Dharmendra Pradhan: ಪಶ್ಚಿಮ ಬಂಗಾಳ ಬಿಜೆಪಿ ಕಾರ್ಯಕರ್ತನ ಮನೆಗೆ ತೆರಳಿ ಬಂಗಾಳಿ ಭೋಜನ ಸವಿದ ಧರ್ಮೇಂದ್ರ ಪ್ರಧಾನ್
ಪಶ್ಚಿಮ ಬಂಗಾಳ ಪ್ರವಾಸದಲ್ಲಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಶನಿವಾರ ಮಧ್ಯಾಹ್ನ ಕೋಲ್ಕತ್ತದ ಬೆಹಾಲ ಸರ್ಸುನಾದಲ್ಲಿರುವ ಪಕ್ಷದ ಕಾರ್ಯಕರ್ತರೊಬ್ಬರ ಮನೆಗೆ ತೆರಳಿ ಬಂಗಾಳಿ ಭೋಜನ ಸವಿದರು.
ಕೋಲ್ಕತ್ತ: ಪಶ್ಚಿಮ ಬಂಗಾಳ ಪ್ರವಾಸದಲ್ಲಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಶನಿವಾರ ಮಧ್ಯಾಹ್ನ ಕೋಲ್ಕತ್ತದ ಬೆಹಾಲ ಸರ್ಸುನಾದಲ್ಲಿರುವ (Sarasuna) ಪಕ್ಷದ ಕಾರ್ಯಕರ್ತರೊಬ್ಬರ ಮನೆಗೆ ತೆರಳಿ ಬಂಗಾಳಿ ಭೋಜನ (Bengali food) ಸವಿದರು. ಪಕ್ಷದ ನಾಯಕರು, ಇತರ ಕಾರ್ಯಕರ್ತರೂ ಜತೆಗಿದ್ದರು. ಈ ವಿಚಾರವಾಗಿ ಟ್ವೀಟ್ ಮೂಲಕ ಮಾಹಿತಿ ನೀಡಿರುವ ಪ್ರಧಾನ್, ಬಂಗಾಳಿ ಭೋಜನ ಉಂಡು ಸಂತಸಗೊಂಡಿದ್ದೇನೆ ಎಂದು ಹೇಳಿದ್ದಾರೆ. ‘ಶಂಕರ್ ಖಥಲ್ ಮತ್ತು ಅವರ ಕುಟುಂಬದವರು ನೀಡಿದ ಆತಿಥ್ಯದಿಂದ ಸಂತಸಗೊಂಡಿದ್ದೇನೆ. ಬಂಗಾಳಿ ಊಟ ಬಹಳ ಚೆನ್ನಾಗಿತ್ತು. ವೃತ್ತಿಯಲ್ಲಿ ಚಾಲಕರಾಗಿರುವ ಶಂಕರ್ ದಾ ಹೃದಯದಲ್ಲಿ ಬಿಜೆಪಿಯ ಸಿದ್ಧಾಂತ ಹೊಂದಿದ್ದಾರೆ. ಇಂಥ ಶ್ರಮಜೀವಿ ಕಾರ್ಯಕರ್ತರೇ ಪಕ್ಷದ ಮತ್ತು ಸಂಘಟನೆಯ ನಿಜವಾದ ಹೀರೋಗಳು’ ಎಂದು ಪ್ರಧಾನ್ ಟ್ವೀಟ್ ಮಾಡಿದ್ದಾರೆ.
Honoured by the warmth and affection of Shri Shankar Kathal and his family. A tasty Bengali lunch was icing on the cake.
A driver by profession, Shankar Da has BJP and its ideology in his heart. Proud and industrious karyakartas like him are the real heroes of our sangathan. pic.twitter.com/Sj8Q8T4OeZ
— Dharmendra Pradhan (@dpradhanbjp) January 14, 2023
ಮಮತಾ ಸರ್ಕಾರದ ವಿರುದ್ಧ ವಾಗ್ದಾಳಿ
ಈ ಮಧ್ಯೆ, ರಾಜ್ಯದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮುಂದುವರಿಸಿರುವ ಬಿಜೆಪಿ ವಾಗ್ದಾಳಿ ಮುಂದುವರಿಸಿದೆ. 100 ದಿನಗಳ ಕಾಮಗಾರಿಯ ಬಳಿಕ ವಸತಿ ಯೋಜನೆಯಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. ಈ ವಿಚಾರವನ್ನು ಬಿಜೆಪಿ ಪ್ರಸ್ತಾಪಿಸಲಿದೆ. ಪ್ರಧಾನಮಂತ್ರಿ ಪೌಷ್ಟಿಕಾಂಶ ಯೋಜನೆಯಡಿ ರಾಜ್ಯದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾರಕ್ಕೆ ಸಂಬಂಧಿಸಿದ ಎಲ್ಲ ದೂರುಗಳನ್ನೂ ತನಿಖೆಗೆ ಒಳಪಡಿಸಲಾಗುವುದು ಎಂದು ಧರ್ಮೇಂದ್ರ ಪ್ರಧಾನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಅಂಬಾನಿಯ ರಿಲಯನ್ಸ್ ಪರ ನಿರ್ಧಾರ ಕೈಗೊಂಡಿದ್ದು ಯುಪಿಎ; ಬಿಜೆಪಿ ನಾಯಕ ಅಮಿತ್ ಮಾಳವೀಯ ಕೊಟ್ಟ ದಾಖಲೆ ಯಾವುದು ನೋಡಿ
ರಾಜ್ಯದಲ್ಲಿ ಪ್ರಜಾಪ್ರಭುತ್ವ ವಿರೋಧಿ ಪಕ್ಷ ಅಧಿಕಾರದಲ್ಲಿದೆ. ಹೀಗಾಗಿ ಇಂಥ ಘಟನೆಗಳು, ಭ್ರಷ್ಟಾಚಾರಗಳು ನಡೆಯುತ್ತಿವೆ. ನೇಮಕಾತಿ ವಿಚಾರಕ್ಕೆ ಸಂಬಂಧಿಸಿಯೂ ಅನೇಕ ದೂರುಗಳು ಬಂದಿವೆ. ಶಿಕ್ಷಣ ಸಚಿವರ ಮನೆಯವರಿಗೇ ಕೆಲಸ ನೀಡಿದ ಆರೋಪವೂ ಇದೆ. ಈ ಪ್ರಕರಣಕ್ಕೆ ಸಂಬಂದಿಸಿ ಸಾಕಷ್ಟು ಮಂದಿ ಜೈಲು ಪಾಲಾಗಿದ್ದಾರೆ. ಈ ಎಲ್ಲ ಪ್ರಕರಣಗಳಿಂದಾಗಿ ರಾಜ್ಯದಲ್ಲಿ ಅಪ್ರಜಾಸತ್ತಾತ್ಮಕ ವಾತಾವರಣ ನಿರ್ಮಾಣವಾಗಿದೆ ಎಂದು ಪ್ರಧಾನ್ ಟೀಕಿಸಿದ್ದಾರೆ.
ತೃಣಮೂಲ ಕಾಂಗ್ರೆಸ್ ನಾಯಕ ಅಭಿಷೇಕ್ ಬ್ಯಾನರ್ಜಿ ಅವರನ್ನು ಬಿಜೆಪಿ ಶಾಸಕರು ಭೇಟಿ ಮಾಡಿದ್ದಾರೆ ಎಂಬ ಹೇಳಿಕೆಗೆ ಸಂಬಂಧಿಸಿ ಪ್ರತಿಕ್ರಿಯಿಸಿದ ಸಚಿವರು, ರಾಜ್ಯದಲ್ಲಿ ಪಕ್ಷ ಬೆಳೆದಂತೆ ಇಂತಹ ಅನೇಕ ಆರೋಪಗಳು ಮುನ್ನೆಲೆಗೆ ಬಂದಿವೆ ಎಂದು ಹೇಳಿದ್ದಾರೆ. ಆದರೆ, ಇವೆಲ್ಲದರ ಹೊರತಾಗಿಯೂ ಬಿಜೆಪಿ ರಾಜ್ಯದಲ್ಲಿ ಗಮನಾರ್ಹ ಸಾಧನೆ ಮಾಡಿದೆ ಎಂದು ಅವರು ಹೇಳಿದ್ದಾರೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:21 pm, Sat, 14 January 23