ನಾವು ಧರ್ಮದ ಆಧಾರದಲ್ಲಿ ಆಡಳಿತ ನಡೆಸುತ್ತಿಲ್ಲ, ನಮ್ಮ ಯೋಜನೆಗಳು ಧರ್ಮಾಧಾರಿತವಲ್ಲ: ಅಮಿತ್ ಶಾ
ನಾವು ಧರ್ಮದ ಆಧಾರದಲ್ಲಿ ಆಡಳಿತ ನಡೆಸುತ್ತಿಲ್ಲ. ನಮ್ಮ ಯೋಜನೆಗಳು ಧರ್ಮಾಧಾರಿತ ಅಲ್ಲ. ವಿಕಾಸದ ಹಾದಿಯಲ್ಲಿ ನಾವು ಎಲ್ಲಾ ವರ್ಗದವರನ್ನೂ ಜೊತೆಗೆ ಕರೆದೊಯ್ಯುತ್ತಿದ್ದೇವೆ ಎಂದು ಅಮಿತ್ ಶಾ ಅವರು ಪ್ರಬುದ್ಧರ ಜೊತೆಗಿನ ಸಂವಾದದಲ್ಲಿ ಹೇಳಿಕೆ ನೀಡಿದರು.
ಬೆಂಗಳೂರು: ನಾವು ಧರ್ಮದ ಆಧಾರದಲ್ಲಿ ಆಡಳಿತ ನಡೆಸುತ್ತಿಲ್ಲ. ನಮ್ಮ ಯೋಜನೆಗಳು ಧರ್ಮಾಧಾರಿತ ಅಲ್ಲ. ವಿಕಾಸದ ಹಾದಿಯಲ್ಲಿ ನಾವು ಎಲ್ಲಾ ವರ್ಗದವರನ್ನೂ ಜೊತೆಗೆ ಕರೆದೊಯ್ಯುತ್ತಿದ್ದೇವೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಪ್ರಬುದ್ಧರ ಜೊತೆಗಿನ ಸಂವಾದದಲ್ಲಿ ಹೇಳಿಕೆ ನೀಡಿದರು. ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ನಡೆದ ಪ್ರಬುದ್ಧರ ಸಭೆಯಲ್ಲಿ ಭಾರತೀಯ ರಾಜಕೀಯ ವ್ಯವಸ್ಥೆ- 65 ವರ್ಷಗಳ ದೇಶದ ರಾಜಕೀಯ ಸ್ಥಿತಿಗತಿ ಹಾಗೂ ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದಲ್ಲಿ ಆದ ಮನ್ವಂತರ ವಿಷಯದ ಕುರಿತು ನಡೆದ ಸಂವಾದ (Interaction with the mature) ದಲ್ಲಿ ಮಾತನಾಡಿದ ಅಮಿತ್ ಶಾ (Amit Shah) ಅವರು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷವನ್ನು ಟೀಕಿಸಿದರು. ಜೆಡಿಎಸ್ ಪರಿವಾರವಾದಕ್ಕೆ ಅಂಟಿಕೊಂಡಿದ್ದು, ಮನೆಯ ಸದಸ್ಯರೆಲ್ಲರೂ ರಾಜಕೀಯದಲ್ಲಿದ್ದಾರೆ. ಮನೆ ಯಾರು ನಡೆಸುತ್ತಾರೋ ಅಂತ ಅಚ್ಚರಿ ಆಗುತ್ತದೆ ನನಗೆ. ಕಾಂಗ್ರೆಸ್ ಪಕ್ಷ ಪೂರ್ಣ ಕುಟುಂಬ ರಾಜಕಾರಣ ಒಳಗೊಂಡಿದೆ. ಇವೆರಡೂ ಪಕ್ಷಗಳಿಗಿಂತ ವಿಭಿನ್ನ ಪಕ್ಷ ಬಿಜೆಪಿಯಾಗಿದೆ. ನಮ್ಮ ಪಕ್ಷ ಪರಿವಾರವಾದವನ್ನು ಬಲವಾಗಿ ವಿರೋಧಿಸುತ್ತದೆ. ಬ್ರಿಟಿಷ್ ಅಧಿಕಾರಿಯಿಂದ ಸ್ಥಾಪಿತವಾದ ಪಕ್ಷ ಕಾಂಗ್ರೆಸ್, ಬ್ರಿಟಿಷರ ಮನಸ್ಥಿತಿಯನ್ನೇ ಒಳಗೊಂಡಿದೆ. ಆದರೆ ನಮ್ಮ ಪಕ್ಷದ ಐಡಿಯಾಲಜಿ ಸಾಂಸ್ಕೃತಿಕ ರಾಷ್ಟ್ರವಾದ ಆಗಿದೆ ಎಂದರು.
ನಾವು ಧರ್ಮದ ಆಧಾರದಲ್ಲಿ ಆಡಳಿತ ನಡೆಸುತ್ತಿಲ್ಲ. ನಮ್ಮ ಯೋಜನೆಗಳು ಧರ್ಮಾಧಾರಿತ ಅಲ್ಲ. ವಿಕಾಸದ ಹಾದಿಯಲ್ಲಿ ನಾವು ಎಲ್ಲಾ ವರ್ಗದವರನ್ನೂ ಜೊತೆಗೆ ಕರೆದೊಯ್ಯುತ್ತಿದ್ದೇವೆ. ಅದರ ಪರಿಣಾಮವಾಗಿ ಹಲವು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಬಿಜೆಪಿ ಬಂದ ನಂತರದ ಪರಿಸ್ಥಿತಿ ಮತ್ತು ಮುಂಚಿನ ಪರಿಸ್ಥಿತಿಗಳನ್ನು ಗಮನಿಸಿ, ಬಿಜೆಪಿ ಅಧಿಕಾರಕ್ಕೆ ಬರುವ ಮುಂಚಿನ 60 ವರ್ಷಗಳಲ್ಲಿ ದೇಶ ಭ್ರಷ್ಟಾಚಾರ ಅಗಾಧವಾಗಿತ್ತು. ಮಂತ್ರಿಗಳೆಲ್ಲಾ ತಾವೇ ಪ್ರಧಾನಿ ಎಂಬ ಭಾವನೆಯಿಂದ ವರ್ತಿಸುತ್ತಿದ್ದರು ಎಂದರು.
Bengaluru, Karnataka| Congress has become ‘parivaarvadi’ party, there is no internal democracy. SP first became a caste-based party & then familial party. CPI(M) had narrow thoughts about the economy, and they were wiped out from most parts of world: Union Home Minister Amit Shah pic.twitter.com/HRxVIAPaFp
— ANI (@ANI) February 23, 2023
ಯಾವ ಪಕ್ಷ ಉತ್ತಮ ಅಂತ ಜನ ಅಧ್ಯಯನ ನಡೆಸಿ ತಿಳಿಯಲಿ: ಅಮಿತ್ ಶಾ
2014ರ ಬಳಿಕ ದೇಶದ ಚಿತ್ರಣ ಬದಲಾಗುತ್ತಾ ಬಂತು. 2014ರ ನಂತರದ ಭಾರತವೇ ಬೇರೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಐಡಿಯಾಲಜಿ ಎಲ್ಲರ ಮುಂದೆ ಇದೆ. ಕೇಂದ್ರ, ರಾಜ್ಯ ಸರ್ಕಾರಗಳ ಯೋಜನೆ, ಕಾರ್ಯಕ್ರಮಗಳ ಅಧ್ಯಯನ, ಅಂಕಿ ಅಂಶಗಳ ಅಧ್ಯಯನ ಮಾಡಿಯೇ ಜನ ನಿರ್ಧರಿಸಲಿ. ಯಾವ ಪಕ್ಷ ಉತ್ತಮ ಅಂತ ಜನ ಅಧ್ಯಯನ ನಡೆಸಿ ತಿಳಿಯಲಿ ಎಂದರು.
Bengaluru, Karnataka| BJP followed its ideology throughout and faced a lot of struggle to become the party it is today. Congress immersed in ‘parivaarvad’ but not us. We conduct elections. In BJP, speaker’s father won’t become speaker: Union Home Minister Amit Shah pic.twitter.com/nHZmHavW7U
— ANI (@ANI) February 23, 2023
ದೇಶದ ಜನತೆಗೆ ಪ್ರಮಾಣ ಪತ್ರಗಳ ಜೊತೆಗೆ ಉಚಿತ ಕೋವಿಡ್ ಲಸಿಕೆ ಕೊಡಲಾಯಿತು. ಅಮೆರಿಕದಿಂದ ನನ್ನ ಸಹೋದರಿ ಇತ್ತೀಚೆಗೆ ಬಂದಾಗ ಅವರ ಬಳಿ ಕೋವಿಡ್ ಲಸಿಕೆಯ ಪ್ರಮಾಣ ಪತ್ರ ಇರಲಿಲ್ಲ. ನಮ್ಮ ದೇಶದ ಮಾದರಿ ಬೇರೆಯಾಗಿದ್ದು, ಎಲ್ಲರಿಗಿಂತ ಉನ್ನತ ಮಾದರಿಯದ್ದಾಗಿದೆ. ಈ ದೇಶದಲ್ಲಿ ಹತ್ತು ಕೋಟಿ ಮನೆಗಳಲ್ಲಿ ಶೌಚಾಲಯ ಇರಲಿಲ್ಲ. ಆ ಕುಟುಂಬಗಳ ಮಹಿಳೆಯರಿಗಾಗುತ್ತಿದ್ದ ಹಿಂಸೆ, ಮುಜುಗರ ಬಗ್ಗೆ ಯೋಚಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಶೌಚಾಲಯ ನಿರ್ಮಾಣಕ್ಕೆ ಒತ್ತು ನೀಡಿದರು. ಗ್ಯಾಸ್, ವಿದ್ಯುತ್ ಒದಗಿಸಿದರು ಎಂದರು.
ಮೋದಿ ಯೋಜನೆಗಳೆಲ್ಲಾ ಜನರಿಗಾಗಿ: ಅಮಿತ್ ಶಾ
ಅಂದು ದೇಶದಲ್ಲಿ 80 ಕೋಟಿ ಜನರು ಬಡತನದಲ್ಲಿ ಬೇಯುತ್ತಿದ್ದರು. ಇವತ್ತು ಈ ಜನರ ಮನೆಗಳಲ್ಲಿ ನೆಮ್ಮದಿ ಇದೆ, ನೆಮ್ಮದಿಯ ಊಟ ಸಿಗುತ್ತಿದೆ. ಜಾತಿವಾದ, ಕುಟುಂಬವಾದ, ತುಷ್ಟೀಕರಣ ಈ ಮೂರೂ ದೇಶಕ್ಕೆ ದೊಡ್ಡ ಪಿಡುಗುಗಳಾಗಿದ್ದವು. ಈ ಮೂರೂ ಪಿಡುಗುಗಳನ್ನೂ ನಮ್ಮ ಸರ್ಕಾರ ತೊಲಗಿಸಿತು. ಜನರಿಗಾಗಿ ಮೋದಿಯವರು ಕಾರ್ಯಕ್ರಮಗಳನ್ನು ತಂದರು. ಮೋದಿ ಜನ ಮೆಚ್ಚುಗೆಗಾಗಿ ಕಾರ್ಯಕ್ರಮ ತರಲಿಲ್ಲ. ಜಿಎಸ್ಟಿ, ನೋಟ್ ಬ್ಯಾನ್ ಸೇರಿ ಕೇಂದ್ರದ ಕಾರ್ಯಕ್ರಮಗಳೆಲ್ಲಾ ಜನರಿಗಾಗಿ ಎಂದರು.
Karnataka| Jute, Milk, and Pulses are products produced on a large scale in India. Our policy is to include the poor in every scheme. We have developed the health sector. We have introduced campaigns like fit India and Khelo India: Union Home Minister Amit Shah pic.twitter.com/YbsSa0XqfR
— ANI (@ANI) February 23, 2023
ಉಕ್ರೇನ್ನಿಂದ 35 ಸಾವಿರ ವಿದ್ಯಾರ್ಥಿಗಳನ್ನು ದೇಶಕ್ಕೆ ಸುರಕ್ಷಿತವಾಗಿ ವಾಪಸ್ ಕರೆ ತರಲಾಯಿತು, ಕಾಶ್ಮೀರಕ್ಕೆ ಈ ವರ್ಷ 1.80 ಲಕ್ಷ ಪ್ರವಾಸಿಗರು ಭೇಟಿ ಕೊಟ್ಟಿದ್ದಾರೆ, ಯಾವುದೇ ಹಿಂಸಾಚಾರ ಆಗಲಿಲ್ಲ. ಇದು ಸಾಧ್ಯವಾಗಿದ್ದು ಮೋದಿಯವರಿಂದ. ಪಿಎಫ್ಐ ಅಪಾಯಕಾರಿ ಸಂಘಟನೆಯಾಗಿದೆ. ಇದು ಬಹಳಷ್ಟು ಜನರಿಗೆ ಗೊತ್ತಿಲ್ಲ. ನಮ್ಮ ಸರ್ಕಾರ ಪಿಎಫ್ಐ ಸರ್ಕಾರ ನಿಷೇಧ ಮಾಡಿತು. ಮೆಟ್ರೋ, ರಸ್ತೆ, ಹೆದ್ದಾರಿ ಮೂಲಸೌಕರ್ಯ ಅಭಿವೃದ್ಧಿ ಆಗಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ಕಾಶಿ ವಿಶ್ವನಾಥ ದೇಗುಲ, ಸೋಮನಾಥೇಶ್ವರ ದೇಗುಲ ಜೀರ್ಣೋದ್ಧಾರ ಮಾಡಿದ್ದೇವೆ. ಕನ್ನಡ, ತೆಲುಗು, ತಮಿಳು ಎಲ್ಲವೂ ನಮ್ಮ ಭಾಷೆ. ಮಾತೃಭಾಷೆಯಲ್ಲೇ ಶಿಕ್ಷಣಕ್ಕೆ ಆದ್ಯತೆ ಕೊಡಲಾಗಿದೆ. ಭಾಷೆ ವಿಚಾರದ ಅಭಿವ್ಯಕ್ತಿ, ವಿಚಾರವೇ ಭಾಷೆ ಅಲ್ಲ ಎಂದರು.
ಪ್ರಬುದ್ಧರ ಸಭೆಯಲ್ಲಿ ನಡೆಯುತ್ತಿದ್ದ ಸಂವಾದ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಭಾಗಿಯಾದರು. ಕಾರ್ಯಕ್ರಮಕ್ಕೆ ಕೊಂಚ ತಡವಾಗಿ ಆಗಮಿಸಿದ್ದ ಮುಖ್ಯಮಂತ್ರಿಯವರನ್ನು ಅಮಿತ್ ಶಾ ಅವರೇ ಸ್ವಾಗತಿಸಿದರು. ಬೊಮ್ಮಾಯಿಗೆ ವೇದಿಕೆ ಮೇಲೆ ಬಂದು ಕೂರುವಂತೆ ಸೂಚಿಸಿದರು. ಸಭೆಯಲ್ಲಿ ವಿವಿಧ ಕ್ಷೇತ್ರಗಳ ಪ್ರಮುಖರು ಭಾಗಿಯಾದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:18 pm, Thu, 23 February 23