AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು-ಮೈಸೂರು ದಶಪಥ ರಸ್ತೆ ಉದ್ಘಾಟನೆ; ಪ್ರಧಾನಿ ಮೋದಿಗೆ ರಣದೀಪ್ ಸುರ್ಜೇವಾಲರಿಂದ ಎಂಟು ಪ್ರಶ್ನೆ

Bengaluru-Mysuru Expressway: ಅಪೂರ್ಣಗೊಂಡಿರು ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯನ್ನು ಪ್ರಚಾರ ಹಾಗೂ ಚುನಾವಣೆಗಾಗಿ ಬಿಜೆಪಿ ಉದ್ಘಾಟಿಸುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಹೇಳಿದ್ದಾರೆ. ಅಲ್ಲದೆ, ಎಂಟು ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಉತ್ತರಿಸುವಂತೆ ಮೋದಿ ಹಾಗೂ ಸಿಎಂ ಬೊಮ್ಮಾಯಿ ಸರ್ಕಾರಕ್ಕೆ ಹೇಳಿದ್ದಾರೆ.

ಬೆಂಗಳೂರು-ಮೈಸೂರು ದಶಪಥ ರಸ್ತೆ ಉದ್ಘಾಟನೆ; ಪ್ರಧಾನಿ ಮೋದಿಗೆ ರಣದೀಪ್ ಸುರ್ಜೇವಾಲರಿಂದ ಎಂಟು ಪ್ರಶ್ನೆ
ರಣದೀಪ್ ಸಿಂಗ್ ಸುರ್ಜೇವಾಲ ಮತ್ತು ನರೇಂದ್ರ ಮೋದಿ
Rakesh Nayak Manchi
|

Updated on:Mar 11, 2023 | 5:00 PM

Share

ಬೆಂಗಳೂರು: ಅಪೂರ್ಣಗೊಂಡಿರುವ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯನ್ನು (Bengaluru-Mysuru Expressway) ಪ್ರಚಾರ ಹಾಗೂ ಚುನಾವಣೆಗಾಗಿ ಬಿಜೆಪಿ ಉದ್ಘಾಟಿಸುತ್ತಿದೆ ಎಂದು ಹೇಳಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ (Randeep Singh Surjewala) ಅವರು ದಶಪಥ ರಸ್ತೆ ಉದ್ಘಾಟಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಗೆ (Narendra Modi) ಅಷ್ಟ ಪ್ರಶ್ನೆಗಳನ್ನು ಕೇಳಿದ್ದಾರೆ. ಮೋದಿ ಅವರ ಸರ್ಕಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಮೂಲಕ 25 ಸಾವಿರ ಕೋಟಿ ಸಂಗ್ರಹಿಸುವ ಗುರಿ ಹೊಂದಿದೆ. ಭ್ರಷ್ಟ ಬಿಜೆಪಿ ಸರ್ಕಾರ ಮುಂಬರುವ ಕರ್ನಾಟಕ ಚುನಾವಣೆಯಲ್ಲಿ ಅವನತಿಯ ಹಾದಿಯಲ್ಲಿ ಸಾಗುತ್ತಿದ್ದು, ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಪ್ರಚಾರ ಪಡೆಯಲು ಪ್ರಯತ್ನಿಸುತ್ತಿದೆ. ಅಪೂರ್ಣಗೊಂಡಿರುವ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈಗಾಗಲೇ ಅನೇಕ ರಾದ್ಧಾಂತಗಳು ಸಂಭವಿಸಿದೆ. ಮುಳುಗುವ ಹಡಗನಂತಾಗಿರುವ ಬಿಜೆಪಿಯು ಈಗ ಸಾರ್ವಜನಿಕರ ರಕ್ಷಣೆಯನ್ನು ಪಣಕ್ಕಿಟ್ಟು ಜನರ ಜೀವದ ಜೊತೆ ಚೆಲ್ಲಾಟವಾಡುತ್ತಾ ಕಾಮಗಾರಿ ಪೂರ್ಣಗೊಳ್ಳದಿದ್ದರೂ ಹೆದ್ದಾರಿ ಉದ್ಘಾಟನೆಗೆ ಮುಂದಾಗಿದೆ ಎಂದು ಟೀಕಿಸಿದ್ದಾರೆ.

ಪ್ರಯಾಣಿಕರ ಜೀವವನ್ನು ಅಪಾಯಕ್ಕೆ ತಳ್ಳಿ ಅಪೂರ್ಣಗೊಂಡಿರುವ ಹೆದ್ದಾರಿ ಉದ್ಘಾಟನೆ ಮಾಡುತ್ತಿದ್ದು, ಟೋಲ್ ಹೆಸರಲ್ಲಿ ಕನ್ನಡಿಗರಿಂದ ಹಣ ಸಂಗ್ರಹಿಸಲು ಬಿಜೆಪಿ ಮುಂದಾಗಿದೆ. ಅವೈಜ್ಞಾನಿಕ ರಸ್ತೆ ವಿನ್ಯಾಸ, ನೀರು ಸುಗಮವಾಗಿ ಹರಿದುಹೋಗಲು ಅವಕಾಶ ಕಲ್ಪಿಸಿಲ್ಲ. ಪ್ರವಾಹ ನಿಯಂತ್ರಣ ಮಾರ್ಗಸೂಚಿ ಅನುಸರಿಸಿಲ್ಲ. ಇನ್ನು ರೈತರು ತಮ್ಮ ಊರಿನಿಂದ ಪಟ್ಟಣಕ್ಕೆ ಹೋಗಲು ಸರಿಯಾದ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸಿಲ್ಲ. ಈ ಎಲ್ಲ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯ ಬಿಜೆಪಿ ಸರ್ಕಾರವು ಪ್ರಮುಖ ಪ್ರಶ್ನೆಗಳಿಗೆ ಉತ್ತರ ನೀಡಬೇಕಿದೆ.

ಇದನ್ನೂ ಓದಿ: Narendra Modi: ಮಾ.12 ರಂದು 16 ಸಾವಿರ ಕೋಟಿ ವೆಚ್ಚದ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಿ ಮೋದಿ

ಸುರ್ಜೇವಾಲ ಹೇಳಿದ ವಾಸ್ತವಾಂಶಗಳು:

  • 2002ರಲ್ಲಿ ಕಾಂಗ್ರೆಸ್ ಸರ್ಕಾರ ಎರಡು ಪಥದ ರಾಜ್ಯ ಹೆದ್ದಾರಿಯನ್ನು ನಾಲ್ಕು ಪಥದ ಹೆದ್ದಾರಿಯನ್ನಾಗಿ ಮಾಡಿ, ಟೋಲ್ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಟ್ಟಿತ್ತು.
  • ಮಾರ್ಚ್ 04, 2014: ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ಒತ್ತಾಯದ ಮೇರೆಗೆ ರಾಜ್ಯ ಹೆದ್ದಾರಿಯಾಗಿದ್ದ ಬೆಂಗಳೂರು ಮೈಸೂರು ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ 275 ಆಗಿ ಅಧಿಸೂಚನೆ ಹೊರಡಿಸಿದರು.
  • ಅಕ್ಟೋಬರ್ 4, 2016ರ ವೇಳೆಗೆ: ರಾಜ್ಯದಲ್ಲಿದ್ದ ಕಾಂಗ್ರೆಸ್ ಸರ್ಕಾರ 4,400 ಕೋಟಿ ವೆಚ್ಚ ಮಾಡಿ 2500 ಎಕರೆ ಭೂಮಿ ಸ್ವಾಧೀನ ಪಡಿಸಿಕೊಂಡಿತು.
  • ಫೆಬ್ರವರಿ 13, 2018: ರಾಜ್ಯ ಕಾಂಗ್ರೆಸ್ ಸರ್ಕಾರ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ 6420 ಕೋಟಿ ಹಣವನ್ನು ಮಂಜೂರು ಮಾಡಿತ್ತು. ಬೆಂಗಳೂರಿನಿಂದ ನಿಡಘಟ್ಟದ 56 ಕಿ.ಮೀ ಉದ್ದ ರಸ್ತೆಗೆ 3501 ಕೋಟಿ, ನಿಡಘಟ್ಟದಿಂದ ಮೈಸೂರಿನ 62 ಕಿ.ಮೀ ಉದ್ದದ ರಸ್ತೆಗೆ 2919 ಕೋಟಿ ನೀಡಿತ್ತು. ಈಗ ಈ ರಸ್ತೆಯ ಒಟ್ಟು ವೆಚ್ಚ 10 ಸಾವಿರ ಕೋಟಿ ಅಂದಾಜು ಮಾಡಲಾಗಿದೆ.
  • ಮಾರ್ಚ್ 12, 2023ರಂದು: ಮೋದಿ ಹಾಗೂ ಬೊಮ್ಮಾಯಿ ಸರ್ಕಾರ ಅಪೂರ್ಣಗೊಂಡಿರುವ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ರಸ್ತೆಯನ್ನು ಉದ್ಘಾಟನೆ ಮಾಡುತ್ತಿವೆ. ಆಮೂಲಕ ಮುಂಬರುವ ಚುನಾವಣೆಯಲ್ಲಿ 40% ಕಮಿಷನ್ ಭ್ರಷ್ಟಾಚಾರದ ಹೊರತಾಗಿ ತಮ್ಮ ಸಾಧನೆ ಏನೂ ಇಲ್ಲದ ಕಾರಣ ಈ ಯೋಜನೆಯ ಪ್ರಚಾರ ಪಡೆಯಲು ಮುಂದಾಗಿದೆ.

ದಶಪಥ ಉದ್ಘಾಟಿಸುತ್ತಿರುವ ಮೋದಿಗೆ ಸುರ್ಜೇವಾಲ ಕೇಳಿದ ಅಷ್ಟ ಪ್ರಶ್ನೆ

  1. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸುಮಾರು 21 ಕಿ.ಮೀ (118 ಕಿ.ಮೀ ಪೈಕಿ) ಉದ್ದದಷ್ಟು ರಸ್ತೆ ವಿವಿಧ ಭಾಗಗಳಲ್ಲಿ ಅಪೂರ್ಣಗೊಂಡಿದೆ. ಅಪೂರ್ಣಗೊಂಡಿರುವ ಹೆದ್ದಾರಿಯನ್ನು ಪ್ರಧಾನಮಂತ್ರಿಗಳು ಉದ್ಘಾಟನೆ ಮಾಡುತ್ತಿರುವುದು ಚುನಾವಣೆ ಗಿಮಿಕ್ ಅಲ್ಲವೇ?
  2. ರಾಷ್ಟ್ರೀಯ ಹೆದ್ದಾರಿ 275 ಬೆಂಗಳೂರು- ಮೈಸೂರು ರಸ್ತೆ ಅಪೂರ್ಣಗೊಂಡಿದ್ದು, ಈ ರಸ್ತೆಯ ಅನೇಕ ಕಾಮಗಾರಿಗಳು ಪೂರ್ಣಗೊಂಡಿಲ್ಲ. 50 ಅಂಡರ್ ಪಾಸ್ ಗಳ ಪೈಕಿ ಕೇವಲ 22 ಅಂಡರ್ ಪಾಸ್ ಮಾತ್ರ ಪೂರ್ಣಗೊಂಡಿದೆ. 12 ಓವರ್ ಪಾಸ್ ಗಳ ಪೈಕಿ ಕೇವಲ 6 ಮಾತ್ರ ಪೂರ್ಣಗೊಂಡಿವೆ. 12 ಹಗುರ ವಾಹನ ಅಂಡರ್ ಪಾಸ್ ಗಳ ಪೈಕಿ ಕೇವಲ 6 ಮಾತ್ರ ಪೂರ್ಣವಾಗಿವೆ. 18 ಪಾದಚಾರಿ ಅಂಡರ್ ಪಾಸ್ ಗಳ ಪೈಕಿ ಕೇವಲ 8 ಮಾತ್ರ ಪೂರ್ಣಗೊಂಡಿವೆ. ಅಪೂರ್ಣಗೊಂಡಿರುವ, ಛಿದ್ರವಾಗಿರುವ ಹಾಗೂ ತೇಪೆಯಿಂದ ಕೂಡಿರುವ ರಾಷ್ಟ್ರೀಯ ಹೆದ್ದಾರಿಯನ್ನು ಪ್ರಧಾನಮಂತ್ರಿಗಳು ಉದ್ಘಾಟನೆ ಮಾಡುತ್ತಿರುವುದೇಕೆ?
  3. 118 ಕಿ.ಮೀ ಉದ್ದದ ಹೆದ್ದಾರಿಯ ಎರಡೂ ಭಾಗಗಳಲ್ಲಿ ಸರ್ವೀಸ್ ರಸ್ತೆ ಅಪೂರ್ಣಗೊಂಡಿದೆ. ಪರಿಣಾಮ ಈ ಹೆದ್ದಾರಿಯ ಭಾಗದ ರೈತರಿಗೆ, ನಿವಾಸಿಗಳಿಗೆ ತೊಂದರೆಯಾಗಿದ್ದು, ಜನಜೀವನ ಹಾಗೂ ದಿನನಿತ್ಯದ ಚಟುವಟಿಕೆಗೆ ತೊಡಕಾಗಿದೆ. ಪ್ರಧಾನಮಂತ್ರಿಗಳು ಸರ್ವೀಸ್ ರಸ್ತೆ ಪೂರ್ಣಗೊಳಿಸದೇ ರೈತರು, ಜನಸಾಮಾನ್ಯರ ರಕ್ಷಣೆ ಪಣಕ್ಕಿಟ್ಟಿರುವುದೇಕೆ?
  4. ಬೆಂಗಳೂರು ಮೈಸೂರು ಹೆದ್ದಾರಿಯನ್ನು ಇಂಡಿಯನ್ ರೋಡ್ ಕಾಂಗ್ರೆಸ್ (IRC) ಗುಣಮಟ್ಟದಲ್ಲಿ ನಿರ್ಮಾಣ ಮಾಡಿಲ್ಲ. ಹಲವೆಡೆಗಳಲ್ಲಿ ಈ ಹೆದ್ದಾರಿ ನಿರ್ಮಾಣ ಅವೈಜ್ಞಾನಿಕವಾಗಿದೆ. ಅಲ್ಲದೆ ಕಳಪೆ ಗುಣಮಟ್ಟದ ಸಾಮಾಗ್ರಿ ಬಳಸಿದ್ದು, ಒಟ್ಟಾರೆ ರಸ್ತೆಯ ನಿರ್ಮಾಣ ಯೋಜನೆ ಕಳಪೆಯಾಗಿದೆ. 2022ರ ಅಕ್ಟೋಬರ್​ನಿಂದ ಇಲ್ಲಿಯವರೆಗೆ 300ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದು, 90 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 122 ಜನರಿಗೆ ಗಂಭೀರ ಗಾಯಗಳಾಗಿವೆ. ಆದರೂ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ಯಾವುದೇ ಅಗತ್ಯ ಕ್ರಮ ಕೈಗೊಂಡಿಲ್ಲ. ಪ್ರಧಾನಮಂತ್ರಿಗಳಿಗೆ ಸಾರ್ವಜನಿಕರ ರಕ್ಷಣೆಯನ್ನು ಅಪಾಯಕ್ಕೆ ಸಿಲುಕಿರುವ ಹಾಗೂ ಅಮಾಯಕ ಜೀವಗಳನ್ನು ಬಲಿಯಾಗುತ್ತಿರುವ ಬಗ್ಗೆ ಅರಿವಿಲ್ಲವೇಕೆ?
  5. ಸಂಚಾರಿ ಸಮೀಕ್ಷೆ ಪ್ರಕಾರ 2018ರಲ್ಲಿ ಈ ರಸ್ತೆಯಲ್ಲಿ 53 ಸಾವಿರ ಪ್ಯಾಸೆಂಜರ್ ಕಾರ್ ಯುನಿಟ್ (PCU) ನಷ್ಟಿದ್ದು ಇದು 2023ಕ್ಕೆ 90 ಸಾವಿರ ತಲುಪುವ ನಿರೀಕ್ಷೆ ಇದೆ. ಇದರ ಜತೆಗೆ ವಾಣಿಜ್ಯ ಉದ್ದೇಶಿತ ವಾಹನಗಳು ಸೇರ್ಪಡೆಯಾಗಲಿವೆ. 118 ಕಿ.ಮೀ ರಸ್ತೆಯ ಟೋಲ್ (56 ಕಿ.ಮೀ.ಗೆ 135 ಹಾಗೂ 62 ಕಿ.ಮೀ.ಗೆ 165) ಒಂದು ಕಡೆಗೆ ಸಾಗಲು 300 ರೂ. ನಿಗದಿ ಮಾಡಿದ್ದು, ಎರಡೂ ಕಡೆ ಓಡಾಡಲು ಕಾರಿಗೆ 600 ರೂ. ನಿಗದಿ ಮಾಡಲಾಗಿದೆ. ಇನ್ನು ಭಾರಿ ವಾಹನ ಹಾಗೂ ವಾಣಿಜ್ಯ ವಾಹನಗಳಿಗೆ ಒಂದು ಕಡೆಗೆ 2 ಸಾವಿರದಂತೆ ಎರಡೂ ಕಡೆ ಸಾಗಲು 4 ಸಾವಿರ ನಿಗದಿ ಮಾಡಲಾಗಿದೆ. ಈ ಲೆಕ್ಕಾಚಾರದಲ್ಲಿ 90 ಸಾವಿರ ಕಾರುಗಳಿಗೆ 600 ರೂ.ನಂತೆ ಪ್ರತಿನಿತ್ಯ 5,40,00,000 (5.40 ಕೋಟಿ) ರೂ. ಸಂಗ್ರಹವಾಗಲಿದೆ. ಆಮೂಲಕ ವರ್ಷದ 365 ದಿನಕ್ಕೆ 1971 ಕೋಟಿಯಿಂದ 2 ಸಾವಿರ ಕೋಟಿಯಷ್ಟು ಸಂಗ್ರಹವಾಗಲಿದೆ. 10 ವರ್ಷ ಟೋಲ್ ಸಂಗ್ರಹಿಸಿದರೆ 20 ಸಾವಿರ ಕೋಟಿ ಸಂಗ್ರಹವಾಗಲಿದ್ದು, ಪ್ರತಿ ಎರಡು ವರ್ಷಕ್ಕೊಮ್ಮೆ ಟೋಲ್ ದರ ಹೆಚ್ಚಳ ಮಾಡಿದಾಗ 110 ವರ್ಷಗಳಲ್ಲಿ ಸುಮಾರು 25 ಸಾವಿರ ಕೋಟಿ ಹಣವನ್ನು ಟೋಲ್ ಮೂಲಕ ಸಂಗ್ರಹವಾಗಲಿದೆ. ಬೆಂಗಳೂರು- ಮೈಸೂರು ಹೆದ್ದಾರಿಯಿಂದ ಮೋದಿ ಸರ್ಕಾರ 15 ಸಾವಿರ ಕೋಟಿ ಲಾಭ ಮಾಡಲು ಮುಂದಾಗಿರುವುದೇಕೆ?
  6. ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ವೆಚ್ಚ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 6420 ಕೋಟಿಯಷ್ಟಿತ್ತು. ಬಿಜೆಪಿ ಅವಧಿಯಲ್ಲಿ ಇದು 10 ಸಾವಿರ ಕೋಟಿಗೆ ಹೆಚ್ಚಾಗಿದೆ. ಈ ಹೆದ್ದಾರಿಯ ನಿರ್ಮಾಣದ ವೆಚ್ಚ ದುಪ್ಪಟ್ಟಾಗಲು ಕಾರಣವೇನು ಎಂದು ಪ್ರಧಾನಮಂತ್ರಿಗಳು ಉತ್ತರಿಸುವರೇ?
  7. 2022ರ ಆಗಸ್ಟ್ ತಿಂಗಳಲ್ಲಿ ಸುರಿದ ಮಳೆಗೆ ಬೆಂಗಳೂರು ಮೈಸೂರು ಹೆದ್ದಾರಿ ಬಳಿ ನೀರು ಸುಗಮವಾಗಿ ಹರಿದು ಹೋಗಲು ವ್ಯವಸ್ಥೆ ಕಲ್ಪಿಸದ ಕಾರಣ ಕುಂಬಳಗೋಡು, ಇನೋರು ಪಾಳ್ಯ ಟೋಲ್ ಹಗೇಟೆ, ಚನ್ನಪಟ್ಟಣ ಮತ್ತು ರಾಮನಗರದಲ್ಲಿ ಪ್ರವಾಹ ಉಂಟಾಗಿತ್ತು. ಇನ್ನು ಹೆದ್ದಾರಿಯ ಎರಡೂ ಬದಿಯಲ್ಲಿರುವ ರೈತರ ಕೃಷಿ ಭೂಮಿಗೆ ನೀರಾವರಿ ನೀರು ಹರಿಯಲು ಅಡ್ಡಿಯುಂಟಾಗಿದೆ. ಸೂಕ್ತ ಪ್ರವಾಹ ನಿಯಂತ್ರಣ ಕ್ರಮಗಳು ಮತ್ತು ಎರಡೂ ಕಡೆಯ ರೈತರಿಗೆ ಸೂಕ್ತ ನೀರಾವರಿ ಸೌಲಭ್ಯಗಳಿಲ್ಲದೆ ಪ್ರಧಾನಿ ರಾಷ್ಟ್ರೀಯ ಹೆದ್ದಾರಿಯನ್ನು ಏಕೆ ಉದ್ಘಾಟಿಸುತ್ತಿದ್ದಾರೆ?
  8. ಬಿಜೆಪಿ ಸೃಷ್ಟಿಸಿದ ಈ ಮಾನವ ನಿರ್ಮಿತ ವಿಪತ್ತಿಗೆ ಮಂಡ್ಯ ಮತ್ತು ಮೈಸೂರು ಸಂಸದರು ಉದ್ದೇಶಪೂರ್ವಕವಾಗಿ ಕಣ್ಣು ಮುಚ್ಚಿದ್ದಾರೆ. ಪ್ರಯಾಣಿಕರು ಮತ್ತು ರೈತರ ದುಃಸ್ಥಿತಿಯ ಬಗ್ಗೆ ಪ್ರಧಾನಿ ಮತ್ತು ಮಂಡ್ಯ ಮತ್ತು ಮೈಸೂರಿನ ಬಿಜೆಪಿ ಸಂಸದರು ಏಕೆ ಅಸಡ್ಡೆ ತೋರುತ್ತಿದ್ದಾರೆ?

ಇದನ್ನೂ ಓದಿ: ನಾಳೆ ಪ್ರಧಾನಿ ಮೋದಿ ಮಂಡ್ಯ, ಮದ್ದೂರು ಪ್ರವಾಸ; ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್!

ಪ್ರಧಾನಿ ಮೋದಿ ಅವರು ಭಾನುವಾರ (ಮಾರ್ಚ್ 12) ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಯೋಜನೆಯು NH-275 ರ ಬೆಂಗಳೂರು-ನಿಡಘಟ್ಟ-ಮೈಸೂರು ವಿಭಾಗದ ಆರು-ಪಥವನ್ನು ಒಳಗೊಂಡಿರುತ್ತದೆ. 118 ಕಿಲೋಮೀಟರ್ ಉದ್ದದ ಈ ಹೆದ್ದಾರಿಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಭಾರತ್ ಮಾಲಾ ಯೋಜನೆಯಡಿ ಸುಮಾರು 8,480 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. 6 ಲೇನ್​ಗಳನ್ನು ಪ್ರಮುಖ ಕ್ಯಾರೇಜ್​ವೇ ಆಗಿ ಗುರುತಿಸಲಾಗಿದ್ದು, ಎರಡೂ ಬದಿಗೆ 2 ಲೇನ್​ನ ಸರ್ವೀಸ್ ರಸ್ತೆ ಇರಲಿದೆ.

ಈ ಹೆದ್ದಾರಿಯಲ್ಲಿ ವಾಹನ ಸಂಚಾರ ಆರಂಭವಾದರೆ ಬೆಂಗಳೂರು ಮತ್ತು ಮೈಸೂರು ನಡುವಿನ ಪ್ರಯಾಣದ ಸಮಯ ಸುಮಾರು 3.5 ಗಂಟೆಯಿಂದ 1.5 ಗಂಟೆಗೆ ಇಳಿಕೆಯಾಗಲಿದೆ. 8 ಕಿಲೋಮೀಟರ್ ಉದ್ದದ ಎಲಿವೇಟೆಡ್ ಕಾರಿಡಾರ್, 9 ಪ್ರಮುಖ ಸೇತುವೆಗಳು, 42 ಕಿರು ಸೇತುವೆಗಳು, 64 ಅಂಡರ್​ ಪಾಸ್​ಗಳು, 11 ಓವರ್​ ಪಾಸ್​ಗಳು, 4 ರೈಲ್ವೆ ಮೇಲ್ಸೇತುವೆಗಳು, 5 ಬೈಪಾಸ್​​ಗಳನ್ನು (ಮಂಡ್ಯ, ಮದ್ದೂರು, ರಾಮನಗರ, ಚನ್ನಪಟ್ಣ, ಬಿಡಡಿ) ಸಂಚಾರ ದಟ್ಟಣೆ ತಡೆಯುವ ಸಲುವಾಗಿ ನಿರ್ಮಾಣ ಮಾಡಲಾಗಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:53 pm, Sat, 11 March 23

ಎಸ್ಐಟಿ ಆದಷ್ಟು ಬೇಗ ತನಿಖೆಯನ್ನು ಪೂರ್ತಿಗೊಳಿಸಬೇಕು: ವಿಜಯೇಂದ್ರ
ಎಸ್ಐಟಿ ಆದಷ್ಟು ಬೇಗ ತನಿಖೆಯನ್ನು ಪೂರ್ತಿಗೊಳಿಸಬೇಕು: ವಿಜಯೇಂದ್ರ
ಮುಂದಿನ ಭಾನುವಾರ ಧರ್ಮಸ್ಥಳಕ್ಕೆ ಬಿಜೆಪಿ ತಂಡ: ವಿಜಯೇಂದ್ರ ಹೇಳಿದ್ದೇನು ನೋಡಿ
ಮುಂದಿನ ಭಾನುವಾರ ಧರ್ಮಸ್ಥಳಕ್ಕೆ ಬಿಜೆಪಿ ತಂಡ: ವಿಜಯೇಂದ್ರ ಹೇಳಿದ್ದೇನು ನೋಡಿ
ವಾಲ್ಮೀಕಿ ಸಮುದಾಯದವರಿಂದ ತುಮಕೂರುನಲ್ಲಿ ಇಂದು ಬೃಹತ್ ರ‍್ಯಾಲಿ!
ವಾಲ್ಮೀಕಿ ಸಮುದಾಯದವರಿಂದ ತುಮಕೂರುನಲ್ಲಿ ಇಂದು ಬೃಹತ್ ರ‍್ಯಾಲಿ!
ಬೀದಿ ನಾಯಿಗಳಿಂದ ಮಕ್ಕಳನ್ನು ಕಾಪಾಡಿದ ಜರ್ಮನ್ ಶೆಫರ್ಡ್​
ಬೀದಿ ನಾಯಿಗಳಿಂದ ಮಕ್ಕಳನ್ನು ಕಾಪಾಡಿದ ಜರ್ಮನ್ ಶೆಫರ್ಡ್​
ಬಿಬಿಎಂಪಿ ಚುನಾವಣೆ ಆದಷ್ಟು ಬೇಗ ನಡೆಯಲಿದೆ: ರಿಜ್ವಾನ್ ಅರ್ಷದ್
ಬಿಬಿಎಂಪಿ ಚುನಾವಣೆ ಆದಷ್ಟು ಬೇಗ ನಡೆಯಲಿದೆ: ರಿಜ್ವಾನ್ ಅರ್ಷದ್
ನಿಂತಿದ್ದ ಖಾಸಗಿ ಶಾಲಾ ಬಸ್​​​​ಗೆ ಬೆಂಕಿ; ವ್ಯಕ್ತಿ ಅನುಮಾನಾಸ್ಪದ ಸಾವು
ನಿಂತಿದ್ದ ಖಾಸಗಿ ಶಾಲಾ ಬಸ್​​​​ಗೆ ಬೆಂಕಿ; ವ್ಯಕ್ತಿ ಅನುಮಾನಾಸ್ಪದ ಸಾವು
Daily Devotional: ಶಿಶು ಮರಣಕ್ಕೆ ಶ್ರಾದ್ಧ ಕಾರ್ಯ ಮಾಡಬೇಕಾ?
Daily Devotional: ಶಿಶು ಮರಣಕ್ಕೆ ಶ್ರಾದ್ಧ ಕಾರ್ಯ ಮಾಡಬೇಕಾ?
Daily horoscope: ರವಿ ಕರ್ಕಾಟಕ ರಾಶಿಯಲ್ಲಿ, ಚಂದ್ರ ಮೀನ ರಾಶಿಯಲ್ಲಿ ಸಂಚಾರ
Daily horoscope: ರವಿ ಕರ್ಕಾಟಕ ರಾಶಿಯಲ್ಲಿ, ಚಂದ್ರ ಮೀನ ರಾಶಿಯಲ್ಲಿ ಸಂಚಾರ
2 ಅಂಕ ಕಡಿಮೆ ಬಂದಿದ್ದಕ್ಕೆ ಶಿಕ್ಷಕಿಯನ್ನು ಚಪ್ಪಲಿಯಿಂದ ಥಳಿಸಿದ ವಿದ್ಯಾರ್ಥಿ
2 ಅಂಕ ಕಡಿಮೆ ಬಂದಿದ್ದಕ್ಕೆ ಶಿಕ್ಷಕಿಯನ್ನು ಚಪ್ಪಲಿಯಿಂದ ಥಳಿಸಿದ ವಿದ್ಯಾರ್ಥಿ
ನಿಮಗಿಂತ ಹೆಚ್ಚೇ ವಿದ್ಯಾವಂತ; ಬಿಜೆಪಿ ಎಂಎಲ್‌ಸಿ ಮಗನಿಗೆ ಪೊಲೀಸ್ ಕ್ಲಾಸ್
ನಿಮಗಿಂತ ಹೆಚ್ಚೇ ವಿದ್ಯಾವಂತ; ಬಿಜೆಪಿ ಎಂಎಲ್‌ಸಿ ಮಗನಿಗೆ ಪೊಲೀಸ್ ಕ್ಲಾಸ್