ನಿನಗೆ ತಾಕತ್ತಿದ್ದರೆ ನನ್ನನ್ನು ಪಕ್ಷದಿಂದ ಹೊರಹಾಕು: ಸಚಿವ ಮುರುಗೇಶ್ ನಿರಾಣಿಗೆ ಸವಾಲ್​ ಹಾಕಿದ ಯತ್ನಾಳ್​

ಸಚಿವ ಮುರುಗೇಶ್ ನಿರಾಣಿ ಮತ್ತು ಶಾಸಕ ಯತ್ನಾಳ್ ನಡುವೆ ವಾಕ್ ಸಮರ ಸದ್ಯ ತಾರಕಕ್ಕೇರಿದ್ದು, ನಿರಾಣಿ ವಿರುದ್ಧ ಯತ್ನಾಳ್​ ಸವಾಲು ಹಾಕಿದ್ದಾರೆ.

ನಿನಗೆ ತಾಕತ್ತಿದ್ದರೆ ನನ್ನನ್ನು ಪಕ್ಷದಿಂದ ಹೊರಹಾಕು: ಸಚಿವ ಮುರುಗೇಶ್ ನಿರಾಣಿಗೆ ಸವಾಲ್​ ಹಾಕಿದ ಯತ್ನಾಳ್​
ಶಾಸಕ ಯತ್ನಾಳ್, ಸಚಿವ ಮುರುಗೇಶ್ ನಿರಾಣಿ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Jan 13, 2023 | 3:13 PM

ಹಾವೇರಿ: ಕರ್ನಾಟಕದಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಇದಕ್ಕಾಗಿ ಪ್ರಬಲ ಪಕ್ಷಗಳು ಸಿದ್ಧತೆ ನಡೆಸಿವೆ. ಆಡಳಿತರೂಢ ಬಿಜೆಪಿ, ಕಾಂಗ್ರೆಸ್​, ಜೆಡಿಎಸ್​ ಮಾತ್ರವಲ್ಲದೇ ಈ ಬಾರಿ ಆಮ್​ ಆದ್ಮಿ ಕೂಡ ಅಖಡಕ್ಕೆ ಸಿದ್ಧವಾಗಿದೆ. ಇವೆಲ್ಲದರ ನಡುವೆ ಮೀಸಲಾತಿ ಹೋರಾಟ ಕೂಡ ನಡೆಯುತ್ತಿದೆ. ಇದೇ ವಿಚಾರಕ್ಕೆ ಸಚಿವ ಮುರುಗೇಶ್ ನಿರಾಣಿ ( Murugesh Nirani) ಮತ್ತು ಶಾಸಕ ಯತ್ನಾಳ್ (Yatnal) ನಡುವೆ ವಾಕ್ ಸಮರಕ್ಕೂ ಕಾರಣವಾಗಿದೆ. ಸದ್ಯ ಈ ವಾಕ್​ ಸಮರ ತಾರಕಕ್ಕೇರಿದ್ದು, ಶಾಸಕ ಯತ್ನಾಳ್​ ಸಚಿವ ಮುರುಗೇಶ್ ನಿರಾಣಿ ವಿರುದ್ಧ ಹರಿಹಾಯ್ದಿದ್ದಾರೆ. ನಿನಗೆ ತಾಕತ್ತಿದ್ದರೆ ನನ್ನನ್ನು ಪಕ್ಷದಿಂದ ಹೊರಹಾಕು ಎಂದು ಸವಾಲು ಹಾಕಿದ್ದಾರೆ. ನನ್ನನ್ನು ಚುನಾವಣೆಯಲ್ಲಿ ಸೋಲಿಸ್ತೇನೆ ಅಂತಾ ಪ್ರಮಾಣ ಮಾಡ್ತಾನೆ. ಅದಕ್ಕೆಲ್ಲ ನಾನು ಹೇದರುವ ಮಗ ಅಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಅವರೇ ಹೆಚ್ಚು ಕಡಿಮೆಯಾದ್ರೆ ಟಿಕೆಟ್ ಕೊಡದಿರಬಹುದು ಎಂದು ಜಿಲ್ಲೆಯ ಶಿಗ್ಗಾಂವಿಯಲ್ಲಿ ವಾಗ್ದಾಳಿ ಮಾಡಿದರು.

ಸಿಎಂ ಬೊಮ್ಮಾಯಿ ವಿರುದ್ಧ  ಶಾಸಕ ಯತ್ನಾಳ್​ ಕಿಡಿ

ನನಗೆ ಟಿಕೆಟ್​​ ನೀಡುವುದು ಸಿಎಂ ಕೈಯಲ್ಲಿ ಇಲ್ಲ. ನನಗೆ ಹೈಕಮಾಂಡ್​ ಟಿಕೆಟ್ ನೀಡುವ ವಿಶ್ವಾಸ ಇದೆ. ನಾನು ಮತ್ತೆ ಶಾಸಕನಾಗಿ ವಿಧಾನಸೌಧಕ್ಕೆ ಹೊಗುತ್ತೇನೆ. ನಿಮ್ಮ ಬಗ್ಗೆ ನೋಡ್ರಿ ಬೊಮ್ಮಾಯಿಯವರೆ, ನೀವು ಎಂಎಲ್​ಎ ಆಗ್ತಿರಾ ಎಂದು ಪ್ರಶ್ನಿಸಿದರು. ನಮ್ಮ ಸಮಾಜಕ್ಕೆ ಮಾಡಿದ ಅನ್ಯಾಯದ ಬಗ್ಗೆ ನಾನು ಪ್ರಧಾನ ಮಂತ್ರಿಗಳಿಗೆ ಮನವಿ ಮಾಡುತ್ತೇನೆ. ನಾವು ಕೇಂದ್ರದವರಿಗೆ ಎಲ್ಲವನ್ನೂ ತಿಳಿಸುತ್ತೇವೆ. ಈ ಮುಖ್ಯಮಂತ್ರಿ ಮೇಲೆ ನಮಗೆ ನಂಬಿಕೆ ಇಲ್ಲ‌ ಎಂದು ಸಿಎಂ ಬೊಮ್ಮಾಯಿ ವಿರುದ್ಧ  ಶಾಸಕ ಯತ್ನಾಳ್​ ಕಿಡಿಕಾರಿದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಆಗುವುದು ದೊಡ್ಡದಲ್ಲ. ಜೆ.ಎಚ್ ಪಟೇಲ್, ಕೆಂಗಾಲ ಹನುನಂತಯ್ಯನವರ ರೀತಿ ಸಮಾಜಮುಖಿ ಮುಖ್ಯಮಂತ್ರಿ ಆಗಬೇಕು. ಬೊಮ್ಮಾಯಿಯವರೆ ನೀವೇ ಕರೆ ಮಾಡಿ ಹೇಳಿದ್ರಿ. 2A ಮೀಸಲಾತಿ ಕೊಡುವುದಕ್ಕೆ ಕೇಂದ್ರದ ಭಿನ್ನಾಭಿಪ್ರಾಯ ಇಲ್ಲ ಅಂತ ಹೇಳಿದ್ರಿ. ಹಾಗಾದ್ರೆ ನಮಗೆ ಇದುವರೆಗೂ ಮಿಸಲಾತಿ ಯಾಕೆ ಕೊಡುತ್ತಿಲ್ಲ ಎಂದು ಪ್ರಶ್ನಿಸಿದರು.

ಅವರ ಅಪ್ಪನಿಗೆ ಹುಟ್ಟಿದ್ರೆ ಸಿಡಿ ರಿಲೀಸ್ ಮಾಡಲಿ

ನಾನು ಕೂಡ ಪಕ್ಷ ಕಟ್ಟಲು ಹೋರಾಟ ಮಾಡಿದ್ದೇನೆ. ಸಮ್ಮಿಶ್ರ ಸರ್ಕಾರ ತೆಗೆದು ಬಿಜೆಪಿ ಸರ್ಕಾರ ಸ್ಥಾಪನೆ ಮಾಡುವಾಗ ನನ್ನ ಕರೆದು ಸಚಿವ ಸ್ಥಾನ ತ್ಯಾಗ ಮಾಡಬೇಕೆಂದು ಬಿಎಸ್​ವೈ ಮನವಿ ಮಾಡಿದ್ರು. ನಾನು ಅದಕ್ಕೆ ಒಪ್ಪಿಕೊಂಡು ಸಚಿವ ಸ್ಥಾನ ತ್ಯಾಗ ಮಾಡಿದೆ. ಆದ್ರೆ ಮೀಸಲಾತಿ ಕೋಡಬೇಕೆಂದು ಒತ್ತಾಯ ಮಾಡಿದೆ. ಎಲ್ಲರ ಮೇಲೂ ಸಿಡಿ ಇದೆ ಅಂತಾ ಹೇಳುತ್ತಾರೆ. ಅವರ ಅಪ್ಪನಿಗೆ ಹುಟ್ಟಿದ್ರೆ ಸಿಡಿ ರಿಲೀಸ್ ಮಾಡಲಿ. ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಒಬ್ಬೊಬ್ರು ಇದ್ದಾರೆ. ಸಿಡಿ ಮಾಡುವ ವ್ಯಕ್ತಿಯನ್ನ ಜೊತೆಗೆ ಇಟ್ಕೊಂಡ ಅಡ್ಯಾಡ ಬ್ಯಾಡ್ರಿ. ಇಂತ ವ್ಯಕ್ತಿಯನ್ನು ವಿಜಯಪುರಕ್ಕೆ ಕಳಿಸಿ ನನ್ನ ವಿರುದ್ದ ಪತ್ರಿಕಾಗೊಷ್ಠಿ ಮಾಡಿಸುತ್ತಾರೆ.  ಸಿಡಿ ವ್ಯಕ್ತಿಯಿಂದ ಹೆದರುವ ಮಗ ನಾನು ಅಲ್ಲ ಎಂದು ಪರೋಕ್ಷವಾಗಿ ನಿರಾಣಿ ವಿರುದ್ಧ ಯತ್ನಾಳ್​ ಹರಿಹಾಯ್ದರು.

ಸಿದ್ದೇಶ್ವರ ಸ್ವಾಮಿಜಿ ಕೊನೆಯ ಮಾತು ನೆನಪಿಸಿಕೊಂಡ ಯತ್ನಾಳ್

ಸಿದ್ದೇಶ್ವರ ಸ್ವಾಮಿಜಿ ಕೊನೆಯ ದಿನ ಒಂದು ಮಾತನ್ನ ಹೇಳಿದ್ರು. ನಾನು ಇದುವರೆಗೂ ನಿಮ್ಮ ಹಾಗೆ ಧೈರ್ಯವಾಗಿ ಮಾತನಾಡುವ ರಾಜಕಾರಣಿಯನ್ನು ನೋಡಿಲ್ಲ. ಅವರ ಆ ಮಾತು ಕೇಳಿದಕ್ಕೆ ಅಂದು ನನಗೆ ಕಣ್ಣಿರು ಬಂತು. ಕರ್ನಾಟಕದ ಜನ ಸ್ಟೇ ಕೊಟ್ರೆ ಐದು ವರ್ಷ ಅನುಭವಿಸಬೇಕಾಗುತ್ತೆ. ಕೇಲವರಿಗೆ ನಮ್ಮ ರಾಜ್ಯದ ಜನ ಕೊಟ್ಟಿರುವ ಸ್ಟೇಯಿಂದ ಪಂಚಾಯತಿ ಸದಸ್ಯ ಆಗದ ಹಾಗೆ ಪರಿಸ್ಥಿತಿ ಮಾಡಿದ್ದಾರೆ ಎಂದು ಬೊಮ್ಮಾಯಿಗೆ ಯತ್ನಾಳ್​ ಎಚ್ಚರಿಕೆ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:08 pm, Fri, 13 January 23