ಅವರ ಅಪ್ಪಂಗೆ ಹುಟ್ಟಿದ್ರೆ ಸಿಡಿ ಬಿಡುಗಡೆ ಮಾಡಲಿ: ಸಚಿವ ಮುರುಗೇಶ ನಿರಾಣಿಗೆ ಯತ್ನಾಳ್ ಸವಾಲ್​

ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಸಚಿವ ಮುರುಗೇಶ ನಿರಾಣಿ ಮಧ್ಯೆ ಇದೀಗ ಸಿಡಿ ವಾರ್​ ಶುರುವಾದಂತ್ತಿದೆ.

ಅವರ ಅಪ್ಪಂಗೆ ಹುಟ್ಟಿದ್ರೆ ಸಿಡಿ ಬಿಡುಗಡೆ ಮಾಡಲಿ: ಸಚಿವ ಮುರುಗೇಶ ನಿರಾಣಿಗೆ ಯತ್ನಾಳ್ ಸವಾಲ್​
ಸಚಿವ ಮರುಗೇಶ ನಿರಾಣಿ, ಶಾಸಕ ಯತ್ನಾಳ್
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Jan 07, 2023 | 3:15 PM

ವಿಜಯಪುರ: ಶಾಸಕ ಬಸನಗೌಡ ಪಾಟೀಲ ಯತ್ನಾಳ (Basangouda Patil Yatnal) ಹಾಗೂ ಸಚಿವ ಮುರುಗೇಶ ನಿರಾಣಿ ಮಧ್ಯೆ ಇದೀಗ ಸಿಡಿ ವಾರ್​ ಶುರುವಾದಂತ್ತಿದೆ. ಯಾರು ಸಿಡಿ ವಿಚಾರದಲ್ಲಿ ಸ್ಟೇ ತೆಗೆದುಕೊಂಡಿರುತ್ತಾರೋ ಅವರಿಗೆ ಸಿಡಿ ವಿಚಾರ ಗೊತ್ತಿರುತ್ತದೆ ಎಂದು ಸಚಿವ ಮುರುಗೇಶ ನಿರಾಣಿ ಹೇಳಿದ್ದರು. ಸದ್ಯ ಈ ವಿಚಾರವಾಗಿ ವಿಜಯಪುರದಲ್ಲಿ ಪ್ರತಿಕ್ರಿಯಿಸಿದ ಯತ್ನಾಳ ನಿರಾಣಿ ವಿರುದ್ಧ ಕುಟುಕಿದ್ದಾರೆ. ತಾಕತ್ತಿದ್ದರೆ ನಿಜವಾಗಿಯೂ ಅವರ ಅಪ್ಪಂಗೆ ಹುಟ್ಟಿದ್ದರೆ ಸಿಡಿ ಬಿಡುಗಡೆ ಮಾಡಲಿ ಎಂದು ಯತ್ನಾಳ ಸವಾಲ್ ಹಾಕಿದರು. ನಮ್ಮ ಬಳಿಯೂ ಭಂಡಾರ ಇದೆ. ಮುರುಗೇಶ್ ನಿರಾಣಿ ಕೂಡ ಸಿಡಿ ವಿಚಾರದಲ್ಲಿ ಸ್ಟೇ ತಂದಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್​​ನಲ್ಲಿ ಸಿಡಿ ಫ್ಯಾಕ್ಟರಿ ಇವೆ ಅಂತಾ ಹೇಳಿದ್ದೇನೆ. ಯಾರದ್ದೋ ಸಿಡಿ ಇಟ್ಟುಕೊಂಡು ಬ್ಲ್ಯಾಕ್​ಮೇಲ್ ಮಾಡುತ್ತಿದ್ದಾರೆ. ಸಿಡಿ ಇಟ್ಟುಕೊಂಡೇ ಮಂತ್ರಿ ಆಗ್ತಾರೆ, ನಾನು ಅಂತಹ ಕೆಲಸ ಮಾಡಲ್ಲ. ಇವೆಲ್ಲಾ ಮೀಸಲಾತಿ ಹೋರಾಟದ ಮೇಲೆ ಪರಿಣಾಮ ಬೀರುವುದಿಲ್ಲ. ಯಾರು ಒಳ್ಳೆಯವರು, ಕೆಟ್ಟವರೆಂದು ಸಮಾಜದ ಜನರಿಗೆ ಗೊತ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ಮಾಡಿದರು.

ಜನರು ನನಗೆ ಈತನನ್ನು ಕೇಳಿ ಮತ ಹಾಕುತ್ತಾರಾ?

ಮುಂದಿನ 2023ರ ಚುನಾವಣೆಯಲ್ಲಿ ಯತ್ನಾಳಗೆ ಟಿಕೆಟ್ ಸಿಗುತ್ತಾ ಇಲ್ವೋ ಎಂದ ಸಚಿವ ನಿರಾಣಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಜನರು ನನಗೆ ಈತನನ್ನು ಕೇಳಿ ಮತ ಹಾಕುತ್ತಾರಾ? ಆತನಿಗೆ ಬೀಳಗಿಯಲ್ಲಿ ಮತ ಹಾಕುತ್ತಾರಾ ಎಂದು ನೋಡಿಕೊಳ್ಳಲಿ. ಎಷ್ಟು ಜನ ಅಣ್ಣ ತಮ್ಮಂದಿರರು ಚುನಾವಣೆಗೆ ಕಾಂಗ್ರೆಸ್​, ಜೆಡಿಎಸ್​​ನಿಂದ ನಿಲ್ಲಲಿದ್ದಾರೆ ಎಂಬುದನ್ನ ನಿರಾಣಿ ಮೊದಲು ಹೇಳಲಿ. ನಮ್ಮ ಮನೆಯಲ್ಲಿ ನಾನೊಬ್ಬನೇ ಚುನಾವಣೆಗೆ ನಿಲ್ಲುತ್ತೇನೆ ಎಂದು ನೇರವಾಗಿ ಮುರಗೇಶ ನಿರಾಣಿಗೆ ಯತ್ನಾಳ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ನನ್ನನ್ನು ಸೋಲಿಸಲು ನಿರಾಣಿ ಕಳಿಸುವ ದುಡ್ಡು ತೆಗೆದುಕೊಂಡು ವಿಜಯಪುರದ ಮತದಾರ ನನಗೆ ವೋಟು ಹಾಕುತ್ತಾನೆ: ಬಸನಗೌಡ ಯತ್ನಾಳ್

ಚುನಾವಣೆಯಲ್ಲಿ ಯತ್ನಾಳರನ್ನು ಸೋಲಿಸುವ ವಿಚಾರ

ಪಂಚಮಸಾಲಿ ಮೀಸಲಾತಿ ಹೋರಾಟ ಮಾಡಿಕೊಳ್ಳುತ್ತಲೇ ಇರಬೇಕು. ಇನ್ನು ಮುಂದಿನ ಚುನಾವಣೆಯಲ್ಲಿ ಯತ್ನಾಳ ಸೋಲಿಸಲು ಎಲ್ಲರೂ ಒಂದಾಗಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ಚುನಾವಣೆಯಲ್ಲಿ ನನ್ನ ಸೋಲಿಸಲು ಬಹಳ ದೊಡ್ಡ ಹಣ್ಣ ಬರುವುದಿದೆ. ನಿರಾಣಿ, ವಿಜಯೇಂದ್ರ, ಸತೀಶ್ ಜಾರಕಿಹೋಳಿ ಹಣ ಕಳಸ್ತಾರೆ. ವಿಜಯಪುರದ ಜನ ಆನಂದದಿಂದ ಹಣ ತಗೊಂಡು ಚೈನಿ ಮಾಡಿ ನನಗೆ ವೋಟ್ ಹಾಕುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಪ್ರಕಟಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ನೆಲಕಚ್ಚುತ್ತದೆ: ಬಸನಗೌಡ ಯತ್ನಾಳ್

ಮೀಸಲಾತಿ ನೀಡಲು ಕುಲಶಾಸ್ತ್ರ ಆಧ್ಯಯನ ಅವಶ್ಯಕತೆ ಇಲ್ಲಾ

ಇನ್ನು ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಮೀಸಲಾತಿ ನೀಡಲು ಹಿಂದುಳಿದ ಆಯೋಗದ ವರದಿ ಹಾಗೂ ಕುಲಶಾಸ್ತ್ರ ಆಧ್ಯಯನ ಅವಶ್ಯಕತೆ ಇಲ್ಲಾ. ಎಸ್ಟಿಎಸ್ಟಿ ಸಮುದಾಯಕ್ಕೆ ಯಾವುದಾರೂ ಸಮಾಜವನ್ನು ಸೇರಿಸಬೇಕಾದರೆ ಮಾತ್ರ ಕುಲಶಾಸ್ತ್ರ ಆಧ್ಯಯನವಾಗಬೇಕು. ಇದನ್ನ ಸಚಿವ ಮಾಧುಸ್ವಾಮಿಯವರೇ ಹೇಳಿದ್ಧಾರೆ. ಪಿಎಂ ಮೋದಿ ಅವರು ಯಕನಾಮಿಕ್ ವೀಕರ್ ಸೆಕ್ಷನ್ ಎಂದು ಮಾಡಿದ್ಧಾರೆ.

ಯಾವುದೇ ಮೀಸಲಾತಿ ಇಲ್ಲದ ಸಮಾಜ ಯಾವುದಿವೆ. ಅಂಥ ಸಮಾಜಗಳಿಗೆ 10 ಪರ್ಸೆಂಟ್ ಮೀಸಾಲಾತಿ ನೀಡಲಾಗಿದೆ. ಅದರಲ್ಲಿ ಲಿಂಗಾಯತರು, ರಿಸರ್ವೇಷನ್​ನಲ್ಲಿದ್ದವರು ಸೇರಲು ಬರಲ್ಲ. ರಿಸರ್ವೇಷನ್​ನಲ್ಲಿ ಇರದ ಸಮುದಾಯಗಳಿಗೆ 10 ಪರ್ಸೆಂಟ್ ಮೀಸಲಾತಿಯಲ್ಲಿ ಸೇರಬಹುದು. ಈ ಮೀಸಲಾತಿ ಪಡೆದುಕೊಳ್ಳುವುದೂ ಸಹ ಕಠಿಣವಿದ್ದು, ಹತ್ತಾರು ನಿಯಮಗಳಿವೆ. ಅದರಲ್ಲಿನ 2 ಪರ್ಸೆಂಟ್ ಲಿಂಗಾಯತರಿಗೆ ಕೊಡುತ್ತೇವೆಂದು ಹೇಳಿದ್ದಾರೆ. ಆದರೆ ಅದು ಅಸಾಧ್ಯ ಅದರಲ್ಲಿಂದ ತೆಗೆದು ಇದಕ್ಕೆ ಹಾಕೋದು ಎಂದು ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:13 pm, Sat, 7 January 23