ನಾಲಿಗೆ ಹರಿದು ಮಾತನಾಡಿದರೆ ನಾಲಿಗೆ ಕತ್ತರಿಸುವ ಕೆಲಸವಾಗುತ್ತದೆ : ಯತ್ನಾಳ್​ಗೆ, ಮುರುಗೇಶ್ ನಿರಾಣಿ ಖಡಕ್ ಎಚ್ಚರಿಕೆ

ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಪಿಂಪ್ ಅಂತ ಮಾತಾಡುವ ಕೆಲಸ ಮಾಡಿದ್ದಾರೆ. ಆ ಸಂಸ್ಕೃತಿಯಲ್ಲಿ ಇದ್ದವರೇ ಆ ರೀತಿ ಮಾತಾಡಿದ್ದಾರೆ. ಅಪ್ಪನಿಗೆ ಹುಟ್ಟಿದವರು ಈ ರೀತಿ ಮಾತನಾಡಲ್ಲ ಎಂದು ಮುರಗೇಶ ನಿರಾಣಿ ಹೇಳಿದ್ದಾರೆ.

ನಾಲಿಗೆ ಹರಿದು ಮಾತನಾಡಿದರೆ ನಾಲಿಗೆ ಕತ್ತರಿಸುವ ಕೆಲಸವಾಗುತ್ತದೆ : ಯತ್ನಾಳ್​ಗೆ, ಮುರುಗೇಶ್ ನಿರಾಣಿ ಖಡಕ್ ಎಚ್ಚರಿಕೆ
ಬಸನಗೌಡ ಪಾಟೀಲ್​ ಯತ್ನಾಳ, ಮುರಗೇಶ್​ ನೀರಾಣಿ
Follow us
TV9 Web
| Updated By: ವಿವೇಕ ಬಿರಾದಾರ

Updated on:Jan 14, 2023 | 2:02 PM

ಬೆಂಗಳೂರು: ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ (Basangouda Patil Yatnal) ಪಿಂಪ್ ಅಂತ ಭಾಷೆ ಪ್ರಯೋಗಿಸಿದ್ದಾರೆ. ಆ ಸಂಸ್ಕೃತಿಯಲ್ಲಿ ಇದ್ದವರೇ ಆ ರೀತಿ ಮಾತಾಡಿದ್ದಾರೆ. ಅಪ್ಪನಿಗೆ ಹುಟ್ಟಿದವರು ಈ ರೀತಿ ಮಾತನಾಡಲ್ಲ. ನಾಲಿಗೆ ಹರಿ ಬಿಟ್ಟು ಮಾತನಾಡಿದರೆ ನಾಲಿಗೆ ಕತ್ತರಿಸುವ ಕೆಲಸವಾಗುತ್ತದೆ. ಬಾಯಿ ಮುಚ್ಚಿಕೊಂಡು ಇರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಸೂಚಿಸಿದ್ದಾರೆ. ಪಕ್ಷದಲ್ಲಿ ಇರೋಕೆ ಆಗಲ್ಲ ಅಂದರೆ ರಾಜೀನಾಮೆ ಕೊಟ್ಟು ಹೋಗಲಿ. ರಾಜೀನಾಮೆ ಕೊಟ್ಟು ಹೋಗಿ , ಪ್ರತಿಭಟನೆ ಮಾಡಲಿ ಎಂದು ಸಚಿವ ಮುರಗೇಶ ನಿರಾಣಿ (Murugesh Nirani) ಕಿಡಿಕಾರಿದ್ದಾರೆ.

ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಶಾಸಕ ಯತ್ನಾಳ್​ ಆಟಕ್ಕೆ ವಿಜಯಪುರದ ಜನರು ಉತ್ತರ ಕೊಡುತ್ತಾರೆ. 2ಎ ಮೀಸಲಾತಿ ಬೇಡಿಕೆ ಇಂದು, ನಿನ್ನೆಯದಲ್ಲ. ಪಂಚಮಸಾಲಿಗೆ 2ಎ ಮೀಸಲಾತಿ ನೀಡಲು ಸಿಎಂಗೆ ಬದ್ಧತೆ ಇದೆ. 2C, 2D ಸ್ಥಾಪನೆ ಮಾಡಿ ಮೀಸಲಾತಿಗೆ ಸರ್ಕಾರ ಮುಂದಾಗಿತ್ತು. ಇಷ್ಟೆಲ್ಲಾ ಮಾಡಿದರೂ ನಮ್ಮ ಮೇಲೆ ಗೂಬೆ ಕೂರಿಸಲು ಪ್ರಯತ್ನ ಮಾಡುತ್ತಿದ್ದಾರೆ. SC, ST, ಒಕ್ಕಲಿಗ ಸಮುದಾಯ ಶಾಂತಿಯುತವಾಗಿ ಮನವಿ ಮಾಡಿದೆ ಎಂದರು.

ಇದನ್ನೂ ಓದಿ: ಅವರ ಅಪ್ಪಂಗೆ ಹುಟ್ಟಿದ್ರೆ ಸಿಡಿ ಬಿಡುಗಡೆ ಮಾಡಲಿ: ಸಚಿವ ಮುರುಗೇಶ ನಿರಾಣಿಗೆ ಯತ್ನಾಳ್ ಸವಾಲ್​

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಂಚಮಸಾಲಿಗೆ ಮೀಸಲಾತಿ ಕಲ್ಪಿಸುವ ವಿಶ್ವಾಸ ಇದೆ. ನಿನ್ನೆ (ಜ.13) ಶಿಗ್ಗಾಂವಿಯಲ್ಲಿ ಕೂಡಲಸಂಗಮದ ಪಂಚಮಸಾಲಿ ಗುರುಪೀಠಾಧ್ಯಕ್ಷ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ (Jayamruthyunjaya Swamiji) ಪ್ರತಿಭಟನೆ ನಡೆಸಿದ್ದಾರೆ. ಶ್ರೀಗಳ ಪ್ರತಿಭಟನೆಯನ್ನು ನಾವು ಖಂಡಿಸುತ್ತೇವೆ ಎಂದು ಬೆಂಗಳೂರಿನಲ್ಲಿ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ. ಇದು ರಾಜಕೀಯ ಪ್ರೇರಿತ ಪ್ರತಿಭಟನೆ. ವಿಜಯಪುರ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಸರ್ಕಾರಕ್ಕೆ ಮುಜುಗರ ತರುವ ಹೇಳಿಕೆ ನೀಡುತ್ತಿದ್ದಾರೆ. ಮೀಸಲಾತಿ ವಿಚಾರದಲ್ಲಿ ಯತ್ನಾಳ್​ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್​ನವರ ಜೊತೆ ಸೇರಿ ಪ್ರತಿಭಟನೆ ಮಾಡಿದ್ದಾರೆ: ಸಿಸಿ ಪಾಟೀಲ್​​

ಕೂಡಲಸಂಗಮದ ಪಂಚಮಸಾಲಿ ಗುರುಪೀಠಾಧ್ಯಕ್ಷ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮತ್ತು ವಿಜಯಪುರ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಅವರು 2ಎ ಮೀಸಲಾತಿ ಕೊಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಫಲರಾಗಿದ್ದಾರೆಂದು ಪ್ರತಿಭಟನೆ ಮಾಡಿದ್ದಾರೆ. ಅವರ ಪ್ರತಿಭಟನೆಯನ್ನು ನಾವು ಖಂಡಿಸುತ್ತೇವೆ. ಅವರು ಕಾಂಗ್ರೆಸ್​ನವರ ಜೊತೆ ಸೇರಿ ಪ್ರತಿಭಟನೆ ಮಾಡಿದ್ದಾರೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಹೇಳಿದ್ದಾರೆ.

ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ನಾಯಕರು 2ಎ ಮೀಸಲಾತಿ ಕೊಡಬಾರದು ಅಂತ ನಿರ್ಣಯ ಮಾಡಿದ್ದರು. ಅಂಥವರ ಜೊತೆ ಸೇರಿ‌ ಹೋರಾಟ ಮಾಡಿದ್ದಾರೆ. ಮುಖ್ಯಮಂತ್ರಿ ಅವರ ಪ್ರತಿಕೃತಿ ದಹಿಸಿ, ಹೈವೇ ಬಂದ್ ಮಾಡಿದ್ದಾರೆ. ಸಿಎಂ ಈಗಾಗಲೇ ಹೋರಾಟಗಾರರ ಜತೆ ಮಾತಾಡಿದ್ದಾರೆ. ನಾವೆಲ್ಲ 2ಎ ಮೀಸಲಾತಿ ಕೊಡಿ ಅಂತ ಒತ್ತಡ ಹಾಕಿದ್ದೇವೆ ಎಂದರು.

ಇದನ್ನೂ ಓದಿ: ನಿನಗೆ ತಾಕತ್ತಿದ್ದರೆ ನನ್ನನ್ನು ಪಕ್ಷದಿಂದ ಹೊರಹಾಕು: ಸಚಿವ ಮುರುಗೇಶ್ ನಿರಾಣಿಗೆ ಸವಾಲ್​ ಹಾಕಿದ ಯತ್ನಾಳ್​

ಸಿಎಂ ಎಲ್ಲ ಸಮುದಾಯಗಳ ಬಗ್ಗೆನೂ‌ ಗಮನ ಕೊಡಬೇಕಾಗಿದೆ, ಎಲ್ಲರಿಗೂ ನ್ಯಾಯ ಕೊಡುತ್ತಾರೆ. ಇದನ್ನೆಲ್ಲ ಸ್ವಾಮೀಜಿಗಳು ಅರ್ಥಮಾಡಿಕೊಳ್ಳಬೇಕು. ಅವರ ಪ್ರತಿಭಟನೆ ರಾಜಕಿಯ ಪ್ರೇರಿತ. ಎಷ್ಟು ಸಲ ಸಿಎಂ ಮನೆ ಮೇಲೆ ಮುತ್ತಿಗೆ ಹಾಕುತ್ತೀರಾ? ಹಿಂದುಳಿದ ವರ್ಗಗಳ ಅಂತಿಮ ವರದಿ ಬಂದ ಮೇಲೆ ಸಿಎಂ ನಿರ್ಧಾರ ತಗೆದುಕೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು.

ಆದರೂ ಆಯೋಗದಿಂದ ಮಧ್ಯಂತರ ವರದಿ ಪಡೆದು ಕ್ಯಾಬಿನೆಟ್ ಸಭೆಯಲ್ಲಿ ಸಿಎಂ ಮೀಸಲಾತಿ ಬಗ್ಗೆ ನಿರ್ಧರಿಸಿದ್ದಾರೆ. ಇದಕ್ಕೆ ಹೋರಾಟಗಾರರು ಮೆಚ್ಚುಗೆ ವ್ಯಕ್ತಪಡಿಸಬೇಕಿತ್ತು. ಕ್ಯಾಬಿನೆಟ್ ಸಭೆಯ ನಿರ್ಧಾರದಲ್ಲಿ ಗೊಂದಲ ಇಲ್ಲ. ಈಗಲೂ ಸಂಪುಟ ಸಭೆಯ ನಿರ್ಧಾರಕ್ಕೆ ಸರ್ಕಾರ ಬದ್ಧವಾಗಿದೆ. ಕಾನೂನು ತಜ್ಞರ ಅಭಿಪ್ರಾಯ ಪಡೆದೇ ಸಿಎಂ ನಿರ್ಧರಿಸಿದ್ದಾರೆ ಎಂದು ತಿಳಿಸಿದರು.

ಸಿಎಂ ವಿರುದ್ಧ ಹೀಗೆಲ್ಲ ಮಾತಾಡೋದು ಯತ್ನಾಳ್​ಗೆ ಶೋಭೆ ತರಲ್ಲ

ಬಸನಗೌಡ ಪಾಟೀಲ್​ ಯತ್ನಾಳ್ ಹಿರಿಯರು, ನಮ್ಮ ವಿರುದ್ಧ, ಸಿಎಂ ವಿರುದ್ಧ ಹೀಗೆಲ್ಲ ಮಾತಾಡೋದು ಅವರಿಗೆ ಶೋಭೆ ತರಲ್ಲ. ಯತ್ನಾಳ್ ಅವರ ಮೇಲೆ ನಮಗೇನೂ ಭಯ ಇಲ್ಲ. ಅವರು ಹಿರಿಯರು, ಕೇಂದ್ರದಲ್ಲಿ ಸಚಿವರಾಗಿದ್ದವರು, ಹಾಗಾಗಿ ನಾವು ಶಾಂತರಾಗಿದ್ದೇವೆ. ಯತ್ನಾಳ್ ಹೇಳಿಕೆಗಳು ಪಕ್ಷದ ವರಿಷ್ಠರ ಗಮನಕ್ಕೆ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇಂದಿನಿಂದ ಬೆಂಗಳೂರಿನ ಫ್ರಿಡಂ ಪಾರ್ಕಿನಲ್ಲಿ ನಿರಂತರ ಪ್ರತಿಭಟನೆ

ಪಂಚಮಸಾಲಿಗೆ 2ಎ ಮೀಸಲಾತಿ ನೀಡುವ ಸಂಬಂಧ ಬೆಂಗಳೂರಿನ ಫ್ರಿಡಂ ಪಾರ್ಕಿನಲ್ಲಿ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಿರಂತರ ಪ್ರತಿಭಟನೆ ಮಾಡಲಾಗುತ್ತಿದೆ. ತಾಯಿ ಅಣೆ ಮಾಡಿ ಪಂಚಮಸಾಲಿಗಳಿಗೆ 6 ಬಾರಿ ಮೋಸ ಮಾಡಿದ್ದಾರೆ. ಸಿಎಂ ಬೊಮ್ಮಾಯಿ ನೀತಿ ಖಂಡಿಸಿ ಹಾಗೂ ಹಿಂದುಳಿದ ವರ್ಗದ ಅಯೋಗದಿಂದ ಶೀಘ್ರವೇ ಅಂತಿಮ ವರದಿ ಪಡೆಯುವಂತೆ ಅಗ್ರಹಿಸಿ ಪ್ರತಿಭಟನೆ ಮಾಡಲಿದ್ದಾರೆ. ಇಂದಿನಿಂದ (ಜ.14) ಪ್ರತಿ ದಿನ ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:25 pm, Sat, 14 January 23