ.ಪಾಟೀಲ್​ ಹೇಳಿದ್ದರು.

ಇದನ್ನೂ ಓದಿ: ಭಾರತೀಯರಿಗೆ ಸಂವಿಧಾನವೇ ಭಗವದ್ಗೀತೆ, ಬೈಬಲ್, ಕುರಾನ್: ಬಿಜೆಪಿಗೆ ತಿರುಗೇಟು ನೀಡಿದ ಜಿ ಪರಮೇಶ್ವರ

ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ

ಅಕ್ಕಿ ವಿಚಾರವಾಗಿ ಮಾತನಾಡಿದ ಅವರು ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ. ಹೆಚ್ಚುವರಿ ಅಕ್ಕಿ ಕೇಳಿದರೆ ಚುನಾವಣೆಗೂ ಮುಂಚೆ ನಮ್ಮನ್ನು ಕೇಳಿದರಾ ಎನ್ನುತ್ತಾರೆ. ಪ್ರಣಾಳಿಕೆ ಬಗ್ಗೆ ಒಂದು ಪಕ್ಷ ಇನ್ನೊಂದು ಪಕ್ಷದ ಜತೆ ಚರ್ಚಿಸಲು ಹೇಗೆ ಸಾಧ್ಯ ಎಂದು ಕಿಡಿ ಕಾರಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:04 pm, Sat, 17 June 23