ಬಿಜೆಪಿ ಜತೆ ಮುನಿಸು: ಜೆಡಿಯು ಶಾಸಕರಿಗೆ ನಿತೀಶ್ ಕುಮಾರ್ ಬುಲಾವ್, ಮುಂದಿನ ನಡೆ ಬಗ್ಗೆ ನಾಳೆ ನಿರ್ಧಾರ

ಬಿಹಾರದ ಆಡಳಿತಾರೂಢ  ಎನ್‌ಡಿಎ ಸರ್ಕಾರದೊಳಗೆ ಹೆಚ್ಚುತ್ತಿರುವ ಭಿನ್ನಾಭಿಪ್ರಾಯಗಳ ಬಗ್ಗೆ ಕೆಲವು ಪ್ರಮುಖ ಪಕ್ಷಗಳು ತಮ್ಮ ಶಾಸಕರ ಸಭೆಗಳನ್ನು ಕರೆದಿರುವ ಹಿನ್ನೆಲೆಯಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್...

ಬಿಜೆಪಿ ಜತೆ ಮುನಿಸು: ಜೆಡಿಯು ಶಾಸಕರಿಗೆ  ನಿತೀಶ್ ಕುಮಾರ್ ಬುಲಾವ್, ಮುಂದಿನ ನಡೆ ಬಗ್ಗೆ ನಾಳೆ ನಿರ್ಧಾರ
ನಿತೀಶ್ ಕುಮಾರ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Aug 08, 2022 | 6:35 PM

ಬಿಜೆಪಿ ಜತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar )ಮುನಿಸಿಕೊಂಡಿದ್ದಾರೆ ಎಂಬ ಊಹಾಪೋಹಗಳ ನಡುವೆಯೇ ನಿತೀಶ್, ಜೆಡಿಯು (JDU) ಪಕ್ಷದ ಎಲ್ಲ ಶಾಸಕರನ್ನು ಕರೆದಿದ್ದು ಇಂದು (ಸೋಮವಾರ)ಸಂಜೆಯೊಳಗೆ ಪಟನಾದಲ್ಲಿರಬೇಕು ಎಂದು ಹೇಳಿದ್ದಾರೆ. ಭಾನುವಾರ ಪ್ರಧಾನಿ ನರೇಂದ್ರ ಮೋದಿಯವರ (Narendra Modi) ನೇತೃತ್ವದಲ್ಲಿನಡೆದ ನೀತಿ ಆಯೋಗ ಆಡಳಿತ ಮಂಡಳಿಯ ಸಭೆಯಲ್ಲಿ ನಿತೀಶ್ ಕುಮಾರ್ ಗೈರಾಗಿದ್ದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಏತನ್ಮಧ್ಯೆ ರಾಷ್ಟ್ರೀಯ ಜನತಾ ದಳ ಮಂಗಳವಾರ ತನ್ನ ಶಾಸಕರ ಸಭೆ ಕರೆದಿದೆ. ಇದಕ್ಕಿಂತ ಮುನ್ನ ಮಾತನಾಡಿದ ಜೆಡಿಯು ರಾಷ್ಟ್ರಾಧ್ಯಕ್ಷ ರಾಜೀವ್ ರಂಜನ್ ಅಲಿಯಾಸ್ ಲಾಲನ್ ಸಿಂಗ್, ಇತ್ತೀಚೆಗೆ ನಿತೀಶ್ ಕುಮಾರ್ ವಿರುದ್ಧ ಎರಡು ಪಿತೂರಿಗಳು ನಡೆದಿವೆ. ಅದರಲ್ಲಿ ಒಂದು 2020ರ ಚಿರಾಗ್ ಮಾಡೆಲ್, ಇದು ನಮ್ಮ ವಿಧಾನಸಭೆ ಸೀಟನ್ನು 43ಕ್ಕೆ ತರುವುದಕ್ಕೆ ಕಾರಣವಾಯಿತು. ಇನ್ನೊಂದು ಈಗ ಸುದ್ದಿಯಲ್ಲಿದ್ದು ಅದನ್ನು ಮೊಳಕೆಯಲ್ಲೇ ಚಿವುಟಲಾಗಿದೆ ಎಂದಿದ್ದಾರೆ. ಶನಿವಾರ ಆರ್​​ಸಿಪಿ ಸಿಂಗ್ ಜೆಡಿಯು ತೊರೆದಿದ್ದಾರೆ. ಜೆಡಿಯು ಮತ್ತು ಬಿಜೆಪಿ ಮುಂದಿನ ಚುನಾವಣೆಯಲ್ಲಿ ಜತೆಯಾಗಿ ಸ್ಪರ್ಧಿಸುತ್ತಿವೆಯೇ ಎಂದು ಕೇಳಿದಾಗ ನಾಳೆ ಏನಾಗುತ್ತದೆ ಎಂಬುದು ಯಾರಿಗೆ ಗೊತ್ತು? ನಾಳೆ ಏನು ಬೇಕಾದರೂ ಆಗಬಹುದು. 2024ರ ಲೋಕಸಭಾ ಚುನಾವಣೆ ಬಗ್ಗೆ ಮಾತು ಯಾಕೆ? 2029ರ ಬಗ್ಗೆ ಕೇಳಿ ಎಂದಿದ್ದಾರೆ.

2024 ರ ಲೋಕಸಭೆ ಮತ್ತು 2025 ರ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಜೆಡಿಯು ಒಟ್ಟಾಗಿ ಸ್ಪರ್ಧಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಟನಾದಲ್ಲಿ ನಡೆದ ಪಕ್ಷದ ಸಭೆಯಲ್ಲಿ ಹೇಳಿದ್ದರು. ಇದಾಗಿ ಒಂದು ವಾರದ ನಂತರ ಸಿಂಗ್ ಈ ರೀತಿ ಹೇಳಿದ್ದಾರೆ.

ಬಿಹಾರದ ಆಡಳಿತಾರೂಢ  ಎನ್‌ಡಿಎ ಸರ್ಕಾರದೊಳಗೆ ಹೆಚ್ಚುತ್ತಿರುವ ಭಿನ್ನಾಭಿಪ್ರಾಯಗಳ ಬಗ್ಗೆ ಕೆಲವು ಪ್ರಮುಖ ಪಕ್ಷಗಳು ತಮ್ಮ ಶಾಸಕರ ಸಭೆಗಳನ್ನು ಕರೆದಿರುವ ಹಿನ್ನೆಲೆಯಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸೋಮವಾರ ತಮ್ಮ ಉಪ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ತಾರ್ಕಿಶೋರ್ ಪ್ರಸಾದ್ ಅವರನ್ನು ಭೇಟಿಯಾಗಿದ್ದಾರೆ.

ಪ್ರಸ್ತುತ ರಾಜಕೀಯ ಬೆಳವಣಿಗೆ ಬಗ್ಗೆ ಮಾಧ್ಯಮ ವರದಿ ಬಗ್ಗೆ ಪ್ರತಿಕ್ರಿಯಿಸಿದ ನಿತೀಶ್, ತುಂಬಾ ಗಂಭೀರವಾದ ವಿಷಯವೇನೂ ಅಲ್ಲ ಎಂದು ಹೇಳಿರುವುದಾಗಿ ಎನ್​​ಡಿಟಿವಿ ವರದಿ ಮಾಡಿದೆ. ಆದಾಗ್ಯೂ, ಈ ಬಗ್ಗೆ ಬಿಜೆಪಿ ನಾಯಕರು ಯಾವುದೇ ಹೇಳಿಕೆ ನೀಡಲು ಹೋಗಬೇಡಿ,  ನಿತೀಶ್  ಕುಮಾರ್ ನಾಳೆ  ನಿರ್ಧಾರ ಪ್ರಕಟಿಸುವವರೆಗೆ ಏನೂ ಹೇಳಬೇಡಿ ಎಂದು  ಆದೇಶಿಸಿದ್ದಾರೆ.

ಬಿಜೆಪಿ ಮತ್ತು ನಿತೀಶ್ ಕುಮಾರ್ ಅವರ ಜನತಾ ದಳ (ಯುನೈಟೆಡ್), ಅಥವಾ ಜೆಡಿ (ಯು) ನಡುವೆ ಭಿನ್ನಾಭಿಪ್ರಾಯವಿದೆ ಎಂಬುದು ಈಗ ಚರ್ಚಿತ ವಿಷಯ. ನೀತಿ ಆಯೋಗದ ಸಭೆಗೆ ನಿತೀಶ್ ಭಾಗಿಯಾಗಿಲ್ಲ ಆದರೆ ಪಟನಾದಲ್ಲಿರುವ ಕೆಲವು ಸಮಾರಂಭಗಳಲ್ಲಿ ಅವರು ಭಾಗಿಯಾಗದ್ದರು. ಇದಕ್ಕಿಂತ ಮುಂಚೆ ಪ್ರಧಾನಿ ಮೋದಿ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಬೀಳ್ಕೊಡುಗೆಗಾಗಿ ಕರೆದಿದ್ದ ಭೋಜನಕೂಟದಲ್ಲೂ ನಿತೀಶ್ ಭಾಗಿಯಾಗಿರಲಿಲ್ಲ.

Published On - 6:30 pm, Mon, 8 August 22

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ