ಡಿಕೆ ಶಿವಕುಮಾರ್ ನಿವಾಸದಲ್ಲಿ ಔತಣಕೂಟ; ಕುತೂಹಲ ಸೃಷ್ಟಿಸಿದ ಜಮ್ಮು ಕಾಶ್ಮೀರ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಭೇಟಿ

ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಿವಾಸದಲ್ಲಿ ಸಚಿವರ ಔತಣಕೂಟ ಆಯೋಜಿಸಲಾಗಿದೆ. ಈ ಔತಣಕೂಟದಲ್ಲಿ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದಲ್ಲಾ ಅವರು ಭಾಗಿಯಾಗಿರುವುದು ಕುತೂಹಲ ಮೂಡಿಸಿದೆ. ಇವರಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಜಿ ಪರಮೇಶ್ವರ್, ಮಧು ಬಂಗಾರಪ್ಪ, ಜಮೀರ್ ಅಹ್ಮದ್ ಖಾನ್ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದಾರೆ.

ಡಿಕೆ ಶಿವಕುಮಾರ್ ನಿವಾಸದಲ್ಲಿ ಔತಣಕೂಟ; ಕುತೂಹಲ ಸೃಷ್ಟಿಸಿದ ಜಮ್ಮು ಕಾಶ್ಮೀರ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಭೇಟಿ
ಡಿಕೆ ಶಿವಕುಮಾರ್ ನಿವಾಸದಲ್ಲಿ ಔತಣಕೂಟ; ಜಮ್ಮು ಕಾಶ್ಮೀರ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಭಾಗಿ
Edited By:

Updated on: Feb 23, 2024 | 9:45 PM

ಬೆಂಗಳೂರು, ಫೆ.23: ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು ಸಚಿವರ ಔತಣಕೂಟ ಆಯೋಜಿಸಿದ್ದಾರೆ. ಈ ಔತಣಕೂಟದಲ್ಲಿ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದಲ್ಲಾ (Farooq Abdullah) ಅವರು ಭಾಗಿಯಾಗಿರುವುದು ಕುತೂಹಲ ಮೂಡಿಸಿದೆ. ಇವರಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರೂ ಭಾಗಿಯಾಗಿದ್ದಾರೆ. ಅಲ್ಲದೆ, ಸಿದ್ದರಾಮಯ್ಯ ಮತ್ತು ಫಾರೂಕ್ ಅಬ್ದುಲ್ಲಾ ಅವರು ಭೇಟಿಯಾಗಿ ಪರಸ್ಪರ ಕುಶಲೋಪರಿ ವಿಚಾರಿಸಿದರು.

ಡಿಕೆಶಿ ಔತಣಕೂಟದಲ್ಲಿ ಭಾಗಿಯಾದ ನಾಯಕರು

ಸಿಎಂ ಸಿದ್ದರಾಮಯ್ಯ, ಸಚಿವರಾದ ಎನ್.ಚಲುವರಾಯಸ್ವಾಮಿ, ಡಾ .ಶರಣ ಪ್ರಕಾಶ್, ಎಂಸಿ ಸುಧಾಕರ್, ಜಮೀರ್ ಅಹ್ಮದ್ ಖಾನ್, ಪ್ರಿಯಾಂಕ್ ಖರ್ಗೆ, ಕೆ ಜೆ ಜಾರ್ಜ್, ಕೆ.ವೆಂಕಟೇಶ್, ಜಿ.ಜಿ ಪರಮೇಶ್ವರ್, ಎಂ ಬಿ ಪಾಟೀಲ್, ಮಧು ಬಂಗಾರಪ್ಪ, ಲಕ್ಷ್ಮೀ ಹೆಬ್ಬಾಳ್ಕರ್, ಈಶ್ವರ್ ಖಂಡ್ರೆ, ಆರ್ ಬಿ ತಿಮ್ಮಾಪುರ, ಬೋಸರಾಜ್, ಹೆಚ್ ಕೆ ಪಾಟೀಲ್, ಶಿವಾನಂದ್ ಪಾಟೀಲ್, ರಾಮಲಿಂಗ ರೆಡ್ಡಿ,
ಶಿವರಾಜ್ ತಂಗಡಗಿ, ಬಿ.ನಾಗೇಂದ್ರ ಅವರು ಔತಣಕೂಟದಲ್ಲಿ ಭಾಗಿಯಾಗಿದ್ದಾರೆ.

ಮಾಧ್ಯಮಗಳನ್ನ ಕಂಡ ಡಿಕೆ ಶಿವಕುಮಾರ್ ಕೆಂಡಾಮಂಡಲ

ತಮ್ಮ ನಿವಾಸಕ್ಕೆ ಆಗಮಿಸುತ್ತಿರುವ ನಾಯಕರನ್ನು ಡಿಕೆ ಶಿವಕುಮಾರ್ ಅವರು ಆತ್ಮೀಯವಾಗಿ ಸ್ವಾಗತಿಸಿದರು. ಇದೇ ವೇಳೆ ತಮ್ಮ ನಿವಾಸದ ಬಳಿ ಬಂದ ಮಾಧ್ಯಮ ಪ್ರತಿನಿಧಿಗಳನ್ನು ನೋಡಿದ ಡಿಸಿಎಂ ಡಿ.ಕೆ ಶಿವಕುಮಾರ್ ಕೆಂಡಾಮಂಡಲರಾದರು. ನಮ್ಮ ಮನೆಯ ಖಾಸಗಿ ಕಾರ್ಯಕ್ರಮ ಇದು. ದೂರ ಹೋಗಿ ಎಂದು ಮನೆಯಿಂದ ಹೊರ ಬಂದು ಅಬ್ಬರಿಸಿದರು. ಅಲ್ಲದೆ, ಇಲ್ಲಿರುವುದು ಬೇಡವೆಂದು ಹೇಳಿ ಎಲ್ಲರನ್ನು ದೂರ ಕಳುಹಿಸುವಂತೆ ಗನ್ ಮ್ಯಾನ್​ಗಳಿಗೆ ಸೂಚಿಸಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ