ಮಾರ್ಚ್​ನಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚನೆ; ಹೊಸ ಬಾಂಬ್ ಸಿಡಿಸಿದ ಕೇಂದ್ರ ಸಚಿವ

ಮಹಾರಾಷ್ಟ್ರದಲ್ಲಿ ಮಾರ್ಚ್‌ನಲ್ಲಿ ಬಿಜೆಪಿ ಸರ್ಕಾರ ರಚಿಸಲಿದೆ. ಸದ್ಯದಲ್ಲೇ ನೀವು ಬದಲಾವಣೆಯನ್ನು ನೋಡುತ್ತೀರಿ ಎಂದು ಜೈಪುರದಲ್ಲಿ ಸುದ್ದಿಗಾರರ ಪ್ರಶ್ನೆಗೆ ನಾರಾಯಣ ರಾಣೆ ಪ್ರತಿಕ್ರಿಯಿಸಿದ್ದಾರೆ.

ಮಾರ್ಚ್​ನಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚನೆ; ಹೊಸ ಬಾಂಬ್ ಸಿಡಿಸಿದ ಕೇಂದ್ರ ಸಚಿವ
ನಾರಾಯಣ ರಾಣೆ
Edited By:

Updated on: Nov 26, 2021 | 5:39 PM

ನವದೆಹಲಿ: ಮುಂದಿನ ವರ್ಷದ ಮಾರ್ಚ್ ವೇಳೆಗೆ ಮಹಾರಾಷ್ಟ್ರದಲ್ಲಿ (Maharashtra Politics) ಬಿಜೆಪಿ ಸರ್ಕಾರ (BJP Government) ರಚನೆಯಾಗಲಿದೆ. ಚುನಾವಣೆಗೂ 2 ವರ್ಷ ಮೊದಲೇ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Maharashtra Chief Minister Uddhav Thackeray) ಸರ್ಕಾರ ಪತನವಾಗಲಿದೆ ಎನ್ನುವ ಮೂಲಕ ಕೇಂದ್ರ ಸಚಿವ ನಾರಾಯಣ ರಾಣೆ (Union Minister Narayan Rane) ಹೊಸ ಬಾಂಬ್ ಹಾಕಿದ್ದಾರೆ. ಮಹಾರಾಷ್ಟ್ರದಲ್ಲಿ ಮಾರ್ಚ್‌ನಲ್ಲಿ ಬಿಜೆಪಿ ಸರ್ಕಾರ ರಚಿಸಲಿದೆ. ಸದ್ಯದಲ್ಲೇ ನೀವು ಬದಲಾವಣೆಯನ್ನು ನೋಡುತ್ತೀರಿ ಎಂದು ಜೈಪುರದಲ್ಲಿ ಸುದ್ದಿಗಾರರ ಪ್ರಶ್ನೆಗೆ ನಾರಾಯಣ ರಾಣೆ ಪ್ರತಿಕ್ರಿಯಿಸಿದ್ದಾರೆ.

ಅದು ಹೇಗೆ ಸಾಧ್ಯ? ಎಂಬ ಅಚ್ಚರಿಯ ಪ್ರಶ್ನೆಗೂ ಉತ್ತರಿಸಿರುವ ಸಚಿವ ರಾಣೆ, ಸರ್ಕಾರವನ್ನು ರಚಿಸಲು ಹಾಗೂ ಸರ್ಕಾರವನ್ನು ಬೀಳಿಸಲು ಕೆಲವು ವಿಷಯಗಳನ್ನು ರಹಸ್ಯವಾಗಿಡಬೇಕು. ಸಿಎಂ ಉದ್ಧವ್ ಠಾಕ್ರೆ ಅವರ ಆರೋಗ್ಯ ಚೆನ್ನಾಗಿಲ್ಲ. ಹೀಗಾಗಿ, ಅವರ ಬಗ್ಗೆ ಮಾತನಾಡಬೇಡಿ ಎಂದು ನಮ್ಮ ಬಿಜೆಪಿ ಪಕ್ಷದ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಸೂಚನೆ ನೀಡಿದ್ದಾರೆ. ಆದರೆ, 3 ಪಕ್ಷಗಳ ಸಂಗಮವಾಗಿರುವ ಮಹಾ ವಿಕಾಸ್ ಅಘಾಡಿ ಸರ್ಕಾರ ಹೆಚ್ಚು ದಿನ ಅಧಿಕಾರದಲ್ಲಿ ಇರುವುದಿಲ್ಲ ಎಂಬುದಂತೂ ಸತ್ಯ ಎನ್ನುವ ಮೂಲಕ ಶಿವಸೇನೆ ನಾಯಕರಿಗೆ ಹೊಸ ತಲೆನೋವು ತಂದಿಟ್ಟಿದ್ದಾರೆ.

ಭಾರತ ಸ್ವಾತಂತ್ರ್ಯ ಗಳಿಸಿದ ವರ್ಷದ ಬಗ್ಗೆ ತಿಳಿದಿಲ್ಲದ ಸಿಎಂ ಉದ್ಧವ್ ಠಾಕ್ರೆ ಅವರ ಕಪಾಲಕ್ಕೆ ಹೊಡೆಯಬೇಕೆನಿಸುತ್ತಿದೆ ಎಂಬ ಹೇಳಿಕೆ ನೀಡಿ ನಾರಾಯಣ ರಾಣೆ ಬಂಧನಕ್ಕೊಳಗಾಗಿದ್ದರು. ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇದೀಗ ಅವರು ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವರಾಗಿದ್ದಾರೆ. 20 ವರ್ಷಗಳಲ್ಲಿ ಮೊದಲ ಬಾರಿಗೆ ಕೇಂದ್ರ ಸಚಿವರನ್ನು ವಶಕ್ಕೆ ಪಡೆಯಲಾಗಿತ್ತು. ಉದ್ಧವ್ ಠಾಕ್ರೆ ಅವರ ನಾಯಕತ್ವದ ವಿರುದ್ಧ ಬಂಡಾಯವೆದ್ದು ನಾರಾಯಣ ರಾಣೆ ಶಿವಸೇನೆ ತೊರೆದಿದ್ದರು.

ಇದನ್ನೂ ಓದಿ: ಉದ್ಧವ್ ಠಾಕ್ರೆ, ಶರದ್ ಪವಾರ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ ವ್ಯಕ್ತಿಯ ಮುಖಕ್ಕೆ ಮಸಿ ಬಳಿದ ಶಿವಸೇನಾ ಕಾರ್ಯಕರ್ತರು

ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವ ಪ್ರಯಾಣಿಕರಿಗೆ ಹೊಸ ಕೊರೊನಾ ಮಾರ್ಗಸೂಚಿ ಬಿಡುಗಡೆ; ಇಲ್ಲಿದೆ ವಿವರ