Siddeshwar Swamiji: ಜ.8 ರಂದು ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಚಿತಾಭಸ್ಮ ವಿಸರ್ಜನೆ, ಎಲ್ಲೆಲ್ಲಿ…?

ವಿಸರ್ಜನೆಗೆ ಮುಂಜಾನೆ 5 ಗಂಟೆಗೆ ಜ್ಞಾನಯೋಗಾಶ್ರಮದಿಂದ ವಾಹನಗಳು ಹೊರಡಲಿವೆ. ಇನ್ನೂ ವಿಜಯಪುರದಿಂದ 300ಕ್ಕೂ ಹೆಚ್ಚು ವಾಹನಗಳಲ್ಲಿ ಭಕ್ತರು ತೆರಳುವ ಸಾಧ್ಯತೆ ಇದೆ.

Siddeshwar Swamiji: ಜ.8 ರಂದು ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಚಿತಾಭಸ್ಮ ವಿಸರ್ಜನೆ, ಎಲ್ಲೆಲ್ಲಿ...?
ಸಿದ್ದೇಶ್ವರ ಸ್ವಾಮೀಜಿ
Follow us
TV9 Web
| Updated By: ವಿವೇಕ ಬಿರಾದಾರ

Updated on:Jan 07, 2023 | 9:09 PM

ವಿಜಯಪುರ: ಸರಳತೆಯ ಸಂತ, ಜ್ಞಾನ ಜ್ಯೋತಿ ಜ್ಞಾನಯೋಗಾಶ್ರಮದ (Jnanyogashrama) ಸಿದ್ದೇಶ್ವರ ಶ್ರೀಗಳ (siddheshwar Swamiji) ಚಿತಾಭಸ್ಮವನ್ನು ನಾಳೆ (ಜ.8) ರಂದು ಜಗಜ್ಯೋತಿ ಬಸವಣ್ಣನವರ ಐಕ್ಯ ಸ್ಥಳ ಕೂಡಲಸಂಗಮ (Kudalsangama) ಮತ್ತು ಶಂಭೋಶಂಕರನ ಆತ್ಮಲಿಂಗ ಇರುವ ಪುಣ್ಯ ಕ್ಷೇತ್ರ ಗೋಕರ್ಣದಲ್ಲಿ (Gokarna) ಶ್ರೀಗಳ ಚಿತಾಭಸ್ಮ ವಿಸರ್ಜನೆ ಮಾಡಲಾಗುತ್ತದೆ ಎಂದು ಜ್ಞಾನ ಯೋಗಾಶ್ರಮದ ಅಧ್ಯಕ್ಷ ಶ್ರೀ ಬಸವಲಿಂಗ ಸ್ವಾಮೀಜಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಳೆ ಬೆಳಗ್ಗೆ 7 ಗಂಟೆಗೆ ಕೂಡಲ ಸಂಗಮದಲ್ಲಿ ಚಿತಾಭಸ್ಮ ವಿಸರ್ಜನೆ ಮಾಡಲಾಗುತ್ತದೆ. ನಂತರ ಸಂಜೆ 5 ಗಂಟೆಗೆ ಗೋಕರ್ಣದಲ್ಲಿ ಚಿತಾಭಸ್ಮವನ್ನು ವಿಸರ್ಜಿಸಲಾಗುತ್ತದೆ. ಮುಂಜಾನೆ 5 ಗಂಟೆಗೆ ಜ್ಞಾನಯೋಗಾಶ್ರಮದಿಂದ ವಾಹನಗಳು ಹೊರಡಲಿವೆ. ಇನ್ನೂ ವಿಜಯಪುರದಿಂದ 300ಕ್ಕೂ ಹೆಚ್ಚು ವಾಹನಗಳಲ್ಲಿ ಭಕ್ತರು ತೆರಳುವ ಸಾಧ್ಯತೆ ಇದೆ.

ಇದನ್ನೂ ಓದಿ: ಸಿದ್ದೇಶ್ವರ ಸ್ವಾಮೀಜಿಗಳ ಚಿತಾಭಸ್ಮವನ್ನು ಭಕ್ತರಿಗೆ ನೀಡುವುದಿಲ್ಲ; ಜ್ಞಾನ ಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ಸ್ಪಷ್ಟನೆ

ಹೀಗಾಗಿ ಭಕ್ತರಿಗೆ ಆಶ್ರಮದಿಂದ ನೇರವಾಗಿ ಕೂಡಲಸಂಗಮಕ್ಕೆ ಬರುವಂತೆ ಸೂಚನೆ ನೀಡಲಾಗಿದೆ. ಇನ್ನೂ ಆಶ್ರಮದಿಂದ ವಾಹನ, ಉಪಾಹಾರ, ಊಟದ ವ್ಯವಸ್ಥೆ ಇಲ್ಲ ಎಂದು ಆಶ್ರಮದ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.

ಅಂತ್ಯಕ್ರಿಯೆ ಮುಗಿದು ಮೂರು ದಿನಗಳಾದರೂ ಮುಗಿಯುತ್ತಿಲ್ಲ ಭಕ್ತರ ದರ್ಶನ

ಶ್ರೀಗಳ ಅಂತ್ಯಕ್ರಿಯೆ ಬಳಿಕ ಎರಡು ದಿನವಾದರೂ ಇನ್ನೂ ಭಕ್ತರ ಹಾಗೂ ಮಠಾಧೀಶರ ಭೇಟಿ ಮುಗಿಯುತ್ತಿಲ್ಲ. ನಿರಂತರಾಗಿ ಜ್ಞಾನ ಯೋಗಾಶ್ರಮಕ್ಕೆ ಭಕ್ತರು, ವಿದ್ಯಾರ್ಥಿಗಳು, ಸ್ವಾಮೀಜಿಗಳು ಬರುತ್ತಿದ್ದಾರೆ. ಇಂದೂ ಸಹ ಆಶ್ರಮಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ನಿನ್ನೆ(ಜ.6) ಸುಮಾರು 35,000 ಭಕ್ತರು ಆಶ್ರಮಕ್ಕೆ ಭೇಟಿ ನೀಡಿದ್ದರು. ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳೊಂದಿಗೆ ಆಶ್ರಮಕ್ಕೆ ಭೇಟಿ ನೀಡಿ ಶ್ರೀಗಳನ್ನು ಅಂತ್ಯಸಂಸ್ಕಾರ ಮಾಡಿದ ಸ್ಥಳ ದರ್ಶನ ಮಾಡಿಸುತ್ತಿದ್ದಾರೆ. ವಿಭೂತಿಯನ್ನು ತಂದು ಸಿದ್ದೇಶ್ವರ ಸ್ವಾಮೀಜಿಗಳ ಅಂತ್ಯಕ್ರಿಯೆ ಮಾಡಿದ ಸ್ಥಳಕ್ಕೆ ಮುಟ್ಟಿಸಿಕೊಂಡು ಮನೆಗೆ ತೆಗೆದುಕೊಂಡು ಹೋಗುವುದು ಸಾಮಾನ್ಯವಾಗಿದೆ.

ಇನ್ನು ಸಿದ್ದೇಶ್ವರ ಶ್ರೀಗಳು ಲಿಂಗೈಕ್ಯರಾದ ಬಳಿಕ ಇತ್ತ ಆಗಮಿಸಲಾಗದ ಕಾರಣ ಇಂದು(ಜ.6) ತುಮಕೂರಿನ ಶ್ರೀ ಸಿದ್ದಲಿಂಗ ಸ್ವಾಮೀಜಿ ಸೇರಿದಂತೆ ಇತರೆ ಸ್ವಾಮೀಜಿಗಳು ಆಶ್ರಮಕ್ಕೆ ಆಗಮಿಸಿದ್ದರು. ಶ್ರೀ ಸಿದ್ದೇಶ್ವರ ಸ್ವಾಮೀಗಳ ಅಂತ್ಯಕ್ರಿಯೆ ಮಾಡಿದ ಕಟ್ಟೆಗೆ ಪೂಜೆ ಸಲ್ಲಿಸಿ ಕರ್ಪೂರದಾರತಿ ಬೆಳಗಿ ನಮಸ್ಕರಿಸಿದರು. ಬಳಿಕ ಆಶ್ರಮದ ಕಟ್ಟಡದಲ್ಲಿ ಸಿದ್ದೇಶ್ವರ ಸ್ವಾಮೀಜಿ ತಂಗಿರುತ್ತಿದ್ದ ಕೊಠಡಿಯಲ್ಲಿ ಸಂಗ್ರಹಿಸಿಡಲಾಗಿರುವ ಶ್ರೀಗಳ ಚಿತಾಭಸ್ಮ ದರ್ಶನವನ್ನ ಮಾಡಿದರು.

ಇದನ್ನೂ ಓದಿ: ಸರಳತೆಯ ಸಂತ ಸಿದ್ದೇಶ್ವರ ಸ್ವಾಮೀಜಿ ಕಾವಿ ಏಕೆ ಧರಿಸಲಿಲ್ಲ? ಶ್ರೀಗಳಿಗೂ ಇತ್ತು ಗದಗನ ಶಿವಾನಂದ ಮಠದ ನಂಟು

ಬಳಿಕ ಮಾತನಾಡಿದ ಸಿದ್ದಗಂಗಾ ಮಠದ ಪೀಠಾಧಿಪತಿ ಶ್ರೀ ಸಿದ್ದಲಿಂಗ ಸ್ವಾಮೀಜಿ ಪೂಜ್ಯ ಸಿದ್ದೇಶ್ವರ ಸ್ವಾಮೀಜಿಗಳ ಅಂತ್ಯ ಸಂಸ್ಕಾರದ ಸಮಯದಲ್ಲಿ ಭಾಗಿಯಾಗಲು ಸಾಧ್ಯವಾಗಿರಲಿಲ್ಲ. ನಾನು ಭಾಗಿಯಾಗಿಲ್ಲ ಎಂಬ ನೋವು ತುಂಬಾ ಕಾಡುತ್ತಿದೆ. ಆದ್ದರಿಂದ ಇಂದು ಇಲ್ಲಿಗೆ ಬಂದಿದ್ದೇನೆ. ಶ್ರೀಗಳ ಅಗಲಿಗೆ ರಾಜ್ಯಕ್ಕೆ, ದೇಶಕ್ಕೆ ಅಷ್ಟೇಯಲ್ಲಾ ಇಡೀ ಪ್ರಪಂಚಕ್ಕೆ ಆಗಿರುವ ನಷ್ಟ. ಶ್ರೀಗಳು ಜ್ಞಾನ ಭಾಸ್ಕರರಾಗಿದ್ದರು. ಸ್ವಾಮೀಜಿಗಳನ್ನು ನಾವು ಅನುಕರಣೆ ಮಾಡಿ ಅವರ ಆದರ್ಶಗಳನ್ನು ಪಾಲನೆ ಮಾಡಬೇಕಿದೆ. ಜ್ಞಾನ ಯೋಗಾಶ್ರಮಕ್ಕೆ ಭೇಟಿಯಿಂದ ನಾನು ಧನ್ಯನಾಗಿದ್ದೇನೆ ಎಂದು ಹೇಳಿದರು.

ಜನವರಿ 2 ರಂದು ಆದ್ಮಾತ್ಮ ಲೋಕದ ಹರಿಕಾರ, ಪ್ರವಚನಕಾರ, ಶ್ವೇತ ವಸ್ತ್ರಧಾರಿ ಶ್ರೀ ಸಿದ್ದೇಶ್ವರ ಸ್ವಾಮೀಜಿ (82) ದೇವರ ಪಾದಗಳಲ್ಲಿ ಲೀನವಾಗಿದ್ದಾರೆ. ಸರಿ ಸುಮಾರು 25 ಲಕ್ಷ ಜನರ ದರ್ಶನದ ಬಳಿಕ ಸಕಲ ಸರ್ಕಾರಿ ಗೌರವಗಳೊಂದಿಗೆ ಸಿದ್ದೇಶ್ವರ ಸ್ವಾಮೀಜಿ ಅವರ ಇಚ್ಚೇಯಂತೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಆದರೂ ಭಕ್ತರು ಭೇಟಿ ನೀಡುವುದು ಬಿಟ್ಟಿಲ್ಲ. ಸ್ವಾಮೀಜಿಗಳಿಲ್ಲದೇ ಆಶ್ರಮ ರಸವಿಲ್ಲದ ಕಬ್ಬಿನಂತಾಗಿದೆ, ಭಾವವಿಲ್ಲದ ಭಕ್ತಿಯಂತಾಗಿದೆ. ಆಶ್ರಮದಲ್ಲಿರುವ ಖಾವಿಧಾರಿಗಳ ಮುಖದಲ್ಲಿ ತೇಜಸ್ಸು ಕಡಿಮೆಯಾಗಿ ಗುರುವಿನ ನೆನಪು ಕಾಡುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ವರದಿ: ಅಶೋಕ ಯಡಳ್ಳಿ ಟಿವಿ9 ವಿಜಯಪುರ

Published On - 7:51 pm, Sat, 7 January 23

ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು