Congress President Polls ನನ್ನ ಪಾತ್ರ ಬಗ್ಗೆ ಕಾಂಗ್ರೆಸ್ ಅಧ್ಯಕ್ಷರು ನಿರ್ಧರಿಸುತ್ತಾರೆ, ಖರ್ಗೆಯವರಲ್ಲಿ ಕೇಳಿ: ರಾಹುಲ್ ಗಾಂಧಿ

ಕಾಂಗ್ರೆಸ್ ಚುನಾವಣೆ ಬಗ್ಗೆಯೇ ಎಲ್ಲರೂಕೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಮುಕ್ತ ಮತ್ತು ಪಾರದರ್ಶಕ ಚುನಾವಣೆಯನ್ನು ನಡೆಸಿದೆ ಎಂದು ನನಗೆ ಹೆಮ್ಮೆ ಇದೆ. ಬಿಜೆಪಿ ಮತ್ತು ಇತರ ಪ್ರಾದೇಶಿಕ ಪಕ್ಷಗಳಲ್ಲಿನ ಚುನಾವಣೆ ಬಗ್ಗೆ ಯಾರು ಹೆಚ್ಚಿನ ಆಸಕ್ತಿ ಹೊಂದಿಲ್ಲ ಯಾಕೆ

Congress President Polls ನನ್ನ ಪಾತ್ರ ಬಗ್ಗೆ ಕಾಂಗ್ರೆಸ್ ಅಧ್ಯಕ್ಷರು ನಿರ್ಧರಿಸುತ್ತಾರೆ, ಖರ್ಗೆಯವರಲ್ಲಿ ಕೇಳಿ: ರಾಹುಲ್ ಗಾಂಧಿ
ರಾಹುಲ್ ಗಾಂಧಿ
Follow us
| Updated By: ರಶ್ಮಿ ಕಲ್ಲಕಟ್ಟ

Updated on:Oct 19, 2022 | 2:03 PM

ಕರ್ನೂಲ್ (ಆಂಧ್ರಪ್ರದೇಶ): ಪಕ್ಷದ ಚುನಾವಣಾ ಫಲಿತಾಂಶ ಪ್ರಕಟವಾಗುವ ಮುನ್ನವೇ ರಾಹುಲ್ ಗಾಂಧಿ (Rahul Gandhi) ಅವರು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge)  ಅವರನ್ನು ಕಾಂಗ್ರೆಸ್ ಅಧ್ಯಕ್ಷ ಎಂದು ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರಾಹುಲ್ ಗಾಂಧಿ ಹೊಸ ಅಧ್ಯಕ್ಷರು ನನ್ನ ಪಾತ್ರ ಏನು ಎಂಬುದನ್ನು ನಿರ್ಧರಿಸುತ್ತಾರೆ. ‘ಖರ್ಗೆ ಜೀ ಮತ್ತು ಸೋನಿಯಾ ಜೀ ಅವರಲ್ಲಿ ಕೇಳಿ ಎಂದು ಮಲ್ಲಿಕಾರ್ಜುನ ಖರ್ಗೆ ಮತ್ತು ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೆಸರು ಉಲ್ಲೇಖಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯ ಫಲಿತಾಂಶ ಕೆಲವೇ ನಿಮಿಷಗಳಲ್ಲಿ ಪ್ರಕಟವಾಗಲಿದ್ದು ಖರ್ಗೆ ಗೆಲುವು ಖಚಿತವಾಗಿದೆ.  ಇಂದು ಆಂಧ್ರಪ್ರದೇಶದ ಕರ್ನೂರ್ ನಲ್ಲಿ ಪಕ್ಷದ ‘ಭಾರತ್ ಜೋಡೋ ಯಾತ್ರೆ’ (Bharat Jodo Yatra)ನೇತೃತ್ವ ವಹಿಸಿದ್ದ ರಾಹುಲ್ ಗಾಂಧಿ ಮಧ್ಯಾಹ್ನ 1.30 ರ ಸುಮಾರಿಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಈ ಹೊತ್ತಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಚುನಾವಣೆಯ ಮತಎಣಿಕೆ ಮುಗಿದಿದ್ದರೂ ಫಲಿತಾಂಶ ಪ್ರಕಟವಾಗಿಲ್ಲ.

ಸುದ್ದಿಗೋಷ್ಠಿಯಲ್ಲಿ ಆಂಧ್ರಪ್ರದೇಶದ  ವಿಭಜನೆ ಬಗ್ಗೆ ಮಾತನಾಡಿದ ರಾಹುಲ್  ಆಂಧ್ರಪ್ರದೇಶದ ಜನರಿಗೆ ಭಾರತೀಯ ಒಕ್ಕೂಟವು ಕೆಲವು ಬದ್ಧತೆಗಳನ್ನು ಮಾಡಿದೆ. ಆ ಮೂಲಭೂತ ಬದ್ಧತೆಗಳನ್ನು ಪೂರೈಸಬೇಕು ಎಂದು ನಾವು ನಂಬುತ್ತೇವೆ. ಕಾಂಗ್ರೆಸ್ ಚುನಾವಣೆ ಬಗ್ಗೆಯೇ ಎಲ್ಲರೂ ಕೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಮುಕ್ತ ಮತ್ತು ಪಾರದರ್ಶಕ ಚುನಾವಣೆಯನ್ನು ನಡೆಸಿದೆ ಎಂದು ನನಗೆ ಹೆಮ್ಮೆ ಇದೆ. ಬಿಜೆಪಿ ಮತ್ತು ಇತರ ಪ್ರಾದೇಶಿಕ ಪಕ್ಷಗಳಲ್ಲಿನ ಚುನಾವಣೆ ಬಗ್ಗೆ ಯಾರು ಹೆಚ್ಚಿನ ಆಸಕ್ತಿ ಹೊಂದಿಲ್ಲ ಯಾಕೆ? ಎಂದು ಅವರು ಕೇಳಿದ್ದಾರೆ.

ದೇಶದಲ್ಲಿ ಚುನಾವಣೆ ನಡೆಸುವ ಮತ್ತು ಚುನಾವಣಾ ಆಯೋಗ ಹೊಂದಿರುವ ಏಕೈಕ ರಾಜಕೀಯ ಪಕ್ಷ ನಮ್ಮದು. ನಾನು ಮಿಸ್ತ್ರಿ ಜಿ (ಕಾಂಗ್ರೆಸ್ ಸಿಇಸಿ ಅಧ್ಯಕ್ಷ) ಅವರೊಂದಿಗೆ ಕೆಲಸ ಮಾಡಿದ್ದೇನೆ, ಅವರು ನೇರ ನುಡಿಯ ವ್ಯಕ್ತಿ. ಸಮಸ್ಯೆಗಳನ್ನು ಇಸಿಗೆ ತಿಳಿಸಲಾಗುವುದು, ಅವರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ರಾಹುಲ್ ಹೇಳಿದ್ದಾರೆ.

Published On - 1:44 pm, Wed, 19 October 22