Karnataka Election 2023 News Highlights: ಎದುರಿಗೇ ನಿಂತಿದ್ದೇವೆ, ಗುಂಡಿಟ್ಟು ಹೊಡೀರಿ ಎಂದ ಸುರ್ಜೇವಾಲ

Ganapathi Sharma
| Updated By: Rakesh Nayak Manchi

Updated on:Feb 18, 2023 | 7:43 PM

Karnataka Assembly Elections 2023 Live News Updates; ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು ರಾಜ್ಯದಾದ್ಯಂತ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷಗಳ ನಾಯಕರು ವಿವಿಧ ಜಿಲ್ಲೆಗಳ ಪ್ರವಾಸ ಕೈಗೊಳ್ಳುತ್ತಿದ್ದು ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ರಾಜಕೀಯ ವಾಕ್ಸಮರಗಳೂ ತಾರಕಕ್ಕೇರುತ್ತಿವೆ. ರಾಜ್ಯ ರಾಜಕೀಯ ವಿದ್ಯಮಾನಗಳ ಕ್ಷಣ ಕ್ಷಣದ ಅಪ್​ಡೇಟ್ಸ್ ಇಲ್ಲಿ ಲಭ್ಯ.

Karnataka Election 2023 News Highlights: ಎದುರಿಗೇ ನಿಂತಿದ್ದೇವೆ, ಗುಂಡಿಟ್ಟು ಹೊಡೀರಿ ಎಂದ ಸುರ್ಜೇವಾಲ
ಸಾಂದರ್ಭಿಕ ಚಿತ್ರ

ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು ರಾಜ್ಯದಾದ್ಯಂತ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷಗಳ ನಾಯಕರು ವಿವಿಧ ಜಿಲ್ಲೆಗಳ ಪ್ರವಾಸ ಕೈಗೊಳ್ಳುತ್ತಿದ್ದು ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ರಾಜಕೀಯ ವಾಕ್ಸಮರಗಳೂ ತಾರಕಕ್ಕೇರುತ್ತಿವೆ. ರಾಜ್ಯ ರಾಜಕೀಯ ವಿದ್ಯಮಾನಗಳ ಕ್ಷಣ ಕ್ಷಣದ ಅಪ್​ಡೇಟ್ಸ್ ಇಲ್ಲಿ ಲಭ್ಯವಿದೆ. ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಕೊಪ್ಪಳ ಜಿಲ್ಲೆಗೆ ಆಗಮಿಸಲಿದ್ದು, ಸಂಗೊಳ್ಳಿ ರಾಯಣ್ಣ ಮೂರ್ತಿ ಅನಾವರಣಗೊಳಿಸಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ ಎರಡು ದಿನ ಹಿಂದಷ್ಟೇ ಜಿಲ್ಲೆಗೆ ಭೇಟಿ ನೀಡಿದ್ದರು. ಈ ಮಧ್ಯೆ ಜೆಡಿಎಸ್​​ನಲ್ಲಿ ಟಿಕೆಟ್ ಫೈಟ್ ಮುಂದುವರಿದಿದೆ. ಎಲ್ಲ ಬೆಳವಣಿಗೆಗಳ ಲೈವ್​ ಅಪ್​ಡೇಟ್​ ಇಲ್ಲಿದೆ.

LIVE NEWS & UPDATES

The liveblog has ended.
  • 18 Feb 2023 05:33 PM (IST)

    Bangalore, Karnataka News Live: ಉದ್ಯೋಗಕ್ಕಾಗಿ ಜಮೀನು, ಅಂಗಡಿ ಎಲ್ಲವನ್ನೂ ಮಾರುವಂತಾಗಿದೆ: ಸುರ್ಜೇವಾಲ

    ಎದುರಿಗೇ ನಿಂತಿದ್ದೇವೆ ಗುಂಡಿಟ್ಟು ಹೊಡೀರಿ ಎಂದ ಸುರ್ಜೇವಾಲ

    ಹುಬ್ಬಳ್ಳಿ: ಎಲ್ಲ‌ ನೌಕರಿಗಳೂ ಬಿಕರಿಯಾಗುತ್ತಿವೆ. ಉದ್ಯೋಗಕ್ಕಾಗಿ ಜಮೀನು, ಅಂಗಡಿ ಎಲ್ಲವನ್ನೂ ಮಾರುವಂತಾಗಿದೆ ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ. ಸಿಎಂ ಪೋಸ್ಟ್ ಖರೀದಿಸಲಾಗಿದೆ ಎಂದು ಬಿಜೆಪಿ ಮುಖಂಡರೇ ಹೇಳಿದ್ದಾರೆ. ಅಶ್ವತ್ಥನಾರಾಯಣ ಸಿದ್ಧರಾಮಯ್ಯಗೆ ಹೊಡೆದು ಹಾಕಿ ಅಂತಾರೆ. ಇವರು ಹೀಗೆ ಮಾತನಾಡೋದು ಇದೇ ಮೊದಲಲ್ಲ. ಹೊಡಿ, ಬಡಿ, ಕಡಿ ಅನ್ನೋದು ಗೋಡ್ಸೆ ಸಂಸ್ಕೃತಿ. ಇಂತಹ ಹಿಂಸೆಯ ಸಂಸ್ಕೃತಿಗೆ ನಮ್ಮ ಹಲವಾರು ಮುಖಂಡರು ಬಲಿಯಾಗಿದ್ದಾರೆ. ಇಂತಹ ಹಿಂಸಾ ರಾಜಕಾರಣಕ್ಕೆ ನಾವು ಎದೆಗುಂದಿಲ್ಲ. ಕೇವಲ ಸಿದ್ಧರಾಮಯ್ಯ, ಡಿಕೆಶಿವಕುಮಾರ್ ಕೊಂದು ಹಾಕಿದರೆ ಎಲ್ಲವೂ ಮುಗಿಯುತ್ತೆ ಅಂದುಕೊಂಡಿದ್ದಾರೆ. ಎಲ್ಲರನ್ನೂ ಕೊಂದು ಹಾಕಿ. ಆದರೆ ನಮ್ಮ ಧ್ವನಿಯನ್ನು ಹತ್ತಿಕ್ಕಲು ಆಗಲ್ಲ. ದೈಹಿಕವಾಗಿ ನಮ್ಮನ್ನು ಕೊಲ್ಲಬಹುದು. ಆದರೆ ನಮ್ಮ ಸಿದ್ಧಾಂತ ಅಂತ್ಯಗೊಳಿಸಲು ಆಗಲ್ಲ. ಎದುರಿಗೇ ನಿಂತಿದ್ದೇವೆ ಗುಂಡಿಟ್ಟು ಹೊಡೀರಿ ಎಂದು ಕಾಂಗ್ರೆಸ್ ಸಮಾವೇಶದಲ್ಲಿ ಬಿಜೆಪಿಗೆ ಸವಾಲು ಹಾಕಿದರು.

  • 18 Feb 2023 05:30 PM (IST)

    Bangalore, Karnataka News Live: ಅಶ್ವತ್ಥ ನಾರಾಯಾಣ ಹೇಳಿರುವುದು ನಿಮಗೆ ಒಪ್ಪಿಗೆ ಇದ್ದರೆ ನನಗೂ ಒಪ್ಪಿಗೆ: ಸಿದ್ದರಾಮಯ್ಯ

    ಕೊಪ್ಪಳ: ನನ್ನನ್ನು ಮುಗಿಸಿ ಬಿಡಿ ಅಂತ ಸಚಿವ ಅಶ್ವತ್ಥ್​ ನಾರಾಯಣ ಹೇಳಿದ್ದಾರೆ. ನಿಮಗೆ ಒಪ್ಪಿಗೆ ಇದ್ದರೆ ನನಗೂ ಒಪ್ಪಿಗೆ ಅಂತಾ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕುರುಬ ಸಮಾವೇಶದಲ್ಲಿ ಹೇಳಿದ್ದಾರೆ. ಕಾನೂನು ಪಾಲನೆ ಮಾಡಬೇಕಾದ ಸಚಿವರೇ ಹೀಗೆ ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ನಾನು ಕುರುಬ ಸಮುದಾಯದಲ್ಲಿ ಜನಿಸಿದ್ದು ಆಕಸ್ಮಿಕ. ಸ್ವಾರ್ಥಕ್ಕಾಗಿ ದೇವರ ಪೂಜೆ ಮಾಡಿದರೆ ದೇವರು ಒಲಿಯುವುದಿಲ್ಲ. ದೇವರ ಬಳಿ ನನಗೆ ಒಳ್ಳೆಯದಾಗಲಿ ಎಂದು ಯಾರೂ ಕೇಳಬಾರದು. ರಾಜಕಾರಣಿಗಳು ನಮ್ಮ ಸಮುದಾಯದ ನಡುವೆ ಒಡಕು ತಂದಿಡುತ್ತಾರೆ. ಅವನ್ಯಾರೋ ಟಿಪ್ಪು ರೀತಿ ಮುಗಿಸಿ ಅಂತಾನೆ ಇದು ಸಂಸ್ಕೃತಿ ಏನ್ರೀ‌. ಸಚಿವ ಡಾ.ಅಶ್ವತ್ಥ್​ ನಾರಾಯಣ ವಿರುದ್ಧ ಸಿದ್ದರಾಮಯ್ಯ ಮತ್ತೆ ಕಿಡಿಕಾರಿದರು. ಒಬ್ಬ ಮನುಷ್ಯ ಮನುಷ್ಯನನ್ನೇ ದ್ವೇಷ ಮಾಡುವವರು ರಾಕ್ಷಸರು‌ ಎಂದರು.

  • 18 Feb 2023 02:09 PM (IST)

    Bangalore, Karnataka News Live: ಎಚ್​ಡಿಕೆಯದ್ದು ಬಾಲಿಶ ಹೇಳಿಕೆ ಎಂದ ಜೋಶಿ

    ಪ್ರಲ್ಹಾದ್ ಜೋಶಿಯನ್ನು ಬಿಜೆಪಿಯವರು ಮುಖ್ಯಮಂತ್ರಿ ಮಾಡಲಿದ್ದಾರೆ ಎಂಬ ಜೆಡಿಎಸ್ ನಾಯಕ ಎಚ್​ಡಿ ಕುಮಾರಸ್ವಾಮಿ ಬಾಲಿಶ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಶತಮಾನಕ್ಕೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರಂತಹ ನಾಯಕರು ಸಿಗುತ್ತಾರೆ. ಅವರ ಕೈಕೆಳಗೆ ಕೆಲಸ ಮಾಡುವುದು ನನ್ನ ಸೌಭಾಗ್ಯ ಎಂದು ಜೋಶಿ ಹೇಳಿದ್ದಾರೆ.

  • 18 Feb 2023 02:05 PM (IST)

    Bangalore, Karnataka News Live: ಕಾಂಗ್ರೆಸ್​​ ಮೇಲೆ ಅವರಿಗೇ ಗ್ಯಾರಂಟಿ ಇಲ್ಲ; ಸುಧಾಕರ್

    ಕಾಂಗ್ರೆಸ್​​​ನಿಂದ ಮನೆ ಮನೆಗೆ ಗ್ಯಾರಂಟಿ ಕಾರ್ಡ್ ವಿತರಣೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಸಚಿವ ಕೆ. ಸುಧಾಕರ್, ಕಾಂಗ್ರೆಸ್​​ ಮೇಲೆ ಅವರಿಗೇ ಗ್ಯಾರಂಟಿ ಇಲ್ಲ. ಅದಕ್ಕೆ ಅವರು ಗ್ಯಾರಂಟಿ ಕಾರ್ಡ್ ಹಂಚುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

  • 18 Feb 2023 01:17 PM (IST)

    Bangalore, Karnataka News Live: ಜನ ಹೂ ಇಟ್ಟಿದ್ದು ನೋಡಿದರೆ ಕಾಂಗ್ರೆಸ್​ಗೆ ಎದ್ದು ಬರಲಾಗದು; ಜೋಶಿ

    ಕಾಂಗ್ರೆಸ್ ನಾಯಕರು ದೌರ್ಭಾಗ್ಯದಿಂದ ವೈಯಕ್ತಿಕ ಟೀಕೆ ಮಾಡ್ತಿದ್ದಾರೆ. ಚುನಾವಣೆ ವೇಳೆ ಕಾಲೆಳೆಯೋದು ಹಕ್ಕು ಎಂದು ಭಾವಿಸಿದ್ದಾರೆ. ಆದರೆ, ಕಾಂಗ್ರೆಸ್ ಪಾರ್ಟಿ ಮೇಲೆ ಜನ ಹೂ ಇಟ್ಟಿದ್ದಾರೆ. ಜನ ಹೂ ಇಟ್ಟಿದ್ದು ನೋಡಿದರೆ ಕಾಂಗ್ರೆಸ್​​ಗೆ ಎದ್ದು ಬರಲು ಆಗದ ಪರಿಸ್ಥಿತಿ ಆಗಲಿದೆ. ಸ್ವಾತಂತ್ರ್ಯ ತಂದುಕೊಟ್ಟಿದ್ದು ನಾವೇ ಅಂತಾ ಜನರ ಕಿವಿ ಮೇಲೆ ಹೂ ಇಟ್ಟಿದ್ದರು ಕಾಂಗ್ರೆಸ್​​ನವರು ಎಂದು ಕೇಂದ್ರ ಸಚಿವ​​ ಪ್ರಲ್ಹಾದ್ ಜೋಶಿ ಟೀಕಿಸಿದ್ದಾರೆ.

  • 18 Feb 2023 12:06 PM (IST)

    Bangalore, Karnataka News Live: ಫೆ. 23ಕ್ಕೆ ಸಂಡೂರಿಗೆ ಅಮಿತ್ ಶಾ; ಶ್ರೀರಾಮುಲು

    ಫೆ. 23ಕ್ಕೆ ಸಂಡೂರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಲಿದ್ದಾರೆ. ಸಂಡೂರಿನಲ್ಲಿ ಸಾರ್ವಜನಿಕ ಸಮಾವೇಶ ಹಾಗೂ ತೋರಣಗಲ್​ನಲ್ಲಿ ನಾಲ್ಕು ಜಿಲ್ಲೆ ಬಿಜೆಪಿ ಮುಖಂಡರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಮಾವೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ ಎಂದು ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

  • 18 Feb 2023 11:30 AM (IST)

    Bangalore, Karnataka News Live: ಕಾಂಗ್ರೆಸ್​ ಪಕ್ಷ ಡ್ರಾಮಾ ಕಂಪನಿ; ಶ್ರೀರಾಮುಲು

    ಬಜೆಟ್​ ವೇಳೆ ಕಾಂಗ್ರೆಸ್​ ನಾಯಕರು ಕಿವಿಯಲ್ಲಿ ಹೂವು ಇಟ್ಟುಕೊಂಡು ಬಂದು ಶಿಷ್ಟಾಚಾರ ಪಾಲಿಸದೆ ಅಗೌರವ ತೋರಿದ್ದಾರೆ. ಪ್ರಚಾರಕ್ಕಾಗಿ ಕಾಂಗ್ರೆಸ್​​ನವರು ಡ್ರಾಮಾ ಕಂಪನಿ ಆರಂಭಿಸಿದ್ದಾರೆ. ಕಾಂಗ್ರೆಸ್​ ಪಕ್ಷ ಡ್ರಾಮಾ ಕಂಪನಿ ಇದ್ದಂತೆ ಎಂದು ಸಚಿವ ಶ್ರೀರಾಮುಲು ಟೀಕಿಸಿದ್ದಾರೆ.

  • 18 Feb 2023 10:06 AM (IST)

    Bangalore, Karnataka News Live: ಬಿಜೆಪಿ ಪೋಸ್ಟರ್ ಮೇಲೆ ಹೂ ಇಟ್ಟ ಕಾಂಗ್ರೆಸ್

    ಬಿಜೆಪಿ ಪೋಸ್ಟರ್ ಮೇಲೆ ಹೂ ಇರುವ ಪೋಸ್ಟರ್​​ ಇಡುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು. ‘ಸಾಕಪ್ಪ ಸಾಕು ಕಿವಿಮೇಲೆ ಹೂವ’ ಎಂದು ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಕಾಂಗ್ರೆಸ್​ ಕಾರ್ಯಕರ್ತರು ಫೋಸ್ಟರ್​ಗಳನ್ನು ಅಂಟಿಸಿದ್ದಾರೆ. ಬಿಜೆಪಿಯ ಪೋಸ್ಟರ್​​ಗಳ ಮೇಲೆ ಕಾಂಗ್ರೆಸ್​ ಪೋಸ್ಟರ್ ಅಂಟಿಸಲಾಗುತ್ತಿದೆ.

  • 18 Feb 2023 09:05 AM (IST)

    Bangalore, Karnataka News Live: ರೇವಣ್ಣರನ್ನು ರಾವಣನಿಗೆ ಹೋಲಿಕೆ ಮಾಡಿದ ಎ.ಟಿ.ರಾಮಸ್ವಾಮಿ

    ಮಾಜಿಸಚಿವ ಎಚ್.ಡಿ.ರೇವಣ್ಣ ಅವರನ್ನು ರಾವಣನಿಗೆ ಹೋಲಿಕೆ ಮಾಡಿ ಶಾಸಕ ಎ.ಟಿ.ರಾಮಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾವಣನಿಗೆ ಸಕಲ ಐಶ್ವರ್ಯ ಇತ್ತು, ಈಶ್ವರನಿಂದ ಪಡೆದಂತಹ ಶಕ್ತಿಶಾಲಿ ಅಸ್ತ್ರಗಳಿದ್ದರೂ ಅವನು ನಾಶವಾದ. ಲಂಕೆನೂ ಕೂಡ ಬೂದಿ ಆಗಲಿಲ್ವಾ, ಯಾರೂ ಶಾಶ್ವತ ಅಲ್ಲ. ದೇವೇಗೌಡರನ್ನು ಇವರೆಲ್ಲ ಉತ್ಸವಮೂರ್ತಿ ಮಾಡಿಕೊಂಡಿದ್ದಾರೆ. ಅಂತಹ ಮುತ್ಸದ್ದಿ ರಾಜಕಾರಣಿಯನ್ನು ಮೂಲೆಗುಂಪು ಮಾಡಿದ್ದಾರೆ, ಅವರ ಮಾತಿಗೆ ಕಿಮ್ಮತ್ತು ಕೊಡುತ್ತಿಲ್ಲ ಎಂದು ಶಾಸಕ ಎ.ಟಿ.ರಾಮಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

  • 18 Feb 2023 08:17 AM (IST)

    Bangalore, Karnataka News Live: ದೇವೇಗೌಡರ ನಿವಾಸದಲ್ಲಿ ಜೆಡಿಎಸ್ ಸಭೆ

    ಜೆಡಿಎಸ್ ವರಿಷ್ಠ ಎಚ್​ಡಿ ದೇವೇಗೌಡರ ನಿವಾಸದಲ್ಲಿ ಇಂದು ಪಕ್ಷದ ಸಭೆ ನಡೆಯಲಿದೆ. ಗೌಡರ ಕುಟುಂಬದ ಸದಸ್ಯರೆಲ್ಲ ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ನಿರೀಕ್ಷಿಸಲಾಗಿದ್ದು, ಎಚ್​​ಡಿ ರೇವಣ್ಣ ಮೂರು ಬೇಡಿಕೆಗಳನ್ನಿಟ್ಟಿದ್ದಾರೆ ಎನ್ನಲಾಗಿದೆ. ಹಾಸನ ಕ್ಷೇತ್ರದಿಂದ ಭವಾನಿ ರೇವಣ್ಣ ಸ್ಪರ್ಧೆ ವಿಚಾರವಾಗಿ ಗೊಂದಲಕ್ಕೆ ತೆರೆ ಎಳೆಯುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

  • 18 Feb 2023 08:14 AM (IST)

    Bangalore, Karnataka News Live: ಇಂದು ಕೊಪ್ಪಳಕ್ಕೆ ಸಿದ್ದರಾಮಯ್ಯ

    ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಕೊಪ್ಪಳ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಸಂಗೊಳ್ಳಿ ರಾಯಣ್ಣ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಸಿದ್ದರಾಮಯ್ಯ, ನಂತರ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ.

  • Published On - Feb 18,2023 8:11 AM

    Follow us
    ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
    ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
    ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
    ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
    ‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
    ‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
    ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
    ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
    ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
    ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
    ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
    ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
    'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
    'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
    ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
    ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
    ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
    ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
    ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
    ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್