ಪ್ರಶಾಂತ್​ ಕಿಶೋರ್​ ಬೆಂಗಳೂರಿನಲ್ಲಿ, ಗುಪ್ತವಾಗಿ ನಡೀತು ರಾಜಕೀಯ ಚಟುವಟಿಕೆ

Prashant Kishor: ಚುನಾವಣಾ ತಂತ್ರಗಾರಿಕೆಗೆ ಹೆಸರುವಾಸಿಯಾದ ಪ್ರಶಾಂತ್​ ಕಿಶೋರ್​ ಇಂದು ಸದ್ದಿಲ್ಲದೇ ಬೆಂಗಳೂರಿಗೆ ಬಂದು ತಮ್ಮ ರಾಜಕೀಯ ಚಟುವಟಿಕೆ ನಡೆಸಿದರು. ಹಾಗಾದರೆ ಅವರು ಮಾಡಿದ್ದಾದರೂ ಏನು?

ಪ್ರಶಾಂತ್​ ಕಿಶೋರ್​ ಬೆಂಗಳೂರಿನಲ್ಲಿ, ಗುಪ್ತವಾಗಿ ನಡೀತು ರಾಜಕೀಯ ಚಟುವಟಿಕೆ
ಪ್ರಶಾಂತ್​ ಕಿಶೋರ್​

ಚುನಾವಣಾ ತಂತ್ರಗಾರಿಕೆಗೆ ಹೆಸರುವಾಸಿಯಾದ ಪ್ರಶಾಂತ್​ ಕಿಶೋರ್ (Prashant Kishor)​ ಅವರ ಬೆಂಗಳೂರು ಭೇಟಿ ಕುತೂಹಲ ಮೂಡಿಸಿದೆ. ಶುಕ್ರವಾರ ಬೆಳಗಿನ ಜಾವ ನಗರಕ್ಕೆ ಬಂದಿಳಿದ ಕಿಶೋರ್​ ಅಧಿಕೃತವಾಗಿ ಯಾವ ಕಾರ್ಯಕ್ರಮದಲ್ಲಿ ಭಾಗವಹಿಸುವ ಕಾರ್ಯಕ್ರಮ ಇರಲಿಲ್ಲ. ಹಾಗಾದರೆ ಕಿಶೋರ್​ ಬೆಂಗಳೂರಿಗೆ ಬಂದು ಮಧ್ಯಾಹ್ನ 3 ಗಂಟೆಗೆ ನಗರ ಬಿಟ್ಟು ಹೊರಟಿದ್ದೇಕೆ? ಈ ಕುರಿತು ಹಲವಾರು ರೀತಿಯ ಸುದ್ದಿ ಹರಡಿತ್ತು. ಒಂದು ವೆಬ್​​ಸೈಟಂತೂ ಒಂದು ಸುದ್ದಿ ಹಬ್ಬಿಸಿತು. ಬಿಎಸ್​ವೈ ಮತ್ತು ಮಗ ವಿಜಯೇಂದ್ರ ಹೊಸ ಪಕ್ಷ ಕಟ್ಟುವವರಿದ್ದಾರೆ. ಆ ಕೆಲಸವನ್ನು ಕಿಶೋರ್​ ಅವರ ತಂಡಕ್ಕೆ ನೀಡಲು ನಿರ್ಧರಿಸಲಾಗಿದೆ. ಆ ಕಾರಣದಿಂದಾಗಿಯೇ ಕಿಶೋರ್​ ಇಲ್ಲಿಗೆ ಬಂದಿದ್ದಾರೆ ಎಂದು ಆ ವೆಬ್​ಸೈಟ್​ ಹೇಳಿತು.

ನಿಜವಾದ ಕಾರಣ ಏನು?
ಮೊಟ್ಟ ಮೊದಲ ವರದಿ ಪ್ರಕಾರ, ಗೋವಾ ಚುನಾವಣೆ ಕುರಿತಾಗಿ ಚರ್ಚಿಸಲು ಕಿಶೋರ್​ ಬೆಂಗಳೂರಿಗೆ ಬಂದಿದ್ದರು. ಇಲ್ಲಿ ಕೆಲವು ಕಾಂಗ್ರೆಸ್​ ನಾಯಕರ ಭೇಟಿ ಮಾಡಿದ್ದಾರೆ. ಆದರೆ, ಮೂಲಗಳ ಪ್ರಕಾರ ಈ ಮಾಹಿತಿ ನಿಜವಲ್ಲ. ಇನ್ನೊಂದು ಸೂತ್ರದ ಪ್ರಕಾರ ಕಿಶೋರ್​, ಸಾಮಾಜಿಕ ಜಾಲತಾಣವೊಂದರ ಕೆಲವು ಹಿರಿಯ ಅಧಿಕಾರಿಗಳ ಭೇಟಿಗೆ ಬಂದಿದ್ದರು. ಇದರ ಜೊತೆಗೆ ಕಾಂಗ್ರೆಸ್​ನಿಮದ ಟಿಎಮ್​ಸಿ ಪಕ್ಷಕ್ಕೆ ನಾಯಕರನ್ನು ಸೆಳೆಯು ತಂತ್ರದ ಭಾಗವಾಗಿ ಅವರು ಕೆಲವು ಕಾಂಗ್ರೆಸ್​ ನಾಯಕರನ್ನು ಭೇಟಿ ಮಾಡಲು ಅವರು ಇಲ್ಲಿಗೆ ಬಂದಿದ್ದರು. ಆದರೆ, ಕಿಶೋರ್​ ಲೆಕ್ಕ ಹಾಕಿದಂತೆ, ಹಿರಿಯ ಕಾಂಗ್ರೆಸ್​ ನಾಯಕರು ಯಾರೂ ಅವರನ್ನು ಭೇಟಿ ಆದ ಬಗ್ಗೆ ಮಾಹಿತಿ ಇಲ್ಲ.
ಆದರೆ, ಅವರ ಭೇಟಿಗೆ ಬೇರೆಯೇ ಕಾರಣ ಇತ್ತು. ಮಮತಾ ಬ್ಯಾನರ್ಜಿಯವರ ಪಕ್ಷದ ಪರವಾಗಿ ಕಿಶೋರ್​ ಇಲ್ಲಿಗೆ ಬಂದಿದ್ದರು. ಮತ್ತು ಟಿಎಮ್​ಸಿ ಮತ್ತು ಜನತಾ ದಳ (ಜಾತ್ಯಾತೀತ) ಒಂದಾಗಿ ಹೋಗಬೇಕು. ಚುನಾವಣೆಗೆ ಇನ್ನೂ ಎರಡುವರೆ ವರ್ಷ ಇದೆ. ಆದರೆ, ರಾಷ್ಟ್ರ ಮಟ್ಟದಲ್ಲಿ ಟಿಎಮ್​ಸಿ ಜೊತೆ ಜೆಡಿಎಸ್​ ನಿಲ್ಲಬೇಕು. ಈ ಕುರಿತು ಒಂದು ಸಂದೇಶ ತಲುಪಿಸುವ ಸಲುವಾಗಿ ಅವರು ಇಲ್ಲಿಗೆ ಬಂದಿದ್ದರು ಎಂದು ಮೂಲಗಳು ತಿಳಿಸಿವೆ. ಜೆಡಿಎಸ್​ ಪಕ್ಷದ ಪುನರುತ್ಥಾನದ ಕಂಕಣ ತೊಟ್ಟಿರುವ ಕಿಶೋರ್​ ಆ ವಿಚಾರಗಳನ್ನು ಜೆಡಿಎಸ್ ನಾಯಕರೊಂದಿಗೆ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:
Prashant Kishor: ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಕಾಂಗ್ರೆಸ್​ ಸೇರ್ಪಡೆಗೆ ಹಿನ್ನಡೆಯಾಗಲು ಇದೇ ಕಾರಣ

Prashant Kishor: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಎದುರು ಟಿಎಂಸಿ ಗೆಲ್ಲಿಸಲು ಪ್ರಶಾಂತ್ ಕಿಶೋರ್ ಅನುಸರಿಸಿದ ಚುನಾವಣಾ ತಂತ್ರಗಳು ಒಂದೆರೆಡಲ್ಲ

(Election strategist Prashant Kishor secretly visits Bengaluru to do political activity with JDS)

Click on your DTH Provider to Add TV9 Kannada