ರಾಮ ಮಂದಿರದ ಆಹ್ವಾನ ತಿರಸ್ಕರಿಸಿದ ಕಮ್ಯೂನಿಸ್ಟರಿಗೆ ರಾಮ ಬೇಕಿಲ್ಲ, ಕೊಲೆ ಪಾತಕಿ ಬೇಕು: ಯತ್ನಾಳ್ ವಾಗ್ದಾಳಿ
ಕಮ್ಯೂನಿಸ್ಟರಿಗೆ ರಾಮ ಬೇಕಿಲ್ಲ, ಕೊಲೆ ಪಾತಕಿ ಬೇಕು’ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿರುವ ಅವರು, ಕಮ್ಯೂನಿಸ್ಟ್ ಪಕ್ಷದ ವಿರುದ್ಧ ಕಿಡಿಕಾರಿದ್ದಾರೆ.
ಬೆಂಗಳೂರು, ಜನವರಿ 3: ‘ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿನ ರಾಮ ಮಂದಿರ ಉದ್ಘಾಟನೆಗೆ ನೀಡಿರುವ ಆಹ್ವಾನವನ್ನು ಕಮ್ಯೂನಿಸ್ಟ್ ಪಕ್ಷ (CPIM) ತಿರಸ್ಕರಿಸಿದೆ. ಆದರೆ, ಮಾವೋ ತ್ಸೆ-ತುಂಗ್ ಅಥವಾ ಮಾವೋ ಝೆಡಾಂಗ್ ಜಯಂತಿಯನ್ನು ಸ್ಮರಿಸುತ್ತದೆ. ಕಮ್ಯೂನಿಸ್ಟರಿಗೆ ರಾಮ ಬೇಕಿಲ್ಲ, ಕೊಲೆ ಪಾತಕಿ ಬೇಕು’ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿರುವ ಅವರು, ಕಮ್ಯೂನಿಸ್ಟ್ ಪಕ್ಷದ ವಿರುದ್ಧ ಕಿಡಿಕಾರಿದ್ದಾರೆ.
‘ರಾಮ ಜನ್ಮಭೂಮಿಯ ಮಂದಿರ ಉದ್ಘಾಟನೆಗೆ ನೀಡಿದ ಆಮಂತ್ರಣವನ್ನು ಸಾರಸಗಟಾಗಿ ತಿರಸ್ಕರಿಸಿದ ಕಮ್ಯೂನಿಸ್ಟ್ ಪಕ್ಷವು, ಸುಮಾರು ನಾಲಕ್ಕು ಕೋಟಿಗೂ ಹೆಚ್ಚು ಜನರನ್ನು ದಾರುಣವಾಗಿ ಕೊಂದ ನಿರಂಕುಶ ಪ್ರಭುತ್ವವಾದಿ ಮಾವೋ ಝೆಡಾಂಗ್ ಜಯಂತಿಯ ನೆನಪಿನಾರ್ಥವಾಗಿ ತನ್ನ ಅಧಿಕೃತ ಜಾಲತಾಣದ ಹ್ಯಾಂಡಲ್ನಲ್ಲಿ ಟ್ವೀಟ್ ಮಾಡಿದೆ. ಕಮ್ಮಿನಿಷ್ಟರಿಗೆ ಶ್ರೀ ರಾಮ ದೇವರು ಬೇಕಿಲ್ಲ, ಆದರೆ ಒಬ್ಬ ಕೊಲೆಪಾತಕಿ ಬೇಕು’ ಎಂದು ಯತ್ನಾಳ್ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಆಂಜನೇಯ ಅವಿವೇಕಿ, ಸಿದ್ದರಾಮಯ್ಯನವರನ್ನೇ ಪೂಜಿಸಲಿ: ಬಸನಗೌಡ ಪಾಟೀಲ್ ಯತ್ನಾಳ್ ಕಿಡಿ
ರಾಮ ಮಂದಿರ ವಿಚಾರವಾಗಿ ಕಾಂಗ್ರೆಸ್ ವಿರುದ್ಧವೂ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರನ್ನು ರಾಮನಿಗೆ ಹೋಲಿಸಿದ್ದ ಮಾಜಿ ಸಚಿವ ಹೆಚ್ ಆಂಜನೇಯ ಅವರ ವಿರುದ್ಧವೂ ಯತ್ನಾಳ್ ವಾಗ್ದಾಳಿ ನಡೆಸಿದ್ದರು. ಆಂಜನೇಯ ಅವಿವೇಕಿ ಎಂದು ಟೀಕಿಸಿದ್ದ ಯತ್ನಾಳ್, ಆಂಜನೇಯ ಮನೆಯಲ್ಲಿ ಸಿದ್ದರಾಮಯ್ಯ ಅವರಿಗೆ ಪೂಜಾ ಕೈಂಕರ್ಯ ನೆರವೇರಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ