Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಸ್ಲಿಂ ಧರ್ಮಗುರು ತನ್ವೀರ್​​​ ಪೀರಾ ಜೊತೆ ಉದ್ಯಮ ನಂಟು ಆರೋಪವನ್ನ ಅಲ್ಲಗೆಳೆದ ಯತ್ನಾಳ್​

ವಿಜಯಪುರದ ಹಾಸೀಂಪೀರಾ ದರ್ಗಾದ ಧರ್ಮ ಗುರು ಸಯ್ಯದ್ ಮೊಹಮ್ಮದ್ ತನ್ವೀರ್​​​ ಪೀರಾ ಹಾಸ್ಮೀಂ ಅವರಿಗೆ ಉಗ್ರರ ಜೊತೆ ನಂಟಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಆರೋಪ ಮಾಡಿದ್ದರು. ಇದೀಗ ಇವರಿಬ್ಬರು ಹೋಟೆಲ್​ ಉದ್ಯಮವೊಂದರ ಪಾಲುದಾರರು ಎಂಬ ಮಾತು ಕೇಳಿಬಂದಿದೆ. ಇದಕ್ಕೆ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಸ್ಪಷ್ಟನೆ ನೀಡಿದ್ದಾರೆ.

ಮುಸ್ಲಿಂ ಧರ್ಮಗುರು ತನ್ವೀರ್​​​ ಪೀರಾ ಜೊತೆ ಉದ್ಯಮ ನಂಟು ಆರೋಪವನ್ನ ಅಲ್ಲಗೆಳೆದ ಯತ್ನಾಳ್​
ಬಸನಗೌಡ ಪಾಟೀಲ್​ ಯತ್ನಾಳ್​, ತನ್ವಿರ್​ ಪೀರಾ
Follow us
Sunil MH
| Updated By: ವಿವೇಕ ಬಿರಾದಾರ

Updated on:Dec 08, 2023 | 1:52 PM

ಬೆಳಗಾವಿ, ಡಿಸೆಂಬರ್​ 08: ಐಸಿಸ್​ ಜೊತೆ ನಂಟಿದೆ ಎಂಬ ಆರೋಪಕ್ಕೆ ಒಳಗಾಗಿರುವ ಮುಸ್ಲಿಂ ಧರ್ಮಗುರು ಸಯ್ಯದ್ ಮೊಹಮ್ಮದ್ ತನ್ವೀರ್​​​ ಪೀರಾ ಹಾಸ್ಮೀಂ ಹಾಗೂ ಆರೋಪ ಮಾಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ (Basangouda Patil Yatnal)​ ವಿಜಯಪುರದ (Vijayapura) ಗಾಂಧಿಚೌಕ ಬಳಿಯಿರುವ “ಟೂರಿಸ್ಟ್​ ಹೋಟೆಲ್​​”ನ ಪಾಲುದಾರರು ಎಂಬ ಆರೋಪ ಕೇಳಿಬಂದಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಬಸನಗೌಡ ಪಾಟೀಲ್ ಯತ್ನಾಳ್​ “ಅವನೊಬ್ಬ ಭಯೋತ್ಪಾದಕ, ನಾನು ಅದರಲ್ಲಿ ಪಾಲುದಾರನಲ್ಲ. ನಾನು ಅವರ ಜೊತೆ ಪಾರ್ಟನರ್ ಶೀಪ್ ಉದ್ಯಮ ಮಾಡುತ್ತಿದ್ದೇನೆ ಎನ್ನುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ” ಎಂದು ಹೇಳಿದ್ದಾರೆ.

ಬೆಳಗಾವಿಯಲ್ಲಿ ಟವಿ9 ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು ಮಹಾನಗರ ಪಾಲಿಕೆ ಆಸ್ತಿ, ನನ್ನ ಆಸ್ತಿ ಅಲ್ಲ. 50-60 ವರ್ಷದ ಹಿಂದಿನ ಲೀಸ್ ಪ್ರಾಪರ್ಟಿ ಅದು. ಅದರ ಮೂಲ ಮಾಲಿಕ ನಮ್ಮ ತಂದೆ. 55 ವರ್ಷಗಳ ಹಿಂದೆ ನಮ್ಮ ತಂದೆ ಜೊತೆ 4-5 ಜನ ಪಾಟ್ನರ್​​ ಇದ್ದರು. ಅದರಲ್ಲಿ ಇಬ್ಬರು ಮುಸ್ಲಿಂ, ಇಬ್ಬರು ಹಿಂದೂಗಳಿದ್ದರು. ಒಬ್ಬ ಮುಸ್ಲಿಂ ಮಾರಿ ಹೋದ. ಲೀಸ್ ಪಡೆದವರಿಗೂ, ಈ ಭಯೋತ್ಪಾದಕನಿಗೂ ಸಂಬಂಧವಿಲ್ಲ ಎಂದು ಗುಡುಗಿದ್ದಾರೆ.

ಇದನ್ನೂ ಓದಿ: ಮುಸ್ಲಿಂ ಧರ್ಮಗುರು ವಿರುದ್ಧ ಮತ್ತೆ ಗುಡುಗಿದ ಯತ್ನಾಳ್​​: ತನ್ವೀರ್​​​ ಪೀರಾ ಕೊಲೆ ಆರೋಪಿ ಎಂದು ಟ್ವೀಟ್​

ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೌಲ್ವಿ ತನ್ವೀರ್​ ಪೀರಾ ಮನೆಗೆ ಹೋಗಿದ್ದರು ಎಂಬ ತಮ್ಮ (ಬಸನಗೌಡ ಪಾಟೀಲ್​ ಯತ್ನಾಳ್​) ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೌಲ್ವಿ ಮನೆಗೆ ಹೋಗಿರುವ ವಿಡಿಯೋ ಬಿಟ್ಟಿದ್ದೇನೆ, ಎಲ್ಲದರ ತನಿಖೆ ಆಗಲಿ. ಮೌಲ್ವಿ ಮನೆಗೆ ಹೋಗಬಾರದೆಂದು ಪೊಲೀಸರು ಸ್ಪಷ್ಟವಾಗಿ ಹೇಳಿದ್ದಾರೆ. ಮುಸ್ಲಿಮರ ಮತಕ್ಕಾಗಿ ಅವರ ಮನೆಗೆ ಸಿದ್ದರಾಮಯ್ಯ ಹೋಗಿದ್ದಾರೆ. ಎಂ.ಬಿ.ಪಾಟೀಲ್ ಒತ್ತಡ ಹಾಕಿ ಅವರನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಹೇಳಿದರು.

ಯತ್ನಾಳ್​, ತನ್ವೀರ್ ಪೀರಾ ಕುಟುಂಬದ ನಡುವೆ ಪಾಲುದಾರಿಕೆ ಇದೆ: ಅಹಿಂದ ನಾಯಕರು

ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಹಾಗೂ ತನ್ವೀರ್ ಪೀರಾ ಅವರ ಸಂಬಂಧಿಕರು‌ ವ್ಯವಹಾರದಲ್ಲಿ ಪಾಲುದಾರರು. ಬಸನಗೌಡ ಪಾಟೀಲ್​ ಯತ್ನಾಳ ತಂದೆಯ ಕಾಲದಿಂದಲೂ ಇಬ್ಬರ ಕುಟುಂಬದ ನಡುವೆ ಟೂರಿಸ್ಟ್ ಹೊಟೇಲ್ ವ್ಯವಹಾರದಲ್ಲಿ ಪಾಲುದಾರಿಕೆ ಇದೆ.  ಸಚಿವ ಶಿವಾನಂದ ಪಾಟೀಲ್ ತಂದೆ ಸಿದ್ರಾಮಪ್ಪಗೌಡ ಮತ್ತು ಬಸನಗೌಡ ಪಾಟೀಲ್​ ಯತ್ನಾಳ ತಂದೆ ರಾಮನಗೌಡ ಹಾಗೂ ಇತರರು ಹಾಸೀಂಪೀರ್ ದರ್ಗಾದ ಗುರುಗಳ ಕುಟುಂಬದವರ ಜೊತೆ ಪಾಲುದಾರರಿದ್ದಾರೆ ಎಂದು ಅಹಿಂದ ನಾಯಕರು ಹೇಳಿದರು.

ಬಸನಗೌಡ ಪಾಟೀಲ್​ ಯತ್ನಾಳ್​ ಸದ್ಯ ವಾಸವಿರುವ ತೋಟದ ಮನೆ ಹಾಗೂ ತನ್ವೀರ್ ಪೀರಾ ನಡೆಸುತ್ತಿರುವ ಮದರಸಾ ಶಾಲೆ ಒಂದೇ ಕಡೆ ಇದೆ. ಅಲ್ಲದೆ ನಗರದ ಸಿಂದಗಿ ರಸ್ತೆಯಲ್ಲಿನ ಇಬ್ಬರ ಜಮೀನುಗಳು ಅಕ್ಕಪಕ್ಕದಲ್ಲಿವೆ. ಐನಾಪೂರ ಹೋಬಳಿಯ ಸರ್ವೆ ನಂಬರ್ 55 ರಲ್ಲಿ ತನ್ವೀರ್ ಪೀರಾ ಅವರು ಅಲ್ ಹಶ್ಮಿ ಎಜುಕೇಷನ್ ವೆಲ್ಪೇರ್ ಆ್ಯಂಡ್ ಚಿಲ್ಡ್ರನ್ ಟ್ರಸ್ಟ್ ನಡೆಸುತ್ತಾರೆ. ಇದರ ಪಕ್ಕದ ಸರ್ವೆ ನಂಬರ್ 54 ರ ತೋಟದಲ್ಲಿ ಬಸನಗೌಡ ಪಾಟೀಲ್​ ಯತ್ನಾಳ ಅವರ ಮನೆ ಇದೆ ಎಂದರು.

ಈ ಮುಂಚೆ ಇವರಿಬ್ಬರ ಸಂಬಂಧ ಚೆನ್ನಾಗಿತ್ತು. ಮತಬ್ಯಾಂಕ್​ಗಾಗಿ, ರಾಜಕಾರಣಕ್ಕಾಗಿ ಬಸನಗೌಡ ಪಾಟೀಲ್​ ಯತ್ನಾಳ್​ ಅವರು ತನ್ವೀರ್​ ಪೀರಾ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಅಹಿಂದ ಮುಖಂಡರಿಂದ ಆರೋಪ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:43 pm, Fri, 8 December 23

ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್
2 ಕೋಟಿ ಹಣ ಬೇಕು ಶಿವ, ಹುಂಡಿಯಲ್ಲಿ ಸಿಕ್ತು ಬೇಡಿಕೆ ಪತ್ರ
2 ಕೋಟಿ ಹಣ ಬೇಕು ಶಿವ, ಹುಂಡಿಯಲ್ಲಿ ಸಿಕ್ತು ಬೇಡಿಕೆ ಪತ್ರ