ಶಾಸಕ ಯತ್ನಾಳ್​ ವಿರುದ್ಧ ಯತ್ನಾಳ್ ಭಾಷೆಯಲ್ಲೇ ವಾಗ್ದಾಳಿ ನಡೆಸಿದ ಸಚಿವ ಮುರುಗೇಶ್ ನಿರಾಣಿ ಸಹೋದರ

| Updated By: Rakesh Nayak Manchi

Updated on: Jan 15, 2023 | 3:54 PM

ಸಚಿವ ಮುರುಗೇಶ್ ನಿರಾಣಿ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಿಂದನಾರ್ಹ ಟೀಕೆಗಳನ್ನು ಮಾಡುತ್ತಿದ್ದಾರೆ. ಇದು ನಿರಾಣಿ ಸಹೋದರ ಸಂಗಮೇಶ್ ನಿರಾಣಿಯವರನ್ನು ಕೆರಳಿಸಿದ್ದು, ಯತ್ನಾಳ್ ವಿರುದ್ಧ ಗರಂ ಆಗಿದ್ದಾರೆ.

ಶಾಸಕ ಯತ್ನಾಳ್​ ವಿರುದ್ಧ ಯತ್ನಾಳ್ ಭಾಷೆಯಲ್ಲೇ ವಾಗ್ದಾಳಿ ನಡೆಸಿದ ಸಚಿವ ಮುರುಗೇಶ್ ನಿರಾಣಿ ಸಹೋದರ
ಸಂಗಮೇಶ್ ನಿರಾಣಿ ಮತ್ತು ಬಸವನಗೌಡ ಪಾಟೀಲ್ ಯತ್ನಾಳ್
Follow us on

ಬಾಗಲಕೋಟೆ: ಸಚಿವ ಮುರುಗೇಶ್ ನಿರಾಣಿ (Murugesh Nirani) ವಿರುದ್ಧ ಕೀಳುಪದಗಳನ್ನು ಬಳಸಿ ಟೀಕಾ ಪ್ರಹಾರ ನಡೆಸುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ಗೆ (Basan Gowda Patil Yatnal) ಯತ್ನಾಳ್ ಭಾಷೆಯಲ್ಲೇ ನಿರಾಣಿ ಸಹೋದರ ಸಂಗಮೇಶ್ ನಿರಾಣಿ (Sangamesh Nirani) ವಾಗ್ದಾಳಿ ನಡೆಸಿದ್ದಾರೆ. ಟ್ವಿಟರ್ ಮೂಲಕ ಪರೋಕ್ಷವಾಗಿ ಯತ್ನಾಳ್​ಗೆ ಎಚ್ಚರಿಕೆ ನೀಡಿದ ಸಂಗಮೇಶ್, “ರಾಜಕೀಯ ಮರುಜನ್ಮ ಕೊಟ್ಟವರಿಗೆ ರಾಜಕೀಯ ಮರಣ ಶಾಸನ ಬರೆಯುವುದು ಗೊತ್ತಿದೆ. ಮುರುಗೇಶ್ ನಿರಾಣಿ ತೇಜೋವಧೆಗೆ ನಿಂತ ಮುಠ್ಠಾಳರಿಗೆ ಕಾಲವೇ ಉತ್ತರ ನೀಡುತ್ತದೆ” ಎಂದು ಎಚ್ಚರಿಕೆ ನೀಡಿದರು.

ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ ಸಂಗಮೇಶ್ ನಿರಾಣಿ, “ಶಿಖಂಡಿ ಬಸ್ಯಾ ನಡುಬೀದಿಯಲ್ಲಿ ಬೆತ್ತಲಾಗುವ ಕಾಲ ಬಂದಿದೆ. ಬಾಯಿ ಹರುಕನಂತೆ ಮಾತನಾಡುವ ನಾಮರ್ಧ ನಿನ್ನದೇ ಭಾಷೆಯಲ್ಲಿಯೇ ಉತ್ತರನೀಡುತ್ತೇನೆ. ಒಬ್ಬ ಅಪ್ಪನಿಗೆ ಹುಟ್ಟದ ನಿನಗೆ ಅಂತ್ಯ ಹಾಡುವ ಕಾಲ ಬಂದಿದೆ. ನೇರ ಕಾದಾಟಕ್ಕೆ ಕಣಕ್ಕೆ ಬಂದರೆ ನಿನ್ನ ತಾಕತ್ತು ತಿಳಿಯುತ್ತದೆ. ರಾಜಕೀಯ ಮರುಜನ್ಮ ಕೊಟ್ಟವರಿಗೆ ರಾಜಕೀಯ ಮರಣ ಶಾಸನ ಬರೆಯುವುದು ಗೊತ್ತಿದೆ” ಎಂದರು.

“ಲಕ್ಷಾಂತರ ಜನರಿಗೆ ಅನ್ನ, ಆಶ್ರಯ, ಜೀವನ ಕೊಟ್ಟ ಧರ್ಮಾತ್ಮ ಮುರುಗೇಶ ನಿರಾಣಿಯವರ ತೇಜೋವಧೆಗೆ ನಿಂತ ಮುಠ್ಠಾಳರಿಗೆ ಕಾಲವೇ ಉತ್ತರ ನೀಡುತ್ತದೆ. ಮುರುಗೇಶ ನಿರಾಣಿ ಎಂಬ ಪ್ರಖರ ಸೂರ್ಯನೆದರು ನಿಂತವರು ಭಸ್ಮವಾಗಿದ್ದಾರೆ ನೆನಪಿರಲಿ” ಎಂದು ಯತ್ನಾಳ್​ಗೆ ಸಂಗಮೇಶ್ ನಿರಾಣಿ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ. ಟ್ವಿಟ್ಟರ್ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: Murugesh Nirani: ಪಿಂಪ್ ಸಚಿವ ಎಂಬ ಯತ್ನಾಳ್ ಹೇಳಿಕೆಗೆ ಮನನೊಂದು ಭಾವುಕರಾದ ಮುರುಗೇಶ್​ ನಿರಾಣಿ

ನಿರಾಣಿ ಹಾಗೂ ಯತ್ನಾಳ ವಾಕ್ ಸಮರದ ಬಗ್ಗೆ ಮಾತನಾಡಿದ ಕಾಂಗ್ರೆಸ್​​ ಶಾಸಕ ಎಚ್.ಕೆ.ಪಾಟೀಲ್ (H.K.Patil), ಸಾರ್ವಜನಿಕ ಕ್ಷೇತ್ರದಲ್ಲಿ ಮಹತ್ವದ ಹುದ್ದೆಗಳನ್ನು ಹೊಂದಿದವರು ನಾಗರಿಕ ಸಮಾಜ ತಲೆ ತಗ್ಗಿಸುವ ರೀತಿಯಲ್ಲಿ, ತಮ್ಮ ಭಾಷೆ, ಶೈಲಿ, ವಿಚಾರಗಳನ್ನು ಹರಿ ಬಿಡುತ್ತಿದ್ದಾರೆ. ಅತ್ಯಂತ ದುರ್ದೈವದ ಸಂಗತಿ ಎಂದರೆ ಮಂತ್ರಿಯಾದವರ ಬಾಯಿಗೆ ಹಿಡಿತ ಇಲ್ಲಾ. ನಾಗರಿಕರು ಸಹನೆ ಮಾಡಿಕೊಳ್ಳದಂತಹ ಮಾತುಗಳ ಬಳಿಕೆ ಆಗುತ್ತಿದೆ. ನಾಲಿಗೆ ಕತ್ತರಿಸುತ್ತೇವೆ, ಅಷ್ಟೇ ಅಲ್ಲಾ ಅಶ್ಲೀಲ ಮಾತುಗಳನ್ನಾಡುತ್ತಾರೆ. ರಾಜಕೀಯ ವ್ಯವಸ್ಥೆಯನ್ನು ಗಲಿಜುಗೊಳಿಸಲಾಗುತ್ತಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ‌ ಅವರು ಸಾರ್ವಜನಿಕರ ಕ್ಷಮೆಯಾಚನೆ ಮಾಡಬೇಕು. ಟಿವಿ ನೋಡಲು ಸಾಧ್ಯವಾಗದ ರೀತಿಯಲ್ಲಿ ನಿಮ್ಮ ಪಕ್ಷದವರು ನಡೆದುಕೊಂಡಿದ್ದಾರೆ. ಗೃಹಸ್ಥರನ್ನು ಮರ್ಯಾದಸ್ಥರನ್ನು ಅವಮಾನಿಸುವ ಕೆಲಸ ನಡೆದಿದೆ. ಬೊಮ್ಮಾಯಿ ಅವರು ತಕ್ಷಣ ಕ್ಷಮೆಯಾಚನೆ ಮಾಡಬೇಕೆಂದು ಒತ್ತಾಯ ಮಾಡುತ್ತೇನೆ ಎಂದರು.

ಸಚಿವ ಸ್ಥಾನದ ವಿಚಾರದಲ್ಲಿ ಇಬ್ಬರು ನಾಯಕರ ನಡುವಿನ ವೈಯಕ್ತಿಕ ಶೀತಲಸಮರ ಪಂಚಮಸಾಲಿ 2ಎ ಮೀಸಲಾತಿ ಹೋರಟದಿಂದ ತೀವ್ರ ಗೊಂಡಿತು. ಯತ್ನಾಳ್ ಸಮುದಾಯದ ಪರ ನಿಂತರೆ, ನಿರಾಣಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಸರ್ಕಾರದ ಪರ ಬ್ಯಾಟ್ ಬೀಸುತ್ತಿದ್ದಾರೆ. ಯತ್ನಾಳ್ ಮತ್ತು ನಿರಾಣಿ ನಡುವಿನ ಶೀತಲ ಸಮರಕ್ಕೆ ಪಕ್ಷದ ರಾಜ್ಯ ನಾಯಕರು ಹಾಗೂ ಹೈಕಮಾಂಡ್ ಲಗಾಮು ಹಾಕುವಲ್ಲಿ ವಿಫಲವಾದಂತೆ ಕಾಣುತ್ತಿದೆ.

ಇವರಿಬ್ಬರ ನಡುವಿನ ಟೀಕಾ ಪ್ರಹಾರ ಕೀಳು ಮಟ್ಟಕ್ಕೆ ಇಳಿದಂತೆ ಕಾಣುತ್ತಿದೆ. ಈ ಹಿಂದೆ ನಿರಣಿ ವಿರುದ್ಧ ಟೀಕಿಸುವ ಭರದಲ್ಲಿ ಯತ್ನಾಳ್ ಪಿಂಪ್ ಸಚಿವ ಅಂತ ಪದ ಬಳಿಸಿದ್ದರು. ಇದರಿಂದ ಆಕ್ರೋಶಗೊಂಡಿದ್ದ ನಿರಾಣಿ, ಪಕ್ಷದಲ್ಲಿ ಇರೋಕೆ ಆಗಲ್ಲ ಅಂದರೆ ರಾಜೀನಾಮೆ ಕೊಟ್ಟು ಹೋಗಲಿ. ರಾಜೀನಾಮೆ ಕೊಟ್ಟು ಹೋಗಿ , ಪ್ರತಿಭಟನೆ ಮಾಡಲಿ ಎಂದು ಹೇಳಿದ್ದರು.

ಇದನ್ನೂ ಓದಿ: ನಿನಗೆ ತಾಕತ್ತಿದ್ದರೆ ನನ್ನನ್ನು ಪಕ್ಷದಿಂದ ಹೊರಹಾಕು: ಸಚಿವ ಮುರುಗೇಶ್ ನಿರಾಣಿಗೆ ಸವಾಲ್​ ಹಾಕಿದ ಯತ್ನಾಳ್​

ಪಿಂಪ್ ಸಚಿವ ಎಂಬ ಹೇಳಿಕೆಯಿಂದ ಮನನೊಂದ ನಿರಾಣಿ ಭಾವುಕರಾಗಿ ಮಾತನಾಡಿದ್ದಲ್ಲದೆ, ಯತ್ನಾಳ್ ವಿರುದ್ಧ ಗುಡುಗಿದ್ದರು.ಯತ್ನಾಳ್​​ ಎಲ್ಲರ ಬಗ್ಗೆ ಹಗುರವಾಗಿ ಮಾತನಾಡುತ್ತಲೇ ಇದ್ದಾರೆ. ಜೆಡಿಎಸ್​​ಗೆ ಹೋಗಿ ಮುಸ್ಲಿಂ ಟೋಪಿ ಹಾಕಿದ್ದು ಎಲ್ಲರಿಗೂ ಗೊತ್ತಿದೆ. ಯತ್ನಾಳ್​ ಡೋಂಗಿ ರಾಜಕಾರಣ ಮಾಡುತ್ತಿದ್ದಾರೆ. ನಾವು ಕೃಷ್ಣಾ, ಘಟಪ್ರಭಾ ನದಿಯ ನೀರು ಕುಡಿದು ಬೆಳೆದಿದ್ದೇವೆ. ನಾವು ಸುಮ್ಮನೆ ಇದ್ದೀವಿ ಅಂದರೆ ದೌರ್ಬಲ್ಯ ಅಲ್ಲ. ಬಸನಗೌಡ ಪಾಟೀಲ್ ಯತ್ನಾಳ್​ ಏನೂ ಸತ್ಯ ಹರಿಶ್ಚಂದ್ರ ಅಲ್ಲ. ದೊಡ್ಡ ಸಮುದಾಯದಲ್ಲಿ ಹುಟ್ಟಿದ್ದೀರಿ ಗೌರವದಿಂದ ಮಾತಾಡಿ ಎಂದು ವಾಗ್ದಾಳಿ ನಡೆಸಿದ್ದರು.

ರಾಜಕೀಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:00 pm, Sun, 15 January 23