ಕರ್ನಾಟಕ ವಿಧಾನ ಪರಿಷತ್​ಗೆ ದ್ವೈವಾರ್ಷಿಕ ಚುನಾವಣೆ ದಿನಾಂಕ ಪ್ರಕಟ, ಡಿಸೆಂಬರ್​​ನಲ್ಲಿ 25 ಸ್ಥಾನಗಳಿಗೆ ಮತದಾನ

Karnataka Legislative Council: ಕರ್ನಾಟಕ ವಿಧಾನ ಪರಿಷತ್​ಗೆ ದ್ವೈವಾರ್ಷಿಕ ಚುನಾವಣೆ ದಿನಾಂಕ ಪ್ರಕಟವಾಗಿದ್ದು, ಡಿಸೆಂಬರ್ 10 ಶುಕ್ರವಾರ ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ. ಡಿಸೆಂಬರ್ 14ರಂದು (ಮಂಗಳವಾರ) 25 ಸ್ಥಾನಗಳ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ಕರ್ನಾಟಕ ವಿಧಾನ ಪರಿಷತ್​ಗೆ ದ್ವೈವಾರ್ಷಿಕ ಚುನಾವಣೆ ದಿನಾಂಕ ಪ್ರಕಟ, ಡಿಸೆಂಬರ್​​ನಲ್ಲಿ 25 ಸ್ಥಾನಗಳಿಗೆ ಮತದಾನ
ವಿಧಾನ ಸೌಧ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Nov 09, 2021 | 2:00 PM

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್​ನ 25 ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ ನಿಗದಿಯಾಗಿದ್ದು, ಚುನಾವಣಾ ದಿನಾಂಕ ಪ್ರಕಟಿಸಲಾಗಿದೆ. ಮುಂದಿನ ತಿಂಗಳು ಡಿಸೆಂಬರ್ 10ರಂದು ರಾಜ್ಯ ಮೇಲ್ಮನೆಯ (Karnataka Legislative Council) 25 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ದಿನಾಂಕ ಪ್ರಕಟಿಸಿ, ಚುನಾವಣಾ ಆಯೋಗ (Election Commission) ಚುನಾವಣಾ ವೇಳಾಪಟ್ಟಿ ಬಿಡುಗಡೆ ಮಾಡಿದೆ. ನವೆಂಬರ್ 16ರಂದು ಮೇಲ್ಮನೆ ಚುನಾವಣೆಗೆ (Biennial elections) ಅಧಿಸೂಚನೆ ಪ್ರಕಟವಾಗಲಿದ್ದು, ನವೆಂಬರ್ 23ರಂದು ನಾಮಪತ್ರ ಸಲ್ಲಿಕೆಗೆ ಕೊನೇ ದಿನವಾಗಿದೆ. ನವೆಂಬರ್ 24ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನವೆಂಬರ್ 26 ನಾಮಪತ್ರ ಹಿಂಪಡೆಯಲು ಕೊನೇ ದಿನವಾಗಿದೆ. ಡಿಸೆಂಬರ್ 10 ಶುಕ್ರವಾರ ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ. ಡಿಸೆಂಬರ್ 14ರಂದು (ಮಂಗಳವಾರ) 25 ಸ್ಥಾನಗಳ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ಡಿಸೆಂಬರ್ 10ರಂದು ರಾಜ್ಯ ವಿಧಾನ ಪರಿಷತ್​ನ 25 ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದ್ದು, ಬೀದರ್, ಕಲಬುರಗಿ, ವಿಜಯಪುರ, ಬೆಳಗಾವಿ, ಉತ್ತರ ಕನ್ನಡ, ಧಾರವಾಡ, ರಾಯಚೂರು, ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ತುಮಕೂರು, ಮಂಡ್ಯ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಕೊಡಗು ಮತ್ತು ಮೈಸೂರು ಸ್ಥಳೀಯ ಸಂಸ್ಥೆಗಳ ಪ್ರಾಧಿಕಾರಗಳಿಂದ ಎಲೆಕ್ಷನ್ ನಡೆಯಲಿದೆ.

(Biennial elections to 25 seats to Karnataka Legislative Council to be held on 10th December Election Commission)

Published On - 1:50 pm, Tue, 9 November 21