ಹೆಚ್ಚಾಯ್ತು ಬಿಜೆಪಿ, ಕಾಂಗ್ರೆಸ್ ವಾಕ್ಸಮರ: ಆರೋಪಗಳಿಗೆ ಟಕ್ಕರ್ ಕೊಡಲು ಆಪ್ತರಿಗೆ ಸಿದ್ದರಾಮಯ್ಯ ಕೊಟ್ಟ ಸೂಚನೆಯೇನು?

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಸಿಎಂ ಫುಲ್ ಅಲರ್ಟ್ ಆಗಿದ್ದು, ಪ್ರತಿ ಕ್ಷೇತ್ರದಲ್ಲೂ ಬಿಜೆಪಿಗೆ ಕೌಂಟರ್ ಕೊಡಲು ಸೂಚನೆ ನೀಡಿದ್ದಾರೆ. ಜನರ ಬಳಿ ತೆರಳಿ, ಬಿಜೆಪಿ ಸುಳ್ಳು ಹೇಳುತ್ತಿದೆ ಎಂದು ಹೇಳಿ, ಪೇ ಸಿಎಂ ಅಭಿಯಾನದ ನಕಲು ಮಾಡಿದ್ದಾರೆ ಎಂದು ತಿಳಿಸಿ ಅಂತ ಆಪ್ತರಿಗೆ ಸಿಎಂ ಸಿದ್ದರಾಮಯ್ಯ ಸಲಹೆ, ಸೂಚನೆ ಕೊಟ್ಟಿದ್ದಾರೆ.

ಹೆಚ್ಚಾಯ್ತು ಬಿಜೆಪಿ, ಕಾಂಗ್ರೆಸ್ ವಾಕ್ಸಮರ: ಆರೋಪಗಳಿಗೆ ಟಕ್ಕರ್ ಕೊಡಲು ಆಪ್ತರಿಗೆ ಸಿದ್ದರಾಮಯ್ಯ ಕೊಟ್ಟ ಸೂಚನೆಯೇನು?
ಸಿದ್ದರಾಮಯ್ಯ
Follow us
TV9 Web
| Updated By: Ganapathi Sharma

Updated on: Oct 18, 2023 | 2:46 PM

ಬೆಂಗಳೂರು, ಅಕ್ಟೋಬರ್ 18: ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗ ಕಾಂಗ್ರೆಸ್-ಬಿಜೆಪಿ ವಾಕ್ಸಮರ ಜೋರಾಗಿದೆ. ಐಟಿ ದಾಳಿಯನ್ನೇ ಅಸ್ತ್ರ ಮಾಡಿಕೊಂಡಿರುವ ಬಿಜೆಪಿ (BJP) ಕಾಂಗ್ರೆಸ್ ಮೇಲೆ ಮುಗಿಬಿದ್ದಿದೆ. ಇದಕ್ಕೆ ಟಕ್ಕರ್ ಕೊಡಲು ಕಾಂಗ್ರೆಸ್ (Congress) ಪ್ಲ್ಯಾನ್ ಮಾಡ್ತಿದೆ. ಬಿಜೆಪಿ ಐಟಿ ಸೆಲ್ ತಂತ್ರಕ್ಕೆ ಕಾಂಗ್ರೆಸ್ ಪ್ರತಿತಂತ್ರ ರೂಪಿಸುತ್ತಿದೆ. ಈಗಾಗಲೇ ಕಾಂಗ್ರೆಸ್​​ ವಿರುದ್ಧ ಎಟಿಎಂ ಸರ್ಕಾರ, ಕಲೆಕ್ಷನ್ ಮಾಸ್ಟರ್ ಎಂದು ಬಿಜೆಪಿ ಕ್ಯಾಂಪೇನ್ ಮಾಡ್ತಿದೆ. ಐಟಿ ದಾಳಿಯಲ್ಲಿ ಸಿಕ್ಕ ಕೋಟಿ ಕೋಟಿ ಹಣ ಕಾಂಗ್ರೆಸ್​​​ನದ್ದು ಎನ್ನುತ್ತಿದೆ. ಬಿಜೆಪಿ ಆರೋಪಗಳಿಗೆ ಟಕ್ಕರ್ ಕೊಡಲು ಸಿಎಂ ಸಿದ್ದರಾಮಯ್ಯ (Siddaramaiah) ಆಪ್ತರಿಗೆ ಸೂಚನೆ ನೀಡಿದ್ದಾರೆ.

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಸಿಎಂ ಫುಲ್ ಅಲರ್ಟ್ ಆಗಿದ್ದು, ಪ್ರತಿ ಕ್ಷೇತ್ರದಲ್ಲೂ ಬಿಜೆಪಿಗೆ ಕೌಂಟರ್ ಕೊಡಲು ಸೂಚನೆ ನೀಡಿದ್ದಾರೆ. ಜನರ ಬಳಿ ತೆರಳಿ, ಬಿಜೆಪಿ ಸುಳ್ಳು ಹೇಳುತ್ತಿದೆ ಎಂದು ಹೇಳಿ, ಪೇ ಸಿಎಂ ಅಭಿಯಾನದ ನಕಲು ಮಾಡಿದ್ದಾರೆ ಎಂದು ತಿಳಿಸಿ. ಬಹಿರಂಗ ಸಭೆ, ಸಮಾರಂಭಗಳಲ್ಲಿ ಬಿಜೆಪಿಗೆ ಕೌಂಟರ್ ಕೊಡಿ ಅಂತ ಹೇಳಿದ್ದಾರೆ. ಕಾಂಗ್ರೆಸ್ ವಿರುದ್ಧ ಆರೋಪಕ್ಕೆ ಅವಕಾಶ ಮಾಡಿಕೊಡಬೇಡಿ ಅಂತ ಆಪ್ತರಿಗೆ ಸಿಎಂ ಸಿದ್ದರಾಮಯ್ಯ ಸಲಹೆ, ಸೂಚನೆ ಕೊಟ್ಟಿದ್ದಾರೆ.

ಕಾಂಗ್ರೆಸ್ ನಾಯಕರಿಗೆ ಬೆಳಗಾವಿ ಬೇಗುದಿ

ಈ ಮಧ್ಯೆ ಕಾಂಗ್ರೆಸ್ ನಾಯಕರಿಗೆ ಬೆಳಗಾವಿ ರಾಜಕಾರಣವೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದು ಕೂಡ ಪ್ರತಿಪಕ್ಷ ಬಿಜೆಪಿಗೆ ಟೀಕಾಸ್ತ್ರವಾಗಿ ಪರಿಣಮಿಸಿದೆ. ಉತ್ತರ ಕರ್ನಾಟಕ ಶಾಸಕರ ವಿಶ್ವಾಸ ಗಳಿಸುವಲ್ಲಿ ಸಚಿವ ಸತೀಶ್ ಜಾರಕಿಹೊಳಿ ಪದೇ ಪದೆ ಸಕ್ಸಸ್ ಆಗಿದ್ದಾರೆ. ಈಗಾಗಲೇ 5ಕ್ಕೂ ಹೆಚ್ಚು ಜಿಲ್ಲೆಗಳ ಎಸ್.ಟಿ ಮೀಸಲು ಕ್ಷೇತ್ರದ ಶಾಸಕರ ಮೇಲೆ ಸತೀಶ್ ಪ್ರಬಲ ಹಿಡಿತ ಹೊಂದಿದ್ದಾರೆ. ಈ ಮಧ್ಯೆ ಜಿಲ್ಲಾ ರಾಜಕಾರಣದಲ್ಲಿ ಹೊರಗಿನವರ ಹಸ್ತಕ್ಷೇಪಕ್ಕೆ ಮುನಿಸಿಕೊಂಡಿದ್ರು. ಇದರ ಬೆನ್ನಲ್ಲೇ ಇಂದು ಡಿಸಿಎಂ ಡಿಕೆ ಬೆಳಗಾವಿಗೆ ಎಂಟ್ರಿ ಕೊಟ್ಟಿದ್ದಾರೆ.

ಇದನ್ನೂ ಓದಿ: ಸಚಿವ ಶಿವಾನಂದ ಪಾಟೀಲ್ ಮೇಲೆ ನೋಟುಗಳ ಸುರಿಮಳೆ: ಸಚಿವರ ಸಮರ್ಥನೆ ಹೀಗಿದೆ ನೋಡಿ

ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಹೊರಗಿನವರ ಹಸ್ತಕ್ಷೇಪಕ್ಕೆ ಸತೀಶ್ ಜಾರಕಿಹೊಳಿ ಮುನಿಸಿಕೊಂಡಿದ್ದಾರೆ. ಅಸಮಾಧಾನ ನಡುವೆ ಇಂದು ಬೆಳಗಾವಿಗೆ ಡಿಸಿಎಂ ಡಿಕೆಶಿವಕುಮಾರ್ ಎಂಟ್ರಿ ಕೊಟ್ಟಿದ್ದಾರೆ. ಜಿಲ್ಲಾ ರಾಜಕೀಯದಲ್ಲಿ ಡಿಕೆ ಶಿವಕುಮಾರ್ ಬೆಳಗಾವಿ ಭೇಟಿ ಸಾಕಷ್ಟು ಮಹತ್ವ ಪಡೆದುಕೊಂಡಿತ್ತು. ಡಿಸಿಎಂ ಡಿಕೆ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರ ಜತೆ ಚರ್ಚಿಸಿದ್ರು. ಬಳಿಕ ಅಧಿಕಾರಿಗಳ ಜತೆ ಸಭೆ ನಡೆಸಿದ್ರು. ರಾತ್ರಿ ಬೆಳಗಾವಿಯಲ್ಲಿ ವಾಸ್ತವ್ಯ ಹೂಡಲಿರುವ ಡಿಕೆಶಿ ನಾಳೆ ಬೆಂಗಳೂರಿಗೆ ವಾಪಸ್​ ಆಗಲಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ನಡುವೆ ನನ್ನ ನಡುವೆ ಏನೂ ಇಲ್ಲ, 136 ಶಾಸಕರೆಲ್ಲರೂ ನಮ್ಮವರೇ, ಬಿಜೆಪಿ ನಾಯಕರಿಗೆ ಒಂದು ಸುದ್ದಿ ಬೇಕು, ಮಾಡ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ಟಕ್ಕರ್ ಕೊಟ್ಟಿದ್ದಾರೆ.

ಡಿಕೆ ಶಿವಕುಮಾರ್ ಬೆಳಗಾವಿ ಪ್ರವಾಸದ ವೇಳೆ ಸತೀಶ್ ಜಾರಕಿಹೊಳಿ‌ ಜಿಲ್ಲೆಯಲ್ಲಿರದೇ ಮೈಸೂರಿಗೆ ತೆರಳಿದ್ದು ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ