ಹಾಸನ, ಡಿ.09: ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಬಿ.ವೈ ವಿಜಯೇಂದ್ರ ವಿರುದ್ಧ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ (Basavanagowda Patil Yatnal) ಹರಿಹಾಯ್ದಿದ್ದಾರೆ. ಕಲ್ಲಡ್ಕಕ್ಕೆ ತೆರಳುವ ಮಾರ್ಗ ಮಧ್ಯೆ ಹಾಸನ(Hassan)ದಲ್ಲಿ ಮಾತನಾಡಿದ ಅವರು ‘ ಅಧಿವೇಶನ ನಡೆದಿರುವುದು ನೋಡಿದಿರಲ್ಲಾ, ಎಲ್ಲಿ ಜೋಡೆತ್ತು, ಒಂದು ದೆಹಲಿಗೆ ಹೋಗಿದೆ, ಒಂದು ಬೆಂಗಳೂರಿನಲ್ಲಿದೆ. ಜೋಡೆತ್ತುಗಳು ಇಬ್ಬರು ದೆಹಲಿಗೆ ಹೋಗುತ್ತೇವೆ ಎಂದಿದ್ದರು. ಪಾಪ ಒಂದು ಎತ್ತನ್ನು ಬಿಟ್ಟು ಹೋಗಿದ್ದಾರೆ ಎನ್ನುವ ಮೂಲಕ ವಾಗ್ದಾಳಿ ನಡೆಸಿದ್ದಾರೆ.
ಇದೇ ವೇಳೆ ವಿ.ಸೋಮಣ್ಣ ಅಸಮಾಧಾನ ವಿಚಾರ ‘ ಪಕ್ಷ ಯಾರೂ ಬಿಡುವುದಿಲ್ಲ, ನರೇಂದ್ರ ಮೋದಿಯವರು ಈ ದೇಶದ ಪ್ರಧಾನಿ ಆಗಬೇಕೆಂಬುದು ಎಲ್ಲರ ಕಲ್ಪನೆ. ನರೇಂದ್ರಮೋದಿ, ದೇಶ, ಹಿಂದುತ್ವದ ಸಲುವಾಗಿ ಯಾರೂ ಪಕ್ಷ ಬಿಡುವುದಿಲ್ಲ. ಹಿಂದೆ ಅಡ್ಜಸ್ಟ್‌ಮೆಂಟ್ ಮಾಡಿಕೊಂಡಿದ್ದರಲ್ಲ ಆ ಲೀಡರ್ ಹಾಗೇ ಯಾರೂ ಕೆಲಸ ಮಾಡೋದಿಲ್ಲ ಎಂದು ವಿಧಾನಸಭೆ ಚುನಾವಣೆಯಲ್ಲಿ ಹೊಂದಾಣಿಕೆ ರಾಜಕೀಯ ಆಗಿದೆ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ:ಮೌಲ್ವಿ ತನ್ವೀರ್ ಜೊತೆ ವ್ಯಾಪಾರ ಪಾಲುದಾರ ಆರೋಪ: ಸಿದ್ದರಾಮಯ್ಯಗೆ ಸವಾಲು ಹಾಕಿದ ಯತ್ನಾಳ್
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಡ್ಜಸ್ಟ್‌ಮೆಂಟ್ ಮಾಡಿಕೊಂಡುಯಾರ್ಯಾರು ತಮ್ಮ ಮಕ್ಕಳ ಸಲುವಾಗಿ ವೀಕ್ ಕ್ಯಾಂಡೆಟ್ ಹಾಕಿಕೊಂಡರು, ಸೋಮಣ್ಣನ ಯಾರು ಸೋಲಿಸಿದ್ರು ಎಂದು ಎಲ್ಲರಿಗೂ ಗೊತ್ತಿದೆ. ಅದನ್ನು ಮೇಲಿನವರು ತಿಳಿದುಕೊಂಡು ನಿರ್ಣಯ ಮಾಡಬೇಕು. 28 ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಗೆದ್ದರೆ ಅದು ಮೋದಿಯವರಿಂದ ಬರುತ್ತದೆ ಹೊರತು ಈ ಮಹಾಪುರುಷರಿಂದ ಅಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.
ಇನ್ನು ನನ್ನ ಬಿಟ್ಟರೆ ಕರ್ನಾಟಕದಲ್ಲಿ ಜೀರೋ ಎಂದು ಹೈಕಮಾಂಡ್ ಬಳಿ ಹೇಳಿರುತ್ತಾರೆ. ಇದೊಂದು ಲೋಕಸಭೆ ಮುಗಿಲಿ ಎಂದು ಅವರೂ ಸುಮ್ಮನೆ ಇರಬಹುದು. ಏನು ಮಾಡೋದು ಒಂದಿಬ್ಬರು ಆ ರೀತಿ ವರದಿ ಕೊಡುವವರು ಇದ್ದಾರೆ. ಇಂಟಲಿಜೆನ್ಸ್ ಇದೆ, ಎಲ್ಲಾ ಮಾಹಿತಿ ಇದ್ರು ಸಹಿತ ಒಬ್ಬ ವ್ಯಕ್ತಿ ಬ್ಲಾಕ್‌ಮೇಲ್‌ಗೆ ಅಂಜಿದರೆ ಹೇಗೆ, ಭವಿಷ್ಯ ಲೋಕಸಭೆಗೆ ಏನು ಎಫೆಕ್ಟ್ ಆಗಲ್ಲ. ಇವರನ್ನು ಅಧ್ಯಕ್ಷರು ಮಾಡಲಿಲ್ಲ ಅಂದರು ಬಿಜೆಪಿಯೇ ನಿಶ್ಚಿತವಾಗಿ ಬರುತ್ತದೆ. ಏನೂ ಆಟ ಹೂಡಿದ್ದಾರೆ ನೋಡೋಣ ಎಂದು ಬಿವೈ ವಿಜಯೇಂದ್ರ ವಿರುದ್ದ ಯತ್ನಾಳ್ ನೇರಾನೇರ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ:ಪಾಕ್, ಮುಸ್ಲಿಂ, ಐಸಿಸ್ ಸೇರಿ ಐದು ಪದಗಳನ್ನು ಮಾತ್ರ ಯತ್ನಾಳ್ ಮಾತಾಡುತ್ತಾರೆ: ಸಂತೋಷ್ ಲಾಡ್
ಇನ್ನು ಸಿಎಂ ಸಿದ್ದರಾಮಯ್ಯ ಜೊತೆ ಸಭೆಯಲ್ಲಿ ಭಾಗಿಯಾಗಿದ್ದ ಮೌಲ್ವಿಗೆ ಐಸಿಸ್ ನಂಟಿದೆ ಎಂಬ ಯತ್ನಾಳ್ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ಹೇಳಿಕೆಯನ್ನು ಯತ್ನಾಳ್ ಮತ್ತೆ ಸಮರ್ಥನೆ ಮಾಡಿಕೊಂಡಿದ್ದಾರೆ. ‘ನಾವು ಎಲ್ಲಾ ದಾಖಲೆಗಳನ್ನು ಕೊಟ್ಟಿದಿವಿ. ಎನ್ ಐ ಎ ಕೂಡ ಎಲ್ಲಾ ಮಾಹಿತಿ ಪಡೆಯುತ್ತಿದ್ದಾರೆ. ಸಿದ್ದರಾಮಯ್ಯ ಅವರು ಏನು ಮಾಡಿದರು ಸರಿ, ನಾನು ಅವರಿಗೆ ಹೇಳ್ತಿನಿ ನಿಜವಾಗಿಯೂ ಅದರಿಂದ ಮುಕ್ತವಾಗಬೇಕಾದರೆ ಎನ್.ಐ.ಎ ಗೆ ಕೊಡಿ. ಅವರು ಒಳ್ಳೆಯವರೊ, ಅವರು ಇರಾಕ್, ಪಾಕಿಸ್ತಾನಕ್ಕೆ ಯಾಕೆ ಹೋಗಿದ್ದರು. ಉತ್ತರ ಪ್ರದೇಶ, ಮುಂಬೈಗೆ ಯಾಕೆ ಹೋಗ್ತಾರೆ. ಇದೆಲ್ಲದರ ಮಾಹಿತಿ ಇದೆ, ಎನ್.ಐ ಎ ಅವರು ತನಿಖೆ ಮಾಡ್ತಾರೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:57 pm, Sat, 9 December 23