ಡಿ ಕಾಂಗ್ರೆಸ್​ ಸೋಲಿಸಲು ಎಸ್ ಕಾಂಗ್ರೆಸ್​​ಗೆ 500 ಕೋಟಿ ರೂ. ಸಪಾರಿ: ಏನಿದು ಅಶೋಕ್​ ಹೇಳಿದ ಡಿ. ಎಸ್ ಫುಲ್ ಫಾರ್ಮ್

TV9kannada Web Team

TV9kannada Web Team | Edited By: Rakesh Nayak Manchi

Updated on: Jan 21, 2023 | 7:46 PM

ಕಡಿಮೆ ಅಂತರದಲ್ಲಿ ಗೆಲ್ಲಬಹುದಾದ 25ರಿಂದ 30 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸೋಲಿಸಲು ಸುಪಾರಿ ಕೊಡಲಾಗಿದೆ ಎಂಬ ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷರು ಮಾಡಿದ ಆರೋಪ ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಚರ್ಚೆಗೆ ಎಡೆಮಾಡಿಕೊಟ್ಟಿದೆ.

ಡಿ ಕಾಂಗ್ರೆಸ್​ ಸೋಲಿಸಲು ಎಸ್ ಕಾಂಗ್ರೆಸ್​​ಗೆ 500 ಕೋಟಿ ರೂ. ಸಪಾರಿ: ಏನಿದು ಅಶೋಕ್​ ಹೇಳಿದ ಡಿ. ಎಸ್ ಫುಲ್ ಫಾರ್ಮ್
ಕಂದಾಯ ಸಚಿವ ಆರ್.ಅಶೋಕ್

ಹೊಸಕೋಟೆ: ಕರ್ನಾಟಕ ಕಾಂಗ್ರೆಸ್​ ಈಗ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ (D.K.Shivakumar) ಮತ್ತು ಸಿದ್ದರಾಮಯ್ಯ ಕಾಂಗ್ರೆಸ್ (Siddaramaiah) ಆಗಿದೆ. ಡಿ ಕಾಂಗ್ರೆಸ್ (ಡಿ.ಕೆ.ಶಿವಕುಮಾರ್ ಬಣ) ಸೋಲಿಸಲು ಎಸ್​ ಕಾಂಗ್ರೆಸ್​​ಗೆ (ಸಿದ್ದರಾಮಯ್ಯ ಬಣ) 500 ಕೋಟಿ ರೂಪಾಯಿ ಸುಪಾರಿ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್​ಗೆ ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್, ಕರ್ನಾಟಕದಲ್ಲಿ ಕಾಂಗ್ರೆಸ್ ಸೋಲಿಸಲು 500 ಕೋಟಿ ಸುಪಾರಿ ನೀಡಿದ್ದಾರೆ ಎಂದು ಈ ಹಿಂದೆ ತೆಲಂಗಾಣ ಕಾಂಗ್ರೆಸ್​ ಅಧ್ಯಕ್ಷ ರೇವಂತ್​ ರೆಡ್ಡಿ ಆರೋಪಿಸಿದ್ದರು. ಇದನ್ನೇ ಮುಂದಿಟ್ಟುಕೊಂಡು ಸಚಿವ ಅಶೋಕ್ ಈ ಹೇಳಿಕೆ ನೀಡಿದ್ದಾರೆ.

ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರಿಂದ ಬಿಜೆಪಿಗೆ‌ ಲಾಭವಾಗುತ್ತದೆ. ಇವರಿಬ್ಬರು ಇಲ್ಲದಿದ್ದರು ಕೂಡ ಬಿಜೆಪಿಗೆ‌ ಲಾಭವಾಗಲಿದೆ ಎಂದ ಸಚಿವ ಅಶೋಕ್, ಈಗಾಗಲೇ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಹವಾ ಶುರುವಾಗಿದೆ. ಮುಂದಿನ ಮೂರು ನಾಲ್ಕು ದಿನಗಳಲ್ಲಿ ಅಮಿತ್ ಶಾ ಮತ್ತೆ ರಾಜ್ಯಕ್ಕೆ ಬರುತ್ತಿದ್ದಾರೆ. ಫೆಬ್ರವರಿ ಮೊದಲ ವಾರದಲ್ಲಿ ಪ್ರಧಾನಿ ಮೋದಿ ರಾಜ್ಯಕ್ಕೆ ಬರುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಹೇಳಿದರು.

ತಾಜಾ ಸುದ್ದಿ

ಇದನ್ನೂ ಓದಿ: Assembly Polls: ಜಮೀರ್ ತೆಲಂಗಾಣ ಹೋಗಿದ್ದು ವೈಯಕ್ತಿಕ ವಿಚಾರ, ಅದನ್ನೆಲ್ಲ ನಾನು ವಿಚಾರಿಸುವುದು ಸರಿಯಲ್ಲ: ಡಿಕೆ ಶಿವಕುಮಾರ್

ರೇವಂತ್ ರೆಡ್ಡಿ ಹೇಳಿಕೆಗಳು ಎಂದೂ ಸುಳ್ಳಾಗಲು ಸಾಧ್ಯವೇ ಇಲ್ಲ

ಟಿಪಿಸಿಸಿ ಅಧ್ಯಕ್ಷ ರೇವಂತ್ ರೆಡ್ಡಿ ಅವರು ಉತ್ತಮ ವಾಗ್ಮಿ ಮಾತ್ರವಲ್ಲದೆ ಒಳ್ಳೆಯ ನಾಯಕರೂ ಆಗಿದ್ದಾರೆ. ಅವರು ನನ್ನ ಸ್ನೇಹಿರೂ ಆಗಿದ್ದಾರೆ. ಅವರು ಕಾಂಗ್ರೆಸ್​ನಲ್ಲಿದ್ದಾರೆ ನಾನು ಬಿಜೆಪಿಯಲ್ಲಿದ್ದೇನೆ. ಅವರು ಆ ರಾಜ್ಯದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದಾರೆ. ಹೀಗಿದ್ದಾಗ ಅವರ ಹೇಳಿಕೆಗಳು ಎಂದೂ ಸುಳ್ಳಾಗಲು ಸಾಧ್ಯವೇ ಇಲ್ಲ. ಅವರು ಮಾಹಿತಿ‌ ಇಲ್ಲದೆ ಹೇಳುವುದಿಲ್ಲ ಎಂದು ಅಶೋಕ್ ಹೇಳಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ ಸೋಲಿಸಲು 500 ಕೋಟಿ ರೂ. ಸುಪಾರಿ ಪಡೆದ್ರಾ ಜಮೀರ್ ಅಹ್ಮದ್? ಕೈ ಅಧ್ಯಕ್ಷರೇ ಸಿಡಿಸಿದ ಬಾಂಬ್

ಅವರು (ಕೆಸಿಆರ್) ವಿರೋಧ ಪಕ್ಷದವರು, ಮುಗಿಸಲು ಇರುವವರು. ಇವರು (ಜಮೀರ್ ಅಹಮದ್ ಖಾನ್) ಅಲ್ಲಿಗೆ ಹೋಗಲೇಬಾರದು. ಅದಾಗ್ಯೂ ಜಮೀರ್ ಅಹಮ್ಮದ್ ಖಾನ್ ಅವರು ತೆಲಂಗಾಣ ಸಿಎಂ ಕೆಸಿಆರ್ ಅವರನ್ನು ಭೇಟಿಯಾಗಿರುವುದನ್ನು ಅಲ್ಲಿನ ಕಾಂಗ್ರೆಸ್ ಅಧ್ಯಕ್ಷರು ಒಪ್ಪಿಕೊಂಡಿದ್ದಾರೆ. ಹೀಗಿದ್ದಾಗ ವ್ಯವಹಾರವೂ ಆಗಿರುತ್ತದೆ. ಜೆಡಿಎಸ್ ಜೊತೆ ಕೆಸಿಆರ್ ಹೊಂದಾಣಿಕೆ ಮಾಡಿಕೊಂಡಿದ್ದಾರೆ‌. ಕೋಲಾರದಲ್ಲಿ ಸಿದ್ದಾರಾಮಯ್ಯ ಸೋಲಿಸಲು ತಂಡ ರೆಡಿ ಇದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮುಗಿಸಲು ಸುಪಾರಿ ನೀಡಲಾಗಿದೆ. ಇನ್ನು ಚಟ್ಟ ಕಟ್ಟಿಕೊಂಡು ಸ್ಮಶಾನದ ಕಡೆ ಹೋಗಬೇಕು ಅಷ್ಟೇ ಎಂದು ಅಶೋಕ್ ಹೇಳಿದರು.

ರಾಜಕೀಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada