Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂತಿಮ ತೀರ್ಪು ಮಲ್ಲಿಕಾರ್ಜುನ ಖರ್ಗೆ ಪರವಾಗಿದೆ, ಅವರಿಗೆ ಅಭಿನಂದನೆಗಳು: ಶಶಿ ತರೂರ್

ಮಲ್ಲಿಕಾರ್ಜುನ ಖರ್ಗೆ ಅವರಿಗೆ ಶುಭಾಶಯ ಕೋರಿದ ತರೂರ್, ಅಂತಿಮ ತೀರ್ಪು ಖರ್ಗೆ ಪರವಾಗಿದೆ. ಕಾಂಗ್ರೆಸ್ ಚುನಾವಣೆ ಗೆದ್ದ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದಿದ್ದಾರೆ.

ಅಂತಿಮ ತೀರ್ಪು ಮಲ್ಲಿಕಾರ್ಜುನ ಖರ್ಗೆ ಪರವಾಗಿದೆ, ಅವರಿಗೆ ಅಭಿನಂದನೆಗಳು: ಶಶಿ ತರೂರ್
ಶಶಿ ತರೂರ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Oct 19, 2022 | 3:00 PM

ದೆಹಲಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ (Cong prez elections) ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಗೆಲುವು ಸಾಧಿಸಿದ್ದಾರೆ. ಶಶಿ ತರೂರ್ (Shashi Tharoor) ಮತ್ತು ಮಲ್ಲಿಕಾರ್ಜುನ ಖರ್ಗೆ ನಡುವೆ ಸ್ಪರ್ಧೆ ನಡೆದಿದ್ದು ಖರ್ಗೆ ಅವರಿಗೆ 7000 ಮತ್ತು ತರೂರ್ ಅವರಿಗೆ 1000 ಮತ ಲಭಿಸಿದೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್ ಅಧ್ಯಕ್ಷರಾಗಿ ಘೋಷಿಸಿದ ಕೂಡಲೇ ಶಶಿ ತರೂರ್ ಅಭಿನಂದನೆ ಸಲ್ಲಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಶುಭಾಶಯ ಕೋರಿದ ತರೂರ್, ಅಂತಿಮ ತೀರ್ಪು ಖರ್ಗೆ ಪರವಾಗಿದೆ. ಕಾಂಗ್ರೆಸ್ ಚುನಾವಣೆ ಗೆದ್ದ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದಿದ್ದಾರೆ. ಮುಕ್ತ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯನ್ನು ಬೆಂಬಲಿಸಲು ತಮ್ಮದೇ ಆದ ಪ್ರಯತ್ನ ಮಾಡಿದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ನನ್ನ ಧನ್ಯವಾದಗಳು.

ಕಾಂಗ್ರೆಸ್ ಅಧ್ಯಕ್ಷರಾಗುವುದು ದೊಡ್ಡ ಗೌರವ ಮತ್ತು ಜವಾಬ್ದಾರಿಯುಳ್ಳದ್ದು. ಈ ಕಾರ್ಯದಲ್ಲಿ ಖರ್ಗೆ ಜೀ ಅವರಿಗೆ ನಾನು ಶುಭ ಕೋರುತ್ತೇನೆ. ಸಾವಿರಕ್ಕೂ ಹೆಚ್ಚು ಸಹೋದ್ಯೋಗಿಗಳ ಬೆಂಬಲವನ್ನು ಪಡೆದಿರುವುದು, ಭಾರತದಾದ್ಯಂತ ಕಾಂಗ್ರೆಸ್‌ನ ಅನೇಕ ಹಿತೈಷಿಗಳ ಭರವಸೆ ಮತ್ತು ಆಕಾಂಕ್ಷೆಗಳನ್ನು ಹೊಂದಿರುವುದು ಒಂದು ಸುಯೋಗವಾಗಿತ್ತು ಎಂದು ತರೂರ್ ಹೇಳಿದ್ದಾರೆ.

ಟ್ವೀಟ್  ಜತೆ ಪೋಸ್ಟ್ ಮಾಡಿರುವ ಪತ್ರದಲ್ಲಿ ಶಶಿ ತರೂರ್ ಹೀಗೆ ಬರೆದಿದ್ದಾರೆ

ಅಕ್ಟೋಬರ್ 17 ರಂದು,  ಪಕ್ಷದ ಆಂತರಿಕ ಪ್ರಜಾಪ್ರಭುತ್ವದ ನಿಜವಾದ ಆಚರಣೆಯಾಗಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನ 9500 ಪ್ರತಿನಿಧಿಗಳು ಪಕ್ಷದ ಅಧ್ಯಕ್ಷ ಹುದ್ದೆಯ ಚುನಾವಣೆಯಲ್ಲಿ ತಮ್ಮ ಪಾತ್ರವನ್ನು ವಹಿಸಿದರು. ಇಂದು ಅಂತಿಮ ತೀರ್ಪು ಮಲ್ಲಿಕಾರ್ಜುನ ಖರ್ಗೆ ಜೀ ಪರವಾಗಿದೆ.ಅವರ ಗೆಲುವಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಲು ಬಯಸುತ್ತೇನೆ. ಪಕ್ಷದ ಪ್ರತಿನಿಧಿಗಳ ತೀರ್ಮಾನವೇ ಅಂತಿಮ ಮತ್ತು ನಾನು ವಿನಮ್ರವಾಗಿ ಸ್ವೀಕರಿಸುತ್ತೇನೆ. ಅದರ ಕಾರ್ಯಕರ್ತರಿಗೆ ಅಧ್ಯಕ್ಷರಾಗಲು ಅವಕಾಶ ನೀಡುವ ಪಕ್ಷದ ಸದಸ್ಯರಾಗಿರುವುದು ನನ್ನ ಭಾಗ್ಯ. ಈ ಚುನಾವಣೆಯಲ್ಲಿ ಭಾಗವಹಿಸಲು ಒಗ್ಗೂಡಿದ ಪ್ರತಿನಿಧಿಗಳಿಗೆ ನನ್ನ ಧನ್ಯವಾದ ಮತ್ತು ಅಭಿನಂದನೆಗಳನ್ನು ಸಲ್ಲಿಸಲು ಬಯಸುತ್ತೇನೆ. ನಮ್ಮ ಪಕ್ಷದ ಒಳಿತಿಗಾಗಿ ಈ ಚುನಾವಣೆಗಳು ರಚನಾತ್ಮಕ ಮನೋಭಾವದಿಂದ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಸಮಯವನ್ನು ಸಮರ್ಪಣಾಭಾವದಿಂದ ಕೆಲಸ ಮಾಡಿದ ಅಸಂಖ್ಯಾತ ಮತ್ತು ಆಗಾಗ್ಗೆ ಅನಾಮಧೇಯ ಕಾರ್ಯಕರ್ತರಿಗೆ ನನ್ನ ಅಪಾರ ಕೃತಜ್ಞತೆಗಳು ಎಂದಿದ್ದಾರೆ.

Published On - 2:40 pm, Wed, 19 October 22